ಮಹಾರಾಷ್ಟ್ರವನ್ನು ತನ್ನ 7ನೇ ಬಂಡವಾಳ ಹೂಡಿಕೆಯ ಆಧಾರ ಕೇಂದ್ರವನ್ನಾಗಿಸಿಕೊಂಡ ಅಮೇಜ್ಹಾನ್​​ ಸಂಸ್ಥೆ

ಟೀಮ್​ ವೈ.ಎಸ್​. ಕನ್ನಡ

0

ಜಾಗತಿಕ ಇ- ಕಾಮರ್ಸ್ ವಲಯದಲ್ಲಿ ಮುಂಚೂಣಿಯಲ್ಲಿರುವ ಅಮೇಜ್ಹಾನ್​​ ಸಂಸ್ಥೆ ತನ್ನ 7ನೇ ಪೂರ್ಣ ಪ್ರಮಾಣದ ಕೇಂದ್ರವನ್ನು ಮಹಾರಾಷ್ಟ್ರದಲ್ಲಿ ತೆರೆದಿದೆ. ಅಲ್ಲದೇ ಭಾರತದಲ್ಲಿ ತನ್ನ ಕಾರ್ಯಾಚರಣೆ ನಡೆಸಲು ಮಹಾರಾಷ್ಟ್ರವೇ ಇನ್ವೆಸ್ಟ್ ಮೆಂಟ್ ಡೆಸ್ಟಿನೇಶನ್ ಎಂದು ಪರಿಗಣಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಮುಂಬೈನ ಬಿವಾಂಡಿಯನ್ನು ಅಮೇಜ್ಹಾನ್ ಸಂಸ್ಥೆ ತನ್ನ ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡಿರುವುದಲ್ಲದೇ, ಇಲ್ಲಿ ಮಾಹಿತಿ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನೂ ಸಹ ತೆರೆಯಲಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಅಮೇಜ್ಹಾನ್ ಸಂಸ್ಥೆಯ ಸಕ್ರಿಯ ಉಪಸ್ಥಿತಿಯಿರುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಅಮೇಜ್ಹಾನ್ ಸಂಸ್ಥೆ ಬಂಡವಾಳ ಹೂಡಿಕೆಗೆ ಮಹಾರಾಷ್ಟ್ರವನ್ನು ಆಧಾರವಾಗಿರಿಸಿಕೊಂಡಿದೆ ಎಂದು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ಕಾರ್ಪೋರೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಭೂಷಣ್ ಗಾಗ್ರಾನಿ ಸ್ಪಷ್ಟಪಡಿಸಿದ್ದಾರೆ.

ಅಮೇಜ್ಹಾನ್‌ ಸಂಸ್ಥೆಯ ಕಳೆದ ಕೆಲ ತಿಂಗಳಲ್ಲಿ ಸಾಧಿಸಿರುವ ಕ್ಷಿಪ್ರ ಬೆಳವಣಿಗೆ ಉದ್ಯಮದ ದೃಷ್ಟಿಕೋನಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇ-ಕಾಮರ್ಸ್ ಕ್ಷೇತ್ರದಲ್ಲಿ ಆತ್ಮವಿಶ್ವಾಸದಿಂದ ಮುಂದುವರೆಯುತ್ತಿದೆ ಎಂದು ಅಮೇಜ್ಹಾನ್ ಬೆಳವಣಿಗೆಯ ಕುರಿತು ಮಾತನಾಡಿದ್ದಾರೆ ಭೂಷಣ್ ಗಾಗ್ರಾನಿ. ಭಿವಾಂಡಿಯಲ್ಲಿ ಮಾಡಿರುವ ಹೂಡಿಕೆಯ ಕುರಿತಾಗಿ ಸಂಸ್ಥೆ ಯಾವುದೇ ಮಾಹಿತಿಯನ್ನೂ ಹೊರಹಾಕಿಲ್ಲ. ಈ ಸಂಸ್ಥೆ ಭಿವಾಂಡಿಯಲ್ಲಿ 2.3 ಲಕ್ಷ ಚದರಡಿಯಲ್ಲಿ 1 ಮಿಲಿಯನ್ ಕ್ಯುಬಿಕ್ ಫೀಟ್ ಸಂಗ್ರಹಣಾ ಸಾಮರ್ಥ್ಯದ ಜಾಗವನ್ನು ಹೊಂದಿದೆ.

ಪೂರ್ಣಕಾಲಿಕ ಸೇವೆಗಳ ವಿಚಾರದಲ್ಲಿ ಮಹಾರಾಷ್ಟ್ರ ತನ್ನ ದೊಡ್ಡ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ರಾಜ್ಯದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡಿ ಆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ನೀಡುವುದು, ಬೆಳವಣಿಗೆ ಮತ್ತು ಸರ್ಕಾರಕ್ಕೆ ಆದಾಯ ಬರುವಂತೆ ಕಾರ್ಯನಿರ್ವಹಿಸಲು ಬದ್ಧತೆಯಿಂದ ಕೆಲಸ ಮಾಡುವುದಾಗಿ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ ಅಮೇಜ್ಹಾನ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಅಖಿಲ್ ಸಕ್ಸೇನಾ.

ಪ್ರಸ್ತುತ ಭಿವಾಂಡಿಯಲ್ಲಿ ತೆರೆದಿರುವ ಅಮೇಝಾನ್‌ನ ಕೇಂದ್ರ 21ನೇ ಪೂರ್ಣಪ್ರಮಾಣದ ಕೇಂದ್ರವಾಗಿದೆ. ಇಂತಹ ಕೇಂದ್ರಗಳು 10 ರಾಜ್ಯಗಳಲ್ಲಿ ಮಾತ್ರ ಇದೆ ಎಂದು ಸಕ್ಸೇನಾ ತಿಳಿಸಿದ್ದಾರೆ. ಕಡಿಮೆ ಮಟ್ಟದ ಕಾರ್ಯನಿರ್ವಹಣಾ ವೆಚ್ಚದೊಂದಿಗೆ ಸಣ್ಣ ಉದ್ಯಮಗಳಿಗೆ ಬೆಂಬಲವಾಗಿರುವ ಮೂಲಕ ಉದ್ಯಮಗಳಿಗೆ ದೇಶದಾದ್ಯಂತ ಹೆಚ್ಚು ಹೆಚ್ಚು ಗ್ರಾಹಕರನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಭರವಸೆಯನ್ನು ಅಮೇಜ್ಹಾನ್ ಸಂಸ್ಥೆ ನೀಡಿದೆ. ಈ ಸೌಲಭ್ಯಕ್ಕಾಗಿ 130ಕ್ಕೂ ಹೆಚ್ಚು ಮಾರಾಟಗಾರರು ಸಂಸ್ಥೆಯೊಂದಿಗೆ ತಮ್ಮ ಸಂಸ್ಥೆಯನ್ನು ರಿಜಿಸ್ಟರ್ ಮಾಡಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲೇ 33,000 ಮಾರಾಟಗಾರರಿದ್ದಾರೆ. ಇದರಲ್ಲಿ 18,000 ಮಾರಾಟಗಾರರು ಮುಂಬೈನಲ್ಲೂ ಮತ್ತು ಥಾಣೆಯಲ್ಲಿ 2,000 ಮಾರಾಟಗಾರರೂ ಸೇರಿದ್ದಾರೆ. ಈ ಸಂಖ್ಯೆಯಲ್ಲಿ ಶೀಘ್ರದಲ್ಲೇ ಹೆಚ್ಚಳವಾಗುತ್ತದೆ ಎಂಬ ಭರವಸೆ ಹೊಂದಿದ್ದಾರೆ ಅಮೇಜ್ಹಾನ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಅಖಿಲ್ ಸಕ್ಸೇನಾ.


ಅನುವಾದಕರು: ವಿಶ್ವಾಸ್​​

Related Stories

Stories by YourStory Kannada