ಹಾಲೆಂಡ್​ ವಿಜ್ಞಾನಿಗಳ ಅನ್ವೇಷಣೆ- ಸಮುದ್ರವನ್ನು ಕ್ಲೀನ್​ ಮಾಡುತ್ತೆ ಈ ಸ್ಪೆಷಲ್​ "ಶಾರ್ಕ್​"

ಟೀಮ್​ ವೈ.ಎಸ್​. ಕನ್ನಡ

1

ಜಲಮಾಲಿನ್ಯ ಸದ್ಯ ವಿಶ್ವದ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಬೆಳೆಯುತ್ತಿರುವ ನಾಗರಿಕತೆ ನದಿ, ಕೆರೆ ಮತ್ತು ಸಮುದ್ರವನ್ನು ಮಾಲಿನ್ಯಗೊಳಿಸುತ್ತಿದೆ. ಹೀಗಾಗಿ ಇಂತಹ ಒಂದು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯುವಲ್ಲಿ ಹೊಸ ತಂತ್ರಜ್ಞಾನವೊಂದು ಹೆಚ್ಚು ಸಹಾಯಕಾರಿಯಾಗಿದೆ. ಡ್ರೋನ್​ನಿಂದಲೂ ಈಗ ಸಮುದ್ರದಲ್ಲಿನ ಮಾಲಿನ್ಯವನ್ನು ಸ್ಚಚ್ಛಗೊಳಿಸುವಂತಹ ಸಾಧನವನ್ನು ಕಂಡುಹಿಡಿಯಲಾಗಿದೆ.

ಜಗತ್ತಿನಾದ್ಯಂತ ನದಿ ಹಾಗೂ ಸಮುದ್ರಗಳ ಮಾಲಿನ್ಯವನ್ನು ತಡೆಗಟ್ಟಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಯಾವುದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ವಿಯಾಗಿಲ್ಲ. ಇದೇ ನಿಟ್ಟಿನಲ್ಲಿ ಹಾಲೆಂಡ್  "ವೇಸ್ಟ್ ಶಾರ್ಕ್" ಎಂಬ ಒಂದು ಹೊಸ ತಂತ್ರಜ್ಞಾನ ಕಂಡುಹಿಡಿದಿದೆ. ಈ ಹೊಸ ಸಾಧನ ಸಮುದ್ರ ಮಾಲಿನ್ಯ ಜಲವನ್ನು ಸ್ವಚ್ಚಗೊಳಿಸುವಂತಹ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದೆ.

ಇದನ್ನು ಓದಿ: ಫ್ಯಾಷನ್​ ಡಿಸೈನಿಂಗ್​ ಪಧವೀಧರೆಯ ಆನ್​ಲೈನ್​ ಉದ್ಯಮ

ನೋಡುಗರ ಕಣ್ಣಿಗೆ ಶಾರ್ಕ್ ಮೀನಿನಂತೆ ಗೋಚರಿಸುವ ಈ ಡ್ರೋನ್, ಸಮುದ್ರ ಮತ್ತು ನದಿಗಳನ್ನು ಸ್ವಚ್ಛಗೊಳಿಸುತ್ತದೆ. ನೀರು ಎಷ್ಟೇ ಮಾಲಿನ್ಯವಾಗಿದ್ರು. ಅತ್ಯಂತ ವೇಗವಾಗಿ ಇದು ನೀರನ್ನು ಸ್ವಚ್ಚಗೊಳಿಸುವ ಕೆಲಸ ಮಾಡುತ್ತದೆ. ಇದರಲ್ಲಿರು ಸಣ್ಣ-ಸಣ್ಣ ರೋಬೊಗಳು ನೀರಿನಲ್ಲಿರುವ ಗಲೀಜುಗಳನ್ನು ಹುಡುಕಿ ಸ್ವಚ್ಚಗೊಳಿಸುವಂತೆ, ಪ್ರೋಗ್ರಾಮ್ ಮಾಡಲಾಗಿದ್ದು, ಅತ್ಯಂತ ಸ್ಮಾರ್ಟ್ ಆಗಿ ಇದು ಕೆಲಸ ನಿರ್ವಹಿಸಲಿದೆ.

ಡಚ್ ಬಂದರು ಪ್ರಾಧಿಕಾರದ ಸಹಕಾರದಿಂದ ಸನ್ ಮೆರಿನ್ ತಂತ್ರಜ್ಞಾನ ಸಂಸ್ಥೆ ಈ ಹೊಸ ಮಾದರಿಯ ಡ್ರೋನ್ ತಯಾರಿಸಿದೆ. ಕಸಕಡ್ಡಿಗಳನ್ನು ತೆಗೆಯುವುದರ ಜೊತೆಗೆ ಇದು ನೀರಿನ ಗುಣಮಟ್ಟ, ಹವಾಮಾನ, ನೀರಿನ ಆಳ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಡಚ್ ತಂತ್ರಜ್ಞರು ಈಗಾಗಲೇ ಎರಡು ವೇಸ್ಟ್ ಶಾರ್ಕ್ ತಯಾರಿಸಿದ್ದಾರೆ. ದೊಡ್ಡ ಗಾತ್ರದ ಶಾರ್ಕ್ ಪ್ರತಿಗಂಟೆಗೆ 500 ಕಿಲೋ ಕಸವನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ. ನೋಡಲು ಶಾರ್ಕ್​ನಂತೆ ಕಾಣುವ ಇವು ದೊಡ್ಡ ಗಾತ್ರದಿಂದ ಕೂಡಿವೆ. ಈಗಾಗಲೇ ಹಾಲೆಂಡ್​ನ  ರೊಟರ್​ಡ್ಯಾಮ್​​ ಬಂದರಿನಲ್ಲಿ 4 ಶಾರ್ಕ್​ಗಳನ್ನು ಪ್ರಯೋಗಾರ್ಥವಾಗಿ ಬಿಡಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾದಲ್ಲಿ ವೇಸ್ಟ್ ಶಾರ್ಕ್ ಮಾರುಕಟ್ಟೆಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಹಲವು ದೇಶಗಳು ಇವುಗಳನ್ನು ಖರೀದಿಸಿ, ಜಲ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಲಿದ್ದಾರೆ. 

ಇದನ್ನು ಓದಿ:

1. ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

2. ಕರ್ನಾಟಕದಲ್ಲೂ ಇದೆ ಕ್ಯಾಶ್​ಲೆಸ್​ ಗ್ರಾಮ- "ಬೆಳಪು" ಡಿಜಿಟಲ್​ ವ್ಯವಹಾರದ ಮೊದಲ ಬೆಳಕು..!

3. ಟೇಸ್ಟಿ ಚಾಕಲೇಟ್​ನ ಹಿಂದಿದೆ ಇಂಟರೆಸ್ಟಿಂಗ್​ ಕಥೆ..!

Related Stories