ಶೈಕ್ಷಣಿಕ ಅಸಮಾನತೆಯನ್ನು ಹೋಗಲಾಡಿಸಲು ಪಣ ತೊಟ್ಟ ಪ್ರಾಧ್ಯಾಪಕ

ಉಷಾ ಹರೀಶ್​

0

ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ಹುದ್ದೆ ಸಿಕ್ಕಿದರೆ ಯಾರು ತಾನೆ ಕೆಲಸ ಬಿಡುತ್ತಾರೆ. ದಿನಕ್ಕೊಂದು ಗಂಟೆ ಪಾಠ ಮಾಡುವುದು ಮತ್ತೆ ಉಳಿದ ಸಮಯವನ್ನೆಲ್ಲಾ ಎಸಿ ರೂಮಿನಲ್ಲಿ ಕುಳಿತು ಕಾಲ ಕಳೆದು ಸರಕಾರಿ ರಜೆಗಳನ್ನು ಸ್ವಚ್ಛಂದವಾಗಿ ಅನುಭವಿಸುವುದು. ಈ ಎಲ್ಲಾ ಸವಲತ್ತುಗಳು ಸಿಕ್ಕರೆ ಯಾರು ತಾನೇ ಬಿಡ್ತಾರೆ..? ಆದರೆ ಇಲ್ಲೊಬ್ಬ ಯುವಕ ತನ್ನೂರಿನ ವಿದ್ಯಾರ್ಥಿಗಳಿಗಾಗಿ ಇಂತಹ ಒಂದು ಕೆಲಸವನ್ನು ಬಿಟ್ಟು ಕೊಚಿಂಗ್ ಸೆಂಟರ್ ಆರಂಭಿಸಿದ್ದಾರೆ.

ಹೌದು ರಾಜಾಸ್ತಾನದ ಡಾ. ಫರ್ಮಾನ್ ಅಲಿ ಎಂಬುವವರೇ ಉನ್ನತ ಹುದ್ದೆ ಬಿಟ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಕೋಚಿಂಗ್ ಕ್ಲಾಸ್ ಪ್ರಾರಂಭ ಮಾಡಿರುವವರು. ಐದು ವರ್ಷಗಳ ಹಿಂದೆ ಫರ್ಮಾನ್ ಅಲಿ ದೆಹಲಿ ವಿಶ್ವವಿದ್ಯಾಲಯ ಮೋತಿಲಾಲ್ ನೆಹರೂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಎಸಿ ರೂಮಿನಲ್ಲಿ ಕುಳಿತು ಪಾಠ ಮಾಡುವ ಕೆಲಸ ಅವರಿಗೆ ರುಚಿಸಲಿಲ್ಲ. ಶೈಕ್ಷಣಿಕ ಅಸಮಾನತೆ ಅವರನ್ನು ಕಾಡುತ್ತಿತ್ತು. ಅದಕ್ಕಾಗಿ ಏನಾದರೂ ಮಾಡಲೇ ಬೇಕೆಂದು ಅವರು ತೀರ್ಮಾನಿಸಿ ತಾವು ಕೆಲಸ ಮಾಡುತ್ತಿದ್ದ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿದರು.

ಆಗ ಪ್ರಾರಂಭವಾಗಿದ್ದೇ ರಾಜಸ್ತಾನ್ ಕೋಚಿಂಗ್ ಸೆಂಟರ್. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ರೂಢಿಗತವಾಗಿ ಎರಡು ವಿಭಾಗಗಳು ಗೋಚರಿಸ್ತುವೆ. ಉಳ್ಳವರ ಆವಾಸ ಸ್ಥಾನಗಳಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಬಡವರು . ಮಧ್ಯಮವರ್ಗದವರು ಸರಕಾರಿ ಶಿಕ್ಷಣ ಸಂಸ್ಥೆಗಳು.

ಕಡು ಬಡವರಿಗೆ ಉನ್ನತ ಶಿಕ್ಷಣ ಗಗನ ಕುಸುಮ. ದೇಶದ ಉನ್ನತ ಶಿಕ್ಷಣದಲ್ಲಿ ಆರ್ಥಿಕ ಮತ್ತು ಸಾಮಾಜಿಕ ದುರ್ಬಲರ ಪಾಲು ಶೇ 30 ರಷ್ಟು ಮಾತ್ರ. ಮಿಕ್ಕಿದ್ದೇಲ್ಲಾ ಉಳ್ಳವರದ್ದೇ ಮೇಲುಗೈ. ಈ ಅಸಮಾನತೆಯನ್ನು ಹೋಗಲಾಡಿಸಬೇಕು ಎನ್ನುವ ಉದ್ದೇಶದಿಂದ ಫರ್ಮಾನ್ ಅಲಿ ಈ ರಾಜಸ್ತಾನ್ ಕೊಚಿಂಗ್ ಸೆಂಟರ್ ಆರಂಭಿಸಿದ್ದಾರೆ.

ರಾಜಸ್ತಾನದ ಅಲ್ವಾರ್ ಜಿಲ್ಲೆಯ ಫರ್ಮಾನ್ ಬಡ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಕೇಂದ್ರಕರೀಸಿ ಈ ಕೋಚಿಂಗ್ ಸಂಸ್ಥೆ ಪ್ರಾರಂಭ ಮಾಡಿದ್ದಾರೆ. ಅದರಲ್ಲೂ ತನ್ನೂರಿನ ಸುತ್ತಮುತ್ತಿಲಿನ ವಿದ್ಯಾರ್ಥಿಗಳಿಗೆ ಮೊಟ್ಟ ಮೊದಲ ಆದ್ಯತೆಯ್ನನು ಅಲಿ ನೀಡುತ್ತಾರೆ.

ಕೋಚಿಂಗ್ ಸೆಂಟರ್ ಆರಂಭದಲ್ಲಿ ಬರೀ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗ ದಂಡು ಅಲಿಯವರ ಕೋಚಿಂಗ್ ಸೆಂಟರ್ನತ್ತ ಧಾವಿಸಿ ಬರುತ್ತಿತ್ತು. ಆದರೆ ಫರ್ಮಾನ್ ಅವರು ವಿಜ್ಞಾನವನ್ನು ಓದಿಕೊಂಡವರಲ್ಲ. ವಿದ್ಯಾರ್ಥಿಗಳಿಗೊಸ್ಕರ ದೆಹಲಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನ ಪ್ರಾಧ್ಯಾಪಕರನ್ನು ಕರೆಸಿ ಕೋಚಿಂಗ್ ಅನ್ನು ಮಾಡಿಸುತ್ತಿದ್ದರು.

ಮೊದ ಮೊದಲು ಐಎಎಸ್ ಐಪಿಎಸ್ ಆರ್ಪಿಎಸ್ಸಿ ಪರೀಕ್ಷೆಗಳನ್ನು ತೆಗೆದುಕೊಂಡು ಅದರ ತರಬೇತಿಗಾಗಿ ಬರುತ್ತಿದ್ದವರ ಸಂಖ್ಯೆ ಬಹಳ ಕಡಿಮೆ ಇತ್ತು, ಸಂಸ್ಥೆ ನಡೆಯುವುದು ಸಹ ಕಷ್ಟಸಾಧ್ಯವಾಗಿತ್ತು. ಆದರೆ ಛಲ ಬಿಡದ ತ್ರಿವಿಕ್ರಮನಂತೆ ಫರ್ಮಾನ್ ಅಲಿ ಎರಡು ವರ್ಷ ಕಷ್ಟಪಟ್ಟು ಸಂಸ್ಥೆಯನ್ನು ನಡೆಸಿದರು. ಅದರ ಫಲವಾಗಿ ಇತ್ತೀಚಿನ ದಿನಗಳಲ್ಲಿ ಸಿವಿಲ್ ಪರೀಕ್ಷೆಯ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಹೆಚ್ಚಳವಾಗಿದೆ.

ಸಂಸ್ಥೆ ಪ್ರಾರಂಭ ಮಾಡಿದ ಹೊಸತರಲ್ಲಿ ಫರ್ಮಾನ್ ಅವರ ಅಲ್ವಾರ್ ಪಟ್ಟಣದ ಸುತ್ತಮುತ್ತಲಿನ ವಿದ್ಯಾರ್ಥಿಗಳು ಮಾತ್ರ ಬರುತ್ತಿದ್ದರು, ಆದರೆ ಕಾಲಕ್ರಮೇಣ ರಾಜಸ್ತಾನದ ವಿವಿಧ ಭಾಗಗಳಿಂದ ತರಬೇತಿಗೆ ಬರತೊಡಗಿದರು. ಇಂದು ಈ ಸಂಸ್ಥೆಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ಕೋಚಿಂಗ್ ಸೆಂಟರ್ನಲ್ಲಿ ಶುಲ್ಕವು ಸಹ ಅತಿ ಕಡಿಮೆ ಮೊತ್ತದ್ದಾಗಿದೆ. ಮತ್ತೊಂದು ವಿಶೇಷ ಎಂದರೆ ಈ ರಾಜಸ್ತಾನ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸರಕಾರ ಮತ್ತು ಯಾವುದೇ ಸಂಘ ಸಂಸ್ಥೆಗಳಿಂದ ಧನ ಸಹಾಯ ಪಡೆಯದೇ ವಿದ್ಯಾರ್ಥಿಗಳು ನೀಡಿದ ವಿದ್ಯಾರ್ಥಿಗಳು ನೀಡಿದ ಕಡಿಮೆ ಶುಲ್ಕವೇ ಫರ್ಮಾನ್ರಿಗೆ ಆಧಾರ. ಶೈಕ್ಷಣಿಕ ಅಸಮಾನತೆಯನ್ನು ಹೋಗಲಾಡಿಸಲಲು ಫರ್ಮಾನ್ ಅಲಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

Related Stories