ಜಸ್ಟ್ ಕಾಲ್ ಮಾಡಿ.. ನಿಮ್ಮ ಮುಂದೆ ಊಟ ರೆಡಿ..!

ಶಾಲು

ಜಸ್ಟ್ ಕಾಲ್ ಮಾಡಿ.. ನಿಮ್ಮ ಮುಂದೆ ಊಟ ರೆಡಿ..!

Friday October 23, 2015,

3 min Read

ಪ್ರತಿನಿತ್ಯ ಕೆಲಸಕ್ಕೆ ಹೋಗುವ ಬಹುತೇಕರಿಗೆ ಮಧ್ಯಾಹ್ನದ ಊಟದೇ ಚಿಂತೆ.. ಹೋಟೆಲ್ ನಲ್ಲಿ ಊಟ ಮಾಡೋಕ್ಕೆ ಇಷ್ಟ ಇರಲ್ಲ.. ಕಛೇರಿಯಲ್ಲಿ ಕ್ಯಾಂಟೀನ್ ಸೌಲಭ್ಯವಿರಲ್ಲ.. ಇಂತಹವರಿಗೆ ಕಛೇರಿಯ ಬಳಿಗೆ ಶುಚಿಯಾದ ರುಚಿಯಾದ ಊಟ ಕಳುಹಿಸುವ ಸಂಸ್ಥೆಯೇ ಜಿಯೋ ನ್ಯಾಚುರಲ್. ಇನ್ನು ಸಂಸ್ಥೆಯು ಒಂದು ತಿಂಗಳ ಊಟ ಬುಕ್ ಮಾಡುವವರಿಗೆ ಮೊಬೈಲ್ ಆ್ಯಪ್ ನ್ನು ಸಹ ನೀಡುತ್ತೆ . ಐಟಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳ ಪ್ಯಾಕೇಜ್ ರೂಪದಲ್ಲಿ ಊಟ ಪೂರೈಸುತ್ತೆ. ಅದರಲ್ಲೂ ಒಂದು ತಿಂಗಳ ಅವಧಿಯ ಊಟಕ್ಕಾಗಿ ಸದಸ್ಯತ್ವ ಪಡೆದವರಿಗೆ ಒಂದು ಮೊಬೈಲ್ ಆ್ಯಪ್ ತಯಾರಿಸಲಾಗಿದ್ದು, ಅದರಲ್ಲಿ ನಿತ್ಯ, ಬೆಳಿಗ್ಗೆ ಒಂದು ಸಂದೇಶ ಕಳುಹಿಸಲಾಗುತ್ತದೆ. ಅದರಲ್ಲಿ ಮಧ್ಯಾಹ್ನ ಕಳುಹಿಸುವ ಆಹಾರ, ಅದರಲ್ಲಿರುವ ಪೌಷ್ಟಿಕಾಂಶಗಳ ವಿವರ, ಪ್ರಮಾಣ ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಊಟವನ್ನು ನಿತ್ಯ ಆಟೋಗಳಲ್ಲಿ ಕಚೇರಿಗಳಿಗೆ ಕಳುಹಿಸಿಕೊಡಲಾಗುತ್ತೆ..

image


ನಿರ್ಧಾರ ದೃಢವಾಗಿದ್ದರೆ ಸಾಧನೆಯ ಹಾದಿ ಸುಲಭವಾಗಿ ಕಾಣುತ್ತದೆ. ಆರಂಭದಲ್ಲಿ ಎಡವಿದೆ ಬೇಗ ಪಾಠ ಕಲಿಯಬಹುದು. ಹಾಗಂತ ಪದೇ ಪದೇ ಎಡವಿದ್ರೆ ತಪ್ಪು ನಮ್ಮದೇ ಆಗುತ್ತದೆ. ಇನ್ನು ವ್ಯವಹಾರದ ವಿಚಾರದಲ್ಲೂ ಅಷ್ಟೇ. ಎಡವಿದಷ್ಟು ಹೊಸ ಹೊಸ ಪಾಠಗಳನ್ನು ಕಲಿಯಬಹುದು. ಆ ಪಾಠಗಳೇ ಸಾಧನೆಯ ಹಾದಿಗೆ ಹೊಸ ರೂಪ ಕೊಡಬಹುದು. ಈ ಕಥೆಯೂ ಅಷ್ಟೇ. ಎಲ್ಲದಕ್ಕಿಂತಲೂ ಭಿನ್ನ. ಇನ್ನೊಬ್ಬರ ಹಸಿವು ನೀಗಿಸುವ ಉದ್ದೇಶದಿಂದ ಹುಟ್ಟಿಕೊಂಡ ಉದ್ಯಮ..!

ಹೆಣ್ಣು ಮಕ್ಕಳ ಸಾಧನೆಗೆ ಸಾಟಿಯೇ ಇಲ್ಲ ಅಂತ ಹೇಳಬಹುದು.. ಮನೆಯಲ್ಲಿ ಅಡುಗೆ ಮಾಡೋದ್ರಿಂದ ಹಿಡಿದು ಹೊರಗಡೆ ಹೋಗಿ ದುಡಿಯುವವರೆಗೂ ಎಲ್ಲದ್ರಲ್ಲೂ ಅವರಿಗೆ ಹೆಚ್ಚು ಆಸಕ್ತಿ.. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಏನನ್ನಾದ್ರೂ ಸಾಧನೆ ಮಾಡಬೇಕು, ಜೊತೆಗೆ ನಾವು ಸ್ವಾವಲಂಬಿಯಾಗಬೇಕು ಎಂದು ಕನಸು ದೊಡ್ಡದಾಗುತ್ತಿದೆ. ಈ ನಿಟ್ಟಿನಲ್ಲಿ ಬೊಮ್ಮನಹಳ್ಳಿಯಲ್ಲಿ ಒಂದಷ್ಟು ಮಹಿಳೆಯರು ಅಡುಗೆ ಮಾಡುವ ಕಲೆಯನ್ನೇ ಇಟ್ಟುಕೊಂಡು ಜಿಯೋ ನ್ಯಾಚುರಲ್ ಎಂಬ ಸಂಸ್ಥೆಯನ್ನ ಸ್ಥಾಪನೆ ಮಾಡಿದ್ದಾರೆ.

image


ಏನಿದು ಜಿಯೋ ನ್ಯಾಚುರಲ್..?

ಇಲ್ಲಿರುವ ಮಹಿಳೆಯರು ಮತ್ತು ಪುರುಷರು ವಿದ್ಯಾವಂತರು. ಕೆಲವರು ಎಮ್ ಬಿಬಿಎಸ್ ಪದವಿಯನ್ನು ಸಹ ಪಡೆದಿದ್ದಾರೆ. ಮಹಿಳೆಯರು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಪುರುಷರಿಗಿಂತ ಮಹಿಳೆಯರು ಕಡಿಮೆ ಇಲ್ಲ ಎಂಬ ತತ್ವ ಇವರದ್ದು. ಇನ್ನು ಪುರುಷರಿಗೆ ನಾವೇ ಕೆಲಸ ಕೊಡಬಾರದು ಎಂದು 20ಕ್ಕೂ ಹೆಚ್ಚು ಪುರುಷರಿಗೆ ಈ ಸಂಸ್ಥೆಯ ಮೂಲಕ ಕೆಲಸ ಸಿಕ್ಕಿದೆ. ಕೆಲಸಕ್ಕೆ ಹೋಗುವವರಿಗೆ ಆರೋಗ್ಯಕರ ಊಟ ನೀಡುವುದೇ ಇವರ ಮುಖ್ಯ ಉದ್ದೇಶ..

ಪ್ರತಿನಿತ್ಯ ಜಂಕ್ ಫುಡ್, ಫಾಸ್ಟ್ ಫುಡ್, ಹೋಟೆಲ್ ಊಟ ಮಾಡಿ ಬೇಸರವಾದವರಿಗೆ, ಈ ಸಂಸ್ಥೆ ಬಹಳ ಉಪಯೋಗಕಾರಿಯಾಗಿದೆ.. ಒಂದು ಫೋನ್ ಮಾಡಿದ್ರೆ ಸಾಕು ಬಿಸಿ ಬಿಸಿ ಊಟ ನಿಮ್ಮ ಆಫೀಸ್ ಬಳಿಯೇ ಬಂದು ಬಿಡುತ್ತೆ. ಹೌದು ಕೆಲಸಕ್ಕೆ ಹೋಗುವವರಿಗೆ ಶುದ್ಧ ಊಟ ಒದಗಿಸಬೇಕು ಎಂದು ಸುನಂದಿನಿ ಮತ್ತು ಅವರ 5 ಜನ ಸ್ನೇಹಿತರು ಈ ಕೆಲಸವನ್ನು ಆರಂಭಿಸಿದ್ರು.ಕಳೆದ ಒಂದೂವರೆ ವರ್ಷದಿಂದ ಊಟ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವೈದ್ಯರು ಸಹ ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಬಹಳ ವಿಶೇಷ.

20 ಜನ ನುರಿತ ಅಡುಗೆ ಪರಿಣಿತರನ್ನು ಕೆಲಸಕ್ಕೆ ತೆಗೆದುಕೊಂಡು ಪ್ರತಿನಿತ್ಯ 700 ಕ್ಕೂ ಹೆಚ್ಚು ಗ್ರಾಹಕರಿಗೆ ಊಟ ಒದಗಿಸುತ್ತಿದ್ದಾರೆ. ಸುಮಾರು 5ಕಿಲೋಮೀಟರ್ ವ್ಯಾಪ್ತಿಯಲ್ಲಿ 700 ಕ್ಕೂ ಹೆಚ್ಚು ಗ್ರಾಹಕರಿಗೆ ಎರಡು ಹೊತ್ತು ಊಟ ಒದಗಿಸುತ್ತಿದ್ದಾರೆ ಈ ಮಹಿಳೆಯರು. ಸೌತ್ ಇಂಡಿಯನ್, ಚೈನೀಸ್, ಮೆಕ್ಸಿಕನ್, ಥಾಯ್ ಹೀಗೆ ಎಲ್ಲ ಬಗೆಯ ಊಟ ಇಲ್ಲಿ ಸಿಗುತ್ತೆ. ಸೌತ್ ಇಂಡಿಯನ್ ಊಟಕ್ಕೆ ಬಂದ್ರೆ ಇಲ್ಲಿ ರೋಟಿ, ಪಲ್ಯಾ, ಕೆಂಪ್ಪಕ್ಕಿ ಅನ್ನ, ಸಂಬಾರ್, ಮಜ್ಜಿಗೆ, ಸಲಾಡ್, ಒಂದು ಬಗೆ ಸ್ವೀಟ್, ಹೀಗೆ ಎಂಟು ಬಗೆಯ ಊಟವನ್ನ ಗ್ರಾಹಕರಿಗೆ ಒದಗಿಸ್ತಾರೆ.. ಹಾಗೆ ಚೈನೀಸ್ ಫುಡ್ ನಲ್ಲಿ ಸೂಪ್, ಗಿರೈಸ್, ರೈತಾ ,ರಾಗಿ ನೂಡಲ್ಸ್, ಹೀಗೆ ಎಲ್ಲ ಆರೋಗ್ಯಕಾರ ಊಟವನ್ನ ಗ್ರಾಹಕರಿಗೆ ನೀಡ್ತಾರೆ..

ಇನ್ನು ಇಲ್ಲಿ ತಯಾರಿಸೋ ಅಡುಗೆಯಲ್ಲಿ ಯಾವುದೇ ರೀತಿ ಕೆಮಿಕಲ್ ಉಪಯೋಗಿಸುವುದಿಲ್ಲ. ಸೋಡ, ಬಿಳಿಉಪ್ಪು, ಮೈದಾ, ಸಕ್ಕರೆ ಬಳಸದ ಊಟ ಸಿಗುವುದರ ಜೊತೆಗೆ ಕಡಿಮೆ ಎಣ್ಣೆ ಉಪಯೋಗಿಸಿದ ಆಹಾರವನ್ನ ಹಾಗೂ ಡೀಪ್ ಫ್ರೈ ಇಲ್ಲದ ಆಹಾರವನ್ನೇ ಗ್ರಾಹಕರಿಗೆ ನೀಡಲಾಗುತ್ತೆ. ಅಷ್ಟೇ ಅಲ್ಲ, ಆರೋಗ್ಯ ತೊಂದರೆ ಇರುವವರಿಗೆ ಪತ್ಯ ಆಹಾರವನ್ನು ಕೂಡ ಈ ಸಂಸ್ಥೆ ಸಿದ್ಧ ಪಡಿಸಿಕೊಡುತ್ತೆ.. ಒಂದು ಜೀಯೋ ಹೆಲ್ತ್ ಮತ್ತೊಂದು ಜೀಯೋ ಮ್ಯಾನೇಜ್ ನ್ಯಾಚುರೋಪಥಿ ಡಾಕ್ಟರ್ ಹಾಗೂ ನ್ಯೂಟ್ರಿಷಯನ್ ಸೇರಿ ಆಹಾರವನ್ನ ಸಿದ್ಧಗೊಳಿಸ್ತಾರೆ. ಜೀಯೋ ಹೆಲ್ತ್ ಎಂದ್ರೆ ಎಲ್ಲರಿಗೂ ಒದಗಿಸುವ ಆರೋಗ್ಯಕಾರ ಊಟ, ಜೀಯೋ ಮ್ಯಾನೇಜ್ ಅಂದ್ರೆ ಆರೋಗ್ಯ ಏರುಪೇರಾದವರಿಗೆ ಪತ್ಯಾಹಾರವನ್ನ ಒದಗಿಸುವ ಊಟ.

image


ಮೊಬೈಲ್ ಆ್ಯಪ್

ಡಾ. ಸುನಂದಿನಿ ಮಾತುಗಳು :

ಜಿಯೊ ನ್ಯಾಚುರಲ್’ನಲ್ಲಿ ಸಾಮಾನ್ಯ ಜನರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಡುಗೆ ತಯಾರಿಸುವುದಿಲ್ಲ. ಮುಂದೆ ಬರಬಹುದಾದ ಸಕ್ಕರೆ, ರಕ್ತದೊತ್ತಡ ಕಾಯಿಲೆಗಳ ಬಗ್ಗೆಯೂ ಗಮನವಹಿಸಿ ಅಡುಗೆಯನ್ನು ತಯಾರಿಸಲಾಗುತ್ತದೆ. ನಮ್ಮಲ್ಲಿ ಈಗಾಗಲೇ ಸಕ್ಕರೆ ಕಾಯಿಲೆ ಹಾಗೂ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರಿಗೂ ಆಹಾರ ತಯಾರಿಸಿ ಕಳುಹಿಸುತ್ತೇವೆ. ಇನ್ನು ಈ ಸಂಸ್ಥೆಯನ್ನು ಮಹಿಳೆಯರೆ ಪ್ರಾರಂಭ ಮಾಡಿರುವುದು ಎಂಬ ಹೆಮ್ಮೆ ನಮಗೆ ಇದೆ.

ಮುಂದಿನ ದಿನಗಳಲ್ಲಿ ಈ ಮಹಿಳೆಯರ ತಂಡನ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಹೊಸ ಹೊಸ ವಿಧಾನದ ಅಡುಗೆಗಳನ್ನು ಬಳಸುವ ಯೋಜನೆಯನ್ನೂ ಮಾಡಿದೆ.