ಫೇಸ್​ಬುಕ್​, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್​- ಡಬ್​ಸ್ಮಾಶ್​ನಲ್ಲಿ ಇವರು ಸೂಪರ್​..!

ಟೀಮ್​ ವೈ.ಎಸ್​. ಕನ್ನಡ

ಫೇಸ್​ಬುಕ್​, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್​- ಡಬ್​ಸ್ಮಾಶ್​ನಲ್ಲಿ ಇವರು ಸೂಪರ್​..!

Thursday May 25, 2017,

2 min Read

ಡಬ್​ಸ್ಮಾಶ್ ಮಾಡುವುದು ಇತ್ತೀಚೆಗೆ ಯುವಜನರಲ್ಲಿ ಟ್ರೆಂಡ್ ಆಗಿ ಬೆಳೆಯುತ್ತಿದೆ. ಇದನ್ನೇ ಬಳಸಿಕೊಂಡು ಮೂವರು ಯುವಕರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫ್ಯಾನ್​ಫಾಲೋವರ್​ಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಎಂಬುದು ಬರೀ ಟೈಮ್​ಪಾಸ್​ಗಷ್ಟೇ ಇರುವ ವ್ಯವಸ್ಥೆ ಅಲ್ಲ. ಅಲ್ಲಿ ತಮ್ಮದೇ ಆದ ಇಮೇಜ್ ಅನ್ನು, ಅಭಿಮಾನಿಗಳನ್ನು ಗಳಿಸಬಹುದು ಎಂಬುದನ್ನು ಈ ಮೂವರು ಮಾಡಿ ತೋರಿಸಿದ್ದಾರೆ. ಹಂಪಿಯ ರಾಘವೇಂದ್ರ, ಬೆಂಗಳೂರಿನ ಸುಷ್ಮಿತಾ ಶೇಷಗಿರಿ ಮತ್ತು ಕಾವ್ಯಾ ಶೆಟ್ಟಿ ಎಂಬುವರು ಡಬ್​ಸ್ಮಾಶ್ ಮೂಲಕವೇ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್​ನಲ್ಲಿ ಫೇಮಸ್ ಆಗಿದ್ದಾರೆ.

image


ಹಂಪಿಯಲ್ಲಿ ಎಂಬಿಎ ಓದುತ್ತಿರುವ ರಾಘವೇಂದ್ರ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿರುವ ಸುಷ್ಮಿತಾ ಶೇಷಗಿರಿ, ಎಂಟೆಕ್ ಓದುತ್ತಿರುವ ಕಾವ್ಯಾ ಶೆಟ್ಟಿ ಒಂದಿಷ್ಟು ಕನ್ನಡ ಮತ್ತು ತೆಲುಗು ಹಾಡುಗಳು, ಸಿನಿಮಾದ ಸನ್ನಿವೇಶಗಳಿಗೆ ಡಬ್​ಸ್ಮಾಶ್ ಮಾಡಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಫಾಲೋವರ್​​ಗಳನ್ನು ಪಡೆದಿದ್ದಾರೆ.

ಇದನ್ನು ಓದಿ: ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ರು- ಬಡವರ ಆರೋಗ್ಯ ಸೇವೆಗೆ ನಿಂತ ಮೊಬೈಲ್ ಡಾಕ್ಟರ್..!

ಇನ್‌ಸ್ಟಾಗ್ರಾಮ್‌ನಿಂದ ಸ್ನೇಹ

ರಾಘವೇಂದ್ರ ಹಂಪಿಯಲ್ಲಿ ಬಿಬಿಎಂ ಮಾಡುತ್ತಿದ್ದಾಗ ಆಂಧ್ರಪ್ರದೇಶದಲ್ಲೊಬ್ಬರು ಡಬ್ ಸ್ಮ್ಯಾಶ್ ಮಾಡಿ ಸಾಕಷ್ಟು ಫೇಮಸ್ ಆಗಿದ್ದರು. ಅದನ್ನು ಕಂಡ ಅವರು ಕನ್ನಡ ಹಾಡುಗಳಿಗೂ ಅದೇ ರೀತಿಮಾಡಿ ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್‌ ಮಾಡಲು ಆರಂಭಿಸಿದರು. ಆಗ ಸ್ನೇಹಿತರಾದವರೇ ಈ ಸುಷ್ಮಿತಾ ಮತ್ತು ಕಾವ್ಯಾ ಶೆಟ್ಟಿ. ಇವರು ಬೆಂಗಳೂರಿನಲ್ಲಿ ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ಅಭಿನಯ ಮಾಡಿ ರಘುಗೆ ಕಳುಹಿಸುತ್ತಿದ್ದರಂತೆ. ಅದನ್ನು ನೋಡಿಕೊಂಡು ರಘು ಅದೇ ಹಾಡಿಗೆ ‘ಭಾವ ತುಂಬಿ ಅಭಿನಯಿಸಿ ಎರಡನ್ನು ಕೊಲ್ಯಾಜ್ ಮಾಡಿ ಫೇಸ್ ಬುಕ್ ಮತ್ತು ಇನ್​ಸ್ಟಾಗ್ರಾಮ್​ಗೆ ಹಾಕಿದ್ದರು. ಹಾಡುಗಳಿಗೆ ಇವರಿಬ್ಬರ ನೈಜಾಭಿನಯ ಕಂಡ ಸಾವಿರಾರು ಮಂದಿ ಲೈಕ್ ಒತ್ತಿದ್ದಾರೆ. ಜತೆಗೆ ಇವರನ್ನು ಫಾಲೋ ಮಾಡುತ್ತಿದ್ದಾರೆ.

image


ಫ್ಯಾನ್ ಪೇಜ್ ಸೃಷ್ಟಿ

ರಾಘವೇಂದ್ರ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್​ರ ಪಕ್ಕಾ ಫ್ಯಾನ್. ನೋಡಲು ಸಹ ಸ್ವಲ್ಪ ಅವರಂತೆಯೇ ಇದ್ದಾರೆ. ಸುಷ್ಮಿತಾ ಮತ್ತು ರಘು ಅವರ ವಿಡಿಯೋಗಳನ್ನು ನೋಡಿದ ಒಂದಿಷ್ಟು ಮಂದಿ ಅವರಿಗಾಗಿ ಒಂದು ಫೇಸ್ ಬುಕ್ ಪೇಜ್​ ಅನ್ನು ಕ್ರಿಯೇಟ್ ಮಾಡಿದ್ದಾರೆ. ಅದಕ್ಕೆ ‘ಅಲ್ಲು, ರಘು ಆ್ಯಂಡ್ ಸುಷ್ಮಿತಾ ಫ್ಯಾನ್ಸ್ ಕ್ಲಬ್’ ಎಂದು ಹೆಸರಿಟ್ಟಿದ್ದಾರೆ. ರಘುಗೆ ಒಂದು ಬೇರೆಯೇ ಫ್ಯಾನ್ ಪೇಜ್ ಸಹ ಕ್ರಿಯೇಟ್ ಮಾಡಿದ್ದಾರೆ. ಈ ಪೇಜ್​ಗಳನ್ನು 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿ 14 ಸಾವಿರ ಜನ ಫಾಲೋ ಮಾಡುತ್ತಿದ್ದಾರೆ.

" ಸ್ನೇಹಿತರ ಜತೆ ಸೇರಿಕೊಂಡು ಹವ್ಯಾಸಕ್ಕಾಗಿ ಮಾಡುತ್ತಿದ್ದ ವಿಡಿಯೋಗಳು ಇಷ್ಟೊಂದು ಗುರುತಿಸಲ್ಪಡುತ್ತವೆ ಎಂಬುದು ತಿಳಿದಿರಲಿಲ್ಲ. ಇನ್ಸ್ಟಾಗ್ರಾಮ್ ಒಂದರಲ್ಲಿ 10 ಸಾವಿರ ಜನ ನನ್ನನ್ನುಫಾಲೋ ಮಾಡುತ್ತಿದ್ದಾರೆ. ಇದರಿಂದ ನನಗೆ ಹೆಚ್ಚು ಖುಷಿಯಾಗುತ್ತಿದೆ."
- ಅಲ್ಲು ರಾಘವೇಂದ್ರ, ವಿದ್ಯಾರ್ಥಿ

ಹಂಪಿಯ ರೈತ ಕುಟುಂಬದ ಹುಡುಗನಾಗಿರುವ ರಘು ಖ್ಯಾತಿ ಗಳಿಸಬೇಕು ಎಂಬ ಉದ್ದೇಶದಿಂದ ಈ ವಿಡಿಯೋಗಳನ್ನು ಹರಿಬಿಡುತ್ತಿಲ್ಲ. ಬದಲಿಗೆ ಸಾಮಾಜಿಕ ಜಾಲತಾಣದ ಮೂಲಕ ಒಂದಿಷ್ಟು ಮಂದಿಗೆ ರಿಲ್ಯಾಕ್ಸ್ ನೀಡುತ್ತಿರುವುದಾಗಿ ಹೇಳುತ್ತಾರೆ. ಒಂದೆರೆಡು ಸಿನಿಮಾಗಳಿಗೆ ಆಫರ್ ಬಂದಿದ್ದರೂ, ಅವರು ಆ ಕಡೆ ಗಮನ ಹರಿಸಿಲ್ಲವಂತೆ.

" ಕಿರು ಚಿತ್ರಗಳಲ್ಲಿ ನಟಿಸಿದ ಅನುಭವವಿದೆ. ಡಬ್​ಸ್ಮಾಶ್​​ ಮೂಲಕ ನಮ್ಮ ಪ್ರತಿಭೆಯನ್ನು ಹೊರಜಗತ್ತಿಗೆ ತೋರಿಸಿದ್ದೇವೆ. ಜನ ಅದನ್ನು ಮೆಚ್ಚಿರುವ ರೀತಿಗೆ ನಾವು ನಿಜಕ್ಕೂ ಅಚ್ಚರಿ ಪಟ್ಟಿದ್ದೇವೆ."
- ಸುಷ್ಮಿತಾ ಶೇಷಗಿರಿ, ವಿದ್ಯಾರ್ಥಿನಿ

ನೃತ್ಯದಲ್ಲಿ ಆಸಕ್ತಿ ಹೊಂದಿರುವ ಸುಷ್ಮಿತಾಗೆ ಬೆಸ್ಟ್ ಡ್ಯಾನ್ಸರ್ ಆಗಬೇಕು ಎಂಬ ಆಸೆಯಿದೆಯಂತೆ. ಕಾವ್ಯಾ ಶೆಟ್ಟಿ ಸಹ ಇಂಡಿಪೆಂಡೆಂಟ್ ಆರ್ಟಿಸ್ಟ್ ಆಗಿ ಬೆಳೆಯಬೇಕು ಎಂಬ ಕಾರಣಕ್ಕೆಸಾಮಾಜಿಕ ಜಾಲತಾಣವನ್ನು ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಮೂವರು ಸೇರಿಕೊಂಡು ಸಾಮಾಜಿಕ ಜಾಲತಾಣಗಳನ್ನು ತಮ್ಮ ಬೆಳವಣಿಗೆಗಾಗಿ ಬಳಸಿಕೊಳ್ಳುತ್ತಿದ್ದಾರೆ. 

ಇದನ್ನು ಓದಿ:

1. ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"

2. 5 ದಿನಗಳಲ್ಲಿ 2 ಬಾರಿ ಮೌಂಟ್ ಎವರೆಸ್ಟ್ ಏರಿದ ಧೀರ ಮಹಿಳೆ

3. ಪಾರಿವಾಳಗಳ ಪಾಲಿಗೆ ಅನ್ನದಾತ- ಪಕ್ಷಿ ಸಂಕುಲವನ್ನು ಕಾಪಾಡುವ ಸಂರಕ್ಷಕ