ಬದಲಾಗಿದೆ ಶಿಕ್ಷಣ ವ್ಯವಸ್ಥೆ- ಭಾರತದ ಅಭಿವೃದ್ಧಿಗೆ ಕನಸು ಬಿತ್ತಿದೆ ಡಿಜಿಟಲ್​ ಕ್ರಾಂತಿ

ಟೀಮ್​ ವೈ.ಎಸ್​. ಕನ್ನಡ

ಬದಲಾಗಿದೆ ಶಿಕ್ಷಣ ವ್ಯವಸ್ಥೆ- ಭಾರತದ ಅಭಿವೃದ್ಧಿಗೆ ಕನಸು ಬಿತ್ತಿದೆ ಡಿಜಿಟಲ್​ ಕ್ರಾಂತಿ

Friday June 02, 2017,

3 min Read

20ನೇ ಶತಮಾನದ ಮಹಾನ್ ವಾಸ್ತುಶಿಲ್ಪಿ, ಸಾಹಿತಿ ರಿಚರ್ಡ್ ಬಕ್‍ಮಿನಿಸ್ಟರ್ ಫುಲ್ಲರ್, 1961ರ ಏಪ್ರಿಲ್‍ನಲ್ಲಿ, ಅಮೆರಿಕದ ಮಿಡ್‍ವೆಸ್ಟ್​​ನಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಭಾಷಣ ಮಾಡಿದ್ರು. `ಎಜುಕೇಷನ್ ಆಟೋಮೇಷನ್: ಫ್ರೀಯಿಂಗ್ ದಿ ಸ್ಕಾಲರ್ ಟು ರಿಟರ್ನ್ ಟು ಹೀಸ್ ಸ್ಟಡೀಸ್' ಎಂಬ ವಿಷಯದ ಮೇಲೆ ಮಾತನಾಡಿದ್ರು. ಈ ಉಪನ್ಯಾಸ ಭವಿಷ್ಯದ ಶಿಕ್ಷಣದ ಮೂಲ ಪ್ರತಿಪಾದನೆಗಳಲ್ಲಿ ಒಂದಾಗಿತ್ತು. ಅವರ ಉಪನ್ಯಾಸದ ಕೆಲ ಸಾಲುಗಳು ಇಲ್ಲಿವೆ.

ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ತಮ್ಮಲ್ಲಿ ತಾವು ಶಿಸ್ತು ಅಳವಡಿಸಿಕೊಳ್ಳುವುದೇ ಶಿಕ್ಷಣ. ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಪ್ರತ್ಯೇಕ ವರ್ಣತಂತುಗಳಿರುತ್ತವೆ. ಪ್ರತ್ಯೇಕ ಮಾದರಿಯನ್ನು ಹೊಂದಿರುತ್ತಾರೆ. ಇಬ್ಬರು ವ್ಯಕ್ತಿಗಳು ಒಂದೇ ಸಮಯದಲ್ಲಿ ಅದೇ ಹಸಿವನ್ನು ಹೊಂದಿರುವುದು ಅಸಾಧ್ಯ. ಅದ್ಯಾಕೆ ಅನ್ನೋದಕ್ಕೆ ಕಾರಣಗಳಿಲ್ಲ. ವೆನೆಜುವೆಲಾದಲ್ಲಿ ಕ್ರಾಂತಿಯಂತಹ ಸುದ್ದಿ ಇಲ್ಲದೇ ಇದ್ರೆ, ಒಂದೇ ವೇಳೆಗೆ ಎಲ್ಲರಿಗೂ ಅದರ ಬಗ್ಗೆ ಆಸಕ್ತಿ ಮೂಡುವುದು ಸಾಧ್ಯವಿಲ್ಲ. ನಮ್ಮದೇ ಆದ ಸಮಯದಲ್ಲಿ ವೆನೆಜುವೆಲಾದ ಭೌಗೋಳಿಕತೆಯ ಬಗ್ಗೆ ನಾವೆಲ್ಲರೂ ಆಸಕ್ತಿ ತೋರಿಸುತ್ತೇವೆ, ಆದ್ರೆ ಎಲ್ಲರೂ ಒಂದೇ ಸಮಯದಲ್ಲಲ್ಲ. ಅದರಂತೆ ಏಕಕಾಲಿಕ ಪಠ್ಯಕ್ರಮ ಹಳತಾಗಿ ಹೋಗಿರುತ್ತದೆ. ನಾವು 2 ರೀತಿಯಲ್ಲಿ ಎಲ್ಲಾ ಮಾಹಿತಿ ಕೂಡಲೇ ದೊರೆಯುವಂತೆ ಮಾಡಬೇಕು''

image



ಭೂಮಿತಿ ರೇಖೆಯ ಗುಮ್ಮಟದ ಹಿಂದಿರುವ ವ್ಯಕ್ತಿ ಫುಲ್ಲರ್ ಎಂದೇ ನಾವೆಲ್ಲ ನೆನಪಿಸಿಕೊಳ್ಳುತ್ತೇವೆ. ಇದೇ ಕಾರಣಕ್ಕೆ ಅವರು ಫುಲ್ಲೇರಿನ್ನಂತಿರುವ ಇಂಗಾಲದ ಕಣದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಶಿಕ್ಷಣದ ಬಗ್ಗೆ ಒಳನೋಟವುಳ್ಳ ಚಿಂತಕರೆಂದು ಕೂಡ ಅವರನ್ನು ಕರೆಯಲಾಗುತ್ತದೆ. 50 ವರ್ಷಗಳಿಂದ ನಾವು ಅವರ ಭಾಷಣದ ಸಾರದ ಹಾದಿಯಲ್ಲೇ ನಡೆದು ಬಂದಿದ್ದೇವೆ. ಭಾರತದ ಮಿಲಿಯನ್‍ಗಟ್ಟಲೆ ವಿದ್ಯಾರ್ಥಿಗಳಿಗಾಗಿ ಫುಲ್ಲರ್ ಅವರ ವರ್ಣತಂತುವಿನ ವೈಯಕ್ತಿಕ ಶಿಕ್ಷಣದ ಕನಸನ್ನು ನನಸಾಗಿಸುವ ಪ್ರಯತ್ನ ನಡೆಯುತ್ತಲೇ ಇದೆ.

ಇದನ್ನು ಓದಿ: ಪಾರಿವಾಳಗಳ ಪಾಲಿಗೆ ಅನ್ನದಾತ- ಪಕ್ಷಿ ಸಂಕುಲವನ್ನು ಕಾಪಾಡುವ ಸಂರಕ್ಷಕ

ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ

ಭಾರತದಲ್ಲಿ ಸುಮಾರು 250 ಮಿಲಿಯನ್ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ನೋಂದಣಿ ಹೊಂದಿರುವ ರಾಷ್ಟ್ರ ನಮ್ಮದು. ಭಾರತದ 1.5 ಮಿಲಿಯನ್ ಶಾಲೆಗಳು ಅಂದ್ರೆ ಶೇಕಡಾ 25ರಷ್ಟು ಖಾಸಗಿ ಒಡೆತನದಲ್ಲಿದೆ. ಆದ್ರೆ ಅವುಗಳಲ್ಲಿ ಮಕ್ಕಳ ನೋಂದಣಿ ಪ್ರಮಾಣ ಶೇಕಡಾ 40ರಷ್ಟು ಮಾತ್ರವಿದೆ. ಆದ್ರೂ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಿಸಿಲ್ಲ. ಶಿಕ್ಷಣ ಹಕ್ಕು ಕಾಯ್ದೆ ಮೂಲಕ ಸರ್ಕಾರ ಕೂಡ ಸುಶಿಕ್ಷಿತ ಭಾರತ ನಿರ್ಮಾಣಕ್ಕೆ ಕಸರತ್ತು ಮಾಡುತ್ತಿದೆ.

ಡಿಸ್‍ಕನೆಕ್ಟ್ ಆಗಿರುವ ಗೇರ್‍ಗಳು...

ಖಾಸಗಿ ವಲಯದಲ್ಲಾಗಿರಲಿ ಅಥವಾ ಸರ್ಕಾರಿ ಶಾಲೆಗಳಲ್ಲಾಗ್ಲಿ ಸದ್ಯ ಭಾರತದ ಶೈಕ್ಷಣಿಕ ವ್ಯವಸ್ಥೆ ಸಂಪರ್ಕವನ್ನೇ ಕಡಿದುಕೊಂಡ ಗೇರ್‍ಗಳಂತಾಗಿದೆ.

*ಪಠ್ಯಪುಸ್ತಕಗಳು ತರಗತಿಯ ಸತ್ಯಗಳಿಂದ ಹೊರತಾಗಿವೆ. ವಿಷಯಗಳು ಹೆಚ್ಚು ಸಕಾಲಿಕ ಮತ್ತು ಸಾಂದರ್ಭಿಕವಾಗಿಲ್ಲ.

*ಶಿಕ್ಷಣ ಶಾಸ್ತ್ರ ಮತ್ತು ಶಿಕ್ಷಕ ಸುಧಾರಣೆ ಉಪಕ್ರಮಗಳೆರಡೂ ಬೋಧಕರ ಬೋಧನಾ ಸಾಮರ್ಥ್ಯಕ್ಕೆ ಅನುಗುಣವಾಗಿಲ್ಲ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತಿಲ್ಲ.

*ಬಹುತೇಕ ಸ್ಮಾರ್ಟ್-ಕ್ಲಾಸ್ ತಂತ್ರಜ್ಞಾನಗಳು ಮಾರ್ಕೆಟಿಂಗ್ ಅಸ್ತ್ರಗಳಂತೆ ಕೆಲಸ ಮಾಡಿವೆಯೇ ಹೊರತು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಸುಧಾರಿಸಿಲ್ಲ.

*ತರಗತಿ ನಂತರದ ಚಟುವಟಿಕೆಗಳು ಹಾಗೂ ಟ್ಯೂಷನ್ ಅನ್ನು ಶಿಕ್ಷಣಕ್ಕೆ ಪೂರಕವಾದುವೆಂದು ಪರಿಗಣಿಸಲಾಗಿತ್ತು. ಈಗ ಅವು ಶಾಲಾ ವ್ಯವಸ್ಥೆಗೆ ಸಮಾನಾಂತರವಾಗಿ ಬದಲಾಗಿವೆ. ಎಲ್ಲ ವಿದ್ಯಾರ್ಥಿಗಳು ಓದಿನಲ್ಲಿ ಮುಂದಿರಬೇಕು ಎಂಬುದನ್ನು ಖಾತರಿಪಡಿಸಲು ಬಹುತೇಕ ಶಾಲೆಗಳು ವಿಫಲವಾಗಿವೆ.

ಇವೆಲ್ಲದರ ಪರಿಣಾಮ ವಿದ್ಯಾರ್ಥಿಗಳಿಗೆ ಉಸಿರುಗಟ್ಟಿಸುವಂತಹ ಅನುಭವ ಮೂಡಿಸುತ್ತಿದೆ ಮತ್ತು ಕಳಪೆ ಕಲಿಕಾ ಫಲಿತಾಂಶಗಳಿಗೆ ಕಾರಣವಾಗುತ್ತಿದೆ. ಕಲಿಕೆಯ ನಕಲು ಹಾಗೂ ತಂತ್ರಜ್ಞಾನದ ಮೇಲಿನ ಹೂಡಿಕೆಯಿಂದ ಹಣ ವ್ಯರ್ಥವಾಗಿ ಪೋಲಾಗುತ್ತಿದೆ. ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿ ಹೇಗೆ ಕಲಿಯುತ್ತಿದ್ದಾನೆ ಎಂಬುದರ ಬಗ್ಗೆ ಗಮನವಿಡಲು ಸಾಧ್ಯವಾಗುತ್ತಿಲ್ಲ. ಇರುವ ಜ್ಞಾನವನ್ನು ಬಳಸಿಕೊಂಡು ಡಿಸ್‍ಕನೆಕ್ಟ್ ಆಗಿರುವ ಗೇರ್‍ಗಳನ್ನು ಸರಿಪಡಿಸುವ ಕಾರ್ಯ ಆಗುತ್ತಿಲ್ಲ.

ಒಗ್ಗೂಡಿಸುವಿಕೆ...

ಮೌಲ್ಯಮಾಪನ ಔಪಚಾರಿಕ ಶಿಕ್ಷಣದ ಕೇಂದ್ರಬಿಂದು ಎನಿಸಿಕೊಂಡಿದೆ. ವಸ್ತುನಿಷ್ಠವಾಗಿ ವಿದ್ಯಾರ್ಥಿಗಳ ಕಲಿಕೆಯ ಅಂತರ ಮತ್ತು ಬೋಧಕರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ಬಳಸುವ ಸಂದರ್ಭಲ್ಲಿ ಅತ್ಯಲ್ಪ ಹೊಸತನವನ್ನು ತರಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ವಿಷಯ ವಸ್ತುಗಳನ್ನು ಸರಿಯಾಗಿ ಪ್ರಸ್ತುತಪಡಿಸಲು ಪರೀಕ್ಷೆಗಳಲ್ಲಿ ಹೊಸತನ ತರಬೇಕಿದೆ. ಪ್ರತಿ ಮಗುವಿನ ಕಲಿಕೆಯ ಬಗ್ಗೆ ಪ್ರತ್ಯೇಕ ಅಂಕಿ ಅಂಶಗಳನ್ನು ಸಿದ್ಧಪಡಿಸಬೇಕು. ಇದೇ ದೃಷ್ಟಿಕೋನವನ್ನಿಟ್ಟುಕೊಂಡು 2013ರಲ್ಲಿ ನವೀನ್ ಮಂಡಾವ ಹಾಗೂ ವರುಣ್ ಕುಮಾರ್ `ಎಕ್ಸಾಮ್‍ಚೆಕ್' ಅನ್ನುವ ಸಂಸ್ಥೆಯನ್ನು ಆರಂಭಿಸಿದ್ದರು. ಸಂಪೂರ್ಣ ಡಿಜಿಟಲ್‍ಮಯವಾಗಿರುವ ಕಲಿಕಾ ಪರಿಸರದಲ್ಲಿ ತಂತ್ರಜ್ಞಾನ ವೇದಿಕೆ ಘಾತಕ ಪ್ರಮಾಣವನ್ನು ಸಾಧಿಸಬಲ್ಲದು ಎಂಬ ವಿಶ್ವಾಸ ಅವರಿಗಿತ್ತು. ಡಿಜಿಟಲ್ ಜಗತ್ತು ಹಾಗೂ ಪೆನ್-ಪೇಪರ್, ಪುಸ್ತಕವನ್ನೊಳಗೊಂದ ಆಫ್‍ಲೈನ್ ವ್ಯವಸ್ಥೆಗೂ ಹೊಂದಿಕೆಯಾಗುವಂತಹ ಉದ್ಯಮ ಮಾದರಿಯನ್ನು ತಯಾರಿಸುವುದು ಅವರಿಗೆ ಸವಾಲಾಗಿ ಪರಿಣಮಿಸಿತ್ತು. ಜಗತ್ತಿನ ಅತಿದೊಡ್ಡ ಶಾಲಾ ಪರಿಸರ ಎನಿಸಿಕೊಂಡಿರುವ ಭಾರತದಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಆಫ್‍ಲೈನ್ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳಬೇಕಾದಂತಹ ಪರಿಸ್ಥಿತಿ ಇದೆ. ಮುಂದಿನ 10 ವರ್ಷಗಳಲ್ಲಿ ಬಹುತೇಕ ಎಲ್ಲಾ ಶಾಲೆಗಳು ಡಿಜಿಟಲ್‍ಮಯವಾಗುವುದ ಅಸಾಧ್ಯ.

 ಸಾಮಾನ್ಯವಾಗಿ ಮನುಷ್ಯರು ನಾಟಕೀಯ ವರ್ತನೆಯ ಬದಲಾವಣೆಗೆ ಪ್ರತಿಕೂಲವಾಗಿರುತ್ತಾರೆ. ಹೆಚ್ಹೆಚ್ಚು ಶಾಲೆಗಳನ್ನು ಆರಂಭಿಸಬೇಕೆಂದ್ರೆ ಅದರಲ್ಲಿ ಹೊಸತನವಿರಬೇಕು. ಅಸ್ತಿತ್ವದಲ್ಲಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇನ್ನಷ್ಟು ದಕ್ಷತೆಯನ್ನು ತರಬೇಕು. ಶಿಕ್ಷಣ ಕ್ಷೇತ್ರದಲ್ಲಿರುವ ಉದ್ಯಮಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ ಬಗ್ಗೆ ಶಿಕ್ಷಕರು ಆತಂಕ ಪಡದಂತೆ ಕಾರ್ಯಕ್ರಮಗಳನ್ನು ರೂಪಿಸಲು ಹೆಚ್ಚಿನ ಸಮಯ ಮೀಸಲಾಗಿಡಬೇಕು. 

 ಅಧ್ಯಯನಕ್ಕೆ ಮರಳಲು ಅವಕಾಶ... 

ವೈಯಕ್ತಿಕ ಕಲಿಕೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಪ್ರತಿ ಮಗುವೂ ಶಾಲೆಗೆ ಹೋಗಬೇಕೆನ್ನುವ ವಾಸ್ತವವನ್ನು ನನಸು ಮಾಡಲಿದೆ. ವೈಯಕ್ತಿಕ ಡಿಜಿಟಲ್ ಸಾಧನಗಳು ಮತ್ತು ಮಾಹಿತಿ ವಿಜ್ಞಾನದಲ್ಲಿನ ಕ್ಷಿಪ್ರ ಬೆಳವಣಿಗಳಿಗೆ ಧನ್ಯವಾದ ಹೇಳಲೇಬೇಕು. 

ಇದನ್ನು ಓದಿ:

1. ಮರ ಬೆಳೆಸಿ, ಪರಿಸರ ಉಳಿಸಿ- ಸಿಲಿಕಾನ್​ ಸಿಟಿಯಲ್ಲಿ ಪರಿಸರ ಬೆಳೆಸು ಕಾರ್ಯಕ್ಕೆ ಡಿಜಿಟಲ್​ ಟಚ್​​​

2. ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!

3. ಸ್ಟಾರ್ಟ್​ಅಪ್​ ಯಶಸ್ಸಿಗೆ ಏನೇನು ಮುಖ್ಯ..?