ಭಾರತ ಶ್ರೀಮಂತವಾಗುತ್ತಿದೆ- ಯಾಕೆ ಅಂತೀರಾ.. ಇದನ್ನು ಓದಿ..!

ಟೀಮ್​ ವೈ.ಎಸ್​. ಕನ್ನಡ

1

ಮುಂಬೈ ಭಾರತದ ವಾಣಿಜ್ಯ ನಗರಿ. ನವ ದೆಹಲಿ ಭಾರತದ ರಾಜಧಾನಿ ಆಗಿದ್ದರೂ, ವ್ಯವಹಾರಗಳ ರಾಜಧಾನಿ ಮುಂಬೈ. ಮುಂಬೈ ಈಗ ದೇಶದ ಶ್ರೀಮಂತ ನಗರಿ ಅನ್ನುವ ಬಗ್ಗೆ ಸಂದೇಹಗಳೇ ಉಳಿದಿಲ್ಲ. ಮುಂಬೈ ಅನ್ನುವ ಮಹಾನಗರಿಯಲ್ಲಿ ಸುಮಾರು 46000 ಮಿಲಿಯನೇರ್​​ಗಳು ವಾಸವಿದ್ದಾರೆ. 28 ಬಲಿಯನೇರ್​ಗಳು ಇಲ್ಲೇ ವಾಸವಿದ್ದಾರೆ. ಮುಂಬೈ ಸರಿಸುಮಾರು 820 ಬಿಲಿಯನ್ ಡಾಲರ್​​ಗಳ ಸಂಪತ್ತುಗಳನ್ನು ಹೊಂದಿದೆ.

ಗ್ಲೋಬಲ್ ವೆಲ್ತ್ ಇಂಟೆಲಿಜೆನ್ಸ್ ಕಂಪನಿ, ನ್ಯೂ ವರ್ಲ್ಡ್ ವೆಲ್ತ್ ಈ ಸರ್ವೇಯನ್ನು ಮಾಡಿದೆ. ಮುಂಬೈ ನಂತರದ ಸ್ಥಾನವನ್ನು ದೆಹಲಿ ಮತ್ತು ಬೆಂಗಳೂರು ಪಡೆದುಕೊಂಡಿದೆ. ದೆಹಲಿಯಲ್ಲಿ 23000 ಮಿಲಿಯನೇರ್​​ಗಳಿದ್ದರೆ, 18 ಬಿಲಿಯನೇರ್​​ಗಳಿದ್ದಾರೆ. ದೆಹಲಿ ಒಟ್ಟಾರೆ ಆಗಿ 450 ಬಿಲಿಯನ್ ಡಾಲರ್ ಸಂಪತ್ತು ಹೊಂದಿದೆ. ಬೆಂಗಳೂರು ಒಟ್ಟು 320 ಬಿಲಿಯನ್ ಡಾಲರ್ ಸಂಪತ್ತು ಹೊಂದಿದೆ. ಸಿಲಿಕಾನ್ ಸಿಟಿಯಲ್ಲಿ 7700 ಮಿಲಿಯನೇರ್​​ಗಳಿದ್ದರೆ, 8 ಬಿಲಿಯನೇರ್​ಗಳಿದ್ದಾರೆ. ಮುತ್ತಿನ ನಗರಿ ಹೈದ್ರಾಬಾದ್ 9000 ಮಿಲಿಯನೇರ್​ಗಳಿಗೆ ಮೂಲ ನೆಲೆಯಾಗಿದ್ದರೆ, 6 ಬಿಲಿಯನೇರ್​ಗಳು ಇಲ್ಲಿ ವಾಸವಿದ್ದಾರೆ. ಹೈದ್ರಾಬಾದ್ ಒಟ್ಟು 310 ಬಿಲಿಯನ್ ಡಾಲರ್​ಗಳ ಸಂಪತ್ತು ಹೊಂದಿದೆ.

ಇದನ್ನು ಓದಿ: ಕೇವಲ 20 ರೂಪಾಯಿಗೆ ವಾಟರ್ ಪ್ಯೂರಿಫೈಯರ್..!

ಭಾರತದ ಇತರೆ ನಗರಗಳಾದ ಕೊಲ್ಕತ್ತಾ, ಪುಣೆ ಮತ್ತು ಚೆನ್ನೈ ಕೂಡ ಗಮನ ಸೆಳೆಯುವಷ್ಟು ಶ್ರೀಮಂತರನ್ನು ಹೊಂದಿದೆ. ಕೊಲ್ಕತ್ತಾದಲ್ಲಿ 9600 ಮಿಲಿಯನೇರ್​ಗಳಿದ್ದರೆ, 4 ಬಿಲಿಯನೇರ್​ಗಳಿದ್ದಾರೆ. ಪುಣೆ 4500 ಮಿಲಿಯನೇರ್​ಗಳನ್ನು ಹೊಂದಿದ್ದರೆ, 5 ಬಿಲಿಯನೇರ್​ಗಳಿಗೆ ಮನೆಯಾಗಿ ಬಿಟ್ಟಿದೆ. ಚೆನ್ನೈನಲ್ಲಿ 6600 ಮಿಲಿಯನೇರ್​ಗಳ ಜೊತೆ 4 ಬಿಲಿಯನೇರ್​ಗಳನ್ನು ಹೊಂದಿದೆ. ಈ ಮಧ್ಯೆ ಸೂರತ್, ಅಹ್ಮದಾಬಾದ್, ವಿಶಾಖಪಟ್ಟಣಂ, ಗೋವಾ, ಚಂಡೀಗಢ ಜೈಪುರ ಮತ್ತು ವಡೋದರ ಕೂಡ ಸಂಪತ್ತಿನ ವಿಷಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. 2016ರ ಡಿಸೆಂಬರ್ ತನಕ ಭಾರತ ಒಟ್ಟಾರೆ 6.2 ಟ್ರಿಲಿಯನ್ ಡಾಲರ್​ಗಳ ಸಂಪತ್ತುಗಳನ್ನು ಹೊಂದಿದೆ. ದೇಶದಲ್ಲಿ ಒಟ್ಟು 2 ಲಕ್ಷದ 64 ಸಾವಿರ ಮಿಲಿಯನೇರ್​ಗಳಿದ್ದರೆ, 95 ಬಿಲಿಯನೇರ್​ಗಳಿದ್ದಾರೆ.

“ಮುಂದಿನ ಒಂದು ದಶಕದಲ್ಲಿ ಭಾರತ ಹಣಕಾಸು ವಿಚಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಲಿದೆ. ಐಟಿ, ರಿಯಲ್ ಎಸ್ಟೇಟ್, ಹೆಲ್ತ್​ಕೇರ್ ಮತ್ತು ಮಾಧ್ಯಮ ಸೆಕ್ಟರ್​ಗಳಲ್ಲಿ ಅಭಿವೃದ್ಧಿ ಕಾಣಲಿದೆ. ಲೋಕಲ್ ಹಾಸ್ಪಿಟಲ್ ಸರ್ವೀಸ್ ಮತ್ತು ಹೆಲ್ತ್ ಇನ್ಶ್ಯೂರೆನ್ಸ್ ಸೆಕ್ಟರ್​ಗಳು ಕೂಡ ಅಭಿವೃದ್ಧಿಯಾಗಲಿದೆ. ಹೈದ್ರಾಬಾದ್, ಪುಣೆ ಮತ್ತು ಬೆಂಗಳೂರು ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಲಿದೆ.”

ಭಾರತದ ಸಬ್ ಅರ್ಬ್ ಪ್ರದೇಶಗಳಾದ ಬಾಂದ್ರಾ, ಜುಹು, ಪರೆಲ್ ವೊರ್ಲಿ, ಪಾಮ್ ಬೀಚ್ ರೋಡ್​ಗಳು ಮುಂಬೈನ ಶ್ರೀಮಂತ ಪ್ರದೇಶಗಳ ಪೈಕಿ ಸ್ಥಾನ ಪಡೆದುಕೊಂಡಿವೆ. ದೆಹಲಿಯ ಡೆರಾ ಮಂಡಿ, ಗ್ರೇಟರ್ ಕೈಲಾಶ್, ಕೊಲ್ಕತ್ತಾದ ಅಲಿಪೊರೆ ಮತ್ತು ಚೆನ್ನೈನ ಬೋಟ್ ಕ್ಲಬ್ ರೋಡ್ ಮತ್ತು ಪೊಯೆಸ್ ಗಾರ್ಡನ್ ಶ್ರೀಮಂತ ಪ್ರದೇಶಗಳ ಪೈಕಿ ಸ್ಥಾನ ಪಡೆದುಕೊಂಡಿದೆ. ಒಟ್ಟಿನಲ್ಲಿ ಭಾರತ ಅಭಿವೃದ್ಧಿ ಕಾಣುತ್ತಿದೆ ಅನ್ನುವುದಕ್ಕೆ ಇಲ್ಲಿನ ಶ್ರೀಮಂತಿಕೆಯೇ ಸಾಕ್ಷಿ ಆಗಿ ಕಾಣುತ್ತಿದೆ.

ಇದನ್ನು ಓದಿ:

1. ಕೃಷಿಕ ಎಸಿಪಿ ಆಗಿದ್ದು ಹೇಗೆ..? ಧಿಘವ್​​ಕರ್ ಕಥೆ ಕೇಳಿ..! 

2. ಬಾಹ್ಯ ಸೌಂದರ್ಯ ಹಾಳಾದಾಗ ಕೈ ಹಿಡಿದಿದ್ದು ಅಂತರಂಗ ಸೌಂದರ್ಯ..!

3. ಜವಾನನಾಗಿದ್ದವನು ಈಗ ಲಕ್ಷಾಧಿಪತಿ- ಶ್ಯಾಮ್ ನಿಷ್ಠೆಗೆ ಒಲಿದ ಬಹುಮಾನ

Related Stories