ವಿದ್ಯಾರ್ಥಿ ಮಿತ್ರರು ಆರಂಭಿಸಿದ ಅತ್ಯಾಧುನಿಕ ಫುಡ್ ಟೆಕ್ ಉದ್ಯಮ-ಪಾಕೆಟ್ಇನ್:

ಟೀಮ್​ ವೈ.ಎಸ್​. ಕನ್ನಡ

ವಿದ್ಯಾರ್ಥಿ ಮಿತ್ರರು ಆರಂಭಿಸಿದ ಅತ್ಯಾಧುನಿಕ ಫುಡ್ ಟೆಕ್ ಉದ್ಯಮ-ಪಾಕೆಟ್ಇನ್:

Wednesday December 16, 2015,

3 min Read

ಭಾರತೀಯ ಮಾರುಕಟ್ಟೆಯಲ್ಲಿ ಫುಡ್ ಟೆಕ್ ಉದ್ಯಮದ ಪೈಪೋಟಿ ಅತ್ಯಂತ ಕಠಿಣವಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಟೈನಿಓವ್ಲ್ ಹಾಗೂ ಝೊಮ್ಯಾಟೋ ನಡುವೆ ಕೊಂಚ ಔದ್ಯಮಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆದರೆ ಈ ತೊಡಕುಗಳ ನಡುವೆಯೂ ಆಹಾರೋತ್ಪನ್ನಗಳ ಮಾರಾಟ ಅತ್ಯುತ್ತಮವಾಗಿ ನಡೆಯುತ್ತಿದೆ ಹಾಗೂ ಬೆಳವಣಿಗೆ ಸಾಧಿಸುತ್ತಿದೆ. ಭಾರತೀಯ ಗ್ರಾಹಕರು ಹೊರಗೆ ಊಟಕ್ಕೆ ಹೋಗುವುದು, ಪಾರ್ಟಿಗಳಲ್ಲಿ ಭಾಗಿಯಾಗುವುದು ಹಾಗೂ ಮನೆ ಬಾಗಿಲಿಗೆ ಆಹಾರೋತ್ಪನ್ನಗಳ ಡೆಲಿವರಿ ಪಡೆಯುವುದನ್ನು ಬಹಳ ಇಷ್ಟಪಡುತ್ತಾರೆ. ಜೊತೆಗೆ ಭಾರತೀಯರನ್ನು ಆಕರ್ಷಿಸುವುದು ಯಾವುದೇ ಕಂಪೆನಿಗಳು ನೀಡುವ ರಿಯಾಯತಿಗಳು.

ರೆಸ್ಟೋರೆಂಟ್ ಹಾಗೂ ತಿನಿಸು ತಾಣಗಳ ಬೆಳವಣಿಗೆಯನ್ನು ಉತ್ತೇಜಿಸುವ ಉದ್ಯಮಿಗಳ ಹೊಸ ಹೊಸ ಸಂಶೋಧನೆಗಳನ್ನು ತಡೆಯಲು ಸಾಧ್ಯವಿಲ್ಲ. ಝೊಮ್ಯಾಟೋ ಆನ್​​ಲೈನ್​ ಆಹಾರೋತ್ಪನ್ನಗಳ ವ್ಯವಹಾರದಲ್ಲಿ ಗಣನೀಯ ಯಶ ಕಂಡಿದೆಯಾದ್ರೂ, ಇನ್ನೂ ಗ್ರಾಹಕರ ಅವಶ್ಯಕತೆಗಳನ್ನು ಅದು ಪೂರೈಸಬೇಕಿದೆ. ಈ ಮಾರುಕಟ್ಟೆಯಲ್ಲಿ ಪ್ರವೇಶಿಸುವ ಹೊಸ ಸಂಸ್ಥೆಗಳಿಗೆ ಅತ್ಯುತ್ತಮವಾದ ವಿಫುಲ ಅವಕಾಶಗಳೂ ಇವೆ.

image


ಭಾರತದಲ್ಲಿ ಹೊರಗೆ ಊಟ ತಿಂಡಿಗೆ ಹೋಗುವ ಸಂಸ್ಕೃತಿ ನಿಧಾನವಾಗಿ ಹೆಚ್ಚಾಗುತ್ತಿದೆ. ತಿಂಗಳಿನಲ್ಲಿ ಎರಡರಿಂದ ಮೂರು ಬಾರಿ ಹೊರಗೆ ಊಟಕ್ಕೆ ಹೋಗುವ ಒಂದು ಕುಟುಂಬದ ಇಬ್ಬರು ಸರಾಸರಿ 1500 ರೂಪಾಯಿಯಿಂದ 2500 ರೂಗಳ ವರೆಗೆ ವ್ಯಯ ಮಾಡುತ್ತಾರೆ ಅನ್ನುವ ಅಂದಾಜಿದೆ. ಈ ಬಿಲ್​​ನೊಂದಿಗೆ ಶೇ.30ರಷ್ಟು ಹೆಚ್ಚುವರಿ ವೆಚ್ಚವಾದ ವ್ಯಾಟ್, ಸೇವಾ ತೆರಿಗೆಗಳೂ ಸೇರಿರುತ್ತವೆ.

ರಿಯಾಯತಿಯೊಂದಿಗೆ ಊಟದ ಅನುಭವವನ್ನು ಅಚ್ಚುಕಟ್ಟಾಗಿಸಿದರೇ ಭಾರತೀಯ ಗ್ರಾಹಕರು ಸಮೃದ್ಧರಾಗುತ್ತಾರೆ ಅನ್ನುವುದಷ್ಟೇ ಇಲ್ಲಿನ ವ್ಯಾವಹಾರಿಕ ಸೂಕ್ಷ್ಮ. ಊಟಕ್ಕಾಗಿ ಗಂಟೆಗಟ್ಟಲೇ ಕೂಪನ್​​ಗಳನ್ನು ಅರಸುವುದು ಅಥವಾ ಸಿಕ್ಕಿರುವ ಕೂಪನ್​​ಗಳು ಅಚಾನಕ್ಕಾಗಿ ಅವಧಿ ಮುಗಿದಿರುವ ತೊಂದರೆಗಳೂ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ರೆಸ್ಟೋರೆಂಟ್​ಗಳಲ್ಲಿ ಮುಜುಗರವಾಗುವ ಸಂದರ್ಭಗಳೂ ಇರುತ್ತವೆ. ಈಸಿಡೈನರ್ ಅಥವಾ ಡೈನ್ಔಟ್ ನಂತಹ ಕೆಲವು ಟೇಬಲ್ ಕಾಯ್ದಿರಿಸಿಕೊಳ್ಳುವ ಆಫರ್​ಗಳಲ್ಲೂ ನಿಗದಿತ ಪ್ರಮಾಣದ ರಿಯಾಯತಿ ಇರುತ್ತದೆ.

ಈ ರೀತಿ ಅತಿ ಹೆಚ್ಚು ಜನರಿಂದ ತುಂಬಿಕೊಳ್ಳುವ ರೆಸ್ಟೋರೆಂಟ್​ಗಳ ಗೋಜಿನಲ್ಲಿ ಪಾಕೆಟ್ಇನ್ ಅನ್ನುವ ಸಣ್ಣ ರೆಸ್ಟೋರೆಂಟ್ ಕೂಪನ್ ಕಾಯ್ದಿರಿಸುವ ಆ್ಯಪ್​​ ಒಂದಿದೆ. ಇದು ಬಳಕೆದಾರರಿಗೆ ಸೆಕೆಂಡ್​ನಲ್ಲಿಯೇ ಖಾಲಿಯಿರುವ ಉಚಿತ ಸರ್ವೀಸ್ ನೀಡುವ ಬೇರೆ ಬೇರೆ ರೆಸ್ಟೋರೆಂಟ್​ಗಳ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ ಕ್ಷಣಾರ್ಧದಲ್ಲಿ ಟೇಬಲ್ ಕಾಯ್ದಿರಿಸಿ ಬಳಕೆದಾರರ ಸ್ನೇಹಿ ಎನಿಸಿದೆ.

ಪಾಕೆಟ್ಇನ್ ಆಲೋಚನೆ ಹೇಗೆ ಶುರುವಾಯಿತು ಅಂತ ಅನಿರುದ್ಧ ಸ್ವತಃ ಹೆಮ್ಮೆಯಿಂದ ವಿವರಿಸಿದ್ದಾರೆ. ಅವರು ಕಾಲೇಜಿನಲ್ಲಿದ್ದಾಗ ಆಗಾಗ ಹೊರಗೆ ಊಟಕ್ಕೆ ಹೋಗುತ್ತಿದ್ದರಂತೆ. ವಿದ್ಯಾರ್ಥಿಯಾಗಿದ್ದ ಕಾರಣ ಕಡಿಮೆ ಪಾಕೆಟ್ ಮನಿ ಸಿಗುತ್ತಿದ್ದರಿಂದ ಯಾವಾಗಲೂ ವಿಶೇಷ ಡೀಲ್ ಹಾಗೂ ರಿಯಾಯಿತಿಗಳನ್ನು ಹುಡುಕುತ್ತಿದ್ದರು. ಆದರೆ ಬಹುತೇಕ ಸಂದರ್ಭದಲ್ಲಿ ಆಕರ್ಷಕ ರಿಯಾಯಿತಿಗಳು ಸಿಗುತ್ತಲೇ ಇರಲಿಲ್ಲ. ಅಲ್ಲದೇ ಕೂಪನ್​​ಗಳಿಗಾಗಿ ರೆಸ್ಟೋರೆಂಟ್ ನಿರ್ವಾಹಕರ ಬಳಿ ವಾಗ್ವಾದಗಳಾಗುತ್ತಿದ್ದ ಸಂದರ್ಭಗಳೂ ಇದ್ದವು. ಇಂತಹ ಸಮಸ್ಯೆಗಳಿಂದ ಗ್ರಾಹಕರನ್ನು ವಿಮುಕ್ತರನ್ನಾಗಿಸಲು ಅವರಿಗೆ ಸೂಕ್ತ ವೇದಿಕೆಯೊಂದನ್ನು ರಚಿಸಬೇಕಿತ್ತು. ಸರಳ ಬಜೆಟ್ ಆಧಾರದಲ್ಲಿ ಗ್ರಾಹಕರಿಗೆ ಬೆಸ್ಟ್ ಡೈನಿಂಗ್ ಲಭಿಸುವಂತೆ ರೆಸ್ಟೋರೆಂಟ್ ಮಾಲಿಕರು ಹಾಗೂ ನಿರ್ವಾಹಕರನ್ನು ಒಪ್ಪಿಸಬೇಕಿತ್ತು. ಅನಿರುದ್ಧ್ ಹೇಳುವಂತೆ ಈಗ ಆ ಸಮಸ್ಯೆಗಳು ದೂರವಾಗಿದೆ. ಆ್ಯಪ್​ನಲ್ಲಿ ಕೆಲವು ರೆಸ್ಟೋರೆಂಟ್​ಗಳನ್ನು ಪಟ್ಟಿ ಮಾಡಲಾಗಿದೆ. ಪಾಕೆಟ್ಇನ್ ಆ್ಯಪ್​ನಲ್ಲಿ ನೂರಾರು ರೆಸ್ಟೋರೆಂಟ್​ಗಳ ಪಟ್ಟಿ ಗ್ರಾಹಕರಿಗೆ ಲಭ್ಯವಿದೆ.

ಪಾಕೆಟ್ಇನ್ ಸಾಕಷ್ಟು ಅತ್ಯುತ್ತಮ ರಿಯಾಯತಿಗಳನ್ನು ನೀಡುತ್ತದೆ. ಬೇಡಿಕೆಯಿಲ್ಲದ ಸಂದರ್ಭಗಳಲ್ಲಾದರೇ ಇನ್ನೂ ದೊಡ್ಡ ಮಟ್ಟದ ಡಿಸ್ಕೌಂಟ್ ಗ್ರಾಹಕರಿಗೆ ಲಭ್ಯವಿದೆ.

ಪಾಕೆಟ್ಇನ್ ತಂಡ ಗ್ರಾಹಕರು ಇಡುವ ಬೇಡಿಕೆಗಳನ್ನು ಪರಿಪೂರ್ಣವಾಗಿ ಪೂರೈಸುತ್ತದೆ. ಶೇ.100ರಷ್ಟು ಗ್ಯಾರಂಟಿ ರಿಯಾಯತಿ ನೀಡುವ ಪಾಕೆಟ್ಇನ್ ಕಾರ್ಯಾಚರಣೆಯಲ್ಲಿ ವೋಚರ್​​ಗಳಾಗಲಿ ಅಥವಾ ಕೋಡ್​ಗಳಾಗಲೀ ಇಲ್ಲಿ ಅಗತ್ಯ ಇಲ್ಲ. ರೆಸ್ಟೋರೆಂಟ್ ಒಳಗೆ ನಿಮ್ಮ ಟೇಬಲ್ ಸಿದ್ಧವಿರುತ್ತದೆ. ನೀವು ರೆಸ್ಟೋರೆಂಟ್ ಒಳಗೆ ಹೋಗುವಾಗಲೇ ನಿಮ್ಮ ಬಗ್ಗೆ ಅಲ್ಲಿನ ಪರಿಚಾರಕನಿಗೆ ಪರಿಚಯವಿರುತ್ತದೆ ಹಾಗೂ ನಿಮಗೆ ಏನು ಅವಶ್ಯಕತೆಯಿದೆ ಅನ್ನುವುದೂ ಅವನಿಗೆ ತಿಳಿದಿರುತ್ತದೆ. ಇದೇ ಈ ಆ್ಯಪ್​ನ ವಿಶೇಷತೆ.

ಈ ವರ್ಷವಷ್ಟೇ ಪದವಿ ಪೂರೈಸಿದ ಮೂವರು ಯುವಕರು ಆರಂಭಿಸಿದ ಸಂಸ್ಥೆಯೇ ಪಾಕೆಟ್ಇನ್. ಭಾರತೀಯ ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಸಿಗುತ್ತಿರುವ ಉದಾರ ಔದ್ಯಮಿಕ ಪ್ರೋತ್ಸಾಹವೇ ಇವರಿಗೆ ಸ್ಪೂರ್ತಿ.

ಅನಿರುದ್ಧ್, ಥಾಪುರ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದರೆ, ಕ್ಷಿತಿಜ್ ಹಾಗೂ ರಾಹುಲ್ ದೆಹಲಿಯ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿದ್ದಾರೆ. ಈ ಮೂವರು ಸೇರಿಕೊಂಡು ನಿರ್ಮಿಸಿದ ಸಂಸ್ಥೆಯೇ ಪಾಕೆಟ್ಇನ್.

ಕ್ಷಿತಿಜ್ ಹೇಳುವಂತೆ ಅವರು ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಅವರಲ್ಲಿ ಏನಾದರೂ ಸಾಧಿಸಬೇಕೆನ್ನುವ ತುಡಿತ, ಉತ್ಸಾಹ ಹಾಗೂ ಸಾಧಿಸಬಲ್ಲ ಸಾಮರ್ಥ್ಯವೂ ಇತ್ತು. ಹಾಗಾಗಿ ಉದ್ಯಮ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಬೇಕಿರುವ ಮನೋಸ್ಥೈರ್ಯವನ್ನು ಅವರು ಆಗಲೇ ಸಂಪಾದಿಸಿದ್ದರು.

ಈಗಾಗಲೆ ಅನಿರುದ್ಧ್ ಹೇಳಿರುವಂತೆ ಆಗ ಈ ಕ್ಷೇತ್ರದಲ್ಲಿ ಯಾವುದೇ ಸ್ಟಾರ್ಟ್ ಅಪ್ ಇಲ್ಲದೇ ಇದ್ದಿದ್ದೂ ಸಹ ಅವರ ಆಲೋಚನೆ ಕಾರ್ಯಗತಗೊಳ್ಳಲು ಕಾರಣವಾಯಿತು. ಪಾಕೆಟ್ಇನ್ ಮೂಲಕ ಅವರು ಗ್ರಾಹಕರು ಹಾಗೂ ರೆಸ್ಟೋರೆಂಟ್ ಮಾಲಿಕರನ್ನು ಸಮಾನ ಅವಕಾಶ ಗಳಿಸುವಂತೆ ವೇದಿಕೆ ನಿರ್ಮಿಸಿದ್ದಾರೆ. ಪಾಕೆಟ್ಇನ್ ಅಭಿವೃದ್ಧಿಗಾಗಿ ಈ ಮೂವರೂ ತಮ್ಮ ಲಾಭದಾಯಕ ಉದ್ಯೋಗಿಗಳನ್ನು ತೊರೆದು ಪೂರ್ಣಕಾಲಿಕವಾಗಿ ದುಡಿಯುತ್ತಿದ್ದಾರೆ. ಇದಕ್ಕಾಗಿಯೇ ರಾಹುಲ್ ಅಮೇಜಾನ್ ತೊರೆದಿದ್ದಾರೆ, ಅನಿರುದ್ಧ್ ತಮ್ಮನ ಪ್ರಾಕ್ಟೋ ಆಫರ್ ಅನ್ನೇ ನಿರಾಕರಿಸಿದ್ದಾರೆ.

ಪಾಕೆಟ್ಇನ್ ಲಾಂಚ್ ಆಗಿ ಮೂರು ತಿಂಗಳು ಕಳೆದ ಬಳಿಕ ಗ್ರಾಹಕರಿಂದ ಹಾಗೂ ರೆಸ್ಟೋರೆಂಟ್ ಮಾಲಿಕರು / ನಿರ್ವಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭಿಸಿದೆ. ಈಗಾಗಲೇ ಆ್ಯಂಡ್ರಾಯ್ಡ್​​ ಪ್ಲೇ ಸ್ಟೋರ್​ನಲ್ಲಿ ಸುಮಾರು 5 ಸಾವಿರದಷ್ಟು ಡೌನ್​ಲೋಡ್​ಗಳನ್ನು ಪಾಕೆಟ್ಇನ್ ಕಂಡಿದೆ ಹಾಗೂ 100ಕ್ಕೂ ಹೆಚ್ಚು ರೆಸ್ಟೋರೆಂಟ್​ಗಳನ್ನು ತನ್ನ ಪಟ್ಟಿಯಲ್ಲಿ ಹೊಂದಿದೆ.

ಕಳೆದ 90 ದಿನಗಳಲ್ಲಿ ಪಾಕೆಟ್ಇನ್ ಸುಮಾರು 550 ವಹಿವಾಟು ಪೂರ್ಣಗೊಳಿಸಿದೆ. ಸುಮಾರು 12 ಲಕ್ಷ ರೂಪಾಯಿಯಷ್ಟು ವ್ಯವಹಾರ ಸಹ ಪೂರ್ಣಗೊಳಿಸಿಕೊಂಡಿದೆ. ತಿಂಗಳಿನಲ್ಲಿ ಮೂರ್ನಾಲ್ಕು ಬಾರಿ ಹೊರಗೆ ಊಟಕ್ಕೆ ಹೋಗುವ ಭಾರತೀಯ ಮಧ್ಯಮ ವರ್ಗದ ಜನತೆಗೆ ಪಾಕೆಟ್ಇನ್ ಸಾಕಷ್ಟು ನೆರವಾಗುತ್ತಿದೆ. ಸಿಂಗಾಪುರ ಹಾಗೂ ಹಾಂಗ್​​ಕಾಂಗ್​ನಂತಹ ರಾಷ್ಟ್ರಗಳಲ್ಲಿ ತಿಂಗಳಿಗೆ ಸರಾಸರಿ 35 ಆರ್ಡರ್​ಗಳು ಸಿಗುತ್ತವೆ. ಮುಂಬರುವ ದಿನಗಳಲ್ಲಿ ಭಾರತವೂ ಈ ಸಾಲಿಗೆ ಸೇರಬಹುದು ಅನ್ನುವ ಅಂದಾಜು ಇವರದ್ದು.

ಪಾಕೆಟ್ಇನ್ ಹೂಡಿಕೆ ಆರಂಭವಾಗಿದ್ದು ಸ್ನೇಹಿತರು ಹಾಗೂ ಕುಟುಂಬದ ಬಂಧುಗಳ ಆರ್ಥಿಕ ನೆರವಿನಿಂದ. ಮುಂದಿನ 12 ತಿಂಗಳ ನಂತರ ಮತ್ತಷ್ಟು ಹೊಸ ಹೂಡಿಕೆ ಮಾಡುವ ಗುರಿಯಿದೆ. ಸರಾಸರಿ 2 ಲಕ್ಷ ವಹಿವಾಟಿನೊಂದಿಗೆ 42 ಕೋಟಿ ರೂಪಾಯಿ ವಹಿವಾಟು ಸಾಧಿಸುವ ಉದ್ದೇಶವನ್ನು ಇದು ಹೊಂದಿದೆ.


ಲೇಖಕರು: ಪ್ರದೀಪ್​ ಗೋಯಲ್​

ಅನುವಾದಕರು: ವಿಶ್ವಾಸ್​​