ಬದುಕಿಗೆ ಬಣ್ಣ ತುಂಬಿದ `ರಂಗ್‍ರೇಜ್'

ಟೀಮ್​​ ವೈ.ಎಸ್​​.

0

ದೃಢಚಿತ್ತ, ಕಠಿಣ ಪರಿಶ್ರಮ ಇದ್ರೆ ಬದುಕಿನಲ್ಲಿ ಯಾವುದೂ ಅಸಾಧ್ಯವಲ್ಲ. ಕೆಲವರು ಅಂದುಕೊಂಡಿದ್ದನ್ನು ಸಾಧಿಸಿದ್ರೆ ಇನ್ನು ಕೆಲವರು ಅನಿರೀಕ್ಷಿತವಾಗಿ ಸಾಧನೆಯ ಹೊಸ್ತಿಲಲ್ಲಿ ನಿಲ್ಲುತ್ತಾರೆ. ನೀತಿ ಹಾಗೂ ಗಗನ್ ಜೈನ್ ಅವರ ಜೀವನ ಪಯಣ ಕೂಡ ರೋಚಕತೆಯಿಂದ ಕೂಡಿದೆ. ಮೊದಲು ಪ್ರೀತಿ, ಆಮೇಲೆ ಸಾಹಿತ್ಯ, ಅದಾದಮೇಲೆ ಉದ್ಯಮ ಹೀಗೆ ಜೀವನದ ಮೂರು ಮಜಲುಗಳನ್ನು ದಾಟಿ ಯಶಸ್ವಿಯಾದ ಅನುರೂಪ ಜೋಡಿ ಇವರದ್ದು. ಪ್ರೀತಿ ಹಾಗೂ ಗಗನ್ ಜೈನ್‍ರ ಪ್ರೇಮ್ ಕಹಾನಿ ನಿಜಕ್ಕೂ ಸಖತ್ ಇಂಟರೆಸ್ಟಿಂಗ್ ಆಗಿದೆ.

ಗಗನ್ ಹಾಗೂ ನೀತಿ ಇಬ್ಬರೂ ಟೈಮ್ಸ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಶಿಕ್ಷಣ ಪಡೆದಿದ್ದಾರೆ. ಕಾಲೇಜಿಗೆ ಪ್ರವೇಶ ಪಡೆದವರ ಪಟ್ಟಿಯಲ್ಲಿ ನೀತಿ ಜೈನ್ ಹೆಸರು ನೋಡಿಯೇ ಗಗನ್ ರೋಮಾಂಚಿತರಾಗಿದ್ರು. ಗಗನ್ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದಂತಾಗಿತ್ತು. ಆದ್ರೆ ಕ್ಲಾಸ್‍ಮೇಟ್ಸ್ ಆಗಿದ್ರೂ ಇಬ್ಬರ ಮಧ್ಯೆ ಅಂಥ ಸ್ನೇಹವೇನೂ ಇರಲಿಲ್ಲ. ಅವರ ಮಧ್ಯೆ ಒಲವು ಚಿಗುರಿರಲಿಲ್ಲ. ನೀತಿ ಶ್ರೀಮಂತ ಕುಟುಂಬದಿಂದ ಬಂದವರು. ಹಾಗಾಗಿ ಶಿಕ್ಷಣಕ್ಕೇನೂ ತೊಂದರೆಯಾಗಲಿಲ್ಲ. ಆದ್ರೆ ಗಗನ್ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಮನೆಯಲ್ಲಿ ಕಷ್ಟವಿದ್ದಿದ್ದರಿಂದ ಗಗನ್ ಇಂಗ್ಲಿಷ್ ಕಲಿಯಲೆಂದೇ ಕ್ಲಾಸ್‍ಗೆ ಹೋಗುತ್ತಿದ್ರು. ಪದವಿ ಮುಗಿಸಿದ ಬಳಿಕ ಪ್ರೀತಿ ಹಾಗೂ ಗಗನ್ ಬದುಕಿನ ದಾರಿಯೇ ಬೇರೆಯಾಗಿತ್ತು. ಇಬ್ಬರೂ ಟೈಮ್ಸ್ ಆಫ್ ಇಂಡಿಯಾದಲ್ಲೇ ಕೆಲಸ ಮಾಡ್ತಾ ಇದ್ರೂ ಸ್ಥಳ ಮಾತ್ರ ಬೇರೆಬೇರೆಯಾಗಿತ್ತು. ನಂತರ ದುಬೈಗೆ ಹಾರಿದ ಗಗನ್ ಲ್ಯಾಂಡ್‍ಮಾರ್ಕ್ ರಿಟೇಲ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ರು. ಆ ಸಂದರ್ಭದಲ್ಲಿ ನೀತಿ ಜೈಪುರದ ಲೋವ್ ಲಿಂಟಾಸ್ & ಪಾರ್ಟ್‍ನರ್ಸ್‍ನಲ್ಲಿ ಉದ್ಯೋಗಿಯಾಗಿದ್ರು. ಕೆಲ ವರ್ಷಗಳ ನಂತರ ಗಗನ್ ಭಾರತಕ್ಕೆ ವಾಪಸ್ಸಾದ್ರು. ಆ ಸಮಯದಲ್ಲಿ ಗೂಗಲ್ ಟಾಕ್ ನೀತಿ ಹಾಗೂ ಗಗನ್ ಮಧ್ಯೆ ಬಾಂಧವ್ಯ ಬೆಸೆದಿತ್ತು. ಗೂಗಲ್ ಚಾಟಿಂಗ್‍ನಲ್ಲಿ ಪ್ರೀತಿ ಮೊಳಕೆಯೊಡೆದಿತ್ತು. ಇಬ್ಬರ ಮನೆಯಲ್ಲೂ ಮದುವೆ ಮಾತುಕತೆ ನಡೆದೇ ಇತ್ತು. ಹಾಗಾಗಿ ಪ್ರೀತಿ ಮತ್ತು ಗಗನ್‍ರ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಯಾವುದೇ ವಿಘ್ನವಿಲ್ಲದೆ ನೆರವೇರಿತು.

ಡೆನಿಮ್ ಕಥೆ..ರಂಗ್‍ರೇಜ್ ಜನನ

ಅದು 2011ರ ಆಗಸ್ಟ್ ತಿಂಗಳು. ಗಗನ್ ಹಾಗೂ ನೀತಿ ದಂಪತಿಗೆ ಸಾಹಿತ್ಯಾಸಕ್ತಿ ಹೆಚ್ಚಾಗಿತ್ತು. ಒಂದು ಪುಸ್ತಕ ಬರೆಯಬೇಕೆಂಬ ಬಯಕೆಯಾಗಿತ್ತು. ಆದ್ರೆ ಸುತ್ತಮುತ್ತಲ ಜನರೇ ಅವರ ಆಸೆಗೆ ತಣ್ಣೀರೆರಚಿದ್ರು. ಪುಸ್ತಕ ಬರೆಯುವ ಮುನ್ನ ಇಂಗ್ಲಿಷ್ ಸರಿಯಾಗಿ ಕಲಿತುಕೊಳ್ಳಿ, ಮೊದಲು ಒಂದು ಬ್ಲಾಗ್ ಬರೆಯಲು ಆರಂಭಿಸಿ ಅಂತೆಲ್ಲಾ ಸಲಹೆ ನೀಡಿದ್ರು. ಹಾಗಾಗಿ ಪುಸ್ತಕ ಬರೆಯುವ ಯೋಚನೆಯನ್ನು ಗಗನ್ ಕೈಬಿಟ್ರು.

2011ರ ಅಕ್ಟೋಬರ್‍ನಲ್ಲಿ ಗಗನ್ ಪ್ಯಾರಿಸ್‍ನಲ್ಲಿ ನಡೆಯಲಿದ್ದ ಫ್ಯಾಷನ್ ಕಾನ್ಫರೆನ್ಸ್​​ಗೆ ಹೊರಟಿದ್ರು. ಐಫೆಲ್ ಟವರ್‍ನಲ್ಲಿ ನಡೆದ ಸಮ್ಮೇಳನದಲ್ಲಿ ನೀತಿ ಕೈಯಿಂದ ಪೇಂಟ್ ಮಾಡಿದ ಡೆನಿಮ್ ಅನ್ನೇ ಗಗನ್ ಧರಿಸಿದ್ರು. ಕಾನ್ಫರೆನ್ಸ್​​ಗೆ ಬಂದಿದ್ದವರ ಕಣ್ಣೆಲ್ಲಾ ಗಗನ್ ತೊಟ್ಟಿದ್ದ ಡೆನಿಮ್ ಮೇಲಿತ್ತು. ಸಖತ್ ಡಿಫರೆಂಟಾಗಿದ್ದ ಡೆನಿಮ್‍ನ್ನು ಎಲ್ರೂ ಇಷ್ಟಪಟ್ಟಿದ್ರು. ಈ ಖುಷಿಯಲ್ಲೇ ರಂಗ್‍ರೇಜ್ ಜನ್ಮತಳೆದಿದೆ. ಮೊದಲು ಕೈಯಿಂದಲೇ ಪೇಂಟ್ ಮಾಡಿದ ಟಿ-ಶರ್ಟ್‍ಗಳನ್ನು ನೀತಿ ಹಾಗೂ ಗಗನ್ ಮಾರುಕಟ್ಟೆಗೆ ಪರಿಚಯಿಸಿದ್ರು. ಗ್ರಾಹಕರಿಂದ ಸಖತ್ ರೆಸ್ಪಾನ್ಸ್ ಸಿಕ್ತು. ಹಾಗಾಗಿ ಇದೇ ಉದ್ಯಮವನ್ನು ದೊಡ್ಡಮಟ್ಟಕ್ಕೆ ಬೆಳೆಸಿದ್ದಾರೆ. ಕೈಯಲ್ಲೇ ಪೇಂಟ್ ಮಾಡಿದ ವಸ್ತುಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡುತ್ತಿದ್ದಾರೆ. ರಂಗ್‍ರೇಜ್ ಮೂಲಕ ಸ್ಥಳೀಯ ಚಿತ್ರಕಾರರು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ರಂಗ್‍ರೇಜ್ ಯಶಸ್ಸಿನ ಬೆನ್ನಲ್ಲೇ ಗಗನ್ ಅವರಿಗೆ ಪುಸ್ತಕ ಬರೆಯಬೇಕೆಂಬ ಹಂಬಲ ಹೆಚ್ಚಾಗಿತ್ತು. ಕೊನೆಗೂ ಪುಸ್ತಕ ಬರೆದ ಗಗನ್ ಅದನ್ನು ಪ್ರಕಟಿಸಲು ದೊಡ್ಡ ಕಸರತ್ತು ಮಾಡಬೇಕಾಯ್ತು. ಸುಮಾರು 50 ಪಬ್ಲಿಕೇಷನ್‍ಗಳಿಗೆ ಗಗನ್ ಪತ್ರ ಬರೆದಿದ್ದರು. ಕೇವಲ 6 ಪಬ್ಲಿಕೇಷನ್‍ಗಳು ಮಾತ್ರ ಗಗನ್ ಅವರ ಪುಸ್ತಕ ಪ್ರಕಟಿಸಲು ಆಸಕ್ತಿ ತೋರಿಸಿದ್ದವು. 2 ವರ್ಷಗಳ ಪರಿಶ್ರಮದ ಬಳಿಕ ಗಗನ್ ಅವರ ಪುಸ್ತಕ ಮುದ್ರಣಗೊಂಡು ಬಿಡುಗಡೆಯಾಯ್ತು. ಒಟ್ಟಿನಲ್ಲಿ ರಂಗ್‍ರೇಜ್ ಗಗನ್ ಹಾಗೂ ನೀತಿ ಜೈನ್ ಅವರ ಬದುಕಿನಲ್ಲಿ ರಂಗು ತುಂಬಿದೆ.

Related Stories