I Can Fly ಬದುಕಿನ ಮೇಲೆ ಎಲ್ಲರಿಗೂ ಸಮಾನ ಅಧಿಕಾರವಿದೆ

ಟೀಮ್​ ವೈ.ಎಸ್​. ಕನ್ನಡ

I Can Fly ಬದುಕಿನ ಮೇಲೆ ಎಲ್ಲರಿಗೂ ಸಮಾನ ಅಧಿಕಾರವಿದೆ

Thursday December 24, 2015,

3 min Read


ಒಂದು ವಿಶೇಷ ಮಗುವಿನ ತಾಯಿಯಾಗಿರುವ ಮೀನು ಬುದಿಯಾ, ಅವರಂತೆ ಕಷ್ಟಪಡುತ್ತಿರುವವರ ಅವಶ್ಯಕತೆ ಸಂಕಷ್ಟವನ್ನು ಅರಿತಿದ್ದಾರೆ. ಅವರ ಈ ಅನುಭವ, ಮನೋವೈಜ್ಞಾನಿಕ ವಿಕಾಸಕ್ಕೆ ಆ್ಯಡ್ಲೈಫ್ (Add life) ಸಂಸ್ಥೆಯ ಸ್ಥಾಪನೆ ಮಾಡಲು ಪ್ರೇರಣೆ ಸಿಕ್ತು. ಕೋಲ್ಕತ್ತದ ಸೆಂಟರ್​ನಲ್ಲಿ 30ಕ್ಕಿಂತ ಹೆಚ್ಚು ಮೆಂಟಲ್ ಹೇಲ್ತ್ ಪ್ರೊಫೆಶನಲ್​ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್, ತಜ್ಞರಿಂದ ವಿಶೇಷ ಮಕ್ಕಳ ಸಮಸ್ಯೆಗೆ ಸಲಹೆ ನೀಡುತ್ತಾರೆ.

"ನಾನು ಬಹಳ ಸಮಯದಿಂದ ನನ್ನ ವಿಶೇಷ ಮಗು ಪ್ರಾಚಿ ಭವಿಷ್ಯದ ಬಗ್ಗೆ ಚಿಂತಿಸುತ್ತಿದೆ. ನನಗೆ ಅವಳ ಚಿಂತೆಯಿತ್ತು. ಅವಳು ವಿಶೇಷ ಹುಡುಗಿ ಅವಳು ದೊಡ್ಡವಳಾಗಿ ಏನ್ ಮಾಡ್ತಾಳೆ. ನಾನು ಅವಳಿಗೆ ಟಿವಿ ನೋಡಲು ನಿರಾಕರಿಸಲಾ ಅಥವಾ ಸಾಯಂಕಾಲ ವಾಕ್​ಗೆ ಹೋಗಲು ನಿಲ್ಲಿಸಲಾ.? ನನ್ನ ಮಗಳು ಇಷ್ಟು ಆಲಸ್ಯಿಯಾಗುವುದು ನನಗಿಷ್ಟವಿರಲಿಲ್ಲ. ಆದರೆ ನಾನು ನನ್ನ ಮಗಳ ಬಗ್ಗೆಯಷ್ಟೇ ಚಿಂತಿಸುತ್ತಿರಲಿಲ್ಲ".

‘ಈ ವಿಶೇಷ ಮಕ್ಕಳಿಗಾಗಿ ಏನಾದ್ರೂ ಮಾಡಬೇಕೆಂಬ ಯೋಚನೆ ಮೀನು ಅವರಿಗೆ ಬಂತು. ಬುದ್ದಿಮಾಂದ್ಯ ಮಕ್ಕಳು ಸಮಾಜದಲ್ಲಿ ಎಲ್ಲರಂತೆ ಬದುಕಬೇಕು. ಎಲ್ಲರಿಗೂ ಸಿಗುವಂತಹ ಸ್ಥಾನಮಾನಗಳು ಅವರಿಗೂ ಸಿಗಬೇಕು. ಅವರನ್ನು ಯಾವ ಮಟ್ಟಿಗೆ ಶಿಕ್ಷಿತರನ್ನಾಗಿ ಮಾಡಬೇಕೆಂದರೆ ಅವರು ತಮ್ಮ ಕಾಲಿನ ಮೇಲೆ ನಿಂತಿಕೊಳ್ಳುವಂತಾಗಬೇಕು. ಸ್ವಾತಂತ್ರವಾಗಿ ಅವರು ಬದುಕುವಂತಾಗಬೇಕು. ಕಾರ್ಪೊರೇಟ್ ಕ್ಷೇತ್ರದಲ್ಲೂ ಕೆಲಸ ಮಾಡುವಂತಾಗಬೇಕು. ಅವರನ್ನು ತಜ್ಞರನ್ನಾಗಿಸುವುದು ಸಮಾಜದ ಜವಾಬ್ದಾರಿ. ಐರೋಪ್ಯ ದೇಶಗಳಂತೆ ಅವರಿಗೂ ಮೀಸಲಾತಿಯನ್ನು ನೀಡಬೇಕು’ ಎಂಬುದು ಮೀನು ಅವರ ಬಯಕೆ.

image


ಮೀನು ಅವರಿಗೆ ಮೊದಲಿನಿಂದಲೂ ಮಾನವನ ಮಸ್ತಿಷ್ಕ ಮತ್ತು ಮೆಡಿಕಲ್ ಸೈನ್ಸ್ ಅಧ್ಯಯನದಲ್ಲಿ ಆಸಕ್ತಿಯಿತ್ತು. ಕಾಗ್ನಿಟೀವ್ ಬಿಹೆವಿಯರ್ ಥೆರಪಿಯ ಕೊರ್ಸ್ ಕೂಡ ಅವರು ಮಾಡಿದ್ದಾರೆ. ಶಾಲೆ ಮತ್ತು ಕಾಲೇಜುಗಳಲ್ಲಿ ಕೌನ್ಸಲರ್ ಆಗಿ ಕೆಲಸ ಕೂಡ ಮಾಡಿದ್ದಾರೆ.

"ನನ್ನ ಚಿಕ್ಕ ಮಗಳು ಪ್ರಾಚಿಯ ಕೌನ್ಸಲಿಂಗ್​ಗಾಗಿ ಮತ್ತು ವಿಭಿನ್ನ ಸೇವೆಗಳಿಗಾಗಿ ನಾವು ಹಲವು ಕಡೆ ಸುತ್ತಾಡಬೇಕಿತ್ತು. ಇದರಿಂದ ಹೆಚ್ಚು ಸಮಯ ವ್ಯರ್ಥವಾಗುತ್ತಿತ್ತು. ಮತ್ತು ಒತ್ತಡ ಹೆಚ್ಚುತ್ತಿತ್ತು. ಹಾಗಾಗಿ ಎಲ್ಲಾ ಸೇವೆಗಳು ಒಂದೆಡೆ ಒಂದೇ ಕ್ಲಿನಿಕ್​ನಲ್ಲಿ ಸಿಗಬೇಕು ಎಂದು ಯೋಚಿಸಿ, ವನ್ ಸ್ಟೇಪ್ ಕ್ಲಿನಿಕ್ ಆರಂಭಿಸುವ ನಿರ್ಧಾರ ಮಾಡಿದೆ. ಮೆಂಟಲ್ ಹೆಲ್ತ್​ ಸಂಬಂಧಿಸಿದ ಎಲ್ಲಾ ಸೇವೆಗಳು ಇಲ್ಲಿ ಸಿಗುವಂತಾಗಬೇಕು ಎಂದು ಯೋಚಿಸಿದೆ".

ಕಳೆದ ಎರಡು ವರ್ಷದಿಂದ ‘ಆ್ಯಡ್ಸ್ ಲೈಫ್ ಕೇರಿಂಗ್ ಮೈಂಡ್ಸ್’, 4 ವಿಂಗ್ ಕೆಲಸ ಮಾಡುತ್ತಿವೆ. ಕ್ಲೀನಿಕಲ್, ಟ್ರೈನಿಂಗ್ ಎಂಡ್ ಡೆವಲಪ್ಮೆಂಟ್, ಅಕಾಡಮಿ ಮತ್ತು ಮೈಂಡ್ಸ್ಪೀಕ್ ಕ್ಲಿನಿಕಲ್ ವಿಂಗ್, ಸೈಕೋಲಾಜಿಸ್ಟ್, ಸಾಮಾಜಿಕ ತಜ್ಞರು, ಸೈಕೋಥೇರಪಿಸ್ಟ್, ಹಿಯರಿಂಗ್ ಮತ್ತು ವಾಯ್ಸ್ ಕ್ಲಿನಿಕ್ ತರಹದ ಹಲವು ಸೇವೆಗಳ ಜೊತೆಗೆ ಮೆಂಟಲ್ ಹೇಲ್ತ್ ಕೇರ್ ಸೇವೆ ಕೂಡ ಲಭ್ಯವಿದೆ. ಟ್ರೈನಿಂಗ್ ಎಂಡ್ ಡೆವಲಪ್ಮೆಂಟ್ ವಿಂಗ್​ನಲ್ಲಿ ತಂದೆ-ತಾಯಿ, ಶಿಕ್ಷಕರು, ವಿದ್ಯಾರ್ಥಿಗಳು, ಮತ್ತು ಸಾಮಾಜಿಕ ಸಂಘಟನೆಗಳಿಗೆ ಜ್ವಲಂತ ವಿಷಯಗಳ ಬಗ್ಗೆ ಕಾರ್ಯಗಾರ ಆಯೋಜಿಸುತ್ತಾರೆ. ಮೂರನೇ ವಿಂಗ್​ನಲ್ಲಿ ಅಕಾಡೆಮಿ ಪ್ಲೇ ಥೇರಪಿ, ಬೆಹೆವಿಯರ್ ಮೆಡಿಫಿಕೆಶನ್, ಸ್ಪೆಸಿಫಿಕ್ ಲರ್ನಿಂಗ್ ಡಿಸಾರ್ಡರ್ಸ್ ಮುಂತಾದ ವಿಷಯಗಳ ಕುರಿತು ಬೇಸಿಕ್ ಕೌನ್ಸಲಿಂಗ್ ಕೋರ್ಸ್​ಗಳ ಜೊತೆ-ಜೊತೆಗೆ ಶಾರ್ಟ್ ಟರ್ಮ್ ಕೋರ್ಸ್​ಗಳನ್ನು ಇಲ್ಲಿ ಹೇಳಿಕೊಡಲಾಗುತ್ತಿದ್ದು, ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿದೆ. ನಾಲ್ಕನೇ ವಿಂಗ್ ಎಂದರೆ ಮೈಂಡ್ ಸ್ಪೀಕ್ ವಿಂಗ್. ಇದೊಂದು ತೆರೆದ ವೇದಿಕೆ ಇಲ್ಲಿ ಸಂಬಂಧಪಟ್ಟ ವಿಷಯಗಳ ಬಗ್ಗೆ ಸ್ಪೀಕ್-ಫ್ರೀ ಸೆಶನ್​ಗಳ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಬದುಕಿನ ಎಲ್ಲ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಒಟ್ಟಾಗಿ, ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ಮತ್ತು ಅವರ ಅನುಭವವನ್ನು ಹಂಚಿಕೊಳ್ತಾರೆ.

ಮೀನು ಅವರು ಹೇಳುವಂತೆ "‘ಆ್ಯಡ್​​​ಲೈಫ್​​ ಕೇರಿಂಗ್ ಮೈಂಡ್ಸ್’ನಲ್ಲಿ ಅವರು ಐದನೇ ವಿಂಗ್ ಪರಿಚಯಿಸಲು ಹೋರಾಟಿದ್ದಾರೆ. ಇದರ ಹೆಸರು ‘ಐ ಕ್ಯಾನ್ ಫ್ಲೈ’ ಎಂದು. ಇದರಲ್ಲಿ ಯಂಗ್ ಸ್ಪೆಷಲ್​​​ ನೀಡ್ಸ್ ವಯಸ್ಕರಿಗೆ ಯೊಸ ಯೋಜನೆ ರೂಪಿಸಿದ್ದು. ಅವರನ್ನು ಮಾತಿನಿಂದ ಪ್ರೇರೇಪಿಸುವಂತಹ ಕೆಲಸವನ್ನು ಮಾಡುತ್ತೇವೆ. ಅವರು ಸಹ ಬೇಕಾದನ್ನು ಮಾಡಬಹುದು. ಅವರ ಸಮಾಜದಲ್ಲಿ ಎಲ್ಲರಂತೆ ಸಮಾನರು. ಅವರು ಚೇತರಿಕೆಯಾದ್ರೆ. ಎಲ್ಲರಂತೆ ಅವರು ಬದುಕಬಲ್ಲರು ಎಂದು ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಇದಾಗಿದೆ. ಇದರಿಂದ ಅವರು ಮನೆಗೆ ಹೋದಮೇಲೆ ಆನ್ಲೈನ್ ಕೆಲಸ ಮಾಡಬಹುದು. ಜೊತೆಗೆ ಸಣ್ಣ-ಪುಟ್ಟ ವಸ್ತುಗಳನ್ನು ತಯಾರಿಸುವಂತಹ ಕೆಲಸವನ್ನು ಅವರು ಮಾಡಬುಹುದು. ಅವರ ಮುಖದ ಮೇಲೇ ನಗು ತರುವಂತಹ ಪ್ರಯತ್ನ ನಮ್ಮದಾಗಿದೆ ಎಂತಾರೆ"..

I can fly ಗುರಿ 15 ವರ್ಷ ಮೇಲ್ಪಟ್ಟ ವಿಶೇಷ ಮಕ್ಕಳ ಅಭಿರುಚಿಯನ್ನು ತಿಳಿದು. ಅವರಿಗೆ ಇಷ್ಟದ ಕ್ಷೇತ್ರದಲ್ಲಿ ಉದ್ಯೋಗ ಕೊಡಿಸುವುದು ಅವರ ಭವಿಷ್ಯ ರೂಪಿಸುವುದಾಗಿದೆ. ಇದು ಅವರನ್ನು ಕೇವಲ ಆರ್ಥಿಕವಾಗಿ ಸಧೃಡ ಮಾಡುವುದಷ್ಟೇ ಅಲ್ಲ ಸ್ಫರ್ಧಾತ್ಮಕ ಜಗತ್ತಿನಲ್ಲಿ ಸ್ವತಂತ್ರ್ಯವಾಗಿ ಬದುಕುವ ಕಲೆಯನ್ನು ಕಲಿಸುತ್ತದೆ.

ಮೀನು ಹೇಳುವಂತೆ "ಅವರಿಗಾಗಿ ಒಂದು ವಿಶೇಷ ಕರಿಕುಲಮ್ ತಯಾರಿಸಿದ್ದಾರೆ. ಹಾಗಾಗಿ 15 ವರ್ಷ ಮೇಲ್ಪಟ್ಟ ವಿಶೇಷ ಮಕ್ಕಳ ಸ್ವ-ವಿವರ ಇದಾಗಿದೆ. ಅವರು ನಿಧಾನವಾಗಿ ತಮ್ಮ ಆಸಕ್ತಿಯ ಕೆಲಸ ಮಾಡುವುದರ ಜೊತೆಗೆ ನಮ್ಮ ಯುನಿಟ್​ನ ಒಂದು ಭಾಗವಾಗಿ ಕೆಲಸ ಮಾಡಬಹುದು. ಇಲ್ಲ ಅವರದೇಯಾದ ಸ್ವಂತ ಉದ್ಯಮ ಆರಂಭಿಸಬಹುದು. ಇಲ್ಲಿ ಟೀಚರ್ ಮತ್ತು ಇನ್ಸ್ಟ್ರಕ್ಟರ್ ಅವರ ವೇಗವನ್ನು ಅರಿತು ಅವರ ವೇಗಕ್ಕೆ ತಕ್ಕಂತೆ ಅವರ ಸ್ಕಿಲ್ ಅಭಿವೃದ್ಧಿಗೊಳಿಸುವಂತಹ ಕೆಲಸದಲ್ಲಿ ಅವರಿಗೆ ಸಹಾಯ ಮಾಡುತ್ತಾರೆ. ಅವರು ಬೇಗ ಕಲಿಯುವಂತಹ ವಾತಾವರಣ ಇಲ್ಲಿ ಸೃಷ್ಟಿಸುತ್ತಾರೆ".

ಐ ಕ್ಯಾನ್ ಫ್ಲೈ ಕೇವಲ ಇವರಿಗೆ ಸ್ಕಿಲ್ ಬಿಲ್ಡಿಂಗ್ ವೇದಿಕೆ ಒದಗಿಸುವುದಿಲ್ಲ, ಈ ವಿಶೇಷ ಮಕ್ಕಳ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಕೆಲಸ ಮಾಡುತ್ತದೆ.

ಮೀನು ತಮ್ಮ ಆ್ಯಡ್​​ಲೈಫ್​​ ಕೇರಿಂಗ್ ಮೈಂಡ್ಸ್ ಸಂಸ್ಥೆಯನ್ನು ವಿಸ್ತಾರಗೊಳಿಸುತ್ತಿದ್ದಾರೆ. ಇದರಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಇಂದು ಅವರ ಮುಖದಲ್ಲಿ ಗೆಲುವಿನ ನಗುವಿದೆ. ಮೀನು ಅವರ ದೊಡ್ಡ ಮಗಳು ಕೂಡ ಮೀನು ಅವರ ಈ ಮಿಶನ್​ನಲ್ಲಿ ಕೈ ಜೋಡಿಸಿದ್ದಾರೆ.

ಮೀನು ಅವರ ಎರಡನೇ ಮಗಳು ಪ್ರಾಚಿ ಈಗ ತುಂಬಾ ಸುಧಾರಿಸಿಕೊಂಡಿದ್ದಾರೆ. ಹೆಚ್ಚು ಸಂವೇಧನಶೀಲರಾಗಿದ್ದಾರೆ. "ಆ್ಯಡ್​ಲೈಫ್​ನಿಂದಾಗಿ ಅವರು ಈ ರೀತಿ ಜಾಗರೂಕರಾಗಲು ಸಾಧ್ಯವಾಯ್ತು ಎಂತಾರೆ ಮೀನು".

"ದೇವರು ಏನ್ ಮಾಡಿದ್ರು ಅದರ ಹಿಂದೆ ಏನದ್ರೂ ಒಂದು ಬಲವಾದ ಉದ್ದೇಶವಿರುತ್ತದೆ. ಪ್ರಾಚಿಯ ಮುಖಾಂತರ, ನನಗೆ ಸಮಾಜ ಸೇವೆ ಮಾಡಲು ಆ ಭಗವಂತ ಪ್ರೇರೇಪಿಸಿದ. ನನ್ನ ಕನಸು ಈಗ ವಿಶಾಲವಾಗಿದೆ. ಆ ದೇವರಿಗೆ ಒಂದು ಧನ್ಯವಾದ ಹೇಳಿ", ಮೀನು ತಮ್ಮ ಮಾತು ಮುಗಿಸುತ್ತಾರೆ.


ಲೇಖಕರು: ಸಾಹಿಲ್

ಅನುವಾದಕರು: ಎನ್.ಎಸ್ ರವಿ