ತೆರೆ ಹಿಂದೆ ಡಾಕ್ಟರ್​...ಸಿನಿಮಾದಲ್ಲಿ ಆ್ಯಕ್ಟರ್​​..!

ಟೀಮ್​ ವೈ.ಎಸ್​. ಕನ್ನಡ

4

ಬಿಳಿಬಣ್ಣದ ಕೋಟ್​ ಹಾಕಿ ಕೈಯಲ್ಲಿ ಸ್ಟೆಥಾಸ್ಕೋಪ್ ಹಿಡಿದು ಬಂದ್ರೆ ರೋಗಿಗಳ ಪಾಲಿಗೆ ಸೂಪರ್ ಅಂಡ್ ಕ್ಯೂಟ್ ಡಾಕ್ಟರ್. ಇನ್ನು ಬಣ್ಣ ಹಚ್ಚಿ ತೆರೆಮೇಲೆ ಅಭಿನಯಿಸುವುದಕ್ಕೆ ನಿಂತ್ರು ಅಂದ್ರೆ ವಾಹ್ ಅನ್ನುವಷ್ಟು ಅಭಿನಯ ನೀಡುವ ನಟಿ. ಇವರನ್ನ ಆ್ಯಕ್ಟರ್ ಅಂತಾದ್ರು ಕರೆಯಬಹುದು, ಡಾಕ್ಟರ್ ಅಂತಾದ್ರು ಕರೆಯಬಹುದು. ಯಾಕಂದ್ರೆ ಡಾ.ಜಾಹ್ನವಿ ಎರಡರಲ್ಲೂ ಪರ್ಫೆಕ್ಟ್.  ಇದು ಡಾಕ್ಟರ್ ಆ್ಯಕ್ಟರ್ ಆಗಿ ಜೊತೆಗೆ ಡಾಕ್ಟರ್ ವೃತ್ತಿಯನ್ನೂ ಜೊತೆಯಲ್ಲೇ ನಡೆಸಿಕೊಂಡು ಹೋಗುತ್ತಿರುವ ಬೆಂಗಳೂರಿನ ಜಾಹ್ನವಿ ಸ್ಟೋರಿ.

ಡಾಕ್ಟರ್ ಆಗೋದು ಕನಸು-ಆ್ಯಕ್ಟರ್ ಆಗಿದ್ದು ನನಸು

ಪ್ರತಿಯೊಬ್ಬರಿಗೂ ತನ್ನದೇ ಆದಂತಹ ಕನಸುಗಳಿರುತ್ತದೆ. ಚಿಕ್ಕ ವಯಸ್ಸಿನಿಂದಲೇ ನಾನು ದೊಡ್ಡವಳಾದ ಮೇಲೆ ಇದೇ ಆಗುತ್ತೇನೆ  ಅಂತ ಹೇಳುತ್ತಾ ಬೆಳೆಯುತ್ತೇವೆ. ಅದೇ ರೀತಿ ಜಾನ್ಹವಿ ಕೂಡ ಡಾಕ್ಟರ್ ಆಗಲೇ ಬೇಕು ಅಂತ ಕನಸು ಕಂಡಿದ್ದವರು.  ಕನಸನ್ನು ನನಸು ಕೂಡ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ದಂತವೈದ್ಯಕೀಯ ಕಾಲೇಜಿನಲ್ಲಿ ಕೋರ್ಸ್ ಮುಗಿಸಿ ಸದ್ಯ ಅದೇ ಹಾಸ್ಪಿಟಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಂಡ ಕನಸನ್ನ ನನಸು ಮಾಡಿಕೊಂಡ ನಂತರ ತನ್ನಲ್ಲಿದ್ದ ಪ್ರತಿಭೆಯನ್ನ ಉಪಯೋಗ ಮಾಡಿಕೊಳ್ಳಬೇಕು ಅಂತ ಸ್ನೇಹಿತರು ಹೇಳಿದನ್ನ ಗಂಭೀರವಾಗಿ ತೆಗೆದುಕೊಂಡ ಜಾಹ್ನವಿ ತನ್ನಲ್ಲಿ ಅಡಗಿದ್ದ ಒರ್ವ ನಟಿಯನ್ನ ಇಂದು ತೆರೆ ಮೇಲೆ ತಂದಿದ್ದಾರೆ. 

"ಸ್ನೇಹಿತರು ನನ್ನಲ್ಲಿದ್ದ ಅಭಿನಯದ ಪ್ರತಿಭೆಗೆ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದ್ದರು. ನಾನು ದಂತವೈದ್ಯೆ ಆಗಿದ್ದರೂ, ನಟನೆಯಲ್ಲಿ ಅದೃಷ್ಟ ಪರೀಕ್ಷಿಸುವ ಆಸೆ ಇತ್ತು. ಈಗ ಒಂದೊಂದಾಗೇ ಎಲ್ಲವೂ ನನಸಾಗುತ್ತಿದೆ. ಹಾಗಂತ ಡಾಕ್ಟರ್​ ವೃತ್ತಿಯನ್ನು ಎಂದೂ ಬಿಡುವುದಿಲ್ಲ."
ಡಾ. ಜಾಹ್ನವಿ, ಡಾಕ್ಟರ್, ನಟಿ

ಹಾಡಿನಿಂದ ಶುರುವಾಯ್ತು ಸಿನಿಮಾ ಪ್ರಯಾಣ

ಸದ್ಯ ಸ್ಯಾಂಡಲ್‍ವುಡ್​​ನಲ್ಲಿ ಹೆಸರು ಮಾಡುತ್ತಿರೋ ನಿರ್ದೇಶಕ ಪ್ರದೀಪ್ ವರ್ಮರ ನಿರ್ದೇಶನದಲ್ಲಿ ಮೂಡಿಬಂದ ಸಾಗರಸಂಗಮ ಧಾರಾವಾಹಿಯ ಹಾಡಿನಲ್ಲಿ ಜಾಹ್ನವಿ ಕಾಣಿಸಿಕೊಂಡಿದ್ರು. ಮೂರು ನಿಮಿಷದ ಶೀರ್ಷಿಕೆ ಹಾಡಿನಲ್ಲಿ ಜಾಹ್ನವಿ ಹೆಜ್ಜೆ ಹಾಕಿದ್ದರು. ಅದನ್ನು ಕಂಡ ಅನೇಕರು ನೀವು ನಟನೆಯನ್ನ ಸೀರಿಯಸ್ ಆಗಿ ತೆಗೆದುಕೊಂಡರೆ ಚೆನ್ನಾಗಿರುತ್ತದೆ ಅನ್ನುವ  ಸಲಹೆ ನೀಡಿದ್ದರು. ಕನ್ನಡಕೊಬ್ಬಳು ಉತ್ತಮ ನಟಿ ಸಿಗುತ್ತಾಳೆ ಅನ್ನೋ ಮಾತುಗಳನ್ನ ಆಡಿದ್ದರು. ಇದನ್ನು ಕೇಳಿದ ನಂತ್ರ ಜಾಹ್ನವಿ ಕೂಡ ಈ ವಿಚಾರವನ್ನ ಸೀರಿಸಯ್ ಆಗಿ ತೆಗೆದುಕೊಂಡರು. ನಂತರ  ಅಲ್ಲಿಂದ ಸಿನಿಮಾ ಪ್ರಯಾಣ ಆರಂಭ ಮಾಡಿದ್ರು.

ಉರ್ವಿಯ ಹೂ ಜಾಹ್ನವಿ

ಜಾಹ್ನವಿ ಸದ್ಯ ಉರ್ವಿ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರ ಇದಾಗಿದ್ದು ಇದರಲ್ಲಿ ಅಭಿನಯಿಸಿರುವುದು ಜಾಹ್ನವಿಗೆ ತುಂಬಾನೇ ಖುಷಿ ಕೊಟ್ಟಿದೆ. ಇದಷ್ಟೇ ಅಲ್ಲದೆ ಜಾತ್ರೆ, ಮಿಸ್ಟರ್ ಮೊಮ್ಮಗ ಹೀಗೆ ಇನ್ನು ಅನೇಕ ಸಿನಿಮಾದಲ್ಲಿ ಜಾಹ್ನವಿ ಅಭಿನಯವಿದೆ.  ಉತ್ತಮ ಡ್ಯಾನ್ಸರ್ ಆಗಿರುವ ಜಾಹ್ನವಿ ಶ್ಯಾಡೋಸ್ ಒನ್ ಸ್ಟುಡಿಯೋ ಜೊತೆ ಸಾಕಷ್ಟು ದಿನಗಳಿಂದ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಾ ಬಂದಿದ್ದಾರೆ. ಫ್ರೀಸ್ಟೈಲ್ ಜೊತೆಯಲ್ಲಿ ಕ್ಲಾಸಿಕಲ್ ಡ್ಯಾನ್ಸ್ ನಲ್ಲೂ ಜಾಹ್ನವಿ ಪರಿಣಿತಿ ಪಡೆದಿದ್ದಾರೆ

ಅಭಿನಯದ ಹಿಂದಿದೆ ರಂಗಭೂಮಿ ನಂಟು

ಸಿನಿಮಾರಂಗದಲ್ಲಿ ಹೆಜ್ಜೆ ಇಡುತ್ತೇನೆ ಅನ್ನುವ  ನಿರ್ಧಾರ ಮಾಡಿದ ಜಾಹ್ನವಿ ಸುಖಾಸುಮ್ಮನೆ ಅಭಿನಯಿಸುವುದಕ್ಕೆ ಬರಲಿಲ್ಲಾ.  ಅಭಿನಯಕ್ಕಾಗಿ ಬೇಕಿದ್ದ ಎಲ್ಲಾ ತಯಾರಿಯನ್ನ ಒಂದೊಂದಾಗಿ ಮಾಡಿಕೊಳ್ಳೊದಕ್ಕೆ ಶುರು ಮಾಡಿದ್ದರು. ನಟನೆಗೆ ಮೊದಲ ಹೆಜ್ಜೆಯಂತೆಲೆ ಎನ್ನಿಸಿಕೊಂಡಿರುವ ರಂಗಭೂಮಿಯಲ್ಲಿ ಒಂದಿಷ್ಟು ನಾಟಕಗಳನ್ನ ಮಾಡಿ ಅಭಿನಯವನ್ನ ಕಲಿಯೋದಕ್ಕೆ ಶುರು ಮಾಡಿದ್ರು. ರಂಗಪ್ರತಿಭ ತಂಡದವರ ಜೊತೆ ಸೇರಿ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಆರಂಭ ಮಾಡಿದ್ರು. ಹೀಗೆ ತಯಾರಿ ಮಾಡಿಕೊಂಡು ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಜಾಹ್ನವಿ ಅಭಿನಯವನ್ನ ನೋಡಲು ಸಿಗುತ್ತಿದೆ. ಚಿತ್ರರಂಗದಲ್ಲಿ ಸ್ಥಾನ ಸಿಕ್ತು ಅಂತ ಕನಸು ಕಂಡಿದ್ದ ಕೆಲಸವನ್ನ ಬಿಟ್ಟಿಲ್ಲ ಜಾಹ್ನವಿ ಇಂದಿಗೂ ಬಿಡುವಿನ ವೇಳೆಯಲ್ಲಿ ಮತ್ತು ಪ್ರತಿನಿತ್ಯ ಸಂಜೆ ಹಾಸ್ಪಿಟಲ್ ನಲ್ಲಿ ರೋಗಿಗಳ ಸೇವೆಗೆ ಹಾಜರ್ ಆಗಿಬಿಡ್ತಾರೆ. ಇತ್ತ ಕನಸಿನ ಕೆಲಸವನ್ನು ಅತ್ತ ಸ್ನೇಹಿತರು ಆಸೆ ಪಟ್ಟತೆ ಅಭಿನಯವನ್ನ ಜಾಹ್ನವಿ ಸರಿದೂಗಿಸುತ್ತಾ ಜನರ ಸೇವೆಯ ಜೊತೆಯಲ್ಲಿ ಕಲಾ ಸೇವೆಯನ್ನೂ ಮುಂದುವರೆಸುತ್ತಾ ಬಂದಿದ್ದಾರೆ.

ಇದನ್ನು ಓದಿ:

1. ಅಂಧತ್ವಕ್ಕೆ ಸೆಡ್ಡು ಹೊಡೆದ ಭಕ್ತಿ – ನಾಗ್ಪುರ ವಿವಿಯಲ್ಲಿ ಚಿನ್ನದ ಪದಕ ಪಡೆದ ಯುವತಿ 

2. ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ

3. ಬದುಕಿಗೆ ಹೊಸ "ದಿಕ್ಕು" ತೋರುವ ಜೀವಸೆಲೆ "ನರ್ಮದಾ" 

Related Stories