ಗಂಟೆಗಟ್ಟಲೆ ಮಾತಾಡಬೇಕಾ ಇಲ್ಲಿದೆ 'ನಾನು' ಆ್ಯಪ್!

ಕೃತಿಕಾ

ಗಂಟೆಗಟ್ಟಲೆ ಮಾತಾಡಬೇಕಾ ಇಲ್ಲಿದೆ 'ನಾನು' ಆ್ಯಪ್!

Thursday March 24, 2016,

2 min Read

ಮೊಬೃಲ್ ಕಾಲಿಂಗ್ ಆ್ಯಪ್​ಗಳು ಬಂದಮೇಲೆ ಟೆಲಿಕಾಂ ಕಂಪನಿಗಳು ಕರೆಗಳಿಂದ ಪಡೆಯುತ್ತಿದ್ದ ಲಾಭದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅದಕ್ಕಾಗಿಯೇ ಟೆಲಿಕಾಂ ಕಂಪನಿಗಳು ಈಗ ಡಾಟ ಪ್ಲಾನ್ ಗಳ ದರವನ್ನು ಬೇಕಾಬಿಟ್ಟಿ ಹೆಚ್ಚಳ ಮಾಡಿ ಹಿಂಬಾಗಿಲ ಮೂಲಕ ಹಣ ಮಾಡಲು ಮುಂದಾಗುತ್ತಿವೆ. ಕಾಲಿಂಗ್ ಆ್ಯಪ್ ಗಳಿದ್ದರೂ ಅವು ಕೇವಲ 3ಜಿ ನೆಟ್ ವರ್ಕ್ ನಲ್ಲಿ ಮಾತನಾಡಬಹುದಷ್ಟೇ. ಆದರೆ ಸಿಂಗಾಪುರದ ಕಂಪನಿಯೊಂದು 2ಜಿ ನೆಟ್ ವರ್ಕ್ ನಲ್ಲೂ ಕರೆ ಮಾಡುವ ಸೌಲಭ್ಯವುಳ್ಳ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಆ್ಯಪ್ ನ ಹೆಸರೇ ನಾನು!

image


ಸಿಂಗಪೂರ ಮೂಲದ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸುವ ಖಾಸಗಿ ಕಂಪನಿಯೊಂದು ‘ನಾನು’ ಎಂಬ ಫ್ರೀ ಕಾಲಿಂಗ್‌ ಆ್ಯಪ್‌ ಬಿಡುಗಡೆ ಮಾಡಿದೆ. ಈ ಆ್ಯಪ್ ಮೂಲಕ ಗ್ರೂಪ್‌ ಮೆಸೆಜಿಂಗ್‌, ಕರೆ ಮಾಡುವ ಸೌಲಭ್ಯ, ಉಚಿತ ಸಂದೇಶ ರವಾನೆ ಮಾಡುವ ಸೌಲಭ್ಯಗಳಿವೆ.

ವೈಫೈ ಇಲ್ಲವೆ ಮೊಬೈಲ್‌ ಇಂಟರ್‌ನೆಟ್‌ ಮೂಲಕ ಈ ಆ್ಯಪ್ ಕೆಲಸ ಮಾಡುತ್ತದೆ. ಉಳಿದ ಆ್ಯಪ್ ಗಳಿಗೆ ಹೋಲಿಕೆ ಮಾಡಿದರೆ ಇದು ಬಳಸುವ ಡಾಟ ಪ್ರಮಾಣ ಕಡಿಮೆ. ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಸಂವಹನಕ್ಕೆ ಇದು ಹೆಚ್ಚು ಉಪಯುಕ್ತವಾಗಿದೆ. ಜಗತ್ತಿನ ಯಾವುದೇ ಮೂಲಯಲ್ಲಿ ರುವವರೊಂದಿಗೆ ಉಚಿತ ಕರೆ ಮತ್ತು ಮೆಸೇಜ್‌ ವ್ಯವಸ್ಥೆ ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶ. 2ಜಿ, 3ಜಿ ಹೀಗೆ ಯಾವ ಸಂಪರ್ಕ ಬಳಸುತ್ತಿದ್ದೀರಾ ಎನ್ನುವುದು ಮುಖ್ಯವಲ್ಲ ಅನ್ನೋದು ಆ್ಯಪ್ ಅಭಿವೃದ್ದಿಪಡಿಸಿರುವ ಮಾರ್ಟಿನ್‌ ನಿಗೇಟ್‌ ಅಭಿಪ್ರಾಯ.

image


ಇದು 2ಜಿ ನೆಟ್‌ವರ್ಕ್‌ನಲ್ಲಿಯೂ ಕಾರ್ಯ ನಿರ್ವಹಿಸುತ್ತದೆ. ಸ್ಕೈಪ್‌ (875ಕೆ.ಬಿ) ಮತ್ತು ವಾಟ್ಸ್‌ಆ್ಯಪ್‌ಗೆ (740ಕೆ.ಬಿ) ಹೋಲಿಸಿದರೆ, ಇದು ಒಂದು ನಿಮಿಷಕ್ಕೆ 105 ಕೆ.ಬಿ ಬಳಸಿಕೊಳ್ಳುತ್ತದೆ. ಹೀಗಾಗಿ ಭಾರತದಂತಹ ದೇಶಗಳಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸಿದೆ.

ಭಾರತದಂತಹ ದೇಶದಲ್ಲಿ ಇನ್ನು ಇಂಟರ್ ನೆಟ್ ನ ವೇಗ ಹೇಳಿಕೊಳ್ಳುವಂತಿಲ್ಲ. 3ಜಿ ನೆಟ್ ವರ್ಕ್ ಅಂದರೂ ಅದರ ವೇಗ 2ಜಿಯಂತೆಯೇ ಇರುತ್ತದೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ವೇಗದ ಇಂಟರ್ ನೆಟ್ ಸೌಲಭ್ಯವಿದೆ. ಈ ಕಾರಣದಿಂದಾಗಿ ಗ್ರಾಮೀಣ ಪ್ರದೇಶ ಮತ್ತು ಕಡಿಮೆ ಇಂಟರ್ ನೆಟ್ ವೇಗವಿರುವ ಪ್ರದೇಶಗಳ ಜನರು ಈ ಆ್ಯಪ್ ಅನ್ನು ಬಳಸಿ ಉಚಿತವಾಗಿ ಕರೆ ಮಾಡಬಹುದಾಗಿದೆ. 2ಜಿ ನೆಟ್ ವರ್ಕ್ ನಲ್ಲಿಯೂ ಅತ್ಯುತ್ತಮ ಗುಣಮಟ್ಟದ ಕರೆ ಮಾಡಬಹುದಾದ ಸೌಲಭ್ಯವಿರುವುದು ಈ ಆ್ಯಪ್ ನ ಹೆಗ್ಗಳಿಕೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಈ ಆ್ಯಪ್ ಲಭ್ಯವಿದ್ದು ಡೌನ್ ಲೋಡ್ ಮಾಡಿಕೊಂಡು ಇನ್ಸ್ ಸ್ಟಾಲ್ ಮಾಡಿಕೊಂಡರೆ ನೀವೂ ಗಂಟೆಗಟ್ಟಲೆ ಉಚಿತವಾಗಿ ಮಾತನಾಡಬಹುದು.