ಏನಾದರು ದಾಖಲೆ ಮಾಡಬೇಕು... ಜಗತ್ತೇ ತಿರುಗಿ ನೋಡಬೇಕು..!

ಅಗಸ್ತ್ಯ

0

ಏನಾದರೊಂದು ದಾಖಲೆ ಮಾಡಬೇಕು, ಜಗತ್ತೇ ತನ್ನತ್ತ ತಿರುಗಿ ನೋಡಬೇಕೆಂಬ ಹಂಬಲ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಛಲ, ಗುರಿ ಇಲ್ಲದಿದ್ದರೆ ಏನು ಮಾಡಲು ಸಾಧ್ಯವಿಲ್ಲ. ಅಂತಹ ಗುರಿ ಮತ್ತು ಛಲವನ್ನು ಹೊಂದಿರೋ ಏಳರ ಪೋರನೊಬ್ಬ ತನ್ನ ವಯಸ್ಸಿಗೂ ಮೀರಿದ ದಾಖಲೆ ನಿರ್ಮಿಸಿದ್ದಾನೆ. ಆತನದ್ದು ಆಟ, ಪಾಠ ಎಂದು ಕಾಲ ಕಳೆಯುವ ವಯಸ್ಸು ಮತ್ತು ಮನಸ್ಸು. ಆದರೆ ವಿಶ್ವವೇ ತನ್ನತ್ತ ತಿರುಗಿ ನೋಡಬೇಕೆನ್ನುವ ಹಂಬಲದಿಂದ ಸ್ಕೇಟಿಂಗ್‍ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಕಠಿಣ ಪರಿಶ್ರಮದಿಂದ ತನ್ನ ಗುರಿಯನ್ನು ಕೂಡ ಸಾಧಿಸಿದ್ದಾನೆ.

ವಾಷಿಂಗ್ ಮೆಷಿನ್ ಸರ್ವೀಸ್ ಸೆಂಟರ್ ಇಟ್ಟುಕೊಂಡಿರುವ ಸತೀಶ್ ಮತ್ತು ಹೇಮಾ ದಂಪತಿಗಳ ಪುತ್ರ ಗಗನ್, ಸ್ಕೇಟಿಂಗ್‍ನಲ್ಲಿ ಇದೀಗ ದಾಖ¯ಯ ಪುಟ ಸೇರುವತ್ತ ಹೆಜ್ಜೆ ಇಟ್ಟಿದ್ದಾನೆ. ರಾಜಾಜಿನಗರದ ಚೈತನಾ ಟಕ್ನೋ ಶಾಲೆಯಲ್ಲಿ 1ನೇ ತರಗತಿ ವ್ಯಾಸಂಗ ಮಾಡುತ್ತಿರುವ ಗಗನ್ ಕಳೆದ 10 ದಿನಗಳ ಹಿಂದೆ ಆಯೋಜಿಸಲಾಗಿದ್ದ ಲಿಂಬೋ ಸ್ಕೇಟಿಂಗ್‍ನಲ್ಲಿ 9 ಇಂಚು ಎತ್ತರದಲ್ಲಿಡಲಾಗಿದ್ದ ಕಂಬಿಗಳ ಕೆಳಗೆ 109 ಮೀ. ಉದ್ದ ಸ್ಕೇಟ್ ಮಾಡುವ ಮೂಲಕ ಸಾಧನೆ ಮಾಡಿದ್ದಾನೆ. ಇದು ಈವರೆಗೆ ಲಿಂಬೋ ಸ್ಕೇಟಿಂಗ್‍ನಲ್ಲಿ ಕ್ರಮಿಸಿದ ಅತಿ ಉದ್ದದ ಮಾರ್ಗವಾಗಿದೆ.

ಹಳೆಯ ದಾಖಲೆ 72 ಮೀಟರ್​​

ಲಿಂಬೋ ಸ್ಕೇಟಿಂಗ್‍ನಲ್ಲಿ ಈ ಹಿಂದಿನ ಗಿನ್ನಿಸ್ ದಾಖಲೆ ಚೆನ್ನೈನ ಮೆಡ್ವಿನ್ ದೇವಾ ಎಂಬ ಬಾಲಕ 72 ಮೀ. ಉದ್ದ ಕ್ರಮಿಸಿರುವುದು ದಾಖಲೆಯಾಗಿತ್ತು. ಇದೀಗ ಗಗನ್ 109 ಮೀ.ಗಳನ್ನು 57 ಸೆಕೆಂಡ್‍ಗಳಲ್ಲಿ ಕ್ರಮಿಸುವ ಮೂಲಕ ಆ ದಾಖಲೆಯನ್ನು ಅಳಿಸಿ ಹಾಕಿದ್ದಾನೆ. ಈ ಕುರಿತು ಗಿನ್ನಿಸ್ ವಲ್ರ್ಡ್ ರೆಕಾಡ್ರ್ಸ್‍ನವರಿಂದ ಅಂತಿಮ ಘೋಷಣೆ ಬಾಕಿ ಇದೆ.

ಸತತ ಪ್ರಯತ್ನದಿಂದ ಸಫಲತೆ

ದಾಖಲೆಗಾಗಿಯೇ ಆಯೋಜಿಸಲಾಗಿದ್ದ ಲಿಂಬೋ ಸ್ಕೇಟಿಂಗ್‍ನಲ್ಲಿ ಗಗನ್ 109 ಮೀ. ಕ್ರಮಿಸಲು ಮೂರು ಅವಕಾಶ ಪಡೆದುಕೊಂಡಿದ್ದ. ಮೊದಲೆರಡು ಪ್ರಯತ್ನದಲ್ಲಿ ಸ್ಕೇಟಿಂಗ್ ಮಾಡುವಾಗ 9 ಇಂಚಿನ ಎತ್ತರದಲ್ಲಿ ಜೋಡಿಸಲಾಗಿದ್ದ ಕಂಬಿಗಳು ಬಿದ್ದ ಕಾರಣ ಸಫಲವಾಗಲಿಲ್ಲ. ಮೂರನೇ ಅವಕಾಶದಲ್ಲಿ ಗಗನ್ 109 ಮೀ. ದೂರ ಕ್ರಮಿಸಿ ವಿಶ್ವ ದಾಖಲೆ ಬರೆದನು.

ಎರಡು ದಾಖಲೆ

ಇಷ್ಟೇ ಅಲ್ಲದೆ ಗಗನ್ ಇನ್ನೊಂದು ದಾಖಲೆಯನ್ನು ಬರೆದಿದ್ದಾರೆ. 6.5 ಇಂಚಿನ ಎತ್ತರದಲ್ಲಿ ಇಟ್ಟಿದ್ದ ಕಂಬಿಗಳ ಕೆಳಗೆ ಈವರೆಗೆ ಇದ್ದ 10 ಮೀ. ದೂರದ ದಾಖಲೆಯನ್ನು ಮುರಿದಿದ್ದಾರೆ. ಅದರಂತೆ 18 ಸೆಂಕೆಡ್‍ಗಳಲ್ಲಿ 16 ಮೀ. ದೂರ ಕ್ರಮಿಸಿ ಮತ್ತೊಂದು ದಾಖಲೆಯಲ್ಲಿ ತನ್ನ ಹೆಸರು ಬರೆಸಿಕೊಂಡನು. ಈ ಎರಡೂ ದಾಖಲೆಗಳಿಗೆ ಸಂಬಂಧಿಸಿದಂತೆ 2 ತಿಂಗಳೊಳಗೆ ಗಿನ್ನಿಸ್ ವಲ್ರ್ಡ್ ರೆಕಾರ್ಡ್‍ಗೆ ಸರಿಯಾದ ಮಾಹಿತಿಗಳನ್ನು ಕಳುಹಿಸಿಕೊಡಬೇಕಿದೆ. ಆನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ.

ಕಾರ್ ಕೆಳಗೆ ಲಿಂಬೋ ಸ್ಕೇಟಿಂಗ್

ದಾಖಲೆ ನಿರ್ಮಿಸುವ ಅಭ್ಯಾಸ ಗಗನ್‍ಗೆ ತೀರಾಅ ಹಳೆಯದು. ತಾನು ಮೂರುವರೆ ವರ್ಷದವನಿದ್ದಾಗಿನಿಂದ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿರುವ ಗಗನ್, 2014ರಲ್ಲಿ 39 ಕಾರುಗಳ ಕೆಳಗೆ ಸರಾಗವಾಗಿ ಸ್ಕೇಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದ. ಒಟ್ಟು 79.9 ಮೀ. ಉದ್ದವಾಗಿ ಸಾಲಾಗಿ ನಿಲ್ಲಿಸಿದ್ದ ಕಾರುಗಳನ್ನು 29 ಸೆಕೆಂಡ್‍ಗಳಲ್ಲಿ ಕ್ರಮಿಸಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದ.

ಕೋಚ್ ಫುಲ್ ಖುಷ್

ಗಗನ್‍ನ ಈ ದಾಖಲೆಗೆ ತರಬೇತುದಾರ ಯತೀಶ್ ಫುಲ್ ಖುಷ್ ಆಗಿದ್ದಾರೆ. ಪ್ರತಿದಿನ 1 ಗಂಟೆ ಅಭ್ಯಾಸ ಮಾಡಿಸುತ್ತೇನೆ. ಈಗಾಗಲೆ ಕಾರುಗಳ ಕೆಳಗೆ ಸ್ಕೇಟ್ ಮಾಡುವುದರಲ್ಲಿ ವಿಶ್ವ ದಾಖಲೆ ಬರೆದಿದ್ದ. ಈ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾನೆ ಎಂದು ತಮ್ಮ ಸಂತಸ ವ್ಯಕ್ತಪಡಿಸುತ್ತಾರೆ ಯತೀಶ್. ಅವರೊಂದಿಗೆ ಗಗನ್ ತಂದೆ ಸತೀಶ್ ಕೂಡ ಮಗನ ಈ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂರುವರೆ ವರ್ಷದವನಿದ್ದಾಗಲೇ ಸ್ಕೇಟಿಂಗ್ ಆರಂಭಿಸಿದ್ದ. ಆಗಿನಿಂದಲೂ ಸ್ಕೇಟಿಂಗ್‍ನಲ್ಲಿ ಮುಂದಿದ್ದಾನೆ. ಈಗ ಮತ್ತೊಂದು ದಾಖಲೆ ಬರೆದಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.