ಕಾಡಿನ ಗುಹೆಯೊಳಗೆ ಡಿನ್ನರ್ ಪಾರ್ಟಿ...

ವಿಸ್ಮಯ

0

ನೀವು ಯಾವುದಾದರೂ ರೆಸ್ಟೋರೆಂಟ್ ಅಥವಾ ಹೋಟೆಲ್ ಗಳಿಗೆ ಹೋದರೆ ನಿಮ್ಮನ್ನ ಅಚ್ಚುಕಟ್ಟಾಗಿ ಯುನಿಫಾರ್ಮ್ ಹಾಕಿರೋ ಸಿಬ್ಬಂದಿಗಳು ನಿಮ್ಮನ್ನ ಸ್ವಾಗತಿಸುತ್ತಾರೆ. ಆದರೆ ಇಲ್ಲೊಂದು ಹೋಟೆಲ್ ತುಂಬಾ ಸ್ಪೆಷಲ್. ತಮ್ಮ ಹೊಸ ಐಡಿಯಾಗಳಿಂದ ಜನರಿಗೆ ಹೊಸ ಅನುಭವವನ್ನು ನೀಡುತ್ತಿದೆ.  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಇಂತಹುದೊಂದು ಸ್ಪೆಷಲ್ ಹೋಟೆಲ್ ಇದೆ. ಅರೇ ಯಾವ ಹೋಟೆಲ್ ಅಂತ ಯೋಚನೆ ಮಾಡತ್ತಿದ್ದೀರಾ ಅದೇ ಗುಫಾ ರೆಸ್ಟೋರೆಂಟ್. ಏನಿದು ಗುಫಾ ರೆಸ್ಟೋರೆಂಟ್ ಅಂತ ನಿಮಗೆ ಆಶ್ಚರ್ಯವಾಗಬಹುದು. ಹೆಸರು ಇಷ್ಟು ವಿಚಿತ್ರವಾಗಿದೆ ಅಂದ್ರೆ ಇನ್ನು ರೆಸ್ಟೋರೆಂಟ್ ಹೇಗೆ ಇರಬಹುದು ಅಂತ ಕುತೂಹಲ ಮೂಡಿರಬೇಕು ಅಲ್ವಾ..

ಬೆಂಗಳೂರಿನ ಜಯನಗರದಲ್ಲಿರೋ ಗುಫಾ ರೆಸ್ಟೋರೆಂಟ್ ಗೆ ನೀವೆನಾದ್ರೂ ಹೋದರೆ ನಿಮ್ಮನ್ನ ಕಾಡು ಜನಾಂಗದ ವೇಷಧಾರಿ ಸ್ವಾಗತ ಕೋರುತ್ತಾನೆ. ಇದು ನಿಜಕ್ಕೂ ಒಮ್ಮೆ ಭಯ ಪಡಿಸಿದ್ರು, ಬಂದವರಿಗೆ ಖುಷಿ ನೀಡುತ್ತೆ. ಇದು ಆರಂಭದ ಕುತೂಹಲ.. ಮತ್ತೊಂದು ಒಳಗಿನ ಒಳಾಂಗಣದಲ್ಲಿನ ನೋಟ ನಿಜಕ್ಕೂ ಇಂಟ್ರಸ್ಟಿಂಗ್ ಆಗಿರುತ್ತೆ. ಒಳಾಂಗಣಕ್ಕೆ ಎಂಟ್ರಿ ಕೊಟ್ಟರೆ ನಿಮ್ಮನ್ನ ಕಾಡಿನ ಗುಹೆಯೊಳಗೆ ಇರುವ ಹಾಗೇ ಇಡೀ ವಾತಾವರಣ ಸೃಷ್ಟಿ ಮಾಡಲಾಗಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಗಳ ವೇಷಭೂಷಣಗಳು ಕೂಡ ಹೊಸ ರೀತಿಯ ಅನುಭವಕ್ಕೆ ಸಾಕ್ಷಿ ಆಗುತ್ತೆ. ಹೌದು ದಿ ಪ್ರೆಸೆಂಟ್ ಹೊಟೇಲ್ ನ ಗುಫಾ ಅನ್ನೋ ಹೊಸ ಆಲೋಚನೆಯೇ ಡಿಫರೆಂಟ್ ಹೆಸರಿನಲ್ಲಿ ಆರಂಭವಾಗಿದೆ..ಕಳೆದ ಹತ್ತು ವರ್ಷಗಳಿಂದ ಸಿಟಿ ಮಧ್ಯೆ ಈ ಹೋಟೆಲ್ ಇದ್ದು ಎಲ್ಲರನ್ನು ಆಕರ್ಷಿಸುತ್ತಿದೆ..

"ಗುಫಾ ಅಂದ್ರೆ ಗುಹೆ ಅನ್ನೋದು ನಿಮಗೆ ಗೊತ್ತಿರೋ ವಿಷಯನೇ..ಸ್ವಲ್ಪ ಕತ್ತಲು, ಸಣ್ಣ ಬೆಳಕು ಜೊತೆಗೆ ವಿಭಿನ್ನವಾಗಿರೋ ಚಿತ್ರ ವಿಚಿತ್ರ ವಿನ್ಯಾಸದ ಕಲಾಕೃತಿಗಳು ಒಳಗೊಂಡಿದೆ.ಇದಕ್ಕೆ ಜನ್ರು ಶಹಬಾಷ್ ಹೇಳಿದ್ದಾರೆ.ಇನ್ನು ಈ ಕಾಂಕ್ರಿಟ್ ಕಾಡಿನಲ್ಲಿರುವ ವಿಶೇಷವಾದ ಗುಹೆ ಹೋಟೆಲ್. ಕ್ಯಾಂಡಲ್ ಲೈಟ್ ಡಿನ್ನರ್ ಗಾಗಿ ಇದು ಒಳ್ಳೆಯ ಪ್ಲೇಸ್ ಅನ್ನೋದರಲ್ಲಿ ಎರಡು ಮಾತಿಲ್ಲ"
                                                      - ಸುರೇಶ್, ಗ್ರಾಹಕ

ಇನ್ನು ಗುಹೆಯೊಳಗೆ ಊಟ ಮಾಡುವುದೇ ವಿಭಿನ್ನವಾಗಿದೆ..ಕಲ್ಲು ಬಂಡೆಗಳ ನಡುವೆ ಕುಳಿತು, ಕಡಿಮೆ ಬೆಳಕಿನ ನಡುವೆ ಊಟದ ಸವಿ ನಿಜಕ್ಕೂ ವಾರೇವ್ಹಾ ಅನ್ನಿಸದೇ ಇರೋಲ್ಲ ಬಿಡಿ ಅಂತಾರೆ ಸೋನಿಯಾ..ನಾನು ವ್ಯಾಲೈಂಟೇನ್ಸ್ ಮತ್ತು ಸ್ಪೆಷಲ್ ದಿನಗಳಲ್ಲಿ ಇಲ್ಲಿಗೆ ಬರುತ್ತೇನೆ ನಿಜಕ್ಕೂ ಥ್ರೀಲಿಂಗ್ ಆಗಿ ಇರುತ್ತೆ ಅಂತಾರೆ ಅವರು. ಜೊತೆಗೆ ಫ್ರೇಂಡ್ಸ್ ಜೊತೆ ಬಂದಾಗ ಅವರಿಗೂ ಇಷ್ಟ ಆಗುತ್ತೆ.. ಫ್ಯಾಮಿಲಿ ಫ್ರೆಂಡ್ಸ್ ಎಲ್ಲದಕ್ಕೂ ಸರಿಯಾಗಿದೆ ಅಂತಾರೆ ಸೋನಿಯಾ..

ಗುಫಾದ ಇನ್ ಸೈಡ್ ಸ್ಟೋರಿ ಏನು?

ಮೇಲಿನವು ಗುಫಾದ ಅಂದ ಚೆಂದದ ಸ್ಟೋರಿ ಆದರೆ, ಇನ್ನು ಇಲ್ಲಿ ಸಿಗುವ ಊಟ ಕೂಡ ವಿಭಿನ್ನವಾಗಿದೆ..ನೀವು ಕುಳಿತುಕೊಳ್ಳವ ಟೇಬಲ್ ಕೂಡ ಭಿನ್ನವಾಗಿದೆ. ಟೈಗರ್ ಟೇಬಲ್ ಗಳನ್ನು ಒಳಗೊಂಡಿದ್ದು ಇದು ಎಲ್ಲರನ್ನು ಆಕರ್ಷಿಸುತ್ತಿದೆ. ಬಂಡೆಯ ಗೋಡೆಗಳಲ್ಲಿ ಹಾವು, ಮರದ ಮೇಲೆ ಕುಳಿತ ಗುಬೆ, ಜೇಡರ ಭಲೇ ಇವೆಲ್ಲವೂ ಇನ್ ಸೈಡ್ ನಲ್ಲಿದೆ...

ಇದನ್ನು ಓದಿ: ಮಕ್ಕಳಿಗಾಗಿ ನಗರದಲ್ಲಿ ಮೈಂಡ್ ಗೇಮ್ಸ್ ಅರಮನೆ

ಗುಫಾದ ಫುಡ್ ಹೇಗೆ..?

ಇನ್ನು ಗುಫಾದ ಫುಡ್ ಕೂಡ ಸಖತ್ ಇಂಟ್ರಸ್ಟಿಂಗ್ ಆಗಿದೆ..ಗುಫಾ ಹೆಸರಂತೆ ಇಲ್ಲಿನ ಮೆನು ಕೂಡ ಹೊಸದಾಗಿದೆ.. ಬೆಂಗಳೂರಿಗೆ ಹೊಸ ಊಟದ ಪರಿಚಯ ಮಾಡಿಕೂಡುವ ಉದ್ದೇಶದಿಂದ ಆಫ್ಘಾನೀಸ್ತಾನ್ ಮತ್ತು ಪಾಕಿಸ್ತಾನದ ವಿಶೇಷ ತಿಂಡಿಗಳನ್ನು ತಯಾರು ಮಾಡಲಾಗುತ್ತೆ.. ಬಾಯಲ್ಲಿ ನೀರೂರಿಸುವ ಈ ತಿಂಡಿಗಳನ್ನು ಸವಿಯಲು ಬೇರೆ ಬೇರೆ ರಾಜ್ಯದಿಂದ ಬರುತ್ತಾರೆ ಅಂತಾರೆ ಗುಫಾ ಹೋಟೆಲ್ ನ ಶಫ್ ಮೋಹನ್ ರಾಜ್ಯ. 

ಇನ್ನು ಪೇಷವರಿ ಮೂರ್ಗ್, ಆಫ್ಘಾನ್ ಧಮ್ ಬಿರಿಯಾನಿ, ರೂಜುವಾಲಿ ಕಬಾಬ್, ಪಹಾಡಿ ಕಬಾಬ್ ಹೀಗೆ ವಿಶೇಷ ಹೆಸರಿನ ಈ ತಿನ್ನಿಸುಗಳು ಎಲ್ಲರಿಗೂ ಇಷ್ಟವಾಗುತ್ತೆ ಅಂತಾರೆ ಅವರು.. ಮತ್ತೆ ಮತ್ತೆ ನೆನಪು ಮಾಡುತ್ತೆ...ಇಲ್ಲಿ ನಿಮಗೆ ಊಟ ಬಡಿಸುವವರು ಬೇಟೆ ಆಡುವ ಸಿಬ್ಬಂದಿ ವೇಷಧಾರಿಗಳೇ...ನಿಮಗೆ ಬೇಕಾದ ಎಲ್ಲವನ್ನು ಪ್ರೀತಿಯಿಂದ ಸರ್ವ್ ಮಾಡತ್ತಾರೆ...

ನಾನ್ ವೆಜ್ ಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ಜಾಗ. ಡಿಫರೆಂಟ್​​ ರೀತಿಯಲ್ಲಿ ಬೆಂಗಳೂರು ಸೌಥ್ ಭಾಗದಲ್ಲಿ ಈ ಹೋಟೆಲ್ ನಿರ್ಮಾಣ ಮಾಡಲಾಗಿದೆ ಅಂತಾರೆ ಮ್ಯಾನೇಜರ್ ಜಯಪ್ರಕಾಶ್. ಕೇರಳದಿಂದ ವಿನ್ಯಾಸಗಾರನ್ನು ಕರೆಸಿ ಮಾಡಲಾಗಿದೆ. ಸಂಜೆ ಆದ್ರೆ ಸಾಕು ಇಲ್ಲಿ ತುಂಬಾ ಕ್ರೌಡ್ ಇರುತ್ತೆ ಅಂತಾರೆ.. ಇಲ್ಲಿ ಬಳಸುವ ಪಾತ್ರೆಯಿಂದ ಸಿಬ್ಬಂದಿಗಳವರೆಗೂ ಎಲ್ಲವೂ ವಿಶೇಷವಾಗಿ ಇರಬೇಕು ಅನ್ನೋದು ನಮ್ಮ ಆಶಯ ಅಂತಾರೆ ಜಯಪ್ರಕಾಶ್. ಇನ್ನು ಇಲ್ಲಿಗೆ ಬಂದವರು ಎಲ್ಲರೂ ಕೂಡ ಸೆಲ್ಪಿ ತೆಗೆದುಕೊಂಡು ಹೋಗದೇ ಇರೋಲ್ಲ..ಅಷ್ಟು ಖುಷಿಯಾಗಿ ಹೋಗುತ್ತಾರೆ ಅಂತಾರೆ. ಅದೇನೆ ಹೇಳಿ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂತಹದೊಂದು ಹೊಸ ಹೋಟೆಲ್ ಜನರಿಗೆ ಖುಷಿ ನೀಡುತ್ತಿರೋದಂತು ಸತ್ಯ.

ಇದನ್ನು ಓದಿ

1. ಮುಂಬೈ ಮಹಾನಗರಿಯಲ್ಲಿ ಶಬ್ದಮಾಲಿನ್ಯ, ಮರಳುಗಾರಿಕೆ ವಿರುದ್ಧ ಸಿಡಿದೆದ್ದ ದಿಟ್ಟೆ..!

2. ಒಂದು ‘ಚಿಪ್ಸ್'ನ ಕಥೆ.. ಹಳ್ಳಿಯಿಂದ ಮೆಟ್ರೋವರೆಗೆ ಹಬ್ಬಿದ ಸ್ವಾದ.. !

3. ಏನನ್ನೂ ಮಾಡದೇ ಒಂದೇ ದಿನದಲ್ಲಿ 6 ಕೋಟಿ ಗಳಿಸೋದು ಹೇಗೆ?

Related Stories

Stories by YourStory Kannada