ರಾಷ್ಟ್ರರಾಜಧಾನಿ ನವದೆಹಲಿ ಮೂಲದ ಸೇವಾ ಸಂಸ್ಥೆ ಜೋ ಹುಕುಂನ ಪ್ರಗತಿವೃದ್ಧಿ

ಟೀಮ್​​ ವೈ.ಎಸ್​​. ಕನ್ನಡ

ರಾಷ್ಟ್ರರಾಜಧಾನಿ ನವದೆಹಲಿ ಮೂಲದ ಸೇವಾ ಸಂಸ್ಥೆ ಜೋ ಹುಕುಂನ ಪ್ರಗತಿವೃದ್ಧಿ

Sunday December 13, 2015,

2 min Read

ಜೋ ಹುಕುಂ ಎಂಬುದು ಸಹಕಾರಿ ಸೇವಾ ವಲಯದ ಸ್ಟಾರ್ಟ್ ಅಪ್ ಸಂಸ್ಥೆ. ಇತ್ತೀಚೆಗಷ್ಟೇ ಜೋ ಹುಕುಂ ಬಹಿರಂಗಪಡಿಸದ ಮೊತ್ತವೊಂದನ್ನು ಹೆಚ್ಚುವರಿಯಾಗಿ ಹೂಡಿಕೆ ಮಾಡಿಕೊಂಡಿದೆ. ಟ್ರ್ಯಾಕ್ಸನ್ ಲ್ಯಾಬ್ಸ್ ನಿಂದ ಜೋಹುಕುಂಗೆ ಹೂಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಸಿಟ್ರಸ್ ಪೇಮೆಂಟ್ ಸಂಸ್ಥಾಪಕ ಜಿತೇಂದ್ರ ಗುಪ್ತ ಹಾಗೂ ಹೆಲ್ತ್ ಕಾರ್ಟ್ ಸಂಸ್ಥಾಪಕ ಪ್ರಶಾಂತ್ ಟಂಡನ್ ನೇತೃತ್ವ ವಹಿಸಿರುವ ಇನ್ನೊಂದು ಸಂಸ್ಥೆಯಿಂದಲೂ ಹೂಡಿಕೆ ಗಳಿಸಿಕೊಂಡಿದೆ.

ಸಂಸ್ಥೆ ಹೇಳುವಂತೆ ಈಗ ಈ ಸ್ಟಾರ್ಟ್ ಅಪ್ ಪ್ರಾರಂಭಿಕ ಹಂತದಲ್ಲಿದ್ದು ಮುಂದಿನ ಸುತ್ತುಗಳ ಕಾರ್ಯಾಚರಣೆಗಾಗಿ ಈಗಲೇ ಹೂಡಿಕೆ ಮಾಡಿಕೊಳ್ಳಲಾಗಿದೆ. ಹೆಲ್ತ್ ಕಾರ್ಟ್‌ನ ಮಾಜಿ ಉದ್ಯೋಗಿಗಳು ಸೇರಿ ಸ್ಥಾಪಿಸಿರುವ ಸಂಸ್ಥೆ ಜೋ ಹುಕುಂ. ವೈಯಕ್ತಿಕವಾಗಿ ಗ್ರಾಹಕರೊಂದಿಗೆ ಚಾಟ್ ಮಾಡುವ ಮೂಲಕ ಆರ್ಡರ್ ತೆಗೆದುಕೊಂಡು ಪೂರೈಸುವ ವೇದಿಕೆಯನ್ನು ಜೋ ಹುಕುಂ ಒದಗಿಸಿಕೊಡುತ್ತದೆ. ಈ ಮೂಲಕ ಸಂಸ್ಥೆ ತನ್ನ ಗ್ರಾಹಕರಿಗೆ ಪರಿಣಾಮಕಾರಿ ಸೇವೆಯನ್ನು ಒದಗಿಸುತ್ತದೆ ಎನ್ನುವುದು ಅವರ ಭರವಸೆ.

image


ಜೋ ಹುಕುಂನ ಗ್ರಾಹಕರು ವೈವಿದ್ಯಮಯ ಸೇವೆಗಳನ್ನು ಕೇವಲ ಚಾಟ್ ಮಾಡುವ ಮೂಲಕ ಪಡೆದುಕೊಳ್ಳಬಹುದು. ಜೊತೆಗೆ ಇದೇ ಮಾದರಿಯಲ್ಲಿ ಏಕರೂಪ ಪಾವತಿ ಆಯ್ಕೆಯೂ ಇದೆ. ಸ್ಥಳೀಯ ಶಾಪಿಂಗ್, ಪಿಕ್ ಎಂಡ್ ಡ್ರಾಪ್ ಸೇವೆಗಳು, ಆಹಾರೋತ್ಪನ್ನಗಳ ಪೂರೈಕೆ, ರಿಪೇರಿ, ಸಿನಿಮಾ ಟಿಕೆಟ್, ಕಾರ್ಯಕ್ರಮಗಳಿಗೆ ಸಂಬಂಧಿಸಿದ ಟಿಕೆಟ್, ಟ್ರಾವೆಲ್ ಸೇವೆಗಳು, ರೆಸ್ಟೋರೆಂಟ್ ಬುಕಿಂಗ್ ಸರ್ವಿಸ್, ಟ್ಯಾಕ್ಸಿ, ರೀಚಾರ್ಜ್ ಸೇವೆಗಳು, ಬಿಲ್ ಪಾವತಿ ಇನ್ನಿತರ ಗ್ರಾಹಕ ಸಂಬಂಧಿ ದಿನಬಳಕೆಯ ಸೇವೆಗಳನ್ನು ಜೋ ಹುಕುಂ ವೇದಿಕೆ ನಿರ್ವಹಿಸುತ್ತದೆ.

ಇ-ಕಾಮರ್ಸ್‌ನಲ್ಲಿ ಗ್ರಾಹಕರಿಗೆ ವೈವಿಧ್ಯಮಯ ಸೇವೆಗಳನ್ನು ವಿವಿಧ ಬಗೆಯ ಆಕರ್ಷಕ ಆಫರ್ಗಳ ಮೂಲಕ ನೀಡುವುದು ಲಾಭದಾಯಕ ಹಾಗೂ ಗ್ರಾಹಕರ ವಿಶ್ವಾಸಾರ್ಹತೆ ಪಡೆದುಕೊಳ್ಳುವುದಕ್ಕೆ ಸಹಕಾರಿ ಎಂದು ಜೋ ಹುಕುಂನ ಸಹ ಸಂಸ್ಥಾಪಕ ಅಜಿತ್ ಖುಶ್ವಾಹ್ ಹೇಳಿದ್ದಾರೆ. 2015ರ ಜುಲೈನಿಂದ ಕಾರ್ಯಾಚರಣೆ ನಡೆಸುತ್ತಿರುವ ಜೋ ಹುಕುಂನ ಮೊದಲ ಸ್ವರೂಪ ಗೋ ಗೆಟ್ ಸ್ಪೀಡೀ. ಆದರೆ ಬಳಿಕ ಗೋ ಗೆಟ್ ಸ್ಪೀಡೀ ಅನ್ನುವ ಸಂಸ್ಥೆಯೇ ಹೊಸ ಆಲೋಚನೆ, ತಂತ್ರಜ್ಞಾನ, ಹೂಡಿಕೆ ಮತ್ತು ಪರಿಣಿತಿ ಸಾಧಿಸಿ ಜೋ ಹುಕುಂ ಆಯಿತು. ಹಳೆ ದೆಹಲಿ ಮತ್ತು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಜೋ ಹುಕುಂ ಮುಂಬರುವ ದಿನಗಳಲ್ಲಿ ಎಲ್ಲಾ ಮುಖ್ಯಪಟ್ಟಣಗಳಲ್ಲಿ ಕಾರ್ಯಾಚರಣೆ ನಡೆಸಲು ಯೋಜನೆ ಹೆಣೆದಿದೆ.