ಬಲತ್ಕಾರಕ್ಕೆ ಬಲಿಯಾದವರಿಗೆ ಆಸರೆ 'ಸಮಾಧಾನ'

ಟೀಮ್​ ವೈ.ಎಸ್​. ಕನ್ನಡ

0


ಬಲತ್ಕಾರಕ್ಕೆ ಬಲಿಯಾದ 1700 ಮಹಿಳೆಯರು ಈಗ ವಕೀಲರು...

ಲೀಗಲ್ ಮೊಬೈಲ್ ಕ್ಲಿನಿಕ್ ಹೊಂದಿರುವ 'ಸಮಾಧಾನ'

ಎಲ್ಲೆಡೆ ಹೋಗಿ ಕಾನೂನಾತ್ಮಕ ಸಲಹೆ ನೀಡುವ 'ಸಮಾಧಾನ'


ಲಖನೌನ ಒಂದು ಸಾಯಂಕಾಲ 14-15 ವರ್ಷದ ಹುಡುಗಿ ಸ್ಕೂಲಿನಿಂದ ಮನೆಗೆ ಬೈಕಿನಲ್ಲಿ ವಾಪಸ್ಸಾಗುತ್ತಿದ್ದಳು. ಆದೇ ವೇಳೆ ಅವಳು ನೋಡಿದಾಗ ಕಿರಾಣಿ ಅಂಗಡಿ ಮುಂದೆ ಹುಡುಗಿಯೊಬ್ಬಳು ನಿಂತಿದ್ದಳು. ಅವಳ ಸ್ಥಿತಿ ದಯಾನೀಯವಾಗಿತ್ತು. ಇಬ್ಬರು ಒಬ್ಬರಿಗೊಬ್ಬರು ಕಣ್ಣು ಮಿಲಾಯಿಸಿದ್ರು. ಆಗ ಆ ಬೈಕ್ ಮೇಲಿನ ಹುಡುಗಿಗೆ ಅನಿಸಿತು ಆ ಬಡ ಹುಡುಗಿ ಸಹಾಯಕ್ಕೆ ಕರೆಯುತ್ತಿದ್ದಾಳೆಂದು. ಅವಳು ಹತ್ತಿರಕ್ಕೆ ಹೋಗುತ್ತಿದ್ದಂತೆ, ಕಿರಾಣಿ ಅಂಗಡಿ ಬಳಿಯಿದ್ದ ಹುಡುಗಿ ಬೈಕ್ ಮೇಲೆ ಕುಳಿತು 'ಕೂಗಾಡುತ್ತಾ ಹೇಳಿದ್ಲು ಅಕ್ಕ ನನ್ನ ಉಳಿಸುಕೋ`.

ಬೈಕ್ ಮೇಲೆ ಕುಳಿತ್ತಿದ್ದ ಆ ಹುಡುಗಿಯೇ ರೇಣು ಡಿ ಸಿಂಗ್. ಇಂದು ಡೆಹ್ರಾಡೂನ್​ನಲ್ಲಿರುವ 'ಸಮಾಧಾನ' ಎಂಬ ಹೆಸರಿನ ಸಂಸ್ಥೆಯಲ್ಲಿದ್ದಾರೆ. ಮನೆಯವರ ಹಿಂಸೆಗೆ ಬಲಿಯಾದ ಮಹಿಳೆಯರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹ ಮಹಿಳೆಯರಿಗಾಗಿ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದಾರೆ. ರೇಣು ಆ ದಿನಗಳನ್ನು ನೆನೆಸಿಕೊಂಡು ಹೇಳುತ್ತಾರೆ. ಹುಡುಗಿಯನ್ನು ಮನೆಗೆ ಕರೆದುಕೊಂಡು ಹೋದಾಗ ಗೊತ್ತಾಯಿತು ಆ ಹುಡುಗಿಯನ್ನು ಅವಳ ತಂದೆಯೇ ರೇಪ್ ಮಾಡುತ್ತಿದ್ದಾನೆಂದು. ಹುಡುಗಿ ಗರ್ಭೀಣಿಯಾದಾಗ ಮಲತಾಯಿ ಅವಳಿಗೆ ಹೊಡೆದು ಕೆಲಸ ಹೇಳುತ್ತಿದ್ಲು. ಆ ಹುಡುಗಿಯ ತಾಯಿ ಅದೇ ಗ್ರಾಮದಲ್ಲಿ ಇರುತ್ತಿದ್ಲು. ಹಾಗಾಗಿ ಅವಳನ್ನು ರೇಣು ರಾಕ್ಷಸರಿಂದ ರಕ್ಷಿಸಿದ್ರು. ಆ ಹುಡುಗಿಯ ತಾಯಿಯನ್ನು ಪೋಲೀಸರು ಹುಡುಕಿ ತಂದ ಕಾರಣ, ಅಸಾಯಕಿಯಾಗಿ ರೇಣು ಅವಳನ್ನು ಅವಳ ತಾಯಿಯ ಜೊತೆಗೆ ಅವರೂರಿಗೆ ಕಳುಹಿಸಬೇಕಾಯ್ತು. ಈ ಘಟನೆಯಾದ ಕೆಲವೇ ದಿನಗಳ ನಂತರ ರೇಣು ಆ ಮಗುವಿನ ಪರಿಸ್ಥಿತಿ ತಿಳಿಯುವ ಸಲುವಾಗಿ ಅವಳೂರಿಗೆ ಹೋದ್ರು. ಆ ವೇಳೆ ಹುಡುಗಿಯ ತಾಯಿ ಕಣ್ಣೀರು ಹಾಕುತ್ತ ಹೇಳಿದ್ರು, ಮನೆಗೆ ಮಗಳು ಕರೆದುಕೊಂಡು ಬಂದ ಕೂಡಲೇ ಗ್ರಾಮದಲ್ಲಿ ಪಂಚಾಯತಿ ಮಾಡಲಾಯ್ತು. ಪಂಚಾಯಿತಿ ತೀರ್ಪಿನಂತೆ ಮಗಳ ಮದುವೆ ಮಾಡಲಾಯ್ತು. ಮದುವೆಯಾದ 4 ದಿನದಲ್ಲಿ ಮಗಳ ಶವ ಕೆರೆಯಲ್ಲಿ ಸಿಕ್ತೆಂದು ಆ ಹುಡುಗಿಯ ತಾಯಿ ಹೇಳಿದ್ರು. ಈ ಘಟನೆಯಿಂದ ರೇಣು ತಿಂಗಳುಗಳ ಕಾಲ ಗಾಢ ಮೌನಕ್ಕೆ ಶರಣಾದ್ರು. ಆನಂತರ ಅವರಜ್ಜಿಗೆ ಎಲ್ಲ ಘಟನೆಯನ್ನು ಹೆಳಿದ್ರು. ಆಗ ಅವರ ಅಜ್ಜಿ ಹೀಗೆ ಹೇಳಿದ್ರು. `ಬೇರೆಯವರ ದುಃಖವನ್ನು ಕಂಡು ದುಃಖ ಪಡಬಾರದು. ಅದರಿಂದ ಸಮಸ್ಯೆ ದೂರವಾಗುವುದಿಲ್ಲ. ಆದ್ದರಿಂದ ನಾವು ನಮ್ಮಿಂದ ಏನ್ ಮಾಡಲು ಸಾಧ್ಯಯೆಂಬುದನ್ನು ಯೋಚಿಸಬೇಕು'. ಆಗ ರೇಣು ಅವರ ಅಜ್ಜಿಗೆ ಹೇಳಿದ್ರು, `ತಾವು ಈ ಸಮಾಜದಲ್ಲಿ ಹಿಂದುಳಿದ ಜಾತಿಯ ಮಹಿಳೆಯರ ಸಹಾಯ ಮಾಡತ್ತೇನೆಂದು`.

ಈ ಘಟನೆಯ ನಂತರ ರೇಣು ಲಖನೌನ ಕ್ರಿಶ್ಚಿಯನ್ ಕಾಲೇಜಿನಿಂದ ಪದವಿ ಪಡೆದ್ರು. ಆದಾದ ನಂತರ ಎಲ್ಎಲ್​ಬಿ ಮುಗಿಸಿದ್ರು. ಅವರು ಹೇಳುತ್ತಾರೆ ಈ ದೇಶದ ತುರ್ತು ಪರಿಸ್ಥಿತಿ ಸಮಯವನ್ನು ಅವರು ಬಹಳ ಹತ್ತಿರದಿಂದ ನೋಡಿದ್ದೇನೆಂದು. ಆಗ ಅವರ ವಯಸ್ಸು 14 ರಿಂದ 15ರ ಹತ್ತಿರವಿತ್ತು. ಅವರು ಜಯಪ್ರಕಾಶ್ ನಾರಾಯಣ್ ಮತ್ತು ಸ್ವಾಮಿ ವಿವೇಕಾನಂದರ ಸಿದ್ದಾಂತಗಳಿಂದ ಹೆಚ್ಚು ಪ್ರಭಾವಿತರಾದವರು. ಆದರಿಂದಾಗಿ ಅವರೊಳಗೆ ಆಂದೋಲನಕಾರಿ ಗುಣ ಹುಟ್ಟಿಕೊಳ್ತು. ಇವತ್ತು ಅವರ ಸಂಘಟನೆ 'ಸಮಾಧಾನ' ಕೇವಲ ಉತ್ತರಾಖಂಡ ಮತ್ತು ಯುಪಿಯಲ್ಲಿ ಕೆಲಸ ಮಾಡುವುದರ ಜೊತೆಗೆ ರಾಜಸ್ತಾನ, ಬಿಹಾರ್, ಮಧ್ಯಪ್ರದೇಶ, ಮಹಾರಾಷ್ಟ್ರ, ಸೌರಾಷ್ಟ್ರ ಮತ್ತು ವಿಧರ್ಭದಲ್ಲಿ ಕೌಟುಂಬಿಕ ಹಿಂಸೆಗೆ ಒಳಗಾದವರಿಗೂ ತುಂಬಾ ಸಹಾಯ ಮಾಡುತ್ತಿದೆ. ರೇಣು ಅವರ ಪ್ರಕಾರ " ನಾನು ಈ ಸಂಘಟನೆ ಆರಂಭಿಸಿದಾಗ ನನ್ನ ಜೊತೆ ಕೆಲ ಮಹಿಳೆಯರು ಕೈ ಜೋಡಿಸಿದ್ರು. ಆನಂತರ ವೈದ್ಯರು, ವಕೀಲರು ಕೆಲ ವಿಜ್ಞಾನಿಗಳು ಸೇರಲು ಆರಂಭಿಸಿದ್ರು. ಅವರೇ ನಮಗೆ ಮಾರ್ಗದರ್ಶಕರ ಪಾತ್ರವನ್ನು ನಿಭಾಯಿಸಿದ್ರು".

ಆರಂಭದಲ್ಲಿ ರೇಣು ಜೈಲಿನಲ್ಲಿರುವ ಮಹಿಳೆಯರಿಗಾಗಿ ಕೆಲಸ ಮಾಡಿದ್ರು. ಅಲ್ಲಿ ಅವರು ಮಹಿಳೆಯರಿಗೆ ಏನು ಅವಶ್ಯಕತೆಯಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಿದ್ರು. ಮೆಲ್ಲ-ಮೆಲ್ಲಗೆ ಇವರ ಬಳಿ ಬಲತ್ಕಾರದ ಪ್ರಕರಣಗಳು ಬರಲಾರಂಭಿಸಿದ್ವು. ಆಗ ಇವರು ಗಮನಿಸಿದ್ದು ತುಂಬಾ ವಿಭಿನ್ನವಾಗಿತ್ತು. ಬಲತ್ಕಾರ ಪೀಡಿತರನ್ನು, ಪೀಡಿತರಾಗಿಯೇ ಇಡುವುದು ತಪ್ಪು. ಅವರನ್ನು ಸರ್ವೈವರ್ ಎಂದು ಕರೆಯುವುದು ಸೂಕ್ತ ಎಂದುಕೊಂಡ್ರು. ಇಂದು ರೇಣು ಅವರ ತಂಡದಲ್ಲಿ ಬಲತ್ಕಾರ ಪೀಡಿತರನ್ನು ಯಾರು ರೇಪ್ ವಿಕ್ಟಿಮ್ ಎಂದು ಕರೆಯುವುದಿಲ್ಲ. ಬದಲಾಗಿ ಸರ್ವೈವರ್ ಎಂದು ಕರೆಯುವುದು ಸೂಕ್ತ ಎಂದು ಭಾವಿಸಿದ್ರು. ರೇಣು ಮತ್ತು ಅವರ ಸಂಘಟನೆ ಊರಿಂದ-ಊರಿಗೆ ಹೋಗಿ ಮಹಿಳೆಯರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುತ್ತಾರೆ. ಅವರಿಗೆ ಅವರ ಅಧಿಕಾರದ ಬಗ್ಗೆ ಅರಿವು ಮೂಡಿಸುತ್ತಾರೆ. ಕೌಟುಂಬಿಕ ಹಿಂಸೆ. ಬಲತ್ಕಾರಕ್ಕೆ ಬಲಿಯಾದ ಮಹಿಳೆಯರ ಸಹಾಯವಾಗಲೆಂದು ಕಳೆದ 20 ವರ್ಷದಿಂದ 'ಸಮಾಧಾನ' ಹೆಲ್ಪ್​​ಲೈನ್​ ನಡೆಸುತ್ತಿದೆ. ಇದರ ಸಹಾಯಯಿಂದ ಮಹಿಳೆಯರ ಸಮಸ್ಯೆ ಕೇಳಲಾಗುತ್ತದೆ. ಜೊತಗೆ ಆದರಿಂದ ಹೊರ ಬರುವ ದಾರಿ ಕೂಡ ಹೇಳಿಕೊಡಲಾಗುತ್ತದೆ. ಅವಶ್ಯಕತೆ ಬಿದ್ದರೆ ಮಹಿಳೆಯರಿಗೆ ಅವರಲ್ಲೇ ಇಟ್ಟಿಕೊಳ್ಳುವ ವ್ಯವಸ್ಥೆ ಕೂಡ ಮಾಡಲಾಗುತ್ತದೆ.

"ಅವರನ್ನು ಸಶಕ್ತರನ್ನಾಗಿಬೇಕಾದ್ರೆ. ಅವರಿಗೆ ಉಪ್ಪಿನಕಾಯಿ ಹಾಕುವ, ಹಪ್ಪಳ, ಚಟ್ನಿ ಮಾಡುವಂತಹ ಕೆಲಸ ಕೊಡಿಸಬಹುದಿತ್ತು, ಮಾಡಿಸಬಹುದಿತ್ತು. ಇದರಿಂದ ರೇಪ್ ಸರ್ವೈವರ್​ಗೆ ನ್ಯಾಯ ಒದಗಿಸಿದಂತಾಗುವುದಿಲ್ಲವೆಂದು ನಾನು ಯೋಚಿಸಿದೆ. ಹಾಗಾಗಿ ಅವರನ್ನು ಸುಶಿಕ್ಷಿತರನ್ನಾಗಿಸಿ ವಕೀಲರನ್ನು ಮಾಡುವ ಕನಸು ಕಂಡೆ. ಇದರಿಂದ ಅವರು ಕೇವಲ ತಮ್ಮ ಕಾಲಿನ ಮೇಲೆ ನಿಂತುಕೊಳ್ಳುವುದಷ್ಟೆ ಅಲ್ಲ, ಅವರಂತೆ ನೊಂದ ಮಹಿಳೆಯರಿಗೆ ಸಹಾಯ ಮಾಡಲಿದ್ದಾರೆ. ಅವರು ಇಂತಹ ಪರಿಸ್ಥಿತಿ ವಿರುದ್ಧ ಹೋರಾಡುವ ಶಕ್ತಿ ತುಂಬಲಿದ್ದಾರೆ ಎಂಬುದಾಗಿತ್ತು." ಇಂದು ರೇಣು ಅವರ ಇಂತಹ ಪ್ರಯತ್ನದಿಂದಲೇ 1700 ರೇಪ್ ಸರ್ವೈವರ್ ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ಕಾನೂನಿನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲಹಬಾದ್ ಬಾರ್ ಕೌನ್ಸಿಲ್​ನಲ್ಲಿ ರೇಣು ವಕೀಲರಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಆರಂಭದಲ್ಲಿ ಜನರು ರೇಣು ಅವರನ್ನು ತಪ್ಪು ದೃಷ್ಟಿಯಿಂದ ನೋಡುತ್ತಿದ್ರು. ಜನ ಅವರನ್ನು ರೇಪ್ ಪೀಡಿತ ಮಹಿಳೆಯರ ಕೇಸ್ ತೆಗೆದುಕೊಳ್ಳುತ್ತಾರೆ. ಯಾರೂ ಇಂತಹ ಕೆಲಸ ಮಾಡುತ್ತಿರಲಿಲ್ಲ. ಅದನ್ನು ಕೀಳಾಗಿ ನೋಡಲಾಗುತ್ತಿದೆಯೆಂದು ರೇಣು ಗರ್ವದಿಂದ ಹೇಳುತ್ತಾರೆ. ಮಹಿಳೆಯರ ಕೇಸನ್ನು ಉಚಿತವಾಗಿ ತೆಗೆದುಕೊಳ್ಳುತ್ತಾರೆ. ಇಂದು ರೇಣು ಮತ್ತು ಅವರ ತಂಡ, ಕೌಟುಂಬಿಕ ಹಿಂಸೆಗೆ ಒಳಗಾದ 3800 ಕ್ಕಿಂತ ಹೆಚ್ಚು ಪೀಡಿತ ಮಹಿಳೆಯರಿಗೆ ಮುಕ್ತಿ ನೀಡಿದ್ದಾರೆ.

ಪ್ರತಿ ಮನೆ-ಮನೆಗೂ ನ್ಯಾಯ ಸಿಗಬೇಕೆಂಬುದು ಅವರ ಆಶಯವಾಗಿತ್ತು. ಅದಕ್ಕಾಗಿ ಅವರು `ಮೊಬೈಲ್ ಕ್ಲಿನಿಕ್’ ಮುಖಾಂತರ ಹಳ್ಳಿ-ಹಳ್ಳಿಗಳಲ್ಲಿ ಮಹಿಳೆಯರಿಗೆ ಶಕ್ತಿ ತುಂಬುವ ಮತ್ತು ಅವರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸವನ್ನು, ಸಂಘಟನೆಯ ‘ಲೀಗಲ್ ವಾಲಿಂಟಿಯರ್’ (ಸ್ವಯಂ ಸೇವಕಿಯರು) ಮಾಡುತ್ತಿದ್ದಾರೆ. ಒಳ್ಳೆ ಸ್ವಯಂ ಸೇವಕಿಯರ ತಂಡ ಇವರ ಬಳಿಯಿದೆ. ಉತ್ತರ ಭಾರತದಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವ ಈ ಮೊಬೈಲ್ ಕ್ಲಿನಿಕ್​ನಲ್ಲಿ ಆರು ಹುಡುಗಿಯರು ಇದ್ದಾರೆ. ಇರುವವರೆಲ್ಲ ಕಾನೂನು ಓದಿಕೊಂಡವರು, ಇಬ್ಬರು ತರಬೇತಿಯ ವಿದ್ಯಾರ್ಥಿಗಳಿದ್ದಾರೆ. “ಹಲವು ವಿಶ್ವವಿದ್ಯಾಲಯದಿಂದ ಕಾನೂನು ವಿದ್ಯಾರ್ಥಿಗಳು ಇಂದು ತರಬೇತಿಗೆ ನಮ್ಮ ಬಳಿ ಬರುತ್ತಿದ್ದಾರೆ”. ಈ ತಂಡದಲ್ಲಿ ಒಬ್ಬರೂ ಪುರುಷರಿಲ್ಲ. ಲಾ ವಿದ್ಯಾರ್ಥಿಗಳು ಕೇವಲ ಗಾಡಿ ಓಡಿಸುವುದಿಲ್ಲ. ಏನಾದ್ರು ಸಮಸ್ಯೆಯಾದಲ್ಲಿ ಇಲ್ಲಿನ ಹುಡುಗಿಯರೇ ಅದನ್ನು ಸಿದ್ಧಪಡಿಸಬಲ್ಲಷ್ಟು ಸಮರ್ಥರಾಗಿದ್ದಾರೆ”. ಸೆಲ್ಫ್ ಡಿಫನ್ಸ್​ನಲ್ಲೂ ಈ ಸದಸ್ಯರೂ ಎತ್ತಿದ ಕೈ. ಕಳೆದ ವರ್ಷ ನವೆಂಬರ್​ನಿಂದ ಈ ಮಿಶನ್ ಆರಂಭಿಸಿದ್ದಾರೆ.

ಮಹಿಳೆಯರಿಗೆ ಸಹಾಯ ಮಾಡುವ ರೇಣು ಇಲ್ಲಿ ತನಕ ಸ್ವಂತ ಮನೆಯನ್ನು ಕಟ್ಟಿಸಿಕೊಂಡಿಲ್ಲ. ಅದರ ಬದಲಿಗೆ 50 ಜನ ಇರಬಲ್ಲ ಒಂದು ಕಟ್ಟಡವನ್ನು ಡೆಹ್ರಾಡೂನ್​ನಲ್ಲಿ ನಡೆಸುತ್ತಿದ್ದಾರೆ. ಕೌಟುಂಬಿಕ ಹಿಂಸೆಗೆ ಒಳಗಾದ ರೇಪ್ ಪೀಡಿತರನ್ನು, ಅವರ ಪರಿಚಯ ಬದಲಿಸಿ ಇಡಲಾಗುತ್ತದೆ. ಅವರಿಗೆ ಊಟ ವಸತಿ ಕೊಡುವುದರ ಜೊತೆಗ ಶಿಕ್ಣಣ ನೀಡಲಾಗುತ್ತದೆ. ಆನಂತರ ಉದ್ಯೋಗ ಮಾಡಲು ಕೆಲ ಕೈಗೆಲಸವನ್ನು ಕಲಿಸಿಕೊಡಲಾಗುತ್ತದೆ. ಜೊತೆಗೆ ಅವರಿಗೆ ಬೇಕಾದ ವೈದ್ಯಕೀಯ ಅವಶ್ಯಕತೆಯನ್ನು ಉಚಿತವಾಗಿ ಪೂರೈಸಲಾಗುತ್ತದೆ. ಇಲ್ಲಿ ಬರುವ ಬಹುತೇಕ ಮಹಿಳೆಯರು 18 ವರ್ಷಕ್ಕಿಂತ ಮೇಲ್ಪಟ್ಟವರು. ಅವಶ್ಯಕತೆ ಬಿದ್ದಲಿ ಈ ಮಹಿಳೆಯರು ಫೋನ್ ಅಥವಾ ಈ-ಮೇಲ್ ಮೂಲಕ ತಮ್ಮ ಕಥೆಯನ್ನು ಹೇಳಿಕೊಳ್ಳುವಂತಹ ಸೌಲಭ್ಯ ಕೂಡ ಇದೆ. ಇಲ್ಲಿರುವ ರೇಪ್ ಸರ್ವೈವರ್, ಆ ಗುಂಪಿನ ನಾಯಕಿಯಾಗಿದ್ದು, ಅವರ ಕಥೆಯನ್ನು ಪ್ರೀತಿಯಿಂದ ಆಲಿಸುತ್ತಾರೆ. ಅವರಿಗೆ ಯಾವುದರಲ್ಲಿ ಆಸಕ್ತಿಯಿದೇಯೋ ಆ ಕೆಲಸ ಮಾಡಲು ಸಹಾಯ ಮಾಡುತ್ತಾರೆ. ಅವರಿಗಿಷ್ಟ ಬಂದ ಕಾಲೇಜಿನಲ್ಲಿ ಓದಲು ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಇಂದಿಗೂ ಸಮಾಧಾನ ಸಂಘಟನೆ ಪ್ರತಿ ತಿಂಗಳು ಶಾಲೆ ಮತ್ತು ಕಾಲೇಜಿನ ಕಾನೂನಿನ ವಿದ್ಯಾರ್ಥಿಗಳಿಗಾಗಿ ಶಿಬಿರವೇರ್ಪಡಿಸುತ್ತಾರೆ. ಸಂಘಟನೆ ಪ್ರಸಕ್ತ ಕಾನೂನಿನ ಬಗ್ಗೆ ಮಾಹಿತಿ ನೀಡುವಂತಹ ಕೆಲಸ ಮಾಡುತ್ತಿದೆ.


ವೆಬ್​ಸೈಟ್​: www. samadhanango.org


ಲೇಖಕರು: ಹರಿಶ್ ಬಿಶ್ತ್

ಅನುವಾದಕರು: ಎನ್.ಎಸ್.ರವಿ

Related Stories

Stories by YourStory Kannada