ಟ್ರಿಪ್​​ ಹೋಗಲು ಟಿಪ್ಸ್​​ ಹೇಳುವ ಎಕ್ಸ್​ಪರ್ಟ್​ ಇವರು..!

ಟೀಮ್​ ವೈ.ಎಸ್​. ಕನ್ನಡ

ಟ್ರಿಪ್​​ ಹೋಗಲು ಟಿಪ್ಸ್​​ ಹೇಳುವ ಎಕ್ಸ್​ಪರ್ಟ್​ ಇವರು..!

Tuesday June 27, 2017,

2 min Read

ಕೈಯಲ್ಲಿರುವ ಐದು ಬೆರಳುಗಳೇ ಒಂದೇ ರೀತಿಯಾಗಿಲ್ಲ. ಇನ್ನು ಜಗತ್ತಿನಲ್ಲಿರುವ ಜನರು ಒಂದೇ ತರಹ ಇರುತ್ತಾರಾ..? ಸಾಧ್ಯವೇ ಇಲ್ಲ. ಜಗತ್ತಿನಲ್ಲಿರುವ ಕೆಲವರಿಗೆ ಕೆಲವು ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ. ಇನ್ನು ಕೆಲವರಿಗೆ ಅದೇ ಹುಚ್ಚು. ನೋಡುವವರು ಏನು ಅಂದುಕೊಂಡರೂ ಪರವಾಗಿಲ್ಲ. ತಾವು ಬದುಕೋದು ಮಾತ್ರ ಹೀಗೇಯೇ ಅಂತ ನಿರ್ಧಾರ ಮಾಡಿ ಬಿಡುತ್ತಾರೆ.

ಈಗ ನಾವು ಹೇಳುವ ಕಥೆಯೂ ವಿಭಿನ್ನ. ಈ ಕಥೆಯ ನಾಯಕ ಮತ್ತು ನಾಯಕಿ ಚೇತನ್ ಮತ್ತು ಸಂದೀಪ. ಇಬ್ಬರೂ ದಂಪತಿಯರು. ಟೂರ್ ಮಾಡೋದು ಅಂದ್ರೆ ಸ್ವರ್ಗಕ್ಕೇ ಮೂರೇ ಗೇಣು ಅಂತ ಹೇಳುವ ವ್ಯಕ್ತಿತ್ವ ಇವರದು. ಇವರ ಮೂಲ ಮುಂಬೈನವರು. ತಮ್ಮ ಕನಸು ಟ್ರಾವೆಲಿಂಗ್ ಅನ್ನು ನನಸು ಮಾಡಿಕೊಳ್ಳಲು ಅವರು ಮಾಡಿದ್ದು, ಸ್ವಂತ ಮನೆಯನ್ನೇ ಮಾರಿದ್ದು, ಈ ದಂಪತಿಯ ನಿರ್ಧಾರಗಳಿಗೆ ಆರಂಭದಲ್ಲಿ ಅದೆಷ್ಟು ಟೀಕೆಗಳು ಬಂದಿತ್ತೋ ಅವರಿಗೇ ಗೊತ್ತು. ಆದ್ರೆ ಇವರಿಬ್ಬರ ಗುರಿ ಸ್ಪಷ್ಟವಿತ್ತು. ಟ್ರಾವೆಲ್ ಮಾಡಿ ಜಗತ್ತು ಸುತ್ತುವ ಕನಸು ದೊಡ್ಡದಿತ್ತು.

ಸಂದೀಪ ಎಲೆಕ್ಟ್ರಾನಿಕ್ಸ್ ಎಂಜಿನಿಯರ್. ಚೇತನ್ ಅಡ್ವಟೈಸಿಂಗ್ ಡಿಸೈನ್ ಬ್ಯಾಗ್ರೌಂಡ್​ನಿಂದ ಬಂದವರು. ಆರಂಭದಲ್ಲಿ ಜಗತ್ತು ಸುತ್ತುವ ಆಸೆಗಾಗಿ ಮನೆ ಮಾರುವ ನಿರ್ಧಾರ ಮಾಡಿದ್ದಾಗ ಮನೆಯವರು ಕೂಡ ಬುದ್ಧಿ ಮಾತು ಹೇಳಿದ್ದರು. ಇದು ಸುತ್ತುವ ಸಮಯವಲ್ಲ. ಮಕ್ಕಳು, ಅವರ ವಿದ್ಯಾಭ್ಯಾಸ ಅಂತ ಸುಮ್ಮನೆ ಕುಳಿತುಕೊಳ್ಳಿ ಅಂತ ಟಿಪ್ಸ್ ಪಡೆದಿದ್ದರು.

image


ಅಂದಹಾಗೆ ಈ ದಂಪತಿಗಳು ಯಾವುದೇ ಪ್ಲಾನ್​ಗಳನ್ನು ಫಿಕ್ಸ್ ಮಾಡಿಕೊಂಡು ಟೂರ್ ಮಾಡೋದಿಲ್ಲ. ಇವರಿಗೆ ಸಿಗುವ ವೀಸಾದ ಅವಧಿ ಮುಗಿಯುವ ತನಕ ಯಾವುದಾದರು ಒಂದು ದೇಶದಲ್ಲಿ ಸುತ್ತುತ್ತಾ ಇರುತ್ತಾರೆ. ಇವರು ಯಾವುದೇ ಪ್ರೈವೇಟ್ ವೆಹಿಕಲ್​​ಗಳನ್ನು ಬಾಡಿಗೆ ಪಡೆದು ಪ್ರಯಾಣಿಸುವುದಿಲ್ಲ. ಪಬ್ಲಿಕ್ ಟ್ರಾನ್ಸ್​​ಪೋರ್ಟ್ ಇವರ ನೆಚ್ಚಿನ ವಾಹನ. ಉಳಿದುಕೊಳ್ಳುವುದಕ್ಕೆ ಹೋಮ್ ಸ್ಟೇ ಸಾಕಾಗುತ್ತದೆ. ಚೇತನ್ ಮತ್ತು ಸಂದೀಪಗೆ ಪರ್ವತಗಳು, ಬೀಚ್​​ಗಳು, ದ್ವೀಪ ಮತ್ತು ಮರುಭೂಮಿ ಹೀಗೆ ಯಾವುದಿದ್ರೂ ಟ್ರಾವೆಲಿಂಗ್ ಅನ್ನೋದು ಬೋರ್ ಹೊಡೆಸಿಲ್ಲ. ಇವರ ಜೊತೆಗಿರುವ ಕ್ಯಾಮರಾಕ್ಕೆ ಮಾತ್ರ ಇವರು ಎಲ್ಲೇ ಹೋದ್ರು ಹೆಚ್ಚು ಕೆಲಸ ಇರುತ್ತದೆ.

ಇದನ್ನು ಓದಿ: ಆನ್​ಲೈನ್​ನಲ್ಲಿ ಕನ್ನಡ ಅಭಿವೃದ್ಧಿಗಾಗಿ ಪಣ ತೊಟ್ಟ ಟೆಕ್ಕಿಗಳು

ಸಂದೀಪ ಮತ್ತು ಚೇತನ್ ಭಾರತದ ಮೂಲೆ ಮೂಲೆಗೆ ಪ್ರವಾಸ ಮಾಡಿದ್ದಾರೆ. ಬ್ರೆಝಿಲ್, ಅರ್ಜೆಂಟೈನಾ, ಬೊಲಿವಿಯಾ ಮತ್ತು ಪೆರು ದೇಶಗಳ ಉದ್ದಗಲಗಳು ಗೊತ್ತಿದೆ. ದಂಪತಿಗಳಾಗಿ ಪ್ರಯಾಣ ಮಾಡುವುದು ಇವರ ಪಾಲಿಗೆ ಅತೀ ದೊಡ್ಡ ಸಂತಸದ ವಿಚಾರ. ಕೆಲವೊಮ್ಮೆ ಇವರು ಸತತ ಪ್ರಯಾಣದ ಒತ್ತಡ ಮತ್ತು ಸುಸ್ತುಗಳನ್ನು ಅನುಭವಿಸಿದ್ದಾರೆ. ದುಡ್ಡಿಲ್ಲದೆ ಪ್ರಯಾಣವನ್ನು ನಿಲ್ಲಿಸಿದ್ದು ಕೂಡ ಇದೆ.

ಸಂದೀಪ ಮತ್ತು ಚೇತನ್ ಇಬ್ಬರಿಗೂ ಪ್ರವಾಸ ಅಂದ್ರೆ ಬಹು ಖುಷಿ. ಇವರ ಮೊದಲ ಟ್ರಿಪ್ ಹನಿಮೂನ್​ಗೆ ಮಡಿಕೇರಿಗೆ ಹೋಗಿದ್ದು ಅನ್ನೋದು ಈಗ ಅಚ್ಚಳಿಯದ ನೆನಪು. ಅಲ್ಲಿಂದ ಮುಂದೆ ನಡೆದಿದ್ದೆಲ್ಲವೂ ಇತಿಹಾಸ. ಇವತ್ತು ಟ್ರಾವೆಲ್ ಬ್ಲಾಗರ್​​ಗಳ ಪೈಕಿ ಸಂದೀಪ ಮತ್ತು ಚೇತನ್ ಅಗ್ರಸ್ಥಾನದಲ್ಲಿದ್ದಾರೆ. ಸಂದೀಪ ಮತ್ತು ಚೇತನ್ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲ್ಲಿ, ಇಲ್ಲಿಗೆ ಭೇಟಿ ನೀಡಿ: http://sandeepachetan.com/.

ಇದನ್ನು ಓದಿ:

1. ಮಳೆಯಲಿ ಹೊಸ ಪರಿಚಿತರ ಜೊತೆಯಲ್ಲಿ..! 

2. ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್​ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ

3. ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್