ಫ್ಯಾಶನ್ ಉದ್ಯಮದಲ್ಲಿ ಸಂತೃಪ್ತಿಯ ಸಾಧನೆ ನಿರ್ವಹಿಸುತ್ತಿದ್ದಾರೆ ರಿಂಕು ಸೋಬ್ತಿ

ಟೀಮ್​​ ವೈ.ಎಸ್​​.

ಫ್ಯಾಶನ್ ಉದ್ಯಮದಲ್ಲಿ ಸಂತೃಪ್ತಿಯ ಸಾಧನೆ ನಿರ್ವಹಿಸುತ್ತಿದ್ದಾರೆ ರಿಂಕು ಸೋಬ್ತಿ

Friday November 06, 2015,

3 min Read

ಬಹುತೇಕ ಜನ ಫ್ಯಾಶನ್ ಹಾಗೂ ಪ್ರದರ್ಶನವನ್ನು ಅತಿರೇಕವೆಂದು ಭಾವಿಸುತ್ತಾರೆ. ಆದರೆ ಜಗತ್ತಿನೆದುರು ಅಭಿವ್ಯಕ್ತಗೊಳ್ಳಬೇಕಾದರೆ ಉತ್ತಮ ಫ್ಯಾಶನ್ ಅಭಿರುಚಿ ಹೊಂದಿರಲೇಬೇಕು. ವಾಸ್ತವವಾಗಿ ಫ್ಯಾಶನ್ ಜಗತ್ತಿಗೆ ಅತ್ಯುತ್ತಮ ವ್ಯಾಪ್ತಿ ಹಾಗೂ ಮಾಪನವಿದೆ. ಕ್ಯಾಶುವಲ್ ಧಿರಿಸಿನಿಂದ ಇಂದಿನ ಹಾಟ್ ಕಲ್ಚರ್‌ವರೆಗೂ ಕೆಲವರು ಕೆಲವು ವಿನ್ಯಾಸದ ಫ್ಯಾಶನ್ ಸಾಮಗ್ರಿಗಳನ್ನು ಬಳಸುತ್ತಿದ್ದಾರೆ.

image


ನೀವು ಏನು ಧರಿಸಿದ್ದೀರಿ ಅನ್ನುವುದರ ಮೇಲೆ ಪ್ರಪಂಚ ನಿಮ್ಮನ್ನು ಗುರುತಿಸುತ್ತದೆ. ಮಾನವ ಸಂಪರ್ಕ ಹಾಗೂ ಸಂವಹನದ ಮಾಧ್ಯಮ ನಿಮ್ಮನ್ನು ನೀವು ಪ್ರದರ್ಶಿತಗೊಳಿಸುವ ಹಿನ್ನಲೆಯಲ್ಲಿ ನಿರ್ಧರಿತವಾಗುವ ಸ್ಥಿತಿ ಬಂದಿದೆ. ಫ್ಯಾಶನ್ ಅನ್ನುವುದು ಇಂದು ಸಂವಹನದ ಭಾಷೆ ಎಂಬಂತಾಗಿದೆ. ಹೀಗೆ ಫ್ಯಾಶನ್ ಹಾಗೂ ಲೈಫ್‌ಸ್ಟೈಲ್ ಬಗ್ಗೆ ವ್ಯಾಖ್ಯಾನ ನೀಡಿದವರು ಮಿಯೂಕಿಯಾ ಪ್ರಾಡಾ.

ಗ್ಲಾಮರ್ ಅಂಶವನ್ನು ಹೊರತುಪಡಿಸಿಯೂ ಈ ಕ್ಷೇತ್ರದಲ್ಲಿ ಸಾಕಷ್ಟು ಬದ್ಧತೆಯ ಕೆಲಸ, ಪರಿಶ್ರಮವಿದೆ. ನಿಮ್ಮ ಸಂಗ್ರಹದಲ್ಲಿ ಶೇಖರವಾಗುವ ಫ್ಯಾಶನ್ ಸಾಮಗ್ರಿಗಳ ತಯಾರಿಕೆಯ ಹಿಂದೆ ಸಾಕಷ್ಟು ಶ್ರಮವಿದೆ.

ಲಂಡನ್ ಮೂಲದ ವಿನ್ಯಾಸಕಿ ರಿಂಕು ಸೋಬ್ತಿ ತಮ್ಮ ಪದವಿಯ ನಂತರ ಈ ಉದ್ಯಮಕ್ಕೆ ಕಾಲಿಟ್ಟರು. ಅವರ ನೆಚ್ಚಿನ ಕ್ಷೇತ್ರವಾಗಿದ್ದ ಕಾರಣ ಫ್ಯಾಶನ್ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಹಾಗೂ ಈ ಮೂಲಕ ಇದನ್ನೇ ಪೂರ್ಣಕಾಲಿಕ ವೃತ್ತಿಯನ್ನಾಗಿಸಿಕೊಳ್ಳುವ ನಿರ್ಧಾರ ಮಾಡಿದರು. ಇದಕ್ಕೆ ಸಂಬಂಧಿಸಿದ ಯಾವುದೇ ಕೋರ್ಸ್‌ಗಳನ್ನು ಓದದೆಯೇ ಕಳೆದ 20 ವರ್ಷಗಳಿಂದ ಅವರು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಉದ್ಯಮದ ಆರಂಭಿಕ ಹಂತ

ಸಣ್ಣ ಉತ್ಪಾದನಾ ಘಟಕದಿಂದ ಶುರುಮಾಡಿದ ಇವರ ಸಂಸ್ಥೆ ಈಗ 200 ಉದ್ಯೋಗಿಗಳಿಗೆ ಕೆಲಸ ನೀಡಿದೆ. ಅವರು ದಕ್ಷಿಣ ದೆಹಲಿಯಲ್ಲಿ ಕಳೆದ 20 ವರ್ಷಗಳಿಂದ ಒಂದೇ ಮಳಿಗೆಯಲ್ಲಿ ಫ್ಯಾಶನ್ ಸಾಮಗ್ರಿಗಳನ್ನು ಮಾರುತ್ತಿದ್ದಾರೆ. ಬೇರೆ ಬೇರೆ ಮಳಿಗೆಗಳನ್ನೂ ಅಥವಾ ಶಾಖೆಗಳನ್ನೂ ತೆರೆಯುವುದಕ್ಕಿಂತ ಒಂದೇ ಸ್ಥಳದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು ಉತ್ತಮ ಎನ್ನುವುದು ಅವರ ಅಭಿಪ್ರಾಯ.

image


ಅವರು ಈ ಕ್ಷೇತ್ರಕ್ಕೆ ಕಾಲಿಟ್ಟಾಗ ಇಲ್ಲಿ ಹೆಚ್ಚಿನ ಪ್ರಮಾಣದ ಉದ್ಯಮಗಳಾಗಲಿ ಅಥವಾ ಪೈಪೋಟಿಯಾಗಲಿ ಇರಲಿಲ್ಲ. ಜೊತೆಗೆ ರಿಂಕು, ಭಾರತೀಯ ಸಾಂಪ್ರದಾಯಿಕ ಹಾಗೂ ಪಾಶ್ಚಿಮಾತ್ಯ ಧಿರಿಸುಗಳು ಅನ್ನುವ ವಿಂಗಡಣೆ ಮಾಡದೇ ಬೇಡಿಕೆಗೆ ತಕ್ಕ ಪೂರೈಕೆ ಎಂಬ ಕ್ರಮವನ್ನು ಅನುಸರಿಸಿದ್ದು ಅವರ ಯಶಸ್ಸಿಗೆ ಕಾರಣ.

ನನಗೆ ತಿಳಿದಿರುವಂತೆ ಜನರು ಯಾವಾಗಲೂ ಹೊಸ ಶೈಲಿಯ ಫ್ಯಾಶನ್‌ನತ್ತ ಆಕರ್ಷಿತರಾಗುತ್ತಾರೆ. ನಾನು ಕೆಲಸ ಮಾಡಿದ ಮೊದಲ ವಿನ್ಯಾಸಕರಿಂದ ಸಾಕಷ್ಟು ಪ್ರಭಾವಿತಳಾದೆ. ಈಗೀಗ ಜನರು ಹಣಕ್ಕೆ ಹೆಚ್ಚಿನ ಮೌಲ್ಯ ನೀಡುತ್ತಾರೆ ಎಂದು ರಿಂಕು ಹೇಳಿದ್ದಾರೆ.

ಹಾಗೆಯೇ ಹೆಚ್ಚು ಹೆಚ್ಚು ಆಕರ್ಷಣೀಯವಾಗಿ ಪ್ರದರ್ಶಿತಗೊಳ್ಳಲು ಪ್ರಯತ್ನಿಸುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಪೈಪೋಟಿ ಇಲ್ಲ. ಏಕೆಂದರೆ ಪ್ರತಿಯೊಬ್ಬ ವಿನ್ಯಾಸಕರಿಗೂ ಅವರದ್ದೇ ಆದ ಕಾರ್ಯಶೈಲಿ ಹಾಗೂ ಕಾರ್ಯವ್ಯಾಪ್ತಿ ಇರುತ್ತದೆ. ಆದರೆ ನಿಜಕ್ಕೂ ಪೈಪೋಟಿ ಇರುವುದು ಗ್ರಾಹಕರ ಆಯ್ಕೆಯಲ್ಲಿ ಎನ್ನುವುದು ರಿಂಕು ಅಭಿಪ್ರಾಯ.

ಅವರು 6 ತಿಂಗಳ ಹಿಂದೆ ದೊಡ್ಡ ಮಟ್ಟದಲ್ಲಿ ಹ್ಯಾಂಡ್‌ಲೂಮ್​​ನ ಹೊಸ ಲೇಬಲ್ ಲಾಂಚ್ ಮಾಡಿದ್ದರು. ಹೇಗೆ ಸಾವಯವ ಉತ್ಪನ್ನ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆಯುತ್ತಿದೆಯೋ ಹಾಗೆಯೇ ಕೈನಲ್ಲಿ ನೇಯ್ದ ಹ್ಯಾಂಡ್‌ಲೂಮ್ ಬಟ್ಟೆಗಳಿಗೂ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಸೃಷ್ಟಿಯಾಗಿದೆ. ಅವರು ಸಮಾಜದ ಸಂಸ್ಕೃತಿಯನ್ನು ಪ್ರತಿನಿಧಿಸುವ ಫ್ಯಾಶನ್‌ ಅನ್ನು ಸಮಾಜಕ್ಕೆ ವಾಪಸ್ ನೀಡುವ ನಿರ್ಧಾರ ಮಾಡಿದ್ದಾರೆ.

ಸಾಮಾನ್ಯವಾಗಿ ಹ್ಯಾಂಡ್‌ಲೂಮ್ ಧಿರಿಸುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ. ಏಕೆಂದರೆ ಯುವ ಜನಾಂಗ ಅಂತರಾಷ್ಟ್ರೀಯ ಬ್ರಾಂಡ್‌ಗಳತ್ತ ಮನಸೋಲುತ್ತಿದ್ದು ಅವರನ್ನು ಮೂಲದ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ದಿರಿಸಿನತ್ತ ಕರೆತರಲು ಕಾಲಾವಕಾಶ ಬೇಕು.

ಇ-ಕಾಮರ್ಸ್ ಮತ್ತು ಫ್ಯಾಶನ್ ಉದ್ಯಮ

ರಿಂಕು ಲಂಡನ್, ನ್ಯೂಯಾರ್ಕ್‌ನ ಕೋಟೇರಿ, ಪ್ಯಾರಿಸ್‌ನ ಟ್ಯುಲೇರೀಸ್, ಲ್ಯಾಕ್ಮೆ ಫ್ಯಾಶನ್ ವೀಕ್ ಮುಂತಾದ ಹಲವಾರು ಅಂತರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ.

ನೀವೇನನ್ನಾದರೂ ಧರಿಸಿ. ಆದರೆ ಧರಿಸುವ ಮುಂಚೆ ಆ ವಸ್ತ್ರದ ಕಟಿಂಗ್, ಹೊಲಿಗೆ ಹಾಗೂ ವಿನ್ಯಾಸವನ್ನು ಗಮನಿಸಿ ಎನ್ನುವುದು ರಿಂಕುರ ಸಲಹೆ.

ಇ-ಕಾಮರ್ಸ್ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಹಾಗೂ ವ್ಯಾಪ್ತಿಯನ್ನು ಒದಗಿಸುವ ಹಿನ್ನೆಲೆಯಲ್ಲಿ ರಿಂಕುರವರ ಫ್ಯಾಶನ್‌ ಉತ್ಪನ್ನಗಳು ದೇಶಾದ್ಯಂತ ಫ್ಯಾಶನ್ ಪ್ರಿಯರ ಆಸಕ್ತಿ ಕೆರಳಿಸಿವೆ.

ನಮ್ಮ ಮಾರಾಟದ ಪ್ರಮಾಣ ಗ್ರಾಹಕರಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಹಾಗೂ ನಮ್ಮ ವಿಸ್ತಾರಗೊಳ್ಳುತ್ತಿರುವ ಮಾರುಕಟ್ಟೆ ನಮಗೆ ತೃಪ್ತಿ ನೀಡಿದೆ. ನಾವು ನಮ್ಮ ಉತ್ಪನ್ನಗಳಿಗೆ ಸೂಕ್ತವಾದ ದರವನ್ನು ನಿಗದಿ ಮಾಡುತ್ತಿದ್ದೇವೆ. ಜೊತೆಗೆ ಇ- ಕಾಮರ್ಸ್ ಮಾರುಕಟ್ಟೆ ನಮ್ಮ ಫ್ಯಾಶನ್ ಸಾಮಗ್ರಿಗಳಿಗೆ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ನಿಧಾನವಾಗಿ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಹಾಗೂ ಬೇಡಿಕೆ ಎರಡನ್ನೂ ಹೊಂದುತ್ತಿದ್ದೇವೆ. ಹೀಗಾಗಿ ನಮ್ಮ ಉದ್ಯಮ ಯಶಸ್ಸಿನಲ್ಲಿದೆ ಎಂದು ವಿಶ್ವಾಸದಿಂದ ಹೇಳಿಕೊಳ್ಳಬಹುದು ಎಂದು ರಿಂಕು ಯುವರ್ ಸ್ಟೋರಿಗೆ ಮಾಹಿತಿ ನೀಡಿದ್ದಾರೆ.

ಭವಿಷ್ಯದಲ್ಲಿ ಜನಪದೀಯ ಮಾದರಿಯ ಧಿರಿಸುಗಳನ್ನು ವಿನ್ಯಾಸಗೊಳಿಸುವ ಯೋಜನೆ ಅವರ ಮುಂದಿದೆ. ಮುಂಬರುವ ವರ್ಷಗಳಲ್ಲಿ ಅಂತರಾಷ್ಟ್ರೀಯ ವಿನ್ಯಾಸದ ಜೊತೆ ಜನಪದ ಸಂಸ್ಕೃತಿಯ ಬಟ್ಟೆಗಳನ್ನೂ ಪೈಪೋಟಿಗಿಳಿಸಬೇಕು ಅನ್ನುವ ಗುರಿ ಅವರು ಹೊಂದಿದ್ದಾರೆ. ಯುವಜನತೆ ಸಾವಯವ ಉತ್ಪನ್ನಗಳನ್ನು ಖರೀದಿಸಿ ಬಳಸುತ್ತಿರುವಂತೆ ಸಾಮಾಜಿಕ ಪರಂಪರೆಯ ಧಿರಿಸನ್ನು ಧರಿಸಬೇಕು ಎನ್ನುವುದು ಅವರ ಇಚ್ಛೆ.

ನಾನು ನನ್ನ ಈ ಉದ್ಯಮವನ್ನು ಸಂತೋಷದಿಂದ ನಡೆಸುತ್ತಿದ್ದೇನೆ. ಇಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಆದರೂ ನಾನು ಮಾಡುವ ಕೆಲಸಗಳಲ್ಲಿ ತೃಪ್ತಿಹೊಂದಿದ್ದೇನೆ. ಪ್ರತಿದಿನವೂ ಕೆಲಸಕ್ಕೆ ಹೋಗುವಾಗ, ನನಗೆ ಹೊಸ ಪ್ರಾರಂಭಿಕ ಸಂಸ್ಥೆಯೊಂದನ್ನು ಕಟ್ಟುವ ಭಾವ ಮೂಡುತ್ತದೆ ಎಂದು ರಿಂಕು ಸಂತೃಪ್ತಿಯಿಂದ ಹೇಳುತ್ತಾರೆ.