ವಾಟ್ಸ್ಆ್ಯಪ್ ಗೂಢಲಿಪೀಕರಣ ನಿಮಗೆಷ್ಟು ಗೊತ್ತು..?
ಎನ್ಎಸ್ಆರ್
Saturday April 16, 2016,
1 min Read
ವಾಟ್ಸ್ಆ್ಯಪ್ನಲ್ಲಿ ನಿಮಗೆ ಎನ್ಕ್ರಿಪ್ಷಿನ್ ಎನ್ನುವ ಹೊಸ ಆಯ್ಕೆ ಕಾಣ್ತಾ ಇದೆಯಾ? ಏನಿರಬಹುದು ಇದು ಅನ್ನೋ ಕುತೂಹಲಕ್ಕೆ ಇಲ್ಲಿದೆ ಕಿರು ಮಾಹಿತಿ. ಎನ್ಕ್ರಿಪ್ಷಿನ್ ಅಂದ್ರೆ ಗೂಢಲಿಪೀಕರಣ. ವಾಟ್ಸ್ಆ್ಯಪ್ ಬಳಕೆದಾರರ ಮಧ್ಯೆ ವಿನಿಮಯವಾಗುವ ಎಲ್ಲ ಮಾಹಿತಿಗಳನ್ನು ಭದ್ರವಾಗಿಡುವ ಸಲುವಾಗಿ ಇದನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ವಾಟ್ಸ್ಆ್ಯಪ್ ನಲ್ಲಿ ನಾವು ಕಳುಹಿಸುವ ಸಂದೇಶ, ಚಿತ್ರ, ವಿಡಿಯೋ, ಮತ್ತಿತರ ಎಲ್ಲ ದಾಖಲೆಗಳನ್ನು ಯಾರೂ ಕದಿಯದಂತೆ ಮಾಡಲು ಇದು ಉತ್ತಮ ಪರಿಹಾರವಾಗಿದೆ. ಬಳಕೆದಾರರ ಖಾಸಗಿತನ ಕಾಪಾಡುವುದೇ ಇದರ ಪ್ರಮುಖ ಉದ್ದೇಶವಾಗಿದೆ.
ನಾವು ಕಳುಹಿಸುವ / ಸ್ವೀಕರಿಸುವ ಎಲ್ಲ ಸಂದೇಶಗಳನ್ನು ಯಾರೂ ಕದಿಯಲಾಗದಂತೆ ಮಾಡುವ ಸಲುವಾಗಿ ವಾಟ್ಸ್ಆ್ಯಪ್ ಈ ಕ್ರಮ ಕೈಗೊಂಡಿದೆ. ಇದರಿಂದಾಗಿ ಬಳಕೆದಾರರ ವೈಯಕ್ತಿಕ ಮಾಹಿತಿ ಇತರರಿಗೆ ದೊರೆಯುವುದಿಲ್ಲ.
ಈ ಮೊದಲು ವಾಟ್ಸ್ಆ್ಯಪ್ ಎಲ್ಲ ಬಗೆಯ ಸಂದೇಶಗಳ ವಿವರಗಳನ್ನು ಸಂಗ್ರಹಿಸುತ್ತಿತ್ತು. ಆದರೆ ಇನ್ನು ಮುಂದೆ ವಾಟ್ಸ್ಆ್ಯಪ್ಯಾವುದೇ ಬಗೆಯ ಸಂದೇಶಗಳ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಇದರಿಂದಾಗಿ ಬಳಕೆದಾರರ ಯಾವುದೇ ಮಾಹಿತಿಯನ್ನು ಬೇರೆಯವರು ನೋಡಲು ಸಾಧ್ಯವಿಲ್ಲ. ಸಂದೇಶ ಕಳುಹಿಸಿದ ಮತ್ತು ಸ್ವೀಕರಿಸಿದವರಿಗೆ ಮಾತ್ರ ಇದು ಸಾದ್ಯ. ಆದ್ದರಿಂದ ಇನ್ನು ಮುಂದೆ ವಾಟ್ಸ್ಆ್ಯಪ್ನಲ್ಲಿ ನಡೆಸುವ ಸಂವಹನಗಳ ಮೇಲೆ ಕಣ್ಣಿಡಲು ಯಾರಿಗೂ ಸಾಧ್ಯವಿಲ್ಲ. ಬಳಕೆದಾರರು ಕೂಡ ಈಗ ನಿಶ್ಚಿಂತೆಯಿಂದ ಚಾಟ್ ಮಾಡಬಹುದು.
1. ಎಸ್ಕೇಪ್ ಹಂಟ್- ಡಿಟೆಕ್ಟಿವ್ ರಹಸ್ಯ ಭೇದಿಸುತ್ತಾ...
2. ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..
3. ಮನೆ ಪೀಠೋಪಕರಣ ಬಾಡಿಗೆಗೆ ಬೇಕಾ? JUSTonRENT.Com ಗೆ ಲಾಗ್ ಇನ್ ಆಗಿ