ಬೈಕ್​ ರಿಪೇರಿನ ಬಗ್ಗೆ ತಲೆಕಡಿಸಿಕೊಳ್ಳಬೇಡಿ- ಆ್ಯಪ್​ನಲ್ಲೇ ಮಾಹಿತಿ ಪಡೆಯಿರಿ

ವಿಸ್ಮಯ

Monday December 21, 2015,

2 min Read

ಎಲ್ಲರಿಗೂ ಬೈಕ್‍ಕೊಂಡುಕೊಳ್ಳಬೇಕು ಅಂತ ಆಸೆ ಇರುತ್ತೆ. ಕಾಲೇಜು ಮೆಟ್ಟಿಲು ಅತ್ತಿದ್ದ ಯುವಕರಿಗಂತೂ ಬೈಕ್ ಕ್ರೇಜ್ ಸ್ವಲ್ಪ ಜಾಸ್ತಿ ಇರುತ್ತೆ. ಹೇಗಾದ್ರೂ ಮಾಡಿ ಬೈಕ್ ಕೊಳ್ಳಬೇಕು ಒಂದ್ ರೌಂಡ್ ಸುತ್​ಬೇಕು ಅನ್ನೋ ಕನಸು ಎಲ್ಲರಿಗೂ ಇರುತ್ತೆ. ಆದ್ರೆ ಬೆಂಗಳೂರಿನಂತಹ ಸಂಚಾರ ದಟ್ಟಣೆ ಇರುವ ನಗರಗಳಲ್ಲಿ ಬೈಕ್ ಇದ್ದರೆ ಸಂಚಾರಕ್ಕೆ ಅನುಕೂಲಕರ. ಕೆಲವರು ವಿವಿಧ ಕಂಪೆನಿಗಳ ಮಧ್ಯಮ ಮಟ್ಟದ ಬೈಕ್‍ಗಳನ್ನು ಖರೀಸಿದರೆ, ಇನ್ನು ಕೆಲವರು ಸ್ವಲ್ಪ ದುಬಾರಿ ಬೆಲೆಯ ಬೈಕ್‍ಗಳಿಗೆ ಜೋತು ಬೀಳುತ್ತಾರೆ. ಹೀಗೆ ಇಷ್ಟದ ಬೈಕ್‍ಗಳನ್ನು ಕಾಲಕಾಲಕ್ಕೆ ಜೋಪಾನ ಮಾಡುವ ಅಗತ್ಯವು ಇದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಒಂದ ಕಡೆ ಆದ್ರೆ, ಮತ್ತೊಂದು ಕಡೆ ಬೆಂಗಳೂರಿನ ರಸ್ತೆಗಳು ಜನರನ್ನು ಹೈರಾಣಾರಾಗಿಸಿವೆ. ಪ್ರೀತಿಯಿಂದ ಖರೀದಿಸಿದ ಬೈಕ್‍ಗಳು ಆಗಿಂದಾಗ್ಗೆ ರಿಪೇರಿಗೆ ಬರುವುದು ಸಹಜ. ಹದಗೆಟ್ಟ ರಸ್ತೆಗಳಿಂದಾಗಿ ಬೈಕ್‍ಗಳು ಆಗಿಂದಾಗ್ಗೆ ರಿಪೇರಿಗೆ ಬರುತ್ತೆ. ಸರ್ವಿಸ್, ರಿಪೇರಿಗೆಂದು ಬೈಕ್‍ಗೆಂದು ಸರ್ವಿಸ್ ಕೇಂದ್ರಗಳಿಗೆ ಕೊಂಡೊಯಬೇಕು. ಸರ್ವೀಸ್​ ಮಾಡುವವರು ಸಂಜೆ ಅಥವಾ ನಾಳೆ ಬನ್ನಿ ಎಂಬ ಉತ್ತರಗಳೇ ಹೆಚ್ಚು. ಇನ್ನು ರಿಪೇರಿ ಮಾಡಿದ್ರೂ ಕೆಲವೊಮ್ಮೆ ಎಡವಟ್ಟುಗಳನ್ನು ಮಾಡಿಕೊಟ್ಟಿರುತ್ತಾರೆ. ಅಷ್ಟೇ ಅಲ್ಲದೇ ರಿಪೇರಿ ಯಾವ ಹಂತದಲ್ಲಿದೆ, ಯಾವ ಬಿಡಿಭಾಗಗಳನ್ನು ಬೈಕ್‍ಗೆ ಅಳವಡಿಸಲಾಗುತ್ತೆ ಎಂಬ ಮಾಹಿತಿಗಳು ಗ್ರಾಹಕರಿಗೆ ಲಭ್ಯವಾಗುವುದಿಲ್ಲ.

ಕೆಲವು ಸರ್ವಿಸ್ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಅಳವಡಿಸಿ ಮೋಸ ಮಾಡುವವರೇ ಹೆಚ್ಚು. ಹೀಗಾಗಿ ಶೇಕಡ 100 ರಷ್ಟು ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕೆಂಬ ಉದ್ದೇಶದಿಂದಲೇ ಬೆಂಗಳೂರಿನಲ್ಲಿ ಬೈಕ್ ಸರ್ವೀಸ್ ಸೆಂಟರ್ ಆರಂಭವಾಗಿದೆ. ಬೆಂಗಳೂರಿನ ದೇವರಬಿಸೇನಹಳ್ಳಿಯ ಸಕ್ರ ಆಸ್ಪತ್ರೆ ಬಳಿ ಮಂತ್ರಿ ಕಮರ್ಶಿಯೋ ಎದುರು ಇರುವ ನಮ್ಮ ಮೆಕ್ಯಾನಿಕ್ ಬೈಕ್ ಸರ್ವಿಸ್ ಸೆಂಟರ್ ಒಂದು ತಿಂಗಳ ಹಿಂದೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಬೈಕ್ ಸರ್ವಿಸ್ ಮಾಡುವುದನ್ನು ಆ್ಯಪ್ ಮೂಲಕ ನೇರವಾಗಿ ನೋಡಬಹುದು. www.nammamechanik.comಗೆ ಹೋದ್ರೆ ನಿಮಗೆ gdmmslite ಎಂಬ ಆ್ಯಪ್‍ನ ಲಿಂಕ್ ಕಳುಹಿಸಲಾಗುತ್ತೆ. ಮನೆಯಲ್ಲೋ, ಕಚೇರಿಯಲ್ಲೂ ಕುಳಿತು ನಿಮ್ಮ ಬೈಕ್‍ಗಳ ಸರ್ವಿಸ್ ವಿವಿಧ ಹಂತಗಳನ್ನು ವೀಕ್ಷಿಸಬಹುದು. ಇದಕ್ಕೆಂದೇ 3 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ನಮ್ಮ ಮೆಕ್ಯಾನಿಕ್ ಸರ್ವಿಸ್ ಸೆಂಟರ್‍ನಲ್ಲಿ ತಮಗೆ ಬೇಕಾದ ಗುಣಮಟ್ಟದ ಬಿಡಿಭಾಗಗಳನ್ನು ಅಳವಡಿಸುವಂತೆಯೂ ಸೂಚಿಸಬಹುದು. ಜತೆಗೆ ತಮ್ಮ ಮೊಬೈಲ್‍ಗೆ ಕಾಲಕಾಲಕ್ಕೆ ಸ್ಟೇಟಸ್‍ನ ಮೆಸೇಜ್‍ಗಳನ್ನೂ ಕಳುಹಿಸಲಾಗುತ್ತೆ. ಜೊತೆಗೆ ಬೈಕ್ ಕೆಟ್ಟು ನಿಂತ ಸ್ಥಳಕ್ಕೆ ಸೆಂಟರ್‍ನ ಸಿಬ್ಬಂದಿಯೇ ಬಂದು ತೆಗೆದುಕೊಂಡು ಹೋಗುವ ಸೇವೆ ಲಭ್ಯವಿದೆ. ಬೈಕ್‍ಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆಯೂ ಇದೆ. ಎರಡು ಕಿಲೋಮೀಟರ್​ ವ್ಯಾಪ್ತಿಯೊಳಗಿದ್ದರೆ ಈ ಸೇವೆ ಉಚಿತ. ಎರಡು ಕಿಲೋಮೀಟರ್​​ ಮೇಲ್ಪಟ್ಟರೆ ಕಿಲೋಮೀಟರ್​ಗೆ20 ಶುಲ್ಕ ವಿಧಿಸಲಾಗುತ್ತೆ. ಬೆರಳ ತುದಿಯಲ್ಲೇ ನಿಮ್ಮ ಬೈಕ್ ಸರ್ವಿಸ್ ಮಾಡಲಾಗುತ್ತೆ. ವಿಭಿನ್ನ ಕಾನ್ಸೆಪ್ಟ್ ಜನರಿಗೆ ಇಷ್ಟವಾಗುತ್ತಿದೆ. ಇದುವರೆಗೂ 100 ಕ್ಕೂ ಹೆಚ್ಚು ಗ್ರಾಹಕರು ಸೇವೆ ಪಡೆದಿದ್ದಾರೆ. ಮತ್ತೇ ಯಾಕೆ ತಡ ನಿಮ್ಮ ಬೈಕ್ ರಿಪೇರಿ ಮಾಡಿಸಬೇಕು ಅಂದರೆ ನಮ್ಮ ಮೆಕ್ಯಾನಿಕ್ ಸೆಂಟರ್‍ಗೆ ಭೇಟಿ ನೀಡಬಹುದು. ಜೊತೆಗೆ ಪ್ರತಿ ಹಂತದ ಬಗ್ಗೆ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಪಡೆಯಬಹುದು.