ಹೋಮ್​ವರ್ಕ್ ಬಗ್ಗೆ ಟೆನ್ಷನ್ ಇಲ್ಲ- ಇಷ್ಟವಿಲ್ಲದ ಸಬ್ಜೆಕ್ಟ್ ಓದ ಬೇಕಿಲ್ಲ- ಇದು ಫಿನ್​ಲೆಂಡ್ ಶೈಕ್ಷಣಿಕ ಕ್ರಾಂತಿ

ಟೀಮ್​ ವೈ.ಎಸ್​. ಕನ್ನಡ

0

ಫಿನ್​ಲೆಂಡ್​ನ ಶೈಕ್ಷಣಿಕ ವ್ಯವಸ್ಥೆಯನ್ನು ಜಗತ್ತಿನ ಶ್ರೇಷ್ಠ ಶೈಕ್ಷಣಿಕ ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ. ಫಿನ್​ಲೆಂಡ್ ವಿಶ್ವದ ಅತೀ ದೊಡ್ಡ ವಿಜ್ಞಾನಿಗಳನ್ನು, ಚಿಂತಕರನ್ನು ಹುಟ್ಟು ಹಾಕಿದೆ. ಮನುಕುಲಕ್ಕೆ ಶ್ರೇಷ್ಟ ಮತ್ತು ಮಾದರಿಯಾದ ವ್ಯಕ್ತಿಗಳು ಕೂಡ ಫಿನ್​ಲೆಂಡ್​ನಲ್ಲಿದ್ದಾರೆ.  ಫಿನ್​ಲೆಂಡ್​ನ ಶೈಕ್ಷಣಿಕ ವ್ಯವಸ್ಥೆ ಮತ್ತು ಅಕ್ಷರಸ್ಥರ ಪ್ರಮಾಣ ಫಿನ್​ಲೆಂಡ್​ನ್ನು ವಿಶ್ವದ ಬೇರೆ ದೇಶಗಳಿಂದ ಬೇರ್ಪಡಿಸುತ್ತದೆ.

ಫಿನ್​ಲೆಂಡ್​ನ  ಶೈಕ್ಷಣಿಕ ಪದ್ಧತಿಯ ವಿಶೇಷ ಅಂದ್ರೆ ಅಲ್ಲಿ ಟ್ಯೂಷನ್ ಫೀಸ್ ಅನ್ನೋದೇ ಇಲ್ಲ. ಅಷ್ಟೇ ಅಲ್ಲ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಊಟ ಉಪಹಾರವೂ ಕಡಿಮೆ ದರದಲ್ಲಿ ಸಿಗುತ್ತದೆ. 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಫಿನ್​ಲೆಂಡ್​ನಲ್ಲಿ ಹೋಮ್ ವರ್ಕ್ ಅನ್ನುವುದೇ ಇಲ್ಲ. ಅಷ್ಟ ಅಲ್ಲ 7 ವರ್ಷಕ್ಕಿಂತ ಮುನ್ನ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ.

ಇತ್ತಿಚಿನ ದಿನಗಳಲ್ಲಂತೂ ಫಿನ್​ಲೆಂಡ್​ನ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಬದಲಾಗುತ್ತಿದೆ. ಸಾಹಿತ್ಯ, ಭೌತಶಾಸ್ತ್ರ, ಇತಿಹಾಸ, ಭೂಗೋಳ ಶಾಸ್ತ್ರ ಮತ್ತು ಗಣಿತದಂತಹ ಪಠ್ಯಗಳನ್ನು ಶಿಕ್ಷಣ ವ್ಯವಸ್ಥೆಯಿಂದ ದೂರ ಇಡಲು ಯೋಜನೆ ರೂಪಿಸಲಾಗಿದೆ. ಈ ಪುಸ್ತಕದ ಸಬ್ಜೆಕ್ಟ್​ಗಳ ಬದಲು ದೈನಂದಿನ ಬದುಕಿಗೆ ಬೇಕಾದ ಪಾಠಗಳನ್ನು ಮತ್ತು ಶಿಸ್ತನ್ನು ರೂಪಿಸಿಕೊಳ್ಳುವ ಬಗ್ಗೆ ಪಾಠ ಮಾಡಲು ನಿರ್ಧಾರ ಮಾಡಲಾಗಿದೆ.

ಇದನ್ನು ಓದಿ: 4 ದಶಕಗಳ ಹಿಂದೆಯೇ ಸ್ವಚ್ಛ ಭಾರತದ ಕನಸು- ಇದು"ಸುಲಭ" ಸಾಧಕನ ಕಥೆ..!

ಅಂದಹಾಗೇ, ಶಾಲೆಗೆ ಬರುವ ವಿದ್ಯಾರ್ಥಿಗಳೆಲ್ಲಾ ಒಂದೇ ಸಬ್ಜೆಕ್ಟ್ ಅನ್ನು ಕಲಿಯುವ ಅಗತ್ಯವಿಲ್ಲ. ಉದಾಹರಣೆಗೆ ಯಾರಾದರೂ 2ನೇ ವಿಶ್ವಯುದ್ಧದ ಬಗ್ಗೆ ಯಾರಾದ್ರೂ ಸ್ಟಡಿ ಮಾಡಲು ಹೊರಟ್ರೆ, ಯುದ್ಧದ ಭೌಗೋಳಿಕ ಕಾರಣ ಮತ್ತು ಮ್ಯಾಥಮೆಟಿಕಲ್ ಕಾರಣಗಳ ಮೂಲಕ ಯುದ್ಧದ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ಮತ್ತೊಂದು ಉದಾಹರಣೆ ಪ್ರಕಾರ ಯಾರಾದಾರೂ ಕೆಫೆಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದರೆ, ಅಂತಹವರಿಗೆ ಇಂಗ್ಲೀಷ್ ಭಾಷೆಯನ್ನು ಮೊದಲ ಆಯ್ಕೆ ಆಗಿ ಕಲಿಸಿಕೊಡಲಾಗುತ್ತದೆ. ಇದೇ ಸಮಯದಲ್ಲಿ ಎಕಾನಾಮಿಕ್ಸ್ ಮತ್ತು ಕಮ್ಯೂನಿಕೇಷನ್ ಸ್ಕಿಲ್​ಗಳನ್ನು ಕೂಡ ಕಲಿಸಿಕೊಡಲಾಗುತ್ತದೆ. ಈ ಮೂಲಕ ಬದುಕಿಗೆ ಬೇಕಾದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಲು ಫಿನ್​ಲೆಂಡ್ ಸರ್ಕಾರ ನಿರ್ಧಾರ ಮಾಡಿದೆ.

2020ರ ಹೊತ್ತಿಗೆ ಫಿನ್​ಲೆಂಡ್​ನಲ್ಲಿರುವ ಈಗಿರುವ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣವಾಗಿ ಮಾಯವಾಗಲಿದೆ. ಹೀಗಾಗಿ ಫಿನ್​ಲೆಂಡ್ ಸರಕಾರ ಹೊಸ ಸಬ್ಜೆಕ್ಟ್​ಗಳಿಗೆ ಬೇಕಾದ ಎಕ್ಸ್​ಪರ್ಟ್​ಗಳನ್ನು ನೇಮಕ ಮಾಡಿಕೊಳ್ಳಲು ಆರಂಭಿಸಿದೆ. ಒಟ್ಟಿನಲ್ಲಿ ಫಿನ್​ಲೆಂಡ್ ಶೈಕ್ಷಣಿಕ ವಲಯದಲ್ಲಿ ಇಟ್ಟಿರುವ ಹೆಜ್ಜೆ ವಿಶ್ವದ ಬೇರೆ ದೇಶಗಳಿಗೂ ಮಾದರಿ ಆಗುವುದರಲ್ಲಿ ಅನುಮಾನವೇ ಇಲ್ಲ.

ಇದನ್ನು ಓದಿ:

1. ಕಾಳಧನಿಕರ ಮೇಲೆ ಮೋದಿ 'ಸರ್ಜಿಕಲ್ ಸ್ಟ್ರೈಕ್' : 500-1000 ರೂ. ನೋಟುಗಳ ಮುದ್ರಣ, ಚಲಾವಣೆ ಬಂದ್

2. ಮೂವರು ಟೆಕ್ಕಿಗಳ ಕನ್ನಡ ಟಿ ಶರ್ಟ್ ಉದ್ಯಮ..!

3. ಭಾರತದ ಏಕೈಕ ಮಹಿಳಾ ಕಮಾಂಡೋ ಟ್ರೈನರ್​- ನಿಜ ಜೀವನದಲ್ಲೂ ಸೀಮಾ ಫೈಟರ್​