ಲೇಟ್​​ನೈಟ್.ಇನ್ ವೆಬ್​​ಸೈಟ್​​ನಲ್ಲಿ ಮಿಡ್​​ನೈಟ್ ಭೋಜನ..!

ಆರಾಧ್ಯ

0

ಸಿಲಿಕಾನ್ ಸಿಟಿ ಮಂದಿಗೆ ಹಗಲು, ರಾತ್ರಿ ಎರಡು ಒಂದೇ ಅನ್ನುವಂತಾಗಿದೆ ! ಇಲ್ಲಿನ ಜನರಿಗೆ ದುಡಿಯುವ ಗಡಿಯಾರಕ್ಕೆ ವ್ಯತ್ಯಾಸವೇ ಇಲ್ಲದಂತಾಗಿದೆ. ಹಗಲಿನಂತೆ ರಾತ್ರಿಯು ದುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಹಗಲಿನಲ್ಲಿ ಕೆಲಸಕ್ಕೆ ಹೋದ್ರೆ ಯಾವುದಾದ್ರು ಹೋಟೆಲ್ ನಲ್ಲಿ ಕಾಫಿ, ಟೀ, ಊಟ, ತಿಂಡಿ ಮಾಡಬಹುದು, ಆದ್ರೆ ರಾತ್ರಿ ಹೊತ್ತು ಕೆಲಸಕ್ಕೆ ಹೋದ್ರೆ ಊಟ ಸಿಗೋದಿರಲ್ಲಿ, ಕಾಫಿ ಟೀ ಸಿಗೋದು ಕಷ್ಟ .. ಅಂತಾಹ ಜನರಿಗೆ ಎಂದು ನಗರದಲ್ಲಿ ಹೊಸ ಹೋಟೆಲ್ ವೆಬ್ ಸೈಟ್ ಪ್ರಾರಂಭವಾಗಿದೆ. ಅದರ ಹೆಸರು ಲೇಟ್ ನೈಟ್.ಇನ್

ಹೌದು ರಾತ್ರಿಯ ಹೊತ್ತು ಕೆಲಸಕ್ಕೆ ತೆರಳುವವರಿಗೆ ಊಟದೇ ಒಂದು ದೊಡ್ಡ ಸಮಸ್ಯೆಯಾಗಿರುತ್ತೆ. ಆದ್ರೆ ಇನ್ನು ಮುಂದೆ ಆ ಸಮಸ್ಯೆಗೆ ಇಲ್ಲೊಂದು ವೆಬ್ ಸೈಟ್ ಪರಿಹಾರ ನೀಡಲಿದೆ.. ಜಸ್ಟ್ ವೆಬ್ ಸೈಟ್ ಓಪನ್ ಮಾಡಿ ನಿಮಗೆ ಇಷ್ಟವಾದ ತಿಂಡಿಯನ್ನ ಆರ್ಡರ್ ಮಾಡಬಹುದು.. ಆರ್ಡರ್ ಮಾಡಿದ 60 ನಿಮಿಷದಲ್ಲಿ ನೀವು ಇರುವ ಜಾಗಕ್ಕೆ, ನಿಮ್ಮ ಆರ್ಡರ್ ಬಂದು ಬಿಡುತ್ತೆ..  

ಇದನ್ನು ಓದಿ:

ಮಾನವೀಯತೆ, ಸಮಯಪ್ರಜ್ಞೆಗೆ ಮತ್ತೊಂದು ಹೆಸರು ಬೆಂಗಳೂರು ಪೊಲೀಸರು

ನಾವು ನೀವು ಕಷ್ಟ ಪಟ್ಟು ದುಡಿಯುವುದೇ ಊಟಕ್ಕಾಗಿ, ಹೀಗಿರುವಾಗ ನಡುರಾತ್ರಿ ಯಾವುದೋ ಮೀಟಿಂಗು ಮುಗಿಸಿಕೊಂಡು ಮನೆಗೆ ಹೋಗಿ ಅಡುಗೆ ಮಾಡಿಕೊಳ್ಳುವುದಕ್ಕೆ ಆಗುತ್ತದೆಯಾ? ಇನ್ನು ಪೀಜಿಗಳಲ್ಲಿ ವಾಸ ಮಾಡುವವರಿಗೆ ಅಷ್ಟು ಹೊತ್ತಲ್ಲಿ ಯಾರು ಊಟ ಇಟ್ಟಿರುತ್ತಾರೆ. ಊಟ ಮಾಡದೇ ಮಲಗುವ ಕರ್ಮ ಅನುಭವಿಸಲು ದುಡಿಯುವುದಾದರೂ ಯಾಕೆ ಬೇಕು?

ಇಂಥ ಕಷ್ಟಗಳನ್ನು ಅರ್ಥಮಾಡಿಕೊಂಡ ಕೆಲವರು ಆರಂಭಿಸಿರುವ ಈ ವೆಬ್ ರೆಸ್ಟೋರೇಂಟ್ ನಲ್ಲಿ ನಿಮಗೆ ಬೇಕಾದ ತಿಂಡಿಗಳ ಮೆನು ಇರುತ್ತೆ. ಅದರಲ್ಲಿ ನಿಮಗೆ ಬೇಕಾದ ತಿಂಡಿಯನ್ನು ಆರಿಸಿಕೊಂಡು, ಆರ್ಡರ್ ಮಾಡಿದರೆ ಸಾಕು ಊಟ ನಿಮ್ಮ ಟೇಬಲ್ಲಿನ ಮೇಲಿರುತ್ತದೆ. ಈ ಲೇಟ್ ನೈಟ್. ಇನ್ ವೆಷ್ ಸೈಟ್ ನಲ್ಲಿ ರಾತ್ರಿ ಏಳು ಗಂಟೆಯಿಂದ ಬೆಳಗ್ಗೆ ನಾಲ್ಕರ ತನಕ ಊಟ ಸಿಗುತ್ತದೆ.. ವೆಬ್ ಸೈಟ್ ನ ಮೂಲಕವು ಆರ್ಡರ್ ಮಾಡಬಹುದು ಅಥವಾ ಒಂದು ಫೋನ್ ಮಾಡಿಯು ಆರ್ಡರ್ ಮಾಡಬಹುದು..

ಬೆಂಗಳೂರಿನ ಟ್ರಾಫಿಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗೋದ್ರಲ್ಲಿ ತಡವಾಗಿರುತ್ತೆ.. ಇನ್ನು ಆಫೀಸ್ ಗಳಲ್ಲಿ ಮಿಟೀಂಗ್ ಇದ್ರೆ ಪಕ್ಕ ನಡುರಾತ್ರಿ ಮನೆಗೆ ತೆರಳಬೇಕಾಗುತ್ತೆ.. ಈ ಸಮಯದಲ್ಲಿ ಮನೆಗೆ ಹೋದ್ರೆ ಸಾಕುಪ್ಪ ಸಾಕು ಅನ್ನುವಂತೆ ಆಗಿರುತ್ತೆ ಈ ಮಧ್ಯ ಅಡುಗೆ ಮನೆಗೆ ಹೋಗಿ ಅಡುಗೆ ಮಾಡಬೇಕು ಅಂದ್ರೆ ಟೈಮಿಲ್ಲದಂತಾಗುತ್ತದೆ.. ಆಗ ನೆರವಿಗೆ ಬರುವುದು ಮಿಡ್ ನೈಟ್.ಇನ್.. ಜಸ್ಟ್ ಒಂದು ಫೋನ್ ಮಾಡಿದ್ರೆ ಸಾಕು ನಿಮಗೆ ಯಾವ ಬಗೆಯ ಊಟ ಬೇಕು, ಎಲ್ಲಿಗೆ ಅದನ್ನ ಕಳುಹಿಸಿ ಕೊಡಬೇಕು ಎಂದು ಮಾಹಿತಿಯನ್ನ ಪಡೆದು ಆರ್ಡರ್ ಮಾಡಿದ ಸ್ವಲ್ಪ ಹೊತ್ತಿಗೆಲ್ಲ ಆಯ್ದ ಬಡಾವಣೆಗಳಿಗೆ ಊಟ ಬಂದು ಬಿಡುತ್ತದೆ..

ಈ ಮಿಡ್ ನೈಟ್.ಇನ್ ನಲ್ಲಿ ಬರೀ ಊಟವಷ್ಟೇ ಅಲ್ಲ, ತಿಂಡಿ, ಪಾನೀಯ, ಕುರುಕಲು ತಿಂಡಿ, ಮಾತ್ರೆಗಳು ಕೂಡ ಕಳಿಸಿಕೊಟ್ತಾರೆ.. ಬರೀ ಸಸ್ಯಾಹಿರಿ ಮಾತ್ರವಲ್ಲ, ಮಾಂಸಾಹಾರ ಊಟವು ಲಭ್ಯವಿದೆ.. ಇನ್ನು ಈ ಹೋಟೆಲ್ ನಲ್ಲಿ ಮೊದಲೇ ಊಟವನ್ನ ರೆಡಿ ಮಾಡಿ ಇಟ್ಟಿರುವುದಿಲ್ಲ, ಆರ್ಡರ್ ಮಾಡಿದ 20ನಿಮಿಷದಲ್ಲಿ ಊಟ ರೆಡಿ ಮಾಡಿ, 5 ನಿಮಿಷದಲ್ಲಿ ಪ್ಯಾಕಿಂಗ್ ಮಾಡಿ, ನೀವು ಹೇಳಿದ ಜಾಗಕ್ಕೆ ಮೂವತ್ತು ನಿಮಿಷದಲ್ಲಿ ಕಳುಹಿಸಿ ಕೊಡುತ್ತಾರೆ.. ಡೆಲಿವರಿ ತೆಗೆದು ಕೊಳ್ಳುವಾಗಲ್ಲೇ ದುಡ್ಡು ಕೊಡುವ ವ್ಯವಸ್ಥೆಯೂ ಇದೆ.. ಕಾರ್ಡಲ್ಲೂ ಕೂಡ ಪೇಮೆಂಟ್ ಮಾಡಬಹುದು.. ಜೊತೆಗೆ ಕುಮಾರಸ್ವಾಮಿ ಲೇ ಔಟ್, ಇಸ್ರೋ ಲೇಔಟ್, ಯಳಚೇನಹಳ್ಳಿ, ಜೆಪಿ ನಗರ, ಜಯನಗರ, ಬಿಟಿಎಂ ಲೇಔಟ್- ಮುಂತಾದ ಪ್ರದೇಶಗಳಿಗೆ 30-50 ರೂಪಾಯಿ ಡೆಲಿವರಿ ಚಾರ್ಜು ಕೊಡಬೇಕಾಗುತ್ತದೆ, ಅದು 500 ರೂಪಾಯಿಗಿಂತ ಕಡಿಮೆ ಇದ್ರೆ ಮಾತ್ರ .

ಇದನ್ನು ಓದಿ

ರೊಬೋ ಮೇಟ್ ಪ್ಲಸ್: ಮೊಬೈಲ್ ಅಂದ್ರೆ ಆಟವಲ್ಲ, ಮೊಬೈಲ್ ನಲ್ಲೇ ಪಾಠ..!

ಅಂದು ಕಾರ್ಮಿಕ ಇಂದು ಮಾಲೀಕ- ಸಾಮಾನ್ಯನ ಅಸಮಾನ್ಯ ಸಾಧನೆ..!

ಕಲಾವಿದರಿಗಾಗಿ ತಮ್ಮ ದುಡಿಮೆಯನ್ನೇ ಮುಡುಪಾಗಿಟ್ಟ ಮಹಿಳೆ..!

Related Stories