ಕರಕುಶಲ ಕರ್ಮಿಗಳಿಗೆ ಮತ್ತು ಕಲಾವಿದರಿಗೊಂದು ವೇದಿಕೆ `ಗುರ್‍ಗಾವ್‍ನ ವರ್ಲ್ಡ್​​ ಆರ್ಟ್ ಕಮ್ಯೂನಿಟಿ'

ಟೀಮ್​ ವೈ.ಎಸ್​. ಕನ್ನಡ

0


ಜೀವನದಲ್ಲಿ ವಿಶೇಷವಾಗಿ ಏನನ್ನಾದರೂ ಸಾಧಿಸಬೇಕು ಅಂತ ಯಾವುದೋ ಒಂದು ಸಂದರ್ಭದಲ್ಲಿ ನಮಗೆಲ್ಲರಿಗೂ ಅನ್ನಿಸಿರೋದು ಖಂಡಿತ. ಹೀಗಾಗಿ, 5 ವರ್ಷಗಳ ಹಿಂದೆ, ಜನಜೀವನದಲ್ಲಿ ಕೊಂಚ ಬದಲಾವಣೆ ತರುವ ವಿಚಾರದಲ್ಲಿ, ಶೋಭಿತ್ ಅರೋರ್ ಸಹ ಇದೇ ಭಾವನೆ ಹೊಂದುತ್ತಾರೆ. ಹಾಗೇ ಕಲಾತ್ಮಕ ಸೌಂದರ್ಯ ಮತ್ತು ಡಿಸೈನ್‍ಗಳ ಮೂಲಕ ಈ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ.

ಇದು "ಮೈ ಚಾಯ್ಸ್"

ಆದರೆ ಶೋಭಿತ್‍ಗೆ ತಮ್ಮ ಕಾರ್ಪೋರೇಟ್ ಜಾಬ್ ಮತ್ತು ಉದ್ಯಮ ಬಿಟ್ಟು ಹೊಸ ಕ್ಷೇತ್ರಕ್ಕೆ ಕಾಲಿಡುವುದು ಅಷ್ಟು ಸುಲಭದ ನಿರ್ಧಾರವಾಗಿರಲಿಲ್ಲ. ಈ ಬಗ್ಗೆ ಹಲವು ಸಂಶೋಧನೆಗಳನ್ನು ಮಾಡಲು ಮತ್ತು ಈ ಕಲ್ಪನೆಯನ್ನು ಮೌಲ್ಯೀಕರಿಸಲು ಹಲವು ರಾತ್ರಿಗಳು, ವೀಕೆಂಡ್‍ಗಳೂ ಸೇರಿ ಒಂದು ವರ್ಷವೇ ಬೇಕಾಯಿತು. ಇಂಟರ್‍ನ್ಯಾಷನಲ್ ಮಾರ್ಕೆಟ್‍ಗಳು ಮತ್ತು ಇರುವ ಟ್ರೆಂಡ್‍ಗಳ ಬಗ್ಗೆ ಅಧ್ಯಯನ ನಡೆಸಲು, ಕಲಾವಿದರನ್ನು ಮತ್ತು ಡಿಸೈನರ್ಸ್‍ಗಳನ್ನು ಖುದ್ದಾಗಿ ಭೇಟಿ ಮಾಡಲು ಇವರು ಬಹಳಷ್ಟು ಸಮಯವನ್ನು ವಿನಿಯೋಗಿಸಿದ್ದರು. ಒಂದೆಡೆ, ಇದೊಂದು ಜಾಗತಿಕವಾಗಿ ಸಾಬೀತಾಗಿರುವ ಉತ್ತಮ ಕಲೆಯಾಗಿದ್ದರೆ, ಮತ್ತೊಂದೆಡೆ ದೇಶದಲ್ಲಿ ಸೋಷಿಯಲ್ ಕಾಮರ್ಸ್ ಮಾಡೆಲ್‍ನ ಅವಶ್ಯಕತೆಯಿತ್ತು. ಒಂದು ವರ್ಷದ ಸಂಶೋಧನೆಯ ನಂತರ, ಅವರು ಈ ವಿಭಾಗದಲ್ಲಿರುವ ಅಸಾಧಾರಣ ಅವಕಾಶದ ಬಗ್ಗೆ ವಿಶ್ವಾಸ ಹೊಂದಿದರು.

ಕಲೆಯ ಬಲೆಯೊಳಗೆ

ಕಲಾತ್ಮಕ ಸೃಷ್ಟಿಗಳಿಗೆ ವ್ಯಾಪಕ ಮಾಧ್ಯಮಗಳು ಹಾಗೂ ಸಾಮಗ್ರಿಗಳನ್ನೊಳಗೊಂಡ ಉತ್ತಮ ಆನ್‍ಲೈನ್ ಮಾರುಕಟ್ಟೆಯಾದ `ವರ್ಲ್ಡ್​ ಆರ್ಟ್ ಕಮ್ಯೂನಿಟಿ'ಯನ್ನು ಡಿಸೆಂಬರ್ 2014ರಲ್ಲಿ ಶೋಭಿತ್ ಆರಂಭಿಸಿದರು. ಗುರ್‍ಗಾವ್ ಮೂಲದ ಈ ಸಂಸ್ಥೆಯು ಕಲಾ ಉತ್ತೇಜಕರನ್ನು ಕರಕುಶಲ ಕರ್ಮಿಗಳೊಂದಿಗೆ ಸಂಪರ್ಕ ಕಲ್ಪಿಸಿ ಸೌಂದರ್ಯ ಮತ್ತು ಸಂತೋಷವನ್ನು ಆಸ್ವಾದಿಸುವಿಕೆಯನ್ನು ಹೆಚ್ಚಿಸುತ್ತಿದೆ ಮತ್ತು ಸ್ಥಳೀಯತೆಯನ್ನು ಶ್ರೀಮಂತಗೊಳಿಸುತ್ತಿದೆ.

ಬ್ಯುಸಿನೆಸ್ ಒಂದು "ಕಲೆ"

ವರ್ಲ್ಡ್​ ಆರ್ಟ್ ಕಮ್ಯೂನಿಟಿಯ ಸಿಇಒ ಮತ್ತು ಸಹಸಂಸ್ಥಾಪಕರಾದ ಶೋಭಿತ್ ಅರೋರ ಅವರೇ ಹೇಳುವಂತೆ, "ಇದೊಂದು ಮಾರಾಟಗಾರರು ಮತ್ತು ಗ್ರಾಹಕರ ನಡುವಿನ ಸಮಾನ ವೇದಿಕೆಯಾಗಿದೆ. ಇಲ್ಲಿ ಆರ್ಟಿಸ್ಟ್​ಗಳು ಮತ್ತು ಡಿಸೈನರ್ಸ್‍ಗಳು ತಮ್ಮ ಹೆಸರನ್ನು ನೋಂದಾಯಿಸಿ ತಮ್ಮ ವಸ್ತುಗಳನ್ನು ಆನ್‍ಲೈನ್‍ನಲ್ಲಿ ಮಾರಾಟಮಾಡಲು ಸಿಂಪಲ್ ಆಗಿ ವೆಬ್‍ಸೈಟ್‍ನಲ್ಲಿ ಸೈನ್‍ಇನ್ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ನಮ್ಮ ಡಿಸೈನ್ ಟೀಮ್‍ನಲ್ಲಿರುವವರು ನೋಡಿಕೊಳ್ಳುತ್ತಾರೆ. ರಿಜಿಸ್ಟ್ರೇಷನ್‍ಗೆ ಒಂದು ಸಾರಿ ಅವರ ಒಪ್ಪಿಗೆ ದೊರೆತ ನಂತರ, ಮಾರಾಟಗಾರರು ತಮ್ಮ ಮಾರಾಟ ವ್ಯಾಪ್ತಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು".

ಫ್ರೀ ಎಂಟ್ರಿ

ಈ ವೇದಿಕೆಯು ಲೈಫ್‍ಸ್ಟೈಲ್ ಕ್ರಿಯೇಷನ್ಸ್ ವಲಯದಲ್ಲಿ ಕಾರ್ಯನಿರ್ವಹಿಸುತ್ತದೆ. ಅದು ಲಲಿತ ಕಲೆ, ಫ್ಯಾಷನ್​​ ಅಥವಾ ಅಲಂಕಾರವೇ ಇರಬಹುದು. "ಆರ್ಟಿಸ್ಟ್​ಗಳು ಹಾಗೂ ಡಿಸೈನರ್ಸ್‍ಗಳು ನಮ್ಮಲ್ಲಿ ಮಾರಾಟ ಮಾಡಲು ಯಾವುದೇ ಹಣ ತೆರಬೇಕಾಗಿಲ್ಲ. ಇದು ಅವರ ಉತ್ಪನ್ನಗಳನ್ನು ಅಪ್‍ಲೋಡ್ ಮಾಡಲು, ಶಾಪ್‍ಗಳ ಅಭಿವೃದ್ಧಿ ಹಾಗೂ ಅವುಗಳ ಮೇಲೆ ಬೆಲೆ ನಿಗದಿಪಡಿಸಿ, ಇಡೀ ಡ್ಯಾಷ್‍ಬೋರ್ಡ್‍ನ್ನು ಪ್ರವೇಶ ಮಾಡಲು ಸಕ್ರಿಯಗೊಳಿಸುತ್ತದೆ. ಅಷ್ಟೇ ಅಲ್ಲ, ಮಾರಾಟಗಾರರು ತಮ್ಮ ಶಾಪ್‍ಗಳೊಂದಿಗೆ ಸಾಮಾಜಿಕ ಮಾಧ್ಯಮ ನಿರ್ವಹಣೆ ಒಳಗೊಂಡಂತೆ ತನ್ನ ಆನ್‍ಲೈನ್ ಲಿಂಕ್‍ನ್ನು ವರ್ಲ್ಡ್​ಆರ್ಟ್ ಕಮ್ಯೂನಿಟಿಯೊಂದಿಗೆ ಪ್ರಸ್ತುತಪಡಿಸಬಹುದು. ಅವರು ಕೆಲವು ಆಯ್ದ ಗ್ರಾಹಕರಿಗೆ ತಮ್ಮ ವಸ್ತುಗಳ ಮೇಲೆ ರಿಯಾಯಿತಿ ನೀಡಲು ಇಚ್ಛಿಸಿದಲ್ಲಿ ಅದಕ್ಕೂ ನಾವು ಅವಕಾಶ ನೀಡುತ್ತೇವೆ. ನಾವು ಅವರಿಗೆ ವ್ಯಾಪಕವಾದ ಬೆಲೆ ಅಂಕಗಳನ್ನು ಪೂರೈಸುತ್ತೇವೆ. ಇದು ಗ್ರಾಹಕರ ಹಣಕ್ಕಿಂತ ಅಭಿರುಚಿಗೆ ಸಂಬಂಧಿಸಿದ ವಿಚಾರವಾಗಿದೆ. ನಿಜ ಹೇಳಬೆಂಕೆಂದ್ರೆ, ಇಲ್ಲಿ ಕಲಾವಿದರು ಮತ್ತು ಡಿಸೈನರ್ಸ್‍ಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದರಿಂದ, ಗ್ರಾಹಕರು ನೇರ ಬೆಲೆಯ ಪ್ರಯೋಜನ ಪಡೆಯುತ್ತಾರೆ" ಎನ್ನುತ್ತಾರೆ ವರ್ಲ್ಡ್​ ಆರ್ಟ್ ಕಮ್ಯೂನಿಟಿಯ ಸಿಒಒ ಮತ್ತು ಸಹಸಂಸ್ಥಾಪಕ ಎಸ್‍ಕೆ ಅಪ್ಪಚ್ಚು.

ಈ ವೇದಿಕೆಯ ಕಮೀಷನ್ ಆದರಿಸಿದ ಆದಾಯ ಮಾದರಿ ಹೊಂದಿದೆ. ಇದು ಪ್ರತಿಯೊಂದು ವ್ಯವಹಾರದ ಶೇ.10 ಭಾಗ ಕಮೀಷನ್ ಶುಲ್ಕ ಪಡೆಯುತ್ತದೆ. ಈ ವ್ಯವಹಾರದಲ್ಲಿ ಆರಂಭದಲ್ಲಿ ವಿಫಲವಾಗಿದ್ದ ವೇದಿಕೆಯ ಹಣಕಾಸಿನ ವ್ಯವಹಾರ ಏಪ್ರಿಲ್ 2015ರಲ್ಲಿ ಯುಎಸ್‍ಡಿ 200,000ಕ್ಕೇರಿದೆ. ಇದು ಸಾಧ್ಯವಾದದ್ದು, ಸರಣಿ ಉದ್ಯಮಿ ಹಾಗೂ ಹೂಡಿಕೆದಾರರಾದ ವಿರಾಜ್‍ತ್ಯಾಗಿ ಅವರ ನೇತೃತ್ವದಲ್ಲಿ.

ಮಾರುಕಟ್ಟೆ ಹಾಗೂ ಸ್ಪರ್ಧೆ

ಭಾರತ ವಾರ್ಷಿಕವಾಗಿ ಸುಮಾರು 5,000 ಮಿಲಿಯನ್ ಕಲೆ ಮತ್ತು ಕರಕುಶಲ ಉತ್ಪನ್ನಗಳನ್ನು ರಪ್ತು ಮಾಡುತ್ತದೆ. ಇದು, ಈ ವಿಭಾಗದ ಸಾಮರ್ಥ್ಯ ಬಗ್ಗೆ ಅರ್ಥೈಸುತ್ತದೆ.

ಇತರ ಕರಕುಶಲ ವಸ್ತುಗಳ ಮಾರಾಟ ಸಂಸ್ಥೆಗಳಲ್ಲಿ ಕ್ರಾಫ್ಟ್ಸ್​ವಿಲ್ಲಾ , ಇಂಡಿಯನ್‍ರೂಟ್ಸ್, ಸಿಬಜಾರ್, ಉತ್ಸವ್ ಫ್ಯಾಷನ್ ಮತ್ತು ನಮಸ್ತೆ ಕ್ರಾಫ್ಟ್​ವರ್ಲ್ಡ್​ ಆರ್ಟ್ ಕಮ್ಯೂನಿಟಿಗೆ ನೇರ ಸ್ಪರ್ಧಿಗಳಾಗಿವೆ. ಇದರೊಂದಿಗೆ, ಬಹಳಷ್ಟು ಇ-ಕಾಮರ್ಸ್ ಪ್ಲಾಟ್‍ಫಾರ್ಮ್‍ಗಳು ಈ ವಿಭಾಗಕ್ಕೆ ಉತ್ಪನ್ನಗಳನ್ನು ಪೂರೈಸುತ್ತಿವೆ. ಈ ವರ್ಷದ ಆರಂಭದಲ್ಲಿ, ಕಲಾವಿದರು ಆನ್‍ಲೈನ್ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಫ್ಲಿಪ್‍ಕಾರ್ಟ್, ಅನೇಕ ಸರ್ಕಾರಿ ಸಚಿವಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಾಗೇ ಸ್ನ್ಯಾಪ್‍ಡೀಲ್ ಕೂಡ ವಾರಣಾಸಿಯ ಕಲಾವಿದರು ತಮ್ಮ ಕಲಾಕೃತಿಗಳನ್ನು ಆನ್‍ಲೈನ್‍ನಲ್ಲಿ ಮಾರಾಟಮಾಡಲು ಅವಕಾಶ ನೀಡುವ ಸಂಬಂಧ ಭಾರತೀಯ ಅಂಚೆ ಇಲಾಖೆಯೊಂದಿಗೆ ಸಹಭಾಗಿತ್ವ ಹೊಂದಿದೆ.

"ನಮ್ಮ ಗುರಿಯೇನಿದ್ದರೂ ಆನ್‍ಲೈನ್ ಮತ್ತು ಆಫ್‍ಲೈನ್ ಪ್ರಸ್ತುತಿಯನ್ನೊಳಗೊಂಡ ಆರ್ಟ್ ಮತ್ತು ಡಿಸೈನ್ ಕ್ಷೇತ್ರದಲ್ಲಿ ಭದ್ರವಾಗಿ ನೆಲೆಸುವುದಾಗಿದೆ. ಕಲಾವಿದರು ಮತ್ತು ಕರಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ನಮ್ಮ ವೇದಿಕೆಯಲ್ಲಿ ನೇರವಾಗಿ ಮಾರಾಟ ಮಾಡಲು ಅಧಿಕಾರ ನೀಡಲು ನಮ್ಮ ವ್ಯಾಪಾರ ವಿಸ್ತರಣೆ ಮಾಡುವ ಬಗ್ಗೆ ಚಿಂತಿಸಲಿದ್ದೇವೆ" ಎನ್ನುತ್ತಾರೆ ಶೋಭಿತ್.


ಅನುವಾದಕರು: ಚೈತ್ರಾ ಎನ್​.