ದೃಶ್ಯಾವಳಿ ಹಂಚಿಕೆಗೆ ಹೊಸ ಸೇವೆ

ಟೀಮ್​​ ವೈ.ಎಸ್​​.ಕನ್ನಡ

ದೃಶ್ಯಾವಳಿ ಹಂಚಿಕೆಗೆ ಹೊಸ ಸೇವೆ

Monday November 23, 2015,

3 min Read

ಮಾಹಿತಿ ತಂತ್ರಜ್ಞಾನ ಅನ್ನುವುದು ದಿನೇ ದಿನೇ ಬದಲಾಗುತ್ತಿದೆ. ಮೊದಲಿಗಿಂತಲೂ ಇಂದು ತಂತ್ರಜ್ಞಾನ ಬದಲಾಗಿದೆ. ಹಿಂದೆ ಇದ್ದ ಪದ್ಧತಿ ಈಗ ಬದಲಾಗಿದೆ. ಕಾಲಕ್ಕೆ ತಕ್ಕಂತೆ ಹೊಸ ಹೊಸ ಅವಿಷ್ಕಾರಗಳಾಗಿವೆ. 1980ರಿಂದಲೂ ಸಾಮಾನ್ಯವಾಗಿ ನಾವು ಲಿಂಕ್‌ಗಳನ್ನು ಕೇವಲ ಕಾಪಿ-ಪೇಷ್ಟ್ ಮಾಡುವುದರ ಮೂಲಕ ನಮ್ಮ ಸ್ನೇಹಿತರು ಮತ್ತು ಮನೆಯವರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಆದರೆ, ಈಗ ಕಾಲ ಬದಲಾಗಿದೆ. ಲೈನಕ್ಸ್ ಸಂಸ್ಥೆ ಹೊಸದೊಂದು ತಂತ್ರಜ್ಞಾನ ಹುಡುಕಿದೆ.

ಮುಂದಿನ ದಿನಗಳಲ್ಲಿ ಲೈನಕ್ಸ್ ಮುಖಾಂತರ ಸುಲಭವಾಗಿ ದೃಶ್ಯ ಅನುಭವಗಳನ್ನು ಹಂಚಿಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ. ಲೈನಕ್ಸ್ ಸಾದರಪಡಿಸಿರುವ ಹೊಸದೊಂದು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾಗಿದೆ.

image


ಅನೇಕ ಉತ್ಪನ್ನಗಳು ಹಾಗೂ ಸೇವೆಗಳು ಕಾಲಾಂತರದಿಂದಲೂ ಹಾಗೆಯೇ ಇದ್ದು, ಇವುಗಳು ಇಂಟರ್‌ನೆಟ್ ಆರಂಭಗೊಂಡ ಅವಧಿಯಿಂದಲೂ ಒಂದೇ ವ್ಯವಸ್ಥೆಯಲ್ಲಿ ಮುಂದುವರೆದಿದೆ. ಲೈನಕ್ಸ್‌ನ ಶಿಖಾ ಅರೋರ ತಂಡವು ಹೊಸದೊಂದು ಅಪ್ಲಿಕೇಶನ್ ಹುಡುಕಿದ್ದು, ನಮಗಿಷ್ಟವಾದ ಲಿಂಕ್‌ಗಳನ್ನು ಇಂಟರ್‌ನೆಟ್ ಮುಖಾಂತರ ಮೊದಲಿನ ಸ್ಥಿತಿಯಲ್ಲಿಯೇ ತಮ್ಮ ಸ್ನೇಹಿತರು ಮತ್ತು ಮನೆಯವರೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.

ಉದ್ಯಮಿಗಳು ತಮ್ಮ ಕನಿಷ್ಠ ಸಾಮರ್ಥ್ಯವನ್ನು ಉತ್ಪನ್ನಗಳ ಮೂಲಕ ಶುರುಮಾಡಿ, ಅಲ್ಫಾ ಮೂಲಕ ಹೋಗಿ ಮತ್ತು ಬೀಟಾ ಮೂಲಕ ಮತ್ತಷ್ಟು ಸುದಾರಿಸಲು ಪ್ರಾರಂಭಿಸುತ್ತಾರೆ. ಉತ್ಪನ್ನಗಳು ಅಧಿಕೃತವಾಗಿ ಬಿಡುಗಡೆಯಾದಾಗ, ಉದ್ಯಮಿಗಳ ಕಾರ್ಯವೈಕರಿಯನ್ನು ಗಮನಿಸಬೆಕಾಗಿದೆ. ಜೊತೆಗೆ ಉತ್ಪನ್ನದ ದೃಷ್ಠಿಕೋನ ಬಳಕೆದಾರರಿಗೆ ಇಷ್ಠವಾಗುತ್ತಾ ಎಂದು ಖಚಿತಪಡಿಸಿಕೊಳ್ಳಲು ಕಡಿದಾದ ಕಲಿಕೆಯನ್ನು ಉದ್ಯಮಿಗಳು ಗಮನಿಸಬೇಕಾಗಿದೆ. ಉತ್ಪನ್ನದ ಸಾಧಕಬಾಧಕವನ್ನು ತಿಳಿದುಕೊಳ್ಳದ ಹೊರತು, ಜನರಿಗೆ ಉತ್ಪನ್ನದ ಮೇಲಿರುವ ಬೇಸರ ಮತ್ತು ಉತ್ಪನ್ನವನ್ನು ನಿರ್ಲಕ್ಷಿಸುವ ಅಂಶ ಗೊತ್ತಾಗುವುದಿಲ್ಲ.

ಕಂಪನಿ ಏನು ಮಾಡುತ್ತದೆ...?

ಲೈನಕ್ಸ್ ಒಂದು ವೆಬ್ ಮತ್ತು ಮೊಬೈಲ್ ವೇದಿಕೆಯಾಗಿದ್ದು, ಇದರ ಮುಖಾಂತರ ಕೆಲವೊಂದು ಲಿಂಕ್‌ಗಳನ್ನು ನಾವು ಉಳಿಸಿಕೊಳ್ಳಬಹುದಾಗಿದೆ ಮತ್ತು ಮತ್ತೊಬ್ಬರೊಡನೆ ಹಂಚಿಕೊಳ್ಳಬಹುದಾಗಿದೆ. ಈ ಒಂದು ವೇದಿಕೆಯಲ್ಲಿ ಎರಡು ಪ್ರಮುಖ ಟ್ಯಾಬ್‌ಗಳಿದ್ದು BLUE ಲೈನಕ್ಸ್ ಮತ್ತು GREEN ಲೈನಕ್ಸ್ ಎಂದು ಹೆಸರಿಸಲಾಗಿದೆ. BLUE ಲೈನಕ್ಸ್ ಮುಖಾಂತರ ಬಳಕೆದಾರರು ತಮಗಿಷ್ಟವಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ, ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಬಳಕೆದಾರರು ತಮಗಿಷ್ಟವಾದ ಲಿಂಕ್‌ಗಳನ್ನು ಉಳಿಸಿಕೊಳ್ಳಲು ಸಹ ಅವಕಾಶ ಮಾಡಿ ಕೊಡಲಾಗಿದೆ. ಬೇಕೆನಿಸಿದಾಗ ಫೇವರಿಟ್ ಬಟನ್ ಸೆಲೆಕ್ಟ್ ಮಾಡಿ ಉಳಿಸಿಕೊಂಡಿರುವ ಲಿಂಕ್‌ಗಳನ್ನು ಓದಬಹುದಾಗಿದೆ, ಬಳಕೆದಾರರು ತಮಗಿಷ್ಟವಾದ ಲಿಂಕ್‌ಗಳನ್ನು ಗುಂಪುಗಳ ಮುಖಾಂತರ ಅಥವಾ ವೈಯಕ್ತಿಕವಾಗಿಯೂ ಈ ವೇದಿಕೆಯ ಮುಖಾಂತರ ಹಂಚಿಕೊಳ್ಳಬಹುದಾಗಿದೆ.

ಲೈನಕ್ಸ್ ಅತ್ಯುತ್ತಮವಾದ ಹಂಚಿಕೊಳ್ಳುವ ವೈಶಿಷ್ಟ್ಯಗಳನ್ನು ಹೊಂದಿದ್ದು, ಮೊದಲು ಹಂಚಿಕೊಂಡ ಬಳಕೆದಾರರ ಹೆಸರನ್ನು ಪ್ರದರ್ಶಿಸುತ್ತದೆ. ಈ ಒಂದು ಅಪ್ಲಿಕೇಶನ್ GOOGLE Chrome ಮತ್ತು Apple’s Safari Browser ನ ವಿಸ್ತರಣ ಸಾಧನವಾಗಿದ್ದು, ಇವುಗಳ ಮುಖಾಂತರವು ಬಳಕೆದಾರರು ಲಿಂಕ್‌ಗಳನ್ನು ಹಂಚಿಕೊಳ್ಳಬಹುದಾಗಿದೆ.

ಇವತ್ತಿನವರೆಗಿನ ಕಥೆ

ಲೈನಕ್ಸ್ ಅಪ್ಲಿಕೇಶನ್ MAZ ಕಂಪನಿಯವರಿಗೆ ಒಂದು ಅಸ್ಥಿತ್ವದಲ್ಲಿರುವ ಉತ್ಪನ್ನಗಳ ಲಕ್ಷಣವಾಗಿ ಗೋಚರಿಸಿತು. ಮೊಬೈಲ್ ಪ್ರಕಾಶನ ವೇದಿಕೆಯನ್ನು ಬಳಸುವ ಸಂಸ್ಥೆಗಳಾದ Conde Nast, Forbes, USA Today ಮತ್ತು ಇನ್ನೂ ಕೆಲವು ಸಂಸ್ಥೆಗಳು MAZ ಸಂಸ್ಥೆಯು ಲೈನಕ್ಸ್ ಅಪ್ಲಿಕೇಶನ್‌ನಿಂದ ಗಳಿಸಿರುವ ಯಶಸ್ಸನ್ನು ಗಮನಿಸಿ ಅಭಿನಂದಿಸಿದರು ಮತ್ತು ಪ್ರೊತ್ಸಾಹಿಸದರು ಕೂಡ.

ಪಾಲ್ ಚೆನಟ್ಟಿ, ಶಿಖಾ ಅರೊರ ಮತ್ತು ಸೈಮನ್ ಬೂಮರ್ ಲೈನಕ್ಸ್ ಮತ್ತು MAZ ಸಂಸ್ಥೆಯನ್ನು ಹುಟ್ಟು ಹಾಕಿದವರಾಗಿದ್ದಾರೆ. ಲೈನಕ್ಸ್ ಸಂಸ್ಥೆಯ CEOಆಗಿ ಪಾಲ್ ಚೆನಟ್ಟಿ ಕೆಲಸ ನಿರ್ವಹಿಸುತಿದ್ದು, ಇದಕ್ಕೂ ಮೊದಲು ಪಾಲ್ ಆಪಲ್ ಕಂಪನಿಯಲ್ಲಿ ಇಂಟರ್ಫೆಸ್ ಡಿಸೈನರ್ ಆಗಿ ಕೆಲಸ ನಿರ್ವಹಿಸಿ, ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಅಭಿವೃದ್ದಿಪಡಿಸಿರುವ ಅನುಭವವನ್ನು ಹೊಂದಿದ್ದಾರೆ.

image


ಸಂಸ್ಥೆಯ ಆಂತರಿಕ ತಂತ್ರಜ್ಞಾನದ ವಿಭಾಗದಲ್ಲಿ ಗಮನ ಕೇಂದ್ರಿಕರಿಸಿರುವ ಪಾಲ್ ಚೆನಟ್ಟಿ, ಜನರಲ್ ಅಸೆಂಬ್ಲಿ ವಿಭಾಗದಲ್ಲಿ ಪ್ರಮುಖ ಕಾರ್ಪೋರೆಟ್ ಕಂಪನಿಗಳಾದ Walmart, Staples and American express ಪಾಲುದಾರಿಕೆಯನ್ನು ಸೆಳೆಯಲು ಮುಂದಾಗಿದ್ದಾರೆ. ಲೈನಕ್ಸ್ ಸಂಸ್ಥೆಯ CTOಆಗಿ ಕಾರ್ಯನಿರ್ವಹಿಸುತಿದ್ದ ಶೀಖಾ, ಅಡೋಬ್ ಸಿಸ್ಟಮ್‌ನಲ್ಲಿ 6 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಸೈಮನ್ ಬೂಮರ್ ಲೈನಕ್ಸ್ ಸಂಸ್ಥೆಯ CIOಆಗಿ ಕಾರ್ಯನಿರ್ವಹಿಸುತಿದ್ದು, ವೃತ್ತಿಯಲ್ಲಿ ವೆಬ್ ಡಿಸೈನರ್‌ ಆಗಿದ್ದರು. ಪಾಲ್ ಚೆನಟ್ಟಿ ಮತ್ತು ಸೈಮನ್ ಬೂಮರ್ ಇಬ್ಬರು “30 under 30 word’s” coolest young entrepreneurs ಆಗಿ ಹೊರಹೊಮ್ಮಿದವರಾಗಿದ್ದರು.

ಲೈನಕ್ಸ್ ಅಪ್ಲಿಕೇಶನ್‌ ವೆಬ್ ಮತ್ತು ಮೊಬೈಲ್ ಎರಡರಲ್ಲೂ ಬಳಸುವ ವೇದಿಕೆಯಾಗಿದ್ದು( iOS ನಲ್ಲಿ ) ಈಗಾಗಲೆ 1ಲಕ್ಷಕ್ಕೂ ಅಧಿಕ ಮೊಬೈಲ್‌ಗಳಿಗೆ ಡೌನ್ ಲೋಡ್ ಆಗಿದ್ದು, ಸಂಸ್ಥೆಯು ಬಹುತೇಕ ಎಲ್ಲಾ ಮೊಬೈಲ್ ನಲ್ಲಿ ಈ ಒಂದು ಅಪ್ಲಿಕೇಶನ್‌ಅನ್ನು ಅಳವಡಿಸಲು ಉತ್ಸುಕವಾಗಿದ್ದು, ಹಾಗೆಯೇ ಗಣಕಗಳಲ್ಲೂ ಅಳವಡಿಸುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಿಖಾ ಹೇಳುತ್ತಾರೆ. ಸಾರ್ವಜನಿಕವಾಗಿ ಈ ಒಂದು ಅಪ್ಲಿಕೇಶನ್ ಅನ್ನು ಬಿಡುಗಡೆಗೋಳಿಸಲು ಸಂಸ್ಥೆಯ ಎಲ್ಲಾ ಕೆಲಸಗಾರರು ಬಹಳ ವೇಗವಾಗಿ ಮುನ್ನುಗ್ಗುತ್ತಿದ್ದಾರೆ ಅನ್ನುತ್ತಾರೆ ಶಿಖಾ.

ನಮ್ಮ ಸಂಸ್ಥೆಯು ನೋಯಿಡಾ ಮೂಲದ ಕೆಲಸಗಾರರಿಂದ ಈ ಒಂದು ಅಪ್ಲಿಕೇಶನ್ ಅನ್ನು ಅಭಿವೃದ್ದಿಪಡಿಸಲಾಗಿದ್ದು, ಬಳಕೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಅಪ್ಲಿಕೇಶನ್ ಅನ್ನು ಅಭಿವೃದ್ದಿಪಡಿಸಲಾಗಿದೆ ಎನ್ನುತ್ತಾರೆ

ಆದಾಯದ ಸೂತ್ರ ಮತ್ತು ಭವಿಷ್ಯದ ಯೋಜನೆಗಳು

ಈ ಒಂದು ಆಪ್ ಮತ್ತು ಗಣಕ ಆವೃತ್ತಿ ಗ್ರಾಹಕರಿಗೆ ಉಚಿತವಾಗಿ ಸಿಗಲಿದ್ದು, ಲೈನಕ್ಸ್ ಅಪ್ಲಿಕೇಶನ್‌ ಸಹ ಉದ್ದಿಮೆಯ ಸಾಧನವಾಗಿ, ಕೆಲವು ಪ್ರಮುಖ ಪ್ರಕಾಶನಗಳ ಲಿಂಕ್‌ಗಳ ಹಂಚಿಕೆಯ ಸಾಧನವಾಗಿ ಗುರುತಿಸಿಕೊಂಡಿದೆ. ಕೆಲವೊಂದು ಕಂಪನಿಗಳು ಈಗಾಗಲೆ ಲೈನಕ್ಸ್ ಅಪ್ಲಿಕೇಶನ್‌ಅನ್ನು ಲಿಂಕ್‌ಗಳನ್ನು ಹಂಚಿಕೊಳ್ಳಲು ಕಡ್ಡಾಯ ಆಪ್ ಆಗಿ ಕಾರ್ಯಗತಗೊಳಿಸಿದ್ದು, ಇನ್ ಬಾಕ್ಸ್ ನಲ್ಲಿನ ಅಡಚಣೆಯನ್ನು ತಡೆಯಲು ಅನುಕೂಲವಾಗಿದೆಯೆಂದು ಶಿಖಾ ಹೇಳಿದ್ದಾರೆ.

ಲೇಖಕರು: ಹರ್ಷಿತಾ ಮಲ್ಯ

ಅನುವಾದಕರು: ಶ್ರುತಿ