ಮನೆಗೆ ಗೆಸ್ಟ್​​ ಬಂದ್ರಾ..? ಡೋಂಟ್​​ವರಿ- ಕ್ಷಣಮಾತ್ರದಲ್ಲಿ ಫುಡ್​​ ರೆಡಿಯಾಗುತ್ತೆ..!

ಟೀಮ್​​ ವೈ.ಎಸ್​​.

0

ಮನೆಗೆ ದಿಢೀರ್ ಅಂತಾ ಅತಿಥಿಗಳು ಬಂದು ಬಿಡ್ತಾರೆ. ಮನೆಯಲ್ಲಿ ಅವರನ್ನು ಉಪಚರಿಸೋಕೆ ಯಾವುದೇ ತಿಂಡಿ ಇರೋದಿಲ್ಲ. ರುಚಿಯಾಗಿ ಅಡುಗೆ ಮಾಡಿ ಬಡಿಸುವಷ್ಟು ಸಮಯ ನಿಮಗಿರುವುದಿಲ್ಲ. ಇಷ್ಟದ ಮನೆ ಊಟ ಸಿಕ್ಕಿದ್ದರೆ ಚೆನ್ನಾಗಿತ್ತು ಅಂತಾ ನಿಮ್ಮ ಮನಸ್ಸು ಬಯಸುತ್ತಿದ್ದರೂ, ಅನಿವಾರ್ಯವಾಗಿ ಹೊಟೇಲ್​​ನಿಂದ ತರಿಸುವ ನಿರ್ಧಾರಕ್ಕೆ ಬರುತ್ತೀರಿ. ಈಗ ನಿಮಗೆ ಹೊಟೇಲ್ ಒಂದೇ ಆಯ್ಕೆಯಲ್ಲ. ಇಚ್ಛೆಯಂತೆ ಮನೆಯಲ್ಲಿಯೇ ಸಿದ್ಧಪಡಿಸಿದ ಊಟವನ್ನು ಅತಿಥಿಗಳಿಗೆ ನೀಡಬಹುದು. ಯಸ್, ಫುಡ್ ಕ್ಲೌಡ್ ಈ ಸೌಲಭ್ಯ ನೀಡುತ್ತಿದೆ. ಮನೆಯಲ್ಲೇ ವೃತ್ತಿಪರ ಬಾಣಸಿಗರು ಮಾಡಿದ ರುಚಿ ರುಚಿ ಊಟ, ಅಂತರಾಷ್ಟ್ರೀಯ ತಿಂಡಿಗಳ ಸವಿಯನ್ನು ಸವಿಯಬಹುದು.

ಸಂಸ್ಥಾಪಕರು

ಉದ್ಯಮಿಗಳಾದ ವೇದಾಂತ್ ಕನೊಯ್ ಮತ್ತು ಶಮಿತ್ ಖೇಮ್ಕಾ ಈ ಫುಡ್ ಕ್ಲೌಡ್ ಸಂಸ್ಥಾಪಕರು. 2013 ಸೆಪ್ಟೆಂಬರ್ ನಲ್ಲಿ ಫುಡ್ ಕ್ಲೌಡ್ ಆರಂಭಿಸಿದರು. 2006ರಲ್ಲಿ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ವೇದಾಂತ್, ಎರಡು ವರ್ಷಗಳ ಕಾಲ ಅಂದರೆ 2008ರವರೆಗೆ ಯುಬಿಎಸ್ ಇನ್ವೆಸ್ಟ್​​ಮೆಂಟ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸಿದರು. ನಂತರ BatchBuzz Mediaವನ್ನು ಸ್ಥಾಪಿಸಿದರು. ಸಾಪ್ಟವೇರ್ ಅಭಿವೃದ್ಧಿ ಪಡಿಸುವ ಮತ್ತು ಐಟಿ ಸೇವೆಗಳನ್ನು ನೀಡುವ SynapseIndia ಸಂಸ್ಥಾಪಕರು ಶಮಿತ್ ಖೇಮ್ಕಾ. ಭಾರತದ ರಿಯಲ್ ಎಸ್ಟೇಟ್ ಬಗ್ಗೆ ಆನ್​​ಲೈನ್​​​ನಲ್ಲಿ ಮಾಹಿತಿ ನೀಡುವ ಸಂಪತ್ತಿ.ಕಾಂ ಸಂಸ್ಥಾಪಕರು ಹೌದು.

ಫುಡ್ ಕ್ಲೌಡ್ ಎಂದರೇನು?

ಮನೆ ಮನೆಗೆ ಡೆಲಿವರಿ ನೀಡುವುದು ಫುಡ್ ಕ್ಲೌಡ್​ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಇದು ಮನೆಯಲ್ಲೇ ಆಹಾರ ಬೇಯಿಸಿ ಗ್ರಾಹಕರ ಮನೆಗೆ ತಲುಪಿಸುವ ಒಂದು ಸೇವೆ. ಪರಿವಿಡಿಯಲ್ಲಿರುವ ರುಚಿಯಾದ ತಿಂಡಿಗಳನ್ನು ವೃತ್ತಿಪರ ಬಾಣಸಿಗರು ಮನೆಯಲ್ಲಿಯೇ ಸಿದ್ಧಪಡಿಸುತ್ತಾರೆ. ಸಾಮಾನ್ಯ ಊಟಕ್ಕಿಂತ ಸ್ಪೆಷಲ್ ಇರಬೇಕೆಂದು ನೀವು ಬಯಸಿದರೆ, ಬಾಣಸಿಗರಿಗೆ ಕರೆ ಮಾಡಿ, ವಿಶೇಷ ಸೂಚನೆಗಳನ್ನು ನೀಡಬಹುದು. ಫುಡ್ ಪಿಕಪ್ ಹಾಗೂ ಗ್ರಾಹಕರ ಮನೆಗಳಿಗೆ ಡೆಲಿವರಿ ಮಾಡುವುದು ಬಾಣಸಿಗರ ಹಾಗೂ ಆಹಾರದ ಪ್ರಮಾಣವನ್ನು ಅವಲಂಬಿಸಿರುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಗ್ರಾಹಕ ಮೊದಲು ವೆಬ್ ಸೈಟ್ ಲಾಗಾನ್ ಮಾಡಬೇಕು. ಬಾಣಸಿಗ ಹಾಗೂ ಪರಿವಿಡಿ ಎರಡನ್ನೂ ಪರಿಶೀಲಿಸಬಹುದು. ಪರಿವಿಡಿ ನೋಡಿ ತಿಂಡಿ ಆಯ್ಕೆ ಮಾಡಿದರೆ, ಆ ತಿಂಡಿಯಲ್ಲಿ ಪರಿಣಿತಿ ಹೊಂದಿರುವ ಬಾಣಸಿಗನಿಗೆ ಆದೇಶ ನೀಡಬೇಕು. ಚೈನೀಸ್, ಲೆಬನಾನಿ, ಥಾಯ್, ಇಟಾಲಿಯನ್, ರಾಜಸ್ಥಾನಿ, ಆಸ್ಟ್ರಿಯಾ, ಮೆಕ್ಸಿಕನ್, ಗ್ರೀಕ್ ಸೇರಿದಂತೆ ಪರಿವಿಡಿಯಲ್ಲಿ ಬಾಣಸಿಗರು ಯಾವುದರಲ್ಲಿ ಪರಿಣಿತಿ ಹೊಂದಿದ್ದಾರೆ ಎಂಬ ವಿವರ ಇದೆ. ನಿಮಗೆ ಬೇಕಾದ ತಿಂಡಿಗಳನ್ನುಆಯ್ಕೆ ಮಾಡಿ, ಎಷ್ಟು ಬೇಕು, ಯಾವಾಗ ಬೇಕು ಎಂಬುದನ್ನು ಅಲ್ಲಿ ತಿಳಿಸಬೇಕು. ನಿಮ್ಮ ಆಯ್ಕೆ ಮುಗಿದ ತಕ್ಷಣ ನಿಮಗೊಂದು ಸಂದೇಶ ಬರುತ್ತದೆ. ಅದರಲ್ಲಿ ಬಾಣಸಿಗನನ್ನು ಸಂಪರ್ಕಿಸಬೇಕಾದ ದೂರವಾಣಿ ನಂಬರನ್ನು ಕೂಡ ನೀಡಲಾಗುತ್ತದೆ.

ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫುಡ್ ಕ್ಲೌಡ್ ನಗರದ ಸುತ್ತಮುತ್ತ 20 ಬಾಣಸಿಗರನ್ನು ಹೊಂದಿದೆ. ಭವಿಷ್ಯದಲ್ಲಿ ಇತರ ಮೆಟ್ರೋ ಸಿಟಿಗಳಲ್ಲೂ ಈ ಸೌಲಭ್ಯ ವಿಸ್ತರಿಸುವ ಆಲೋಚನೆ ಹೊಂದಿದೆ.