ಹೆಲ್ತಿ ಆರೋಗ್ಯಕ್ಕೆ ಟೆಸ್ಟಿ ಜ್ಯೂಸ್.. ಜ್ಯೂಸ್​​​ಗೆ ಸಾಥ್ ನೀಡೋಕೆ ಹೆಲ್ತಿ ಬೀಡಾ

ನಿನಾದ

0

ಅವರು ಮೂವರು ಅಣ್ಣ ತಮ್ಮಂದಿರು.ಊರು ಕಾಶಿಯ ಬನಾರಸ್. ಓದು ಅನ್ನೋದು ಮೂವರಿಗೂ ಕಬ್ಬಿಣದ ಕಡಲೆಯಾಗಿತ್ತು. ಮುಂದೇನು ಅನ್ನೋ ಗೊಂದಲವಿದ್ರೂ ಕುಟುಂಬ ನಡೆಸುವ ಅನಿವಾರ್ಯತೆ ಇತ್ತು. ಅದೇ ಗೊಂದಲದ ನಡುವೆ ಏನಾದರೂ ಮಾಡಬೇಕು ಅನ್ನೋ ಯೋಜನೆಯೊಂದಿಗೆ 12 ವರ್ಷಗಳ ಹಿಂದೆ ಬೆಂಗಳೂರಿಗೆ ಕಾಲಿಟ್ಟರು.

ಇದನ್ನು ಓದಿ

ಹಸಿತ್ಯಾಜ್ಯ ಸಂಸ್ಕರಣೆಯಿಂದ ಅಡುಗೆ ಅನಿಲ, ತರಕಾರಿ ಬೆಳೆದ ಬೆಂಗಳೂರಿಗರು

ಅಂದ್ಹಾಗೆ ಆ ಮೂವರ ಹೆಸರು ಶ್ಯಾಮ್ ಮಿಶ್ರಾ, ಸುದರ್ಶನ್ ಮಿಶ್ರಾ, ಚಂಚಲ್ ಕುಮಾರ್ ಮಿಶ್ರಾ. ಈ ಮೂವರಲ್ಲಿ ಹಿರಿಯವರು ಶ್ಯಾಮ್ ಮಿಶ್ರಾ. ಶ್ಯಾಮ್ ಮಿಶ್ರಾ ಅವರಿಗೆ ಪಾನ್ ಬೀಡಾ ತಯಾರಿಕೆಯ ಬಗ್ಗೆ ಕೊಂಚ ಅರಿವಿತ್ತು. ಹಾಗಾಗಿ ಇದನ್ನೇ ಯಾಕೆ ವೃತ್ತಿಯನ್ನಾಗಿ ಆರಂಭಿಸಬಾರದು ಅಂದುಕೊಂಡು ಮೂವರು ಸೇರಿ ಬೆಂಗಳೂರಿನ ನಗರ್ತ ಪೇಟೆಯಲ್ಲಿ ಶ್ಯಾಮ್ ಮಿಶ್ರಾ ಪಾನ್ ಬೀಡಾ ಅಂಗಡಿ ಆರಂಭಿಸಿದ್ರು. ಬರೀ ಪಾನ್ ಇದ್ರೆ ಚೆನ್ನಾಗಿರಲ್ಲ. ಹೇಗಿದ್ರೂ ಮೂವರು ಇದ್ದೇವಲ್ವಾ ಜ್ಯೂಸ್ ಅಂಗಡಿನೂ ಇದರ ಜೊತೆಗೆ ಆರಂಭಿಸಿದ್ರೆ ಚೆನ್ನಾಗಿರುತ್ತೆ ಅಂದುಕೊಂಡು ಅವರು ಜ್ಯೂಸ್ ಸೆಂಟರ್​ನ್ನು ಪ್ರಾರಂಭಿಸಿದರು. ಇವತ್ತು ಅದೇ ಶ್ಯಾಮ್ ಮಿಶ್ರಾ ಜ್ಯೂಸ್ ಸೆಂಟರ್ ಆಂಡ್ ಪಾನ್ ಬೀಡಾ ಶಾಪ ಆಗಿ ಬೆಳೆದಿದೆ. ಅಲ್ಲದೇ ಬೆಂಗಳೂರಿನ ಆರ್ ಟಿ ನಗರದಲ್ಲೂ ತನ್ನ ಶಾಖೆಯನ್ನು ಹೊಂದಿದೆ.

ಶ್ಯಾಮ್ ಮಿಶ್ರಾ ಜ್ಯೂಸ್ ಸೆಂಟರ್ ಹಾಗೂ ಪಾನ್ ಅಂಗಡಿಯ ವಿಶೇಷತೆ ಅಂದ್ರೆ ಇಲ್ಲಿ ಡ್ರೈ ಫ್ರೂಟ್ಸ್ ಗಳನ್ನು ಬಳಸಿ ಬೀಡಾ ಹಾಗೂ ಜ್ಯೂಸ್ ಗಳನ್ನು ತಯಾರಿಸಲಾಗುತ್ತೆ. ಅಲ್ಲದೇ ವಿವಿಧ ರೀತಿಯ ಡ್ರೈ ಫ್ರೂಟ್ಸ್ ಗಳನ್ನು ಮಾರಾಟ ಮಾಡಲಾಗುತ್ತೆ. ಆರೋಗ್ಯಕ್ಕೆ ಉತ್ತಮವಾದ ರೀತಿಯ ಬೀಡಾಗಳನ್ನೇ ಇಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತೆ. ಖರ್ಜೂರ, ಒಣ ದ್ರಾಕ್ಷಿ, ಪಿಸ್ತಾ, ಬಾದಾಮ್ , ಕೊಬ್ಬರಿ, ಹೀಗೆ ಅನೇಕ ರೀತಿಯ ಡ್ರೈ ಫ್ರೂಸ್ಸ್ ಗಳನ್ನು ಬಳಸಿ ಕಲ್ಕತ್ತಾ, ಸಾದಾ, ಸ್ವೀಟ್ ಮಗೈ ಹೀಗೆ ವಿವಿಧ ರೀತಿಯ ಬೀಡಾಗಳನ್ನು ತಯಾರಿಸಲಾಗುತ್ತೆ.

ಇನ್ನು ಇಲ್ಲಿ ಸಿಗುವ ಜ್ಯೂಸ್ ಗಂತೂ ಭಾರೀ ಬೇಡಿಕೆಯಿದೆ. ಅದರಲ್ಲೂ ಪುದೀನಾ, ಪಾಲಕ್, ಎಳೆನೀರು, ನೆಲ್ಲಿಕಾಯಿ, ಪ್ಯೂರ್ ಸ್ಟ್ರಾಬೆರಿ ಜ್ಯೂಸ್ ಕುಡಿಯೋಕೆ ದೂರ ದೂರದಿಂದಲೂ ಜನ ಬರುತ್ತಾರಂತೆ. ಕಡಿಮೆ ಬೆಲೆಯಲ್ಲಿ ಆರೋಗ್ಯವೃದ್ಧಿಸುವ ಜ್ಯೂಸ್ ಗಳು ಸಿಗೋದರಿಂದ ಜನರಿಗೂ ಶ್ಯಾಮ್ ಮಿಶ್ರಾ ಜ್ಯೂಸ್ ಸೆಂಟರ್ ಹಾಗೂ ಪಾನ್ ಅಂಗಡಿ ತುಂಬಾನೇ ಇಷ್ಟ.

ಶ್ಯಾಮ್ ಮಿಶ್ರಾ ಆಡಂ ಬ್ರದರ್ಸ್ ಕೇವಲ ಅಂಗಡಿಯಲ್ಲಿ ಮಾತ್ರವಲ್ಲದೇ ಪಾನ್ ಹಾಗೂ ಶುಭ ಸಮಾರಂಭಗಳಿಗೂ ಜ್ಯೂಸ್ ಹಾಗೂ ಬೀಡಾ ಪೂರೈಕೆ ಮಾಡುತ್ತಾರೆ ಈಗಾಗಲೇ ನೂರಾರು ಕಾರ್ಯಕ್ರಮಗಳಿಗೆ ಪಾನ್ ಹಾಗೂ ಜ್ಯೂಸ್ ಸಪ್ಲೈ ಮಾಡಿದ್ದಾರೆ. ನಾವು ನೀಡುವ ರುಚಿ ಭಿನ್ನವಾಗಿದ್ರೆ ಜನ ಖಂಡಿತಾ ಇಷ್ಟಪಡುತ್ತಾರೆ ಅನ್ನೋ ಶ್ಯಾಮ್ ಮಿಶ್ರಾ ಇನ್ನೂ ಅನೇಕ ರೀತಿಯ ಬೀಡಾ ಹಾಗೂ ಜ್ಯೂಸ್ ನ್ನು ಪರಿಚಯುವ ಪ್ಲಾನ್ ನಲ್ಲಿದ್ದಾರೆ. ಅಲ್ಲದೇ ಬರೂ ಓದು ಇದ್ರೆ ಸಾಲದು ನಮ್ಮಲ್ಲಿ ಪರಿಶ್ರಮ, ಬುದ್ಧಿಶಕ್ತಿ ಜೊತೆಗೆ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡ್ರೆ ಖಂಡಿತ ಯಶಸ್ಸು ಸಿಗುತ್ತೆ ಅನ್ನೋದು ಅವರ ಅಭಿಮತ.

ನೀವೇನಾದ್ರೂ ಶ್ಯಾಮ್ ಮಿಶ್ರಾ ಜ್ಯೂಸ್ ಸೆಂಟರ್ ಹಾಗೂ ಪಾನ್ ಅಂಗಡಿಯ ಜ್ಯೂಸ್ ಅಂಗಡಿಯ ಪಾನ್ ಹಾಗೂ ಜ್ಯೂಸ್ ಸವಿಬೇಕು ಅಂತಿದ್ರೆ ಈ ನಂಬರ್ ಗೆ ಕಾಲ್ ಮಾಡಿ 9483831690

ಇದನ್ನು ಓದಿ

ನಾವು ಯಾರಿಗೂ ಕಮ್ಮಿ ಇಲ್ಲಿ – ಚಿಕ್ಕವರೆಲ್ಲಾ ಜಾಣರಲ್ಲ

2. ಸಮಾಜದಲ್ಲಿ ಕಂಡೂ ಕಾಣಿಸದ ಪ್ರತಿಭಾ ಸಂಪನ್ನರು

3.ಮುಸ್ಲಿಂರು ನಿರ್ಮಿಸಿದ ರಾಮಮಂದಿರ!

Related Stories