ಕ್ರೇಝಿ ವೀಡಿಯೋಗಳಿಗೆ ಸ್ಪೆಷಲ್​ ಟಚ್​- 360° ವೀಡಿಯೋ ಈಗ ಸಖತ್​ ಫೇಮಸ್​

ಟೀಮ್​​ ವೈ.ಎಸ್​. ಕನ್ನಡ

1

ಇವತ್ತು ಏನಿದ್ರು ಟೆಕ್​ ಯುಗ. ಇಲ್ಲಿ ಎಲ್ಲವೂ ಟೆಕ್​ ಮಯ. ಇಂಟರ್​ನೆಟ್​ ಒಂದಿದ್ರೆ ಸಾಕು, ಎಲ್ಲವೂ ನಿಮ್ಮ ಬಳಿಗೆ ಬಂದು ಬೀಳುತ್ತದೆ. ಅದ್ರಲ್ಲೂ ಯಾವುದಾದರೂ ವಿಡೀಯೋ ನೋಡ್ಬೇಕು ಅಂದ್ರೆ ಸಾಕು, ಮೊದಲು ನೆನಪಾಗೋದು ಯೂ ಟ್ಯೂಬ್​. ಗೂಗಲ್​ ಆಧಾರಿತ ಈ ಯೂಟ್ಯೂಬ್​ ಅದೆಷ್ಟರ ಮಟ್ಟಿಗೆ ಫೇಮಸ್​ ಅಂದ್ರೆ, ಬೇರೆ ಸರ್ವರ್​ಗಳ ನೆನಪುನ ಕೂಡ ಬರೋದಿಲ್ಲ. ಯೂಸರ್​ ಫ್ರೆಂಡ್ಲಿ ನೇಚರ್​ ಯೂಟ್ಯೂಬ್​ನ್ನು ಜನಮನದಲ್ಲಿ ನಿಲ್ಲುವಂತೆ ಮಾಡಿದೆ.

ಇವತ್ತು ಯೂಟ್ಯೂಬ್​ ಬಗ್ಗೆ ಗೊತ್ತಿಲ್ಲದ ವ್ಯಕ್ತಿಗಳಿರೋದು ಅಪರೂಪ. ಅದ್ರಲ್ಲೂ ಯುವ ಜನತೆಗಂತೂ ಯುಟ್ಯೂಬ್​ ನೆಚ್ಚಿನ ಜಾಲತಾಣ. ಯುಟ್ಯೂಬ್​ ಕೂಡ ಅಷ್ಟೇ. ಬದಲಾವಣೆಗೆ ಒಗ್ಗಿಕೊಂಡಿದೆ. ಜನರಿಗೆ ಏನು ಬೇಕೋ ಅದನ್ನು ಕೊಡೋದರಲ್ಲಿ ಒಂಚೂರು ಕೂಡ ಹಿಂದೆ ಬಿದ್ದಿಲ್ಲ. ಹೀಗಾಗಿ ಯುಟ್ಯೂಬ್​ ಸ್ಥಾನ ದಿನೇ ದಿನೇ ಗಟ್ಟಿ ಆಗುತ್ತಿದೆ. ಈಗ ಯುಟ್ಯೂಬ್​ ಒಂದು ಹೆಜ್ಜೆ ಮತ್ತಷ್ಟು ಮುಂದೆ ಹೋಗಿದೆ. ಸಖತ್​ ಫೇಮಸ್​ ಆಗಿರುವ ವಿಡೀಯೋಗಳಿಗೆ ತನ್ನ ಜಾಲತಾಣಗಳಲ್ಲಿ ಸ್ಥಳಾವಕಾಶ ಒದಗಿಸಿದೆ.

ಸದ್ಯ ಯುಟ್ಯೂಬ್​​ನಲ್ಲಿ ಸದ್ಯ ಸಖತ್ ಸದ್ದು ಮಾಡ್ತಿರೋ ವಿಡಿಯೋಗಳು ಬೇರೆ ಯಾವುದು ಅಲ್ಲ. 360 ಡಿಗ್ರಿ ಆ್ಯಂಗಲ್​​ನಲ್ಲಿ ಶೂಟ್ ಮಾಡಿರೋ ದೃಶ್ಯಗಳು.  ಮೊದಲು ಈ ವಿಡಿಯೋಗಳನ್ನು ಕೇವಲ ವೈಯಕ್ತಿಕವಾಗಿ ನಾವಷ್ಟೇ ನೋಡಿ ಕೊಳ್ಳಬಹುದಿತ್ತು. ಯೂಟ್ಯೂಬ್​ನಲ್ಲಿ ಅಪ್​​ಲೋಡ್ ಮಾಡಲು ಅವಕಾಶವಿರಲಿಲ್ಲ. ಇದೀಗ ಯೂಟ್ಯೂಬ್ ನಲ್ಲಿ 360 ಡಿಗ್ರಿ ವಿಡಿಯೋಗೆ ಆ್ಯಪ್ಶನ್ ದೊರೆತಿದ್ದು, ಸಖತ್ ಕ್ರೇಜ್ ಹುಟ್ಟಿಸಿದೆ. ಇಲ್ಲಿಯವರೆಗೆ ಯೂಟ್ಯೂಬ್​ನಲ್ಲಿ ಕೇವಲ 90 ಡಿಗ್ರಿ ಆ್ಯಂಗಲ್​ನ ವಿಡಿಯೋಗಳು ಮಾತ್ರ ಲಭ್ಯವಿದ್ದವು. 360 ಡಿಗ್ರಿ ಸುತ್ತಳತೆಯ ವಿಡಿಯೋಗಳು ಸದ್ದು ಮಾಡ್ತಿವೆ. ನೋಡುಗರಿಗೆ ಹೊಸ ಅನುಭವ ನೀಡುವಲ್ಲಿ ಈ ವಿಡಿಯೋಗಳು ಮುಂದಾಗಿವೆ.

" ಯೂ ಟ್ಯೂಬ್​ ನಿಜಕ್ಕೂ ಹೊಸ ಅನುಭವ ಕೊಡುತ್ತಿದೆ. ಇಲ್ಲಿ ತನಕ ಮಾಮೂಲಿ ವೀಡಿಯೋಗಳನ್ನು ಮಾತ್ರ ನೋಡುವ ಅವಕಾಶವಿತ್ತು. ಆದ್ರೆ ಈಗ 360 ಡಿಗ್ರಿ ವೀಡಿಯೋಗಳು ನಿಜಕ್ಕೂ ಕ್ರೇಝಿ ಆಗಿವೆ. ಯೂಟ್ಯೂಬ್​ ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ. "
- ಹರ್ಷಿತಾ, ಯೂಟ್ಯೂಬ್ ವೀಕ್ಷಕಿ

ಅಂದ್ರೆ, ಒಂದು ವಿಡಿಯೋವನ್ನು ಏಕಮುಖವಾಗಿ ನೋಡಿ ಅಷ್ಟೇ ಅಲ್ಲ, ಟರ್ನ್ ಮಾಡಿಕೊಂಡು ವಿಡಿಯೋದ ಸುತ್ತಮುತ್ತಲು ನೋಡಬಹುದು. ಮೇಲೆ ಕೆಳಗೆ, ಅಕ್ಕ ಪಕ್ಕ ಎಲ್ಲವನ್ನು ಒಂದೇ ವಿಡಿಯೋದಲ್ಲಿ ಸ್ವತಃ ನೀವೇ ಟರ್ನ್ ಮಾಡಿಕೊಂಡು ನೋಡಬಹುದು. ಅಷ್ಟಕ್ಕೂ 360 ಡಿಗ್ರಿ ಆ್ಯಂಗಲ್ ಹಳೆಯ ಕಾನ್ಸೆಪ್ಟ್. ಆದ್ರೆ, ಯೂಟ್ಯೂಬ್ ನಲ್ಲಿ ಇದನ್ನ ಅಪ್ ಲೋಡ್ ಮಾಡಲು ಅವಕಾಶವಿರಲಿಲ್ಲ. ಇದೀಗ ಈ ಹೊಸ ಟ್ರೆಂಡ್​ನ ವಿಡಿಯೋಗಳಿಗೆ ಅವಕಾಶ ಮಾಡಿಕೊಟ್ಟಿದ್ದು, 360 ಡಿಗ್ರಿ ಆ್ಯಂಗಲ್ ನಲ್ಲಿ ಶೂಟ್ ಮಾಡಿರೋ ದೃಶ್ಯಗಳನ್ನು ಜನ ಅಪ್ ಲೋಡ್ ಮಾಡ್ತಿದ್ದಾರೆ. 360 ಡಿಗ್ರಿ ಆ್ಯಂಗಲ್​ನಲ್ಲಿ ಹಲವು ದೃಶ್ಯಗಳು ಯುಟ್ಯೂಬ್​ನಲ್ಲಿ ಲಭ್ಯ ಇವೆ.

360 ಡಿಗ್ರಿ ಆ್ಯಂಗಲ್ ಕ್ಯಾಮರಾಗಳು ಮೇಲೆ, ಕೆಳಗೆ, ಸುತ್ತಮುತ್ತಲು ಸೆರೆ ಹಿಡಿಯುತ್ತವೆ. ಅದಕ್ಕೆ ಎಡಿಟಿಂಗ್​ನಲ್ಲಿ ಒಂದು ರೂಪ ಕೊಟ್ಟು, ವಿಡಿಯೋವನ್ನು ಟರ್ನ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿರುತ್ತೆ. ಇದು ಯೂಟ್ಯೂಬ್​ನಲ್ಲಿ ಅಪ್ ಲೋಡ್ ಅವಕಾಶ ಕಲ್ಪಿಸಿರೋದು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಒಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳು, ಚಮತ್ಕಾರಗಳಿಗೆ ಯೂಟ್ಯೂಬ್ ಮುನ್ನುಡಿ ಬರೆದಿದೆ.

ಇದನ್ನು ಓದಿ:

1. 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

2. ಇಂಟರ್​ನೆಟ್ ಇಲ್ಲದೆಯೂ ಮೊಬೈಲ್​ನಲ್ಲಿ ಹಣದ ವರ್ಗಾವಣೆ-ಇನ್ಫೋಸಿಸ್​ನ ಮಾಜಿ ಉದ್ಯೋಗಿಯ ವಿಭಿನ್ನ, ವಿನೂತನ ತಂತ್ರಜ್ಞಾನ

3. 400 ನಾಯಿಗಳಿಗೆ ಆಸರೆಯಾದ ಚಿಂದಿ ಆಯುವ ಮಹಿಳೆ

Related Stories

Stories by YourStory Kannada