ಪುಸ್ತಕ ಮತ್ತು ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರೊಫೆಸರ್‍ರೊಬ್ಬರ ಅಮೂಲ್ಯವಾದ ಕೊಡುಗೆ

ಟೀಮ್ ವೈ ಎಸ್


ಪುಸ್ತಕ ಮತ್ತು ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪ್ರೊಫೆಸರ್‍ರೊಬ್ಬರ ಅಮೂಲ್ಯವಾದ ಕೊಡುಗೆ

Tuesday December 22, 2015,

4 min Read

ಬುಕ್‍ಕ್ಲಬ್‍ನ ಮುಖಾಂತರ ಬೇರೆಯವರಿಗೆ ತಮ್ಮಲ್ಲಿರುವ ಹಳೆಯ ಅಮೂಲ್ಯವಾದ ಪುಸ್ತಕಗಳ ವಿನಿಮಯ

“ಬ್ಲಡ್‍ಆನ್‍ಡಿಮ್ಯಾಂಡ್” ವೆಬ್‍ಸೈಟ್‍ನ ಮುಖಾಂತರ 2500 ಜನರನ್ನು ಆಪತ್ಕಾಲದಲ್ಲಿ ರಕ್ತದಾನದಲ್ಲಿ ಭಾಗವಹಿಸಲು ತಯಾರು ಮಾಡಲಾಗಿದೆ.

ಇಂದಿನ ಯಾಂತ್ರಿಕ ಜೀವನದಲ್ಲಿ ಜನಸೇವೆ ಮಾಡಲು ಸಾಕಷ್ಟು ಜನರಿಗೆ ಸಮಯದ ಅಭಾವ, ಕೆಲಸದ ಒತ್ತಡದಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿ. ಕೆಲವು ವ್ಯಕ್ತಿಗಳು ತಮ್ಮ ದಿನಚರಿಯಲ್ಲಿ ಮತ್ತೊಬ್ಬರ ಜೀವನ ಬೆಳಗಲು ಹಾಗು ಜೀವ ಉಳಿಸಲು ತಮ್ಮ ಜೀವನದ ಕೆಲ ಸಮಯವನ್ನು ಮುಡಿಪಾಗಿಟ್ಟಿದ್ದಾರೆ. ಅಂತವರಲ್ಲಿ ಡಾ. ರಾಜೀವ್ ಕುಮಾರ್ ಗುಪ್ತರವರು ಒಬ್ಬರು. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿ ಪ್ರಖ್ಯಾತರಾಗಿರುವ ಡಾ. ಗುಪ್ತರವರು ನೋಯ್ಡಾ ಮತ್ತು ಅದರ ಸುತ್ತಮುತ್ತ ಇರುವ ಮಕ್ಕಳ ಸಹಕಾರದೊಂದಿಗೆ “ನೋಯ್ಡಾ ಬುಕ್ ಡೋನರ್ಸ್ ಕ್ಲಬ್” ಹಾಗೂ “ಬ್ಲಡ್ ಆನ್ ಡಿಮ್ಯಾಂಡ್.ಕಾಂ” ಎಂದು ತಮ್ಮ ಫೇಸ್‍ಬುಕ್‍ನ ಒಂದು ಪುಟವನ್ನು ತೆರೆದಿದ್ದಾರೆ.

ಮೂಲತಃ ಮಥುರಾದವರಾದ ಡಾ. ರಾಜೀವ್ ಕುಮಾರ್ ಗುಪ್ತರವರು ಪ್ರಸ್ತುತ ನೋಯ್ಡಾದಲ್ಲಿನ ರಾಜಕೀಯ ಡಿಗ್ರಿ ಆಫ್ ಕಾಲೇಜಿನಲ್ಲಿ ಕಾಮರ್ಸ್ ಮತ್ತು ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ‘ಅಕೌಂಟ್ಸ್ & ಲಾ’ ದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಸಾಕಷ್ಟು ವಿದ್ಯಾರ್ಥಿಗಳು ತಾವು ಉಪಯೋಗಿಸಿದ ಪುಸ್ತಕಗಳನ್ನು ಗುಜರಿಗೆ ಹಾಕುತ್ತಾರೆ ಅಥವಾ ತಮ್ಮಲ್ಲಿಯೇ ಉಳಿಸಿಕೊಂಡು ಹಾಳು ಮಾಡುತ್ತಾರೆ. ಅಮೂಲ್ಯವಾದ ಪುಸ್ತಕಗಳು ಹೀಗೆ ಹಾಳಾಗುವ ಬದಲಿಗೆ ಮತ್ತೊಬ್ಬರು ಉಪಯೋಗಿಸಿದಲ್ಲಿ ಪೇಪರ್‍ನ ಬಳಕೆ ಕಡಿಮೆಯಾಗಿ ಪರಿಸರದ ಹಾನಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ. ಜೊತೆಗೆ ಹೊಸದಾಗಿ ಮುದ್ರಣಗೊಳ್ಳಬೇಕಾದ ಅನಿವಾರ್ಯತೆ ಕಡಿಮೆಯಾಗುತ್ತದೆ.

image


ಡಾ. ಗುಪ್ತಾರವರ ಅಭಿಪ್ರಾಯದಂತೆ ಪುಸ್ತಕ ಮುದ್ರಣಕ್ಕಾಗಿ ಪ್ರತಿವರ್ಷ ಅಸಂಖ್ಯಾತ ಮರಗಳನ್ನು ಬಲಿ ಕೊಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ಪರ್ಧೆಗಳ ತಯಾರಿಗಾಗಿ ಪುಸ್ತಕಗಳ ಅವಶ್ಯತೆಯಿರುತ್ತದೆ. ಹೀಗೆ ಪ್ರತಿಯೊಬ್ಬರೂ ಪುಸ್ತಕಗಳನ್ನು ಕೊಂಡುಕೊಳ್ಳುತ್ತಿದ್ದಲ್ಲಿ ಹೆಚ್ಚಿನ ಮುದ್ರಣೆಯಾಗುತ್ತದೆ. ಇದರ ಪರಿಣಾಮ ಪರಿಸರದ ಮೇಲೆ ಬೀಳುತ್ತದೆ ಎನ್ನುತ್ತಾರೆ.

ಇದರ ಬದಲು ವಿದ್ಯಾರ್ಥಿಗಳಿಂದ ತಾವು ಉಪಯೋಗಿಸಿದ ಪುಸ್ತಕಗಳನ್ನು ದಾನದ ರೂಪದಲ್ಲಿ ಪಡೆದು. ಮತ್ತೊಬ್ಬರ ಉಪಯೋಗಕ್ಕಾಗಿ ಮೀಸಲಿಡಲು 2009 ರಲ್ಲಿ (www.nirman-noida.com)ಎಂಬ ವೆಬ್‍ಸೈಟನ್ನು ಪ್ರಾರಂಭಿಸಿದರು. ಇದರ ಬಗ್ಗೆ ಜನರು ಕೇವಲವಾಗಿ ಮಾತನಾಡತೊಡಗಿದ ಪರಿಣಾಮ ಹಾಗೂ ಪುಸ್ತಕಗಳ ಜೋಡಣೆಗೆ ಸ್ಥಳಾವಕಾಶದ ಅಭಾವ ಹಾಗೂ ಮತ್ತೆ ಕೆಲವ್ರು ಲದ್ದಿ ಆಯುವವನು ಎಂದು ಹೇಳಲು ಪ್ರಾರಂಭಿಸಿದರು. ಈ ಎಲ್ಲಾ ಕಾರಣದಿಂದ ಆ ವೆಬ್‍ಸೈಟನ್ನು ನಿಲ್ಲಿಸಲಾಯಿತು.

image


ಆದರೆ ತಮ್ಮ ಗುರಿಯನ್ನು ಮುಟ್ಟಲು ಡಾ. ಗುಪ್ತಾರವರು ವಿದ್ಯಾರ್ಥಿಗಳ ಆಸಕ್ತಿ ಫೇಸ್‍ಬುಕ್‍ನ ಕಡೆಗಿರುವುದನ್ನು ಗಮನಿಸಿ ನೋಯ್ಡಾ ಬುಕ್ ಡೋನರ್ಸ್ ಕ್ಲಬ್‍ನ್ನು ಪ್ರಾರಂಭಿಸಿದರು. ಇದರ ಮೂಲಕ ತಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ದಾನ ನೀಡಲು ಪ್ರೇರೇಪಿಸಿದರು. ಇದರೊಂದಿಗೆ ದಾನ ಮಾಡಬಯಸುವವರು ತಮ್ಮ ಸಂಸ್ಥೆಗೆ ಅಥವಾ ಪುಸ್ತಕಾಲಯಕ್ಕೆ ನೀಡುವುದರ ಬಗ್ಗೆ ಫೇಸ್‍ಬುಕ್‍ನಲ್ಲಿ ಪ್ರಕಟಿಸಿದರೆ ಅಗತ್ಯವುಳ್ಳ ಇತರೆ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆಯುತ್ತಾರೆ.

image


ಗುಪ್ತಾರವರು ಹೇಳುವ ಪ್ರಕಾರ ತಮ್ಮ ಕ್ಲಬ್ ವತಿಯಿಂದ ತನ್ನ ವಿದ್ಯಾರ್ಥಿಗಳಿಗೆ ಅಧಿಕ ಲಾಭವಾಗುವಂತೆ ನೋಡಿಕೊಳುತ್ತಾರೆ ಅದರಲ್ಲೂ ಪುಸ್ತಕ ಕೊಳ್ಳಲು ಅಶಕ್ತರಾಗಿರುವವರಿಗಂತೂ ಈ ಕ್ಲಬ್‍ನ ಪುಸ್ತಕ ತುಂಬಾ ಉಪಯುಕ್ತವಾಗಿದೆ. ಇದರ ಜೊತೆಗೆ ತಮ್ಮ ಗುರಿಯೆಂದರೆ ಕೃಷಿ ಕಾಲೇಜು, ಇಗ್ನೋ, ಆರ್ಮಿ ಸೆಕ್ಟರ್ ಹಾಗೂ ಗ್ರಂಥಾಲಯಗಳಿಗೂ ಸಹ ತಮ್ಮ ಸೇವಾ ವಿನಿಮಯವಾಗುತ್ತದೆ ಹಾಗೂ ಇನ್ನೂ ಹೆಚ್ಚು ಪುಸ್ತಕಗಳ ಉಪಯೋಗವನ್ನು ಪಡೆದುಕೊಳ್ಳುವುದರ ಮೂಲಕ ಮರಗಳ ನಾಶಕ್ಕೆ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ.

“ಸುಮಾರು 250 ಸದಸ್ಯರುಗಳು ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿರುವ ಅನೇಕ ಸದಸ್ಯರು ತಮ್ಮೊಂದಿಗಿದ್ದಾರೆ ನಮ್ಮ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಶ್ರೀ ಜೆ.ಪಿ ಶರ್ಮಾರವರೂ ನಮ್ಮ ಸಂಸ್ಥೆಯ ಸದಸ್ಯರಾಗಿದ್ದಾರೆ. ಪ್ರತಿ ವರ್ಷ ತಮ್ಮಲ್ಲಿರುವ ಎಲ್ಲಾ ಪುಸ್ತಕಗಳನ್ನೂ ಬಡ ವಿದ್ಯಾರ್ಥಿಗಳು ಹಾಗೂ ಇತರುಗಳ ಉಪಯೋಗಕ್ಕಾಗಿ ದಾನ ಮಾಡುತ್ತಾರೆ. ಹೀಗೆ ಸುಮಾರು ಜನ ನಮ್ಮ ಸಂಸ್ಥೆ ಜೊತೆ ಕೈ ಜೋಡಿಸುತ್ತಿದ್ದಾರೆ.” ಎನ್ನುತ್ತಾರೆ ಡಾ.ರಾಜೀವ್ ಕುಮಾರ್ ಗುಪ್ತಾ.

ಪುಸ್ತಕಗಳ ಮಹತ್ವದ ಜೊತೆ ರಕ್ತದಾನದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲು ಡಾ.ರಾಜೀವ್ ಕುಮಾರ್ ಗುಪ್ತರವರು ತೆಗೆದುಕೊಂಡ ನಿರ್ಧಾರಗಳಂತೂ ಇನ್ನೂ ಮಹತ್ವದ್ದು ಎಂದು ಹೇಳಬಹುದು. ಇಂದಿನ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಎಷ್ಟೋ ಜನ ಅನಾರೋಗ್ಯಕ್ಕೆ ತುತ್ತಾಗಿ ರಕ್ತಹೀನತೆಯಿಂದ ಬಳಲುತ್ತಿರುವವರಿಗಾಗಿ ರಕ್ತದಾನ ನೀಡಲು ಮುಂದಾಗಿದ್ದಾರೆ.

“2009ನೇ ಇಸವಿಯಲ್ಲಿ ನಮ್ಮ ಕಾಲೇಜಿನ ಪ್ರಾಂಶುಪಾಲರ ತಾಯಿಯವರಿಗೆ ಒಂದು ದುರ್ಘಟನೆಯಿಂದ ರಕ್ತದ ಅಭಾವವಾದಾಗ ರಕ್ತದ ಜೋಡಣೆಗೆ ತುಂಬಾ ಹೆಣಗಿದರು. ಆಪತ್ಕಾಲದ ಸಂದರ್ಭದಲ್ಲಿ ರಕ್ತದಾನಿಗಳ ಹುಡುಕಾಟ ಮಾಡುವುದಕ್ಕಿಂತ, ರಕ್ತದಾನ ಮಾಡುವ ಸ್ವಯಂ ಸೇವಕರ ಆನ್‍ಲೈನ್ ಸಮೂಹವನ್ನು ಜೊತೆಗೂಡಿಸಿದೆ ಹಾಗೂ ಯಾವುದೇ ಸಂದರ್ಭದಲ್ಲೂ, ಯಾರಿಗೆ ಬೇಕಾದರೂ ರಕ್ತದಾನ ಲಭ್ಯವಾಗುವಂತೆ ಮಾಡುವುದು ನನ್ನ ಉದ್ದೇಶ.” ಎಂದು ರಾಜೀವ್‍ರವರು ಹೇಳುತ್ತಾ ಇಂದು ಎಷ್ಟೋ ಜನ ರಕ್ತಕ್ಕಾಗಿ ಪರಿತಪಿಸುತ್ತಾರೆ. ಆದರೆ ರಕ್ತದಾನ ಮಾಡಲು ಬನ್ನಿ ಎಂದಾಗ ಮಾತ್ರ ತಮ್ಮ ದೇಹದಿಂದ ರಕ್ತ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎನ್ನುತ್ತಾರೆ.

ತಮ್ಮ ಈ ವೆಬ್‍ಸೈಟ್‍ನ ಬಗ್ಗೆ ಡಾ.ಗುಪ್ತಾರವರು ರಕ್ತದಾನ ಮಾಡಬಯಸುವವರು ಯಾರೇ ಆಗಲೀ ನಮ್ಮ ವೆಬ್‍ಸೈಟ್ ಲಾಗಿನ್ ಆಗಿ ತಮ್ಮ ಹೆಸರು, ವಿಳಾಸ, ರಕ್ತದ ಗುಂಪು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬಹುದು. ಇದರಿಂದ ಯಾವುದೇ ವ್ಯಕ್ತಿಯು ರಕ್ತದ ಅಗತ್ಯವಿದ್ದಾಗ ನೇರವಾಗಿ ತಮಗೆ ಬೇಕಾದ ರಕ್ತದ ಗುಂಪು ಹೊಂದಿರುವ ವ್ಯಕ್ತಿಗೆ ಕರೆ ಮಾಡಿ ರಕ್ತವನ್ನು ಪಡೆಯಬಹುದು. ಇದರಿಂದ ನೋಯ್ಡಾ ಹಾಗೂ ಸುತ್ತಮುತ್ತಲಿನ ಎಲ್ಲಾ ವ್ಯಕ್ತಿಗಳು ಉಪಯೋಗ ಪಡೆದುಕೊಳ್ಳಬಹುದು. ಇದರಿಂದ ಎಷ್ಟೋ ಜನರ ಪ್ರಾಣ ಉಳಿಸಬಹುದು.

ಇದಿಷ್ಟೇ ಅಲ್ಲದೆ ರಾಜೀವ್ ಕುಮಾರ್ ಗುಪ್ತಾರವರು ಮತ್ತೊಂದು ಸಾಮಾಜಿಕ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ನೋಯ್ಡಾ-ನಿರ್ಮಾಣ ವೇದಿಕೆ www.nirman-noida.com ಯನ್ನು ಪ್ರಾರಂಭಿಸಿದ್ದಾರೆ. ಇದರ ಮೂಲಕ ಜನರನ್ನು ಒಂದು ವೇದಿಕೆಗೆ ತಂದು ಸಾಮಾಜಿಕ ಮತ್ತು ಸಾಂಸ್ಕತಿಕ ಮಹಲನ್ನು ಕಟ್ಟಿ ಅದರ ಮೂಲಕ ವಿಚಾರ ವಿನಿಮಯ ಮಾಡುವುದು. ಸಮಾಜ ಮತ್ತು ದೇಶದ ಬಗ್ಗೆ ಜಾಗೃತಿಯನ್ನುಂಟು ಮಾಡಲು ಜನರನ್ನು ಪ್ರೇರೇಪಿಸುವುದು ಈ ವೆಬ್‍ಸೈಟ್‍ನ ಉದ್ದೇಶವಾಗಿದೆ. ಇದರಿಂದ ಒಂದು ಯೋಗ್ಯ ಸಮಾಜವನ್ನು ಕಟ್ಟುವ ಪ್ರಯತ್ನ ಗುಪ್ತಾರವರದು.

ಡಾ.ರಾಜೀವ್‍ರವರು ಈ ಎಲ್ಲಾ ಕಾರ್ಯಗಳಿಗೆ ಯಾರಿಂದಲೂ ಯಾವುದೇ ರೀತಿಯ ಆರ್ಥಿಕ ಸಹಾಯ ಪಡೆಯದೇ ಸ್ವಂತ ಖರ್ಚಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಅವರೇ ಹೇಳುವಂತೆ ವೆಬ್‍ಸೈಟ್ ನಿರ್ಮಾಣ ಮಾಡುವಲ್ಲಿ ತಮ್ಮ ವಿದ್ಯಾರ್ಥಿಗಳ ಸಹಕಾರವನ್ನು ಪಡೆಯುತ್ತಾರೆ ಆದರೆ ಅದಕ್ಕೆ ಬೀಳುವ ಯಾವುದೇ ಖರ್ಚುಗಳಿಗೂ ತಮ್ಮ ಜೇಬಿನಿಂದಲೇ ಖರ್ಚು ಮಾಡುತ್ತೇನೆ ಎನ್ನುತ್ತಾರೆ.

image


ರಾಜೀವರ ಸೇವೆಯು ಇಷ್ಟಕ್ಕೇ ನಿಲ್ಲುವುದಿಲ್ಲ. ಇನ್ನೂ ಮುಂದುವರೆದು ಪರಿಸರ ಸಂರಕ್ಷಣೆಗೆ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ಯಾರೇ ಕಂಡರೂ, ಅವರೆಲ್ಲರಿಗೂ ಮರ ಗಿಡಗಳನ್ನು ಬೆಳೆಸಬೇಕೆಂದು ಕರೆ ನೀಡುತ್ತಾರೆ. ಪರಿಸರದಿಂದ ನಮಗಾಗುವ ಪ್ರಯೋಜನಗಳ ಬಗ್ಗೆ ವಿವರಿಸುತ್ತಾರೆ. “ನಾವೆಲ್ಲರೂ ಕಪಿಗಳ ವಂಶದವರು, ಯಾರು ಏನೇ ಮಾಡಿದರೂ ಅದನ್ನು ನಾವೂ ಮಾಡಬೇಕೆಂಬ ಸಂಸ್ಕತಿ ನಮ್ಮದು. ಆದ್ದರಿಂದ ನಾನು ಗಿಡ ಬೆಳೆಸುವುದರಿಂದ ಮತ್ತೊಬ್ಬರೂ ಅದನ್ನು ಅನುಸರಿಸುತ್ತಾರೆ. ಆದ್ದರಿಂದ ಈ ಕಾರ್ಯವನ್ನು ನನ್ನಿಂದಲೇ ಪ್ರಾರಂಭಿಸುತ್ತೇನೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಎಲ್ಲರನ್ನೂ ಪ್ರೇರೇಪಿಸುತ್ತೇನೆ.” ಎನ್ನುತ್ತಾರೆ ಡಾ. ರಾಜೀವ್. ಇವರ ಮತ್ತೊಂದು ಕೆಲಸವೆಂದರೆ ಎಲ್ಲೇ ದೊಡ್ಡ ದೊಡ್ಡ ಅಪರಾಧಗಳು ನಡೆದರೂ ಅಲ್ಲಿ ಒಂದು ಚಿಕ್ಕ ಗಿಡ ನೆಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಅವರೇ ಹೇಳುವಂತೆ ನಿಠಾರಿಯವರು ಕೊಲೆಯಾದ ಸ್ಥಳದಲ್ಲಿ ಒಂದು ಚಿಕ್ಕ ಗಿಡವನ್ನು ನೆಟ್ಟಿದರು. ದೇಶಾದ್ಯಂತ ಚರ್ಚೆಗೆ ಗ್ರಾಸವಾದ ಆರುಷಿ ಕೊಲೆಯಾದಾಗ ಅವರ ಮನೆಯ ಮುಂದೆ ಒಂದು ಗಿಡವನ್ನು ನೆಟ್ಟು ಅವರ ಆತ್ಮ ಶಾಂತಿ ಕೋರಿದರು. ಹೀಗೆ ಎಲ್ಲೇ ಅಪರಾಧಗಳಾದರೂ ಅಲ್ಲೆಲ್ಲ ಒಂದೊಂದು ಗಿಡ ನೆಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಅಲ್ಲಿನ ಜನ “ಧರತೀ ಪುತ್ರ” ಎಂಬ ಬಿರುದಿನಿಂದ ಪ್ರಶಂಸಿಸುತ್ತಾರೆ.

ಡಾ. ರಾಜೀವ್ ಕುಮಾರ್ ಗುಪ್ತಾರವರ ಅನೇಕ ಕಾರ್ಯಗಳಿಗಾಗಿ ಅನೇಕ ಪುರಸ್ಕಾರಗಳು ಹರಸಿ ಬಂದಿವೆ. 2009ರಲ್ಲಿ ಗಾಯರ್ ಇಂಡಿಯಾದ ವತಿಯಿಂದ ‘ಬ್ರಾಂಡ್ ಆಟ್‍ಲುಕ್ ಲರ್ನರ್ಸ್ ಟೀಚರ್’ ಪ್ರಶಸ್ತಿಯಿಂದ ಸಿಂಗಾಪುರಕ್ಕೆ ಹೋಗುವ ಅವಕಾಶ ದೊರೆಯಿತು. ವೀಕ್ ಪತ್ರಿಕಾ ವತಿಯಿಂದ ಪ್ರಶಸ್ತಿಗೆ ಭಾಜನರಾದರು.

image


ಡಾ. ರಾಜೀವ್ ಕುಮಾರ್ ಗುಪ್ತಾರವರು ತಮ್ಮ ಅಧ್ಯಾಪಕ ವೃತ್ತಿ ಹಾಗೂ ಸಾಮಾಜಿಕ ಕಾರ್ಯದೊಂದಿಗೆ ಹೆಚ್ಚಿನ ಅಧ್ಯಯನದಲ್ಲಿ ತೊಡಗುತ್ತಾರೆ. ಜೊತೆಗೆ ಇದುವರೆಗೂ ಸುಮಾರು ವಿಷಯಗಳಲ್ಲಿ ಡಿಗ್ರಿ ಪಡೆದಿದ್ದಾರೆ. ಎಂ.ಕಾಂ., ಎಲ್‍ಎಲ್‍ಬಿ., ಪಿ.ಎಚ್.ಡಿ, ಎಂಬಿಎ. ಹಾಗೂ ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಸಿಎ ಅಂತಿಮ ವರ್ಷದ ಪರೀಕ್ಷೆ ಬರೆಯಲು ಅನುವಾಗಿದ್ದಾರೆ. ಇದರೊಂದಿಗೆ ಸುಪ್ರೀಂ ಕೋರ್ಟ್‍ನ ಉತ್ತರಪ್ರದೇಶದ ಉಚ್ಚ ಶೈಕ್ಷಣಿಕ ಸಂಸ್ಥಾನದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ|| ರಾಜೀವ್ ಕುಮಾರ್ ಗುಪ್ತಾರವನ್ನು ಫೇಸ್‍ಬುಕ್ ಪುಟದಲ್ಲಿ ಸಂಪರ್ಕಿಸಬಹುದು.

ಅನುವಾದಕರು - ಬಾಲು

    Share on
    close