2016ರ ಮೊದಲ ಐದು ಮಾಹಿತಿ ಪ್ರೇರಿತ ಮಾರ್ಕೆಟಿಂಗ್​​ ಒಲವು

ಟೀಮ್​ ವೈ.ಎಸ್​. ಕನ್ನಡ

0

2016 ಈಗಾಗಲೇ ಕಾಲಿಟ್ಟಿದೆ. ಸಹಜವಾಗಿಯೇ ಮಾಹಿತಿ ಆಧಾರಿತ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆ ನಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ. ಇದು ಆಸಕ್ತಿಯ ವಿಷಯ ಕೂಡ ಆಗಿದೆ. ಆನ್ ಲೈನ್​​​​ನಲ್ಲಿ ಮಾಹಿತಿಯ ಓವರ್ ಲೋಡ್ ಅನುಭವಕ್ಕೆ ಬರುತ್ತಿದೆ. ಇದನ್ನೆಲ್ಲ ಗಮನಿಸಿದರೆ ಕೆಲವು ವಿಷಯಗಳ ಬಗ್ಗೆ ತಿಳಿದಿರಬೇಕಾಗಿದೆ. 2016 ಆಫ್​​​ಲೈನ್ ಕ್ರಾಂತಿಕಾರಿ ವರ್ಷವಾಗುವ ಎಲ್ಲ ಸಾಧ್ಯತೆಗಳು ಇವೆ.

ಪ್ರತಿಯೊಂದು ವಸ್ತುವನ್ನು ಬಟನ್ ಒತ್ತಿ ಖರೀದಿಸುವ ವಾತಾವರಣ ಇನ್ನೂ ಮೂಡಿಲ್ಲ. ಪ್ರತಿಯೊಂದು ಮಾರ್ಕೆಟಿಂಗ್ ತಂತ್ರವನ್ನು ಕ್ಲಿಕ್ ಮತ್ತು ಸಂಶೋಧನೆ ಮೇಲೆ ನಿರ್ಧರಿಸುವುದು ಕೆಲವೊಮ್ಮೆ ತಪ್ಪು ಫಲಿತಾಂಶಕ್ಕೆ ಕಾರಣವಾಗುವ ಸಾಧ್ಯತೆಗಳು ಕೂಡ ಇವೆ. ಈ ಹಿನ್ನೆಲೆಯಲ್ಲಿ ಮಾಹಿತಿ ಮಾರುಕಟ್ಟೆ ಮತ್ತು ಮಾಹಿತಿ ಪ್ರೇರಿತ ಮಾರುಕಟ್ಟೆ ಮಹತ್ವ ಪಡೆದುಕೊಂಡಿವೆ. ಪ್ರತಿಯೊಂದು ಬೆಳವಣಿಗೆ ಇದರ ಸುತ್ತ ಮುತ್ತ ನಡೆಯುತ್ತಿದೆ.

ಮಾಹಿತಿ ಆಧಾರಿತ ಮಾರುಕಟ್ಟೆ - ಒಲವು

ಸ್ಥಳೀಯ ಜಾಹೀರಾತಿನಿಂದಾಗಿ ಬಳಕೆದಾರರು ನಿಮ್ಮತ್ತ ಗಮನ ಹರಿಸಲಿದ್ದಾರೆ. ಮಾಹಿತಿ ಮಾರುಕಟ್ಟೆಯಿಂದಾಗಿ ಬಳಕೆದಾರರು ನಿಮ್ಮತ್ತ ಗಮನಹರಿಸುವಂತೆ ಮಾಡಬಹುದಾಗಿದೆ.

ಇದೀಗ ಈ ಲೇಖನದ ಉದ್ದೇಶವನ್ನು ಸ್ಥೂಲವಾಗಿ ವಿವರಿಸುವ ಪ್ರಯತ್ನ ಮಾಡುತ್ತೇನೆ.

ಮಾಹಿತಿ ಮಾರುಕಟ್ಟೆ ಮತ್ತು ಮಾಹಿತಿ ಪ್ರೇರಿತ ಮಾರುಕಟ್ಟೆ.

ಮಾಹಿತಿ ಮಾರುಕಟ್ಟೆ ಪದದ ಬಳಕೆ ಸ್ವಲ್ವ ವಿವರಣೆ - ಇದರ ವಿಶಾಲಾರ್ಥದಲ್ಲಿ ನಿಮ್ಮ ಬಳಿ ಮಾಧ್ಯಮ ಇರುತ್ತದೆ. ಅದನ್ನು ನೀವು ಬಳಸುತ್ತಿದ್ದೀರಿ. ಇದೇ ವೇಳೆ ಮಾಹಿತಿ ಪ್ರೇರಿತ ಮಾರುಕಟ್ಟೆ ಎಂದಾಕ್ಷಣ, ನೀವು ಮಾಧ್ಯಮದಲ್ಲಿ ಸ್ಪೇಸ್ ಅಂದರೆ ನಿಮ್ಮ ಉತ್ಪನ್ನಗಳ ಜನಪ್ರಿಯತೆಗೆ ಸ್ಪೇಸ್ ಖರೀದಿಸುತ್ತೀರಿ. ಇಲ್ಲಿ ಜಾಹೀರಾತಿಗಿಂತ ಹೆಚ್ಚಿಗೆ ಮಾಹಿತಿ ಪಸರಿಸುವ ಕೆಲಸಕ್ಕೆ ಒತ್ತು ನೀಡಲಾಗುತ್ತದೆ.

ಇದು ಹೇಳಿ ಕೇಳಿ ಸಾಮಾಜಿಕ ಜಾಲ ತಾಣಗಳ ಕಾಲ. ಎಲ್ಲ ಸಾಮಾಜಿಕ ಜಾಲ ತಾಣಗಳು ಹೊಸ ಹೊಸ ಪ್ರಕಾಶನ ಆಯ್ಕೆಯನ್ನು ನೀಡುತ್ತಿವೆ.

ಲಿಂಕ್ ಡಿನ್ ಮತ್ತು ಫೇಸ್ ಬುಕ್ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿವೆ. ಇದರ ಮುಂಚೂಣಿಯಲ್ಲಿದ್ದದ್ದು ಯು ಟ್ಯೂಬ್. ತಮ್ಮದೇ ಫೇಜ್ ಮತ್ತು ಚಾನಲ್​​​ಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಸಾಮಾಜಿಕ ಜಾಲತಾಣಗಳು ಉಚಿತವಾಗಿ ಮಾಹಿತಿಯ ಮಹಾಪೂರವನ್ನೇ ಉಣಬಡಿಸುತ್ತಿವೆ.

ಇಲ್ಲಿ ಒಂದು ಎಚ್ಚರಿಕೆ ಕೂಡ ಅಗತ್ಯ ಇದೆ. ಯಾವ ಸೋಶಿಯಲ್ ಸೈಟ್ ನಲ್ಲಿ ನೀವು ರಾಜರಂತೆ ಕಂಗೊಳಿಸಲು ಸಾಧ್ಯವೋ ಅದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ. ಯಾಕೆಂದರೆ ಎಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ.

ಮೂಲ ಸಂಶೋಧನೆ ಭವಿಷ್ಯ ಉಜ್ವಲ

ಸಂಶೋಧನೆ ಮತ್ತು ಫ್ಯಾಷನ್ ಅನ್ನುವ ಪದವನ್ನು ಒಂದೇ ಪದದಲ್ಲಿ ನಿರ್ವಹಿಸುವುದು ಭಾರೀ ಕಷ್ಟ. ಯಾಕೆಂದರೆ ಅದು ಅಗಾಧವಾಗಿದೆ. ವಿಸ್ತಾರವಾದ ಹರಿವು ಹೊಂದಿದೆ. ಆದರೆ ಒಂದು ಪದದಲ್ಲಿ ಪೋಣಿಸಿ ಹೇಳುವುದಾದರೆ ಮೂಲ ಅಥವಾ ನೈಜ ಎಂದು ಹೇಳಬಹುದು

ಬಳಕೆದಾರರ ವಾಸ್ತವ ಅಂತರ್ಗತ ಭಾವನೆಗಳನ್ನು , ಅಭಿರುಚಿಗಳನ್ನು ತಕ್ಷಣ ಕ್ರೋಢೀಕರಿಸಿ ಬಳಿಕ ಅದನ್ನು ಮಾಹಿತಿಯಾಗಿ ಪರಿವರ್ತಿಸಿ, ಆ ಮೂಲಕ ಮಾರುಕಟ್ಟೆ ಸಂವಾದದಲ್ಲಿ ಮೇಲುಗೈ ಸ್ಥಾಪಿಸುವ ಪ್ರಯತ್ನ- 2016ರಲ್ಲಿ ನಡೆಯಲಿದೆ.

ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಪ್ರತಿಯೊಂದು ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಆದರೆ ಇದು ಎಷ್ಟೇ ಚಿಕ್ಕ ಪ್ರಮಾಣದಲ್ಲಿದ್ದರೂ ಅದು ಮೂಲ ಸಂಶೋಧನೆಯಾಗಿರಬೇಕು. ಬ್ರ್ಯಾಂಡ್ ಗಳು ಜನರ ಅಭಿರುಚಿಯನ್ನು ಅಧ್ಯಯನ ಕೂಡ ಮಾಡಲಿವೆ.

ಬೇರೆ ಎಲ್ಲೂ ಸಿಗದ ಮೂಲ ಹಾಗೂ ಆಕರ್ಷಕ ಮಾಹಿತಿ ಈ ಮೂಲಕ ಬಳಕೆದಾರನಿಗೆ ದೊರೆಯಲಿದೆ.

ಕಂಪ್ಯೂಟರ್ ಕ್ರಾಂತಿ

ಮಾನವ ನಿರ್ಮಿತ ರೋಬೊಟ್ ಅಂದರೆ ಯಂತ್ರ ಮಾನವ ಈಗಾಗಲೇ ಕೆಲವು ಕ್ಷೇತ್ರಗಳಿಗೆ ಕಾಲಿರಿಸಿದ್ದಾನೆ . ಆದರೆ ಸೀಮಿತ ಬಳಕೆ ಮಾತ್ರ ಸಾಧ್ಯ. ಇದೀಗ ಹವಾಮಾನ ವರದಿಗೆ ಸಂಬಂಧಿಸಿದಂತೆ ಯಂತ್ರಮಾನವ ಸೇವೆಯನ್ನು ಬಳಸಲಾಗುತ್ತಿದೆ.ಅತ್ಯಂತ ಸಂಕೀರ್ಣ ಪ್ರೋಗ್ರಾಂಗಳಿಗೆ ಮಾನವನ ಬುದ್ಧಿ ಶಕ್ತಿ ಬೇಕೆ ಬೇಕು. ಇದು ವಾಸ್ತವ. 2016ರಲ್ಲಿ ಅಟೋಮೇಟೆಡ್ ತಂತ್ರಾಂಶ ಬಳಕೆ ಹೆಚ್ಚಾಗಲಿದೆ. ಇದು ಅತೀ ಹೆಚ್ಚು ಮಾಹಿತಿ ಅಗತ್ಯ ಇರುವ ಹಾಗೂ ಬೃಹತ್ ಸಂಸ್ಥೆಗಳಲ್ಲಿ ಮಾತ್ರ ಕಂಡು ಬರಲಿದೆ.

ಇನ್ನೊಂದು ಪ್ರಮುಖ ಬೆಳವಣಿಗೆಯನ್ನು ನಾವು ಗಮನಿಸಬೇಕಾಗಿದೆ. ವ್ಯಾಪಕವಾಗಿ ಹರಡಿರುವ ಸಾಮಾಜಿಕ ಜಾಲ ತಾಣಗಳಲ್ಲಿ ಬಿಡಿ ಬಿಡಿಯಾಗಿರುವ ಮಾಹಿತಿಯನ್ನು ಕ್ರೋಢೀಕರಿಸಿ ಅದನ್ನು ಬಳಸುವ ಪ್ರವೃತ್ತಿ ವೇಗ ಪಡೆದುಕೊಳ್ಳಲಿದೆ. ಉದಾಹರಣೆಗೆ ಕ್ರಿಸ್ ಮಸ್​ ಅನ್ನು ವಿಶ್ವದಾದ್ಯಂತ ಹೇಗೆ ಆಚರಿಸಲಾಯಿತು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡು ನೂರಕ್ಕೂ ಹೆಚ್ಚು ಇಮೇಜ್​​​ಗಳನ್ನು ಬಳಸಿಕೊಳ್ಳುವುದರ ಮೂಲಕ ಒಂದು ಚಿತ್ರಣ ಕಟ್ಟಿಕೊಡುವ ಪ್ರಯತ್ನ ನಡೆಯಲಿದೆ.

ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಪುಸ್ತಕ ಅಥವಾ ಸಿನೆಮಾ ಆಫ್​ಲೈನ್ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ವೀಕ್ಷಕರು ತಮ್ಮ ಅನುಭವಗಳನ್ನು ಆನ್ ಲೈನ್ ಮೂಲಕ ಹಂಚಿಕೊಳ್ಳಲಿದ್ದಾರೆ. ಜಗತ್ತು ಬದಲಾಗುತ್ತಿದೆ. ಇದರೊಂದಿಗೆ ತಂತ್ರಜ್ಞಾನ ಕೂಡ ಬದಲಾಗುತ್ತಿದೆ. ಈ ಹಿಂದೆ ವೆಬ್​​​ಸೈಟ್ ವೊಂದಿದ್ದರೆ ಸಾಕಿತ್ತು. ಇದು ಜನರ ಮೇಲೆ ಪ್ರಭಾವ ಬೀರಲಿದೆ ಎಂಬ ಅಭಿಪ್ರಾಯ ಸಾಮಾನ್ಯವಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ವಿಸ್ತರಿಸಿದೆ. ಮಾಹಿತಿ ಶೀಘ್ರವಾಗಿ ವಿನಿಮಯವಾಗುತ್ತಿದೆ. ದೃಶ್ಯ, ಸುದ್ದಿ, ಗ್ರಾಫಿಕ್ಸ್ ಹೀಗೆ ವಿವಿಧ ರೂಪಗಳಲ್ಲಿ ಮಾಹಿತಿ ಹರಿದಾಡುತ್ತದೆ. ಜನರ ಮೇಲೆ ಪರಿಣಾಮ ಬೀರುತ್ತದೆ.

ಬ್ರ್ಯಾಂಡ್ ಆಲೋಚನೆ- 2016 . ನಮ್ಮ ಒದುಗರಿಗಾಗಿ ಅಥವಾ ನಮ್ಮ ಅಭಿಮಾನಿಗಳಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸೋಣ ಎಂಬ ಆಲೋಚನೆ ಹೊರಹೊಮ್ಮಲಿದೆ. ಒಂದು ಉತ್ಪನ್ನದ ಮಾರ್ಕೆಟಿಂಗ್ ಸವಾಲಿನ ಕೆಲಸ. ಇದನ್ನು ಮನಗಂಡೇ ಪ್ರತಿಯೊಂದು ಬ್ರ್ಯಾಂಡ್ ಕೂಡ ಆಫ್​​​ಲೈನ್ ಮತ್ತು ಆನ್ ಲೈನ್ ಸಮುದಾಯ ಅಭಿವೃದ್ಧಿಗೆ ಒತ್ತು ನೀಡಲಿದೆ. ಈ ಪ್ರತಿಯೊಂದು ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಎಷ್ಟು ಮಂದಿಯನ್ನು ತಲುಪಲು ಸಾಧ್ಯ ಎಂಬ ಬಗ್ಗೆ ಜಾಹೀರಾತು ಸಂಸ್ಥೆಗಳು ಅಧ್ಯಯನ ನಡೆಸಲಿವೆ.

ಸುದೀರ್ಘ ಮತ್ತು ಸಂಯೋಜಿತ ಮಾಹಿತಿ ಬರವಣಿಗೆ ಮತ್ತೆ ಪ್ರಕಾಶಿಸಲಿದೆ.

ಇಲ್ಲಿ ಗೂಗಲ್ ಸರ್ಚ್ ಬಗ್ಗೆ ಪ್ರಸ್ತಾಪಿಸಲೇ ಬೇಕು. ಗೂಗಲ್ ನಲ್ಲಿ ಖ್ಯಾತ ವ್ಯಕ್ತಿಗಳ ಬಗ್ಗೆ ಹುಡುಕಾಟ ನಡೆಸಿದರೆ ತಕ್ಷಣ ಬಲ ಬದಿಯಲ್ಲಿ ಮಾಹಿತಿ ಗ್ರಾಫ್ ತೆರೆದುಕೊಳ್ಳುತ್ತದೆ. ಇದು ಇನ್ನಷ್ಟು , ಆಸಕ್ತಿದಾಯಕ ಮಾಹಿತಿ ನೀಡುತ್ತದೆ. ಇದನ್ನೆಲ್ಲ ಪರಿಗಣಿಸಿದರೆ ಒಂದು ಮಾತನ್ನು ಹೇಳಲೇ ಬೇಕು. ಮಾಹಿತಿ ಇಂಜಿನ್ ಬದಲಾಗಿ ಗೂಗಲ್, ಜ್ಞಾನ ಇಂಜಿನ್ ಆಗಿ ಪರಿವರ್ತನೆಗೊಂಡಿದೆ ಎಂದೇ ಹೇಳಬೇಕಾಗುತ್ತದೆ. ಪ್ರತಿಯೊಂದು ಮಾಹಿತಿ ಕೋಶ. ಅದಕ್ಕೆ ಸಂಬಂಧಪಟ್ಟ ಇನ್ನೊಂದು ಮಾಹಿತಿ ಕಣಜದೊಂದಿಗೆ ಸಂಯೋಜಿತಗೊಂಡಿದೆ. ಹೀಗೆ ವ್ಯಾಪ್ತಿ ವಿಶಾಲವಾಗುತ್ತದೆ. ಇದು ಸಹಜವಾಗಿಯೇ ಸುದೀರ್ಘ ಮತ್ತು ಸಮಗ್ರವಾದ ಮಾಹಿತಿ ಅಗತ್ಯದ ಪ್ರಸಕ್ತತೆಗೆ ಕನ್ನಡಿ ಹಿಡಿಯುತ್ತಿದೆ. ಉದಾಹರಣೆಗೆ ಮೊಬೈಲ್ ಫೋನ್ ಬಗ್ಗೆ ಲೇಖನ ಬರೆಯಬೇಕೆಂದು ನೀವು ನಿರ್ಧರಿಸಿದರೆ, ಬಳಕೆದಾರ ಬಯಸುವ ಎಲ್ಲ ಮಾಹಿತಿಗಳ ಪೂರ್ಣ ಮಾಹಿತಿ ನೀಡಬೇಕಾಗುತ್ತದೆ. ಗೂಗಲ್​​​ನಲ್ಲಿ ವೀಡಿಯೋ ಸರ್ಚ್ ಇದಕ್ಕೆ ಅತ್ಯುತ್ತಮ ಉದಾಹರಣೆ. ಝ್ಯಾಕ್ ಮಾಟ್ರಿಯ ಗ್ರೋವಿಂಗ್ ನಾಲೇಜ್ ಇದಕ್ಕೆ ಉದಾಹರಣೆ. ನಿಮ್ಮ ಕಥೆಗಳನ್ನು ಹೇಳಲು ಇದು ಪ್ರೇರೇಪಣೆ ನೀಡುತ್ತದೆ. ಪ್ರತಿಯೊಂದು ಬ್ರ್ಯಾಂಡ್ ಪ್ರಯೋಜನ ಪಡೆಯಲಿದೆ.

ಅಂತಿಮ ಷರಾ

ಗುಣಮಟ್ಟವೇ ಮಾನದಂಡ. ಗುಣಮಟ್ಟದ ಮಾಹಿತಿ, ಪ್ರಮಾಣದ ಮೇಲೆ ಖಂಡಿತವಾಗಿಯೂ ಮೇಲುಗೈ ಸಾಧಿಸಲಿದೆ. ಅತ್ಯಂತ ಗುಣಮಟ್ಟದ ಮಾಹಿತಿ ಮಾತ್ರ ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲಿದೆ. ಇದು ಸ್ಪಷ್ಟ. ದೃಶ್ಯ ಮತ್ತು ಕಥೆ ಹೇಳುವ ರೀತಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಹೊಂದಲಿವೆ. ಒಂದು ಹಂತದವರೆಗೆ ಈ ಹಿಂದಿನ ತಂತ್ರ ಕೂಡ ಮರು ಹುಟ್ಟು ಪಡೆಯಲಿದೆ. ಆನ್ ಲೈನ್ ನಲ್ಲಿ ವೈಯಕ್ತಿಕ ಛಾಪು, ಖಂಡಿತವಾಗಿಯೂ ಬದಲಾವಣೆಯ ಸಂಕೇತವಾಗಿ ಹೊರಹೊಮ್ಮಲಿದೆ. ಇದರಲ್ಲಿ ಎರಡು ಮಾತಿಲ್ಲ.

ಲೇಖಕರು : ರೀಟಾ ಗುಪ್ತಾ
ಅನುವಾದಕರು : ಎಸ್​.ಡಿ.

Related Stories