ಮನೆಯಲ್ಲೇ ಫ್ರೆಶ್​​​​ ಆಗಿ- ಮೇಕಪ್​​ ಕೂಡ ಮಾಡ್ಕೊಳ್ಳಿ- ಇದು ಗೆಟ್​​​ಲುಕ್​​ನ ಸ್ಪೆಷಾಲಿಟಿ

ನೀಲಾ ಶಾಲು

0

ಮಹಿಳೆಯರಿಗೆ ಮೇಕಪ್ ಅಂದ್ರೆ ಪ್ರಾಣ. ಕನ್ನಡಿ ಮುಂದೆ ನಿಂತರೆ ಸಮಯ ಹೋಗುವುದೇ ಅವರಿಗೆ ತಿಳಿಯೋದಿಲ್ಲ. ಕೆಲವು ಮಹಿಳೆಯರು ತಮ್ಮ ಹೆಚ್ಚಿನ ಸಮಯವನ್ನು ಬ್ಯೂಟಿ ಪಾರ್ಲರ್​​ನಲ್ಲಿ ಕಳೆಯುತ್ತಾರೆ. ಅದ್ರಲ್ಲೂ ಇತ್ತೀಚಿನ ದಿನದಲ್ಲಿ ಬಹುತೇಕ ಎಲ್ಲಾ ಪಾರ್ಲರ್ ಗಳಿಗೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಅಲ್ಲಿ ಹೋಗಿ ಗಂಟೆಗಟ್ಟಲೇ ಕಾದು ನಮಗೆ ಬೇಕಾದ ಸೇವೆಯನ್ನ ಪಡೆಯಬೇಕು. ಆದ್ರೆ ಇನ್ನು ಮುಂದೆ ಆ ಚಿಂತೆ ಬೇಡ. ಪಾರ್ಲರಿಗೆ ಹೋಗಿ ಗಂಟೆಗಟ್ಟಲೇ ಕಾಯುವ ಅವಶ್ಯಕತೆ ಇಲ್ಲ. ಜಸ್ಟ್ ಒಂದು ಮೇಸೆಜ್ ಮಾಡಿದ್ರೆ ಸಾಕು. ನಿಮ್ಮ ಮನೆಯ ಬಾಗಿಲಿಗೆ ಬಂದು ನಿಮಗೆ ಬೇಕಾದ ಸೇವೆಯನ್ನ ಒದಗಿಸುತ್ತಾರೆ. ಅದು ಹೇಗೆ ಅಂತೀರಾ..?

ಹೌದು ಈ ರೀತಿಯ ಸೇವೆಗಳನ್ನ ಒದಗಿಸೋಕ್ಕೆ ಎಂದು ಒಂದು ಹೊಸ ಆ್ಯಪ್ ಬಂದಿದೆ. ಅದೇ Getlook. ಈ ಆ್ಯಪ್ ನ್ನು ಡೌನ್ ಲೋಡ್​ ಮಾಡಿಕೊಂಡ್ರೆ ಸಾಕು. ನಿಮಗೆ ಯಾವಗಾ ಬೇಕೋ ಆಗ ಬ್ಯೂಟಿಶಿಯನ್ ನಿಮ್ಮ ಮನೆಗೆ ಬಂದು, ನಿಮಗೆ ಬೇಕಾದ ಸೇವೆಗಳನ್ನ ಒದಗಿಸುತ್ತಾರೆ. ನಿಮ್ಮ ಮನೆಯ ಸಮೀಪ ಯಾವ ಪಾರ್ಲರ್​​ನಲ್ಲಿ ಅತ್ಯುತ್ತಮ ಸೌಂದರ್ಯ ವೃತ್ತಿಪರರು ಇರುತ್ತಾರೋ ಅವರ ಮಾಹಿತಿಯನ್ನ ನಿಮಗೆ ನೀಡಿ, ಅವರನ್ನ ನಿಮ್ಮ ಮನೆಯ ಬಾಗಿಲಿಗೆ ಕಳುಹಿಸುತ್ತಾರೆ.

ದಿನದಿಂದ ದಿನಕ್ಕೆ ಹೊಸ ಹೊಸ ಆ್ಯಪ್​ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪತ್ರಿಯೊಂದು ವಸ್ತುವನ್ನು ಸುಲಭವಾಗಿ ಆನ್​​ಲೈನ್ ಮೂಲಕ ಬುಕ್ ಮಾಡಿ ಪಡೆಯಬಹುದು. ಅಂತಹ ಒಂದು ಲಿಸ್ಟ್​​ನಲ್ಲಿ ಈ ಗೆಟ್ ಲುಕ್ ಎಂಬ ಹೊಸ ಆ್ಯಪ್ ಸೇರಿಕೊಂಡಿದೆ. ಬ್ಯೂಟಿ ಪಾರ್ಲರ್​​ನಲ್ಲಿ ಯಾವೆಲ್ಲಾ ಸೇವೆಗಳು ಲಭ್ಯವಿರುತ್ತದೋ, ಆ ಎಲ್ಲಾ ಸೇವೆಗಳನ್ನು ಈ ಆ್ಯಪ್ ಒದಗಿಸಿಕೊಡುತ್ತದೆ.

ಬ್ಯೂಟಿಪಾರ್ಲರ್ ಸೇವೆಗಳು ಸುಲಭವಾಗಿ ನಿಮ್ಮ ಮನೆಯಲ್ಲಿ ಲಭ್ಯ..!

ಹೇರ್​​ಕಟ್, ವ್ಯಾಕ್ಸಿಂಗ್, ಥ್ರೆಡ್ಡಿಂಗ್, ಸ್ಪಾ, ಮಸಾಜ್, ಹಸ್ತಾಲಂಕಾರ, ಪಾದೋಪಚಾರ, ವಧುವಿನ ಮೇಕಪ್, ಬ್ಲೀಚ್​, ಕೇಶವಿನ್ಯಾಸ ಹೀಗೆ ಪ್ರತಿಯೊಂದು ಸೇವೆಯನ್ನು ಸಹ, ಬೇಕಾದವರು ತಮ್ಮ ಮನೆಯಲ್ಲೇ ಪಡೆಯಬಹುದು. ಇದಕ್ಕೆ ಯಾವುದೇ ರೀತಿ ಹೆಚ್ಚಿನ ಹಣ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಜಸ್ಟ್ ನೀವು ಆ್ಯಪ್​​ನ್ನು ಓಪನ್ ಮಾಡಿ ನಿಮಗೆ ಯಾವ ದಿನ, ಎಷ್ಟು ಗಂಟೆಗೆ, ಯಾವ ಬ್ಯೂಟಿಷಿಯನ್ ಜೊತೆಗೆ ನಿಮ್ಮ ಫೋನ್ ನಂಬರ್ ಮನೆಯ ವಿಳಾಸವನ್ನ ಮೇಸೆಜ್ ಮಾಡ್ರಿ ಸಾಕು, ಅವರು ನಿಮಗೆ 2 ಗಂಟೆಯೊಳಗೆ ನಿಮ್ಮ ಮೊಬೈಲ್ ನಂಬರ್​​ಗೆ ಒಂದು ಕನ್ಫರ್​ಮೇಷನ್ ಮೇಸೆಜ್ ಕಳುಹಿಸುತ್ತಾರೆ. ಆ ಸೇವೆಗಳನ್ನು ನೀವು ಬುಕ್ ಮಾಡಿದ, ದಿನ ಸರಿಯಾದ ಸಮಯಕ್ಕೆ ನಿಮ್ಮ ಬ್ಯೂಟಿಷಿಯನ್ ನಿಮ್ಮ ಮೆನಗೆ ಬಂದು, ನಿಮಗೆ ಬೇಕಾದ ಸೇವೆಯನ್ನ ಒದಗಿಸುತ್ತಾರೆ. ಬೇಕಾದ್ರೆ ಒಬ್ಬರಿಗಿಂತ ಹೆಚ್ಚು ಜನ ಬ್ಯೂಟಿಷಿಯನ್ನ ಕೂಡ ನೀವು ನಿಮ್ಮ ಸೇವೆಗೆ ಬುಕ್ ಮಾಡಬಹುದು. ಮನೆಯ ಬಳಿ ಇರುವ ಪಾರ್ಲರ್​​ಗಳಿಗೆ ಹೋಗಿ ಗಂಟೆಗಟ್ಟಲೇ ಕಾಯುವ ಅವಶ್ಯಕತೆ ಇಲ್ಲವೇ ಇಲ್ಲ. ನೀವು ಯಾವ ಸಮಯದಲ್ಲಿ ಫ್ರೀ ಇರುತ್ತೀರೊ ಆ ಸಮಯದಲ್ಲಿ ಬುಕ್ ಮಾಡಿ ಕೊಂಡು, ಆರಾಮಗಿ ಮನೆಯಲ್ಲಿ ಕುಳಿತು ಸೇವೆಗಳನ್ನ ಪಡೆದು ಚೆಂದಾ ಕಾಣಬಹುದು.

ಈ ಎಲ್ಲಾ ಸೇವೆಗಳನ್ನು Getlook ನಲ್ಲಿ ಪಡೆಯಬಹುದು

  • ಫೇಶಿಯಲ್
  • ಬ್ಲೀಚ್
  • ಹೇರ್ ಕಟ್
  • ಹೇರ್ ಟ್ರೀಟ್ ಮೆಂಟ್
  • ಕೇಶವಿನ್ಯಾಸ
  • ಕೂದಲು ಬಣ್ಣ
  • ಸ್ಪಾ
  • ಥ್ರೇಡಿಂಗ್
  • ಪಾದೋಪಚಾರ

ಈ ಎಲ್ಲಾ ಸೌಲಭ್ಯಗಳನ್ನು ಬಹಳ ಗುಣಮಟ್ಟದ ಪ್ರಾಡಕ್ಟ್ ಗಳನ್ನು ಉಪಯೋಗಿಸಿ ಉತ್ತಮ ಫಲಿತಾಂಶವನ್ನು ನೀಡುತ್ತಾರೆ. ಇನ್ನು ಈ ಸೇವೆಯನ್ನು ಪ್ರತಿ ತಿಂಗಳು ಪಡೆಯಬೇಕು ಎಂದ್ರೆ ನಿಮ್ಮ ಐಡಿ ಫ್ರೂಫ್​​ ಹಾಗೂ ಸಂಬಂಧ ಪಟ್ಟ ಕೆಲವು ದಾಖಲೆ ನೀಡಿದ್ರೆ ಸಾಕು ರಿಯಾಯಿತಿ ಜೊತೆ ಎಲ್ಲ ಸೌಲಭ್ಯಗಳು ನಿಮ್ಮ ಪ್ರತಿ ತಿಂಗಳು ಸಿಗುತ್ತದೆ. ಈಗಾಗಲ್ಲೇ ಪುಣೆ, ಮುಂಬೈ, ಹೈದಾರಬಾದ್, ದೆಹಲಿ ಹಾಗೂ ಬೆಂಗಳೂರಿನಲ್ಲಿ ಸೇವೆಯನ್ನು ನೀಡುತ್ತಿರುವ ಗೆಟ್ ಲುಕ್ ಆ್ಯಪ್ ಇನ್ನು ಸ್ವಲ್ಪ ವರ್ಷಗಳಲ್ಲಿ ಇಡೀ ದೇಶದಲ್ಲೇ ತನ್ನ ಶಾಖೆಯನ್ನು ತೆರೆಯಲ್ಲಿದೆ.

Related Stories