ಈಜುಗಾರರಿಗೆ ಬಹುಪಯೋಗಿ ಇನ್ಸ್ಟಾಬೀಟ್​​​

ಟೀಮ್​ ವೈ.ಎಸ್​.

0

ಈಜುಗಾರರ ಬಹದೊಡ್ಡ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಮೊದಲು ಹೆಜ್ಜೆ ಇಟ್ಟ ಮಹಿಳೆ ಹಿಂದ್ ಹೊಬೈಕಾ. ಅರಬ್​​ನ ಎಂಜಿನಿಯರ್ ಹಾಗೂ ಸಂಶೋಧಕಿಯಾಗಿರುವ ಹಿಂದ್​​​, ಕ್ರೀಡಾಪಟುಗಳ ಹೃದಯ ಬಡಿತವನ್ನು ಅಳೆಯುವುದರ ಜೊತೆಗೆ ಟ್ರ್ಯಾಕನ್ನು ಸುಲಭವಾಗಿ ಗುರುತಿಸಿ, ಕ್ರೀಡಾಪಟುಗಳ ಕ್ಷೇಮವನ್ನು ಕಾಪಾಡುವ ಸಾಧನವನ್ನು ಕಂಡು ಹಿಡಿದಿದ್ದಾರೆ. ಇನ್ಸ್ಟಾಬೀಟ್​​​ ಸಾಧನ ಕಂಡುಹಿಡಿದಿರುವ ಹಿಂದ್, ಪ್ರಶಸ್ತಿಯನ್ನ ಬಾಚಿಕೊಂಡಿದ್ದಾರೆ. ಅವರು ನಮ್ಮೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರತಿನಿಧಿ: ಇನ್ಸ್ಟಾಬೀಟ್​​​ ಬಗ್ಗೆ ತಿಳಿಸಿ.

ಹಿಂದ್ : ಈಜುವ ವೇಳೆ ಈಜುಗಾರನಿಗೆ ತನ್ನ ಹೃದಯ ಬಡಿತ ಎಷ್ಟಿದೆ ಎಂಬುದನ್ನು ನೋಡಿಕೊಳ್ಳಲು ಸಹಾಯವಾಗುವ ಸಾಧನ ಇನ್ಸ್ಟಾಬೀಟ್​​​. ಈಜುಗಾರಿಗೆ ಜನಪ್ರಿಯಗೊಳ್ಳುತ್ತಿದ್ದಂತೆ, ಈಜುಗಾರರಿಗೆ ಅವಶ್ಯವಿರುವ ಉಪಕರಣಗಳ ಕೊರತೆ ಕಂಡಬಂತು. ನನಗೆ ಈಜು ಹೇಳಿಕೊಡುತ್ತಿದ್ದ ಕೋಚ್, ಈಜುವ ವೇಳೆ ಹೃದಯ ಬಡಿತವನ್ನು ಅಳೆಯಲು ತೊಂದರೆ ಪಡುತ್ತಿದ್ದರು. ಮೆಕ್ಯಾನಿಕಲ್ ಇಂಜಿನಿಯರ್ ಆದ ತಕ್ಷಣ ನಾನು ನನ್ನನ್ನು ಪ್ರೇರೆಪಿಸಿಕೊಂಡೆ. ಈಜುಪಟುಗಳಿಗೆ ಅಗತ್ಯವಿರುವ ಸೌಲಭ್ಯ ಕಂಡುಹಿಡಿಯಲು ಮುಂದಾದೆ. ಕನ್ನಡಕದ ಸಹಾಯದಿಂದ ಹೃದಯದ ಬಡಿತವನ್ನು ಅಳೆಯುವ ಸಾಧನವನ್ನು ಕಂಡುಹಿಡಿಯಲು ಮೊದಲ ಅಡಿಯಿಟ್ಟೆ. ಮೊದಲ ಪ್ರಯತ್ನದಲ್ಲಿಯೇ ಸಾಕಷ್ಟು ಯಶಸ್ಸು ಸಿಕ್ತು. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಕನ್ನಡಕಕ್ಕೆ ಇದು ಹೊಂದಿಕೊಳ್ಳುವ ಜೊತೆಗೆ ಇದರಿಂದ ಸುಲಭವಾಗಿ ಹೃದಯ ಬಡಿತವನ್ನು ಅಳೆಯಬಹುದು. ಈಜುಪಟುಗಳು ತಮ್ಮ ವಿಶ್ಲೇಷಣೆಗಾಗಿ ಹೃದಯ ಬಡಿತದ ದತ್ತಾಂಶಗಳನ್ನು ಯುಎಸ್ ಬಿ ಸಹಾಯದಿಂದ ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು.

ಪ್ರತಿನಿಧಿ : ನೀವು ಉತ್ಪನ್ನದ ತೂಕವನ್ನು 170 ಗ್ರಾಂನಿಂದ 50 ಗ್ರಾಂಗೆ ಇಳಿಸಿದ್ದೀರಿ. ಹೊಸ ವಿನ್ಯಾಸದ ವೇಳೆ ನೀವು ಎದುರಿಸಿದ ಸವಾಲುಗಳು ಏನು?

ಹಿಂದ್ : ಇಂಜಿನಿಯರುಗಳ ಸಹಾಯದಿಂದ ಸತತ ಎರಡು ವರ್ಷಗಳ ಕಾಲ ಇದಕ್ಕಾಗಿ ನಾನು ಶ್ರಮಿಸಿದ್ದೇನೆ. ಬಹಳಷ್ಟು ಕೆಲಸದ ಅಗತ್ಯವಿತ್ತು. ಆತುರಾತುರವಾಗಿ ಮಾಡುವಂತಹದ್ದು ಇದಾಗಿರಲಿಲ್ಲ. ಸಾಧನಕ್ಕೆ ಹೊಸ ಅಂಶಗಳನ್ನು ಅಳವಡಿಸಿ, ಮರು ವಿನ್ಯಾಸಗೊಳಿಸಿ, ಗಾತ್ರವನ್ನು ಕಡಿಮೆ ಮಾಡಿ, ಪದರಗಳನ್ನು ಸುಧಾರಿಸಲು ಬಹಳ ಸಮಯ ಬೇಕಾಯಿತು.

ಪ್ರತಿನಿಧಿ: ನಿಮ್ಮ ಬಗ್ಗೆ ಹಾಗೂ ನೀವು ಈ ವೃತ್ತಿಗೆ ಬಂದ ಬಗ್ಗೆ ತಿಳಿಸಿ.

ಹಿಂದ್ : ನಾನು ಲೆಬನಾನಿ. ನನ್ನ ವಯಸ್ಸು 25. ನಾನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದೇನೆ. ಹವಾನಿಯಂತ್ರಿತ ಕಂಪನಿಯಲ್ಲಿ ಕೆಲಸ ನಿರ್ವಹಿಸಿದೆ. ನನಗೆ ಅದು ಇಷ್ಟ ಆಗಲಿಲ್ಲ. ನಾವು ಅರ್ಥಪೂರ್ಣವಾದ, ಜೀವನದಲ್ಲಿ ಬದಲಾವಣೆ ತರುವಂತಹ ಏನಾದರೊಂದು ಕೆಲಸ ಮಾಡಬೇಕು ಎಂಬುದನ್ನು ಮನಗಂಡೆ. ಇದು ಇನ್ಸ್ಟಾಬೀಟ್ ಗೆ ಪ್ರೇರಣೆಯಾಯಿತು.

ಪ್ರತಿನಿಧಿ : ಮಹಿಳೆಯರು ಮತ್ತು ಅವರ ಆಯ್ಕೆ ಬಗ್ಗೆ ನೀವು ಏನು ಹೇಳುತ್ತೀರಿ?

ಹಿಂದ್: ಮಹಿಳೆಯರ ಸುತ್ತ ಸಮಾಜ ತನ್ನದೆ ಒಂದು ಗೋಡೆ ಕಟ್ಟಿದೆ. ನಾನು ಒಬ್ಬ ಅರಬ್ಬಿಯನ್ ಎಂಬುದು ಗೊತ್ತಾದಾಗ ಜನರು `'ಓಹ್! ಈ ಹುಡುಗಿ ಅರ್ಹಳಲ್ಲ’. 'ಓಹ್! ಇವಳಿಂದ ಚಾಲನೆ ಸಾಧ್ಯವಿಲ್ಲ’. 'ಓಹ್! ಇವಳು ಕೆಲಸ ಮಾಡುವುದಿಲ್ಲ’ ಎಂದು ಯೋಚಿಸುತ್ತಾರೆ. ಅರಬ್ ಒಂದೇ ಅಲ್ಲ ಇಡೀ ವಿಶ್ವದಲ್ಲಿ ಕೇವಲ ಕೆಲವೇ ಕೆಲವು ಮಹಿಳಾ ಇಂಜಿನಿಯರುಗಳಿದ್ದಾರೆ. ಹುಡುಗಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಸುತ್ತಲಿನ ಸಮಾಜ ಕೂಡ ಎಂಜಿನಿಯರಿಂಗ್ ನಂತಹ ಚಾಲೆಂಜಿಂಗ್ ಕ್ಷೇತ್ರಕ್ಕೆ ಹುಡುಗಿಯರನ್ನು ಕಳುಹಿಸಲು ಮನಸ್ಸು ಮಾಡುವುದಿಲ್ಲ.

ಪ್ರತಿನಿಧಿ : ನಮ್ಮ ಪೀಳಿಗೆಯ ವಿಚಾರಕ್ಕೆ ಬರುವುದಾದರೆ, ಉತ್ತಮ ಶಿಕ್ಷಣ, ಒಳ್ಳೆಯ ಆಯ್ಕೆಗೆ ಅವಕಾಶ ಇದೆ. ಕುಟುಂಬದಿಂದ ಸಹಕಾರ ಸಿಗುತ್ತಿದೆ. ಈ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಹಿಂದ್: ಫಾರ್ಚೂನ್ 500 ಕಂಪನಿ ದಾಖಲೆಗಳ ಅನುಸಾರ ಮಹಿಳಾ ಸಿಇಓಗಳು ಶೇಕಡಾವರು ಪ್ರಮಾಣ ಕಡಿಮೆ ಇದೆ. ಉತ್ತಮ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುವ ಮಹಿಳೆಯರ ಸಂಖ್ಯೆಯೂ ಕಡಿಮೆ ಇದೆ. ಹಾಗಾಗಿ ಇದನ್ನು ಉತ್ತಮ ಬೆಳವಣಿಗೆ ಎಂದು ಅರ್ಥೈಸಲು ಸಾಧ್ಯವಿಲ್ಲ. ನಿಮ್ಮ ಬಳಿ ಎಷ್ಟು ಹಣ ಇದೆ, ಸಮಾಜದಲ್ಲಿ ನಿಮ್ಮ ಘನತೆ ಏನು ಎಂಬ ಆಧಾರದ ಮೇಲೆ ಕಳೆದ ಹಲವಾರು ಶತಮಾನಗಳಿಂದ ವಿಶ್ವ ಬೆಳೆಯುತ್ತಾ ಬಂದಿದೆ.

ಪ್ರತಿನಿಧಿ : ಲೆಬನಾನ್ ಬಗ್ಗೆ ತಿಳಿಸಿದಿರಿ. ನಿಮ್ಮ ಜೊತೆ ಯುವ ಜನರು ಕೆಲಸ ಮಾಡಿರುವ ಬಗ್ಗೆ ತಿಳಿಸಿದಿರಿ. ಈಗ ನೀವು ಉತ್ಪನ್ನ ಅಭಿವೃದ್ದಿ ವೇಳೆ ಯಾವ ಸವಾಲುಗಳನ್ನು ಎದುರಿಸಿದಿರಿ ಎಂಬುದರ ಬಗ್ಗೆ ತಿಳಿಸಿ.?

ಹಿಂದ್ : ಧನಾತ್ಮಕ ಚಿಂತನೆ ಜೊತೆಯಲ್ಲೇ ಅದರ ಋಣಾತ್ಮಕ ವಿಚಾರಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಲೆಬನಾನ್ ನಲ್ಲಿ ಮೂಲಭೂತ ಸೌಲಭ್ಯಗಳು ಕಡಿಮೆ ಇರುವ ಕಾರಣ ನಾವು ವಿದೇಶಗಳತ್ತ ಮುಖ ಮಾಡಬೇಕು. ಇದರಿಂದ ಖರ್ಚು ಜಾಸ್ತಿ. ಆರಂಭದಲ್ಲಿ ಎಲ್ಲವೂ ಸುಲಭ. ಆದರೆ ಪ್ರತಿಭೆಗಳನ್ನು ಆಕರ್ಷಿಸಿ, ಒಂದು ಹಂತಕ್ಕೆ ಬೆಳೆದು, ಅಂತರಾಷ್ಟ್ರೀಯ ಕಂಪನಿಯಾಗಿ ಹೆಸರು ಮಾಡುವುದು ತುಂಬಾ ಕಷ್ಟ.

ಪ್ರಶ್ನೆ : ನಿಮ್ಮ ಮುಂದಿನ ಹೆಜ್ಜೆ ಬಗ್ಗೆ ಮಾತನಾಡುವುದಾದರೆ, ಮುಂದಿನ ಐದು ವರ್ಷದಲ್ಲಿ ನಿಮ್ಮನ್ನು ನೀವು ಯಾವ ಹಂತದಲ್ಲಿ ನೋಡಿಕೊಳ್ಳಲು ಬಯಸುತ್ತೀರಾ?

ಹಿಂದ್: ಮೂರರಿಂದ ಐದು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಧರಿಸಬಹುದಾದ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಿರುವ ಇನ್ಟ್ಸಾಬಿಟನ್ನು ನಾವು ಉತ್ಪಾದಿಸಲಿದ್ದೇವೆ. ಮುಂದಿನ ದಾರಿಯನ್ನು ಯಶಸ್ವಿಯಾಗಿ ಸಾಗುವ ಆಶಾಭಾವನೆಯನ್ನು ನಾನು ಹೊಂದಿದ್ದೇನೆ. 2 ವರ್ಷಗಳಿಂದ ಸತತ ಪ್ರಯತ್ನದಲ್ಲಿ ನಿರತವಾಗಿದ್ದು, ಉತ್ಪನ್ನದ ಬಗ್ಗೆ ನನಗೆ ತಿಳಿದಿದೆ. ಜನರು ಬಗ್ಗೆ ಸಲಹೆ ನೀಡಿದರೆ, ಸಾವಿರ ಬಾರಿ ಆ ಬಗ್ಗೆ ಯೋಚನೆ ಮಾಡುತ್ತೇನೆ. ಇದು ನನ್ನ ಬ್ಯುಸಿನೆಸ್ ಆಗಿದ್ದು, ನಾನೇನು ಮಾಡಬೇಕೆಂದುಕೊಂಡಿದ್ದೇನೋ ಅದನ್ನು ಮಾಡಿದ್ದೇನೆ.

Related Stories