ಮನೆ ಹಾಗೂ ಕಚೇರಿಯ ನಿರ್ವಹಣೆ ಮತ್ತು ರಿಪೇರಿ ಸೇವೆ ಒದಗಿಸುತ್ತಿದೆ ಈಸಿ ಫಿಕ್ಸ್

ಟೀಮ್​​ ವೈ.ಎಸ್​​. ಕನ್ನಡ

0

ನವದೆಹಲಿ ಮತ್ತು ದೇಶದ ಉಳಿದ ಭಾಗಗಳಲ್ಲಿ ಕಂಡುಬಂದ ಉತ್ತೇಜನದಿಂದ ಈಸಿ ಫಿಕ್ಸ್ ತನ್ನ ಹೂಡಿಕೆಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಈಸಿ ಫಿಕ್ಸ್, ನಿರ್ವಹಣೆ ಮತ್ತು ರಿಪೇರಿ ಸೇವೆಗಳನ್ನು ಒದಗಿಸುವ ಸ್ಟಾರ್ಟ್ ಅಪ್ ಸಂಸ್ಥೆಯಾಗಿದ್ದು, ಮೊದಲ ಹಂತದಲ್ಲಿ ಜೈಪುರದಂತಹ ಮಧ್ಯಮ ವರ್ಗದ ಪಟ್ಟಣಗಳಲ್ಲಿ ಆರಂಭವಾಗಿತ್ತು. ಸಂಸ್ಥೆ ಆರಂಭಿಸುವಾಗ ಪ್ರತಿ ದಿನ 100 ಜನ ಗ್ರಾಹಕರನ್ನು ಆಯ್ದುಕೊಂಡು ಅವರಿಗೆ ಸೇವೆ ಒದಗಿಸುವ ಗುರಿ ಹೊಂದಲಾಗಿತ್ತು. ಈಗಾಗಲೇ ಜೈಪುರದಲ್ಲಿ ಈಸಿ ಫಿಕ್ಸ್ ಸಂಸ್ಥೆ ಅತ್ಯುತ್ತಮ ನೆಲೆ ಕಂಡುಕೊಂಡಿದೆ. ಜೊತೆಗೆ ರಾಷ್ಟ್ರರಾಜಧಾನಿ ನವದೆಹಲಿ ಸೇರಿದಂತೆ ಕೆಲವು ಪಟ್ಟಣಗಳಲ್ಲಿ ಈಸಿ ಫಿಕ್ಸ್ ಯಶಸ್ವಿಯಾಗಿ ಕಾರ್ಯಾಚರಣೆಗಿಳಿದಿದೆ.

2011ರಲ್ಲಿ ಪ್ರಾರಂಭವಾದ ಗುರ್‌ಗಾಂವ್‌ ಮೂಲದ ಈಸಿಫಿಕ್ಸ್ ಸಂಸ್ಥೆ ಉತ್ಪನ್ನಗಳ ನಿರ್ವಹಣೆ ಮತ್ತು ರಿಪೇರಿ ಸೇವೆಗಳನ್ನು ಒದಗಿಸಲು ಆರಂಭವಾಗಿತ್ತು. ಉದಾಹರಣೆಗೆ ಕಾರ್ಪೆಂಟರಿ ಕೆಲಸಗಳು, ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದ ಎಲೆಕ್ಟ್ರಿಕಲ್ ಕೆಲಸಗಳು, ಮನೆಯ ಬಾತ್ ರೂಂ ಮತ್ತು ಟಾಯ್ಲೆಟ್‌ನ ಪ್ಲಂಬಿಂಗ್ ಕೆಲಸಗಳು ಸೇರಿದಂತೆ ಮನೆ ಹಾಗೂ ಕಚೇರಿಯ ನಿರ್ವಹಣೆ ಸಂಬಂಧಿ ಕೆಲಸಗಳನ್ನು ಈಸಿಫಿಕ್ಸ್ ನಿರ್ವಹಿಸುತ್ತದೆ. ಆಕ್ಸೈಲರ್ ವೆಂಚರ್ ಕ್ಯಾಪಿಟಲ್ ನಿಂದ ಪ್ರಾರಂಭಿಕ ಹೂಡಿಕೆ ಮಾಡಿಕೊಂಡ ಸಂಸ್ಥೆ ಇದೀಗ ತನ್ನ ಇನ್ನಿತರ ಹಂತಗಳನ್ನು ಪೂರೈಸಿಕೊಳ್ಳಲು ಹೆಚ್ಚುವರಿ ಹೂಡಿಕೆಯತ್ತ ಗಮನಹರಿಸಿದೆ.

ಜೈಪುರದಲ್ಲಿ ಪ್ರತಿದಿನ 100ಕ್ಕೂ ಹೆಚ್ಚು ನಿರ್ವಹಣಾ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ಗುರಿ ಈಸಿ ಫಿಕ್ಸ್ ನದ್ದಾಗಿತ್ತು. ಈಗ ಜೈಪುರ ಸೇರಿದಂತೆ ದೇಶದಾದ್ಯಂತ ಟೈಯರ್ 1, ಟೈಯರ್ 2ರ ವಲಯದ 11 ಮುಖ್ಯ ಪಟ್ಟಣಗಳಲ್ಲಿ ಈಸಿ ಫಿಕ್ಸ್ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಕಂಪನಿಯ ಸಿಇಓ ಹಾಗೂ ಸಂಸ್ಥಾಪಕರೊಲ್ಲಬ್ಬರಾದ ಶೆಫಾಲಿ ಅಗರ್‌ವಾಲ್ ಹೊಲಾನಿ ಹೇಳುವಂತೆ ಪ್ರತಿ ಪಟ್ಟಣದಲ್ಲೂ ಈಸಿ ಫಿಕ್ಸ್ ಪ್ರತಿನಿತ್ಯ 20 ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

ಗೃಹ ಹಾಗೂ ಕಚೇರಿಯ ಮುಖ್ಯ 3 ಸೇವಾ ಕ್ಷೇತ್ರಗಳಾದ ಪ್ಲಂಬಿಂಗ್, ಎಲೆಕ್ಟ್ರಿಕಲ್, ಕಾರ್ಪೆಂಟರಿಗಳಲ್ಲಿ ಈಸಿ ಫಿಕ್ಸ್ ಸುಲಭವಾಗಿ ಸೇವೆ ಒದಗಿಸುತ್ತಿದೆ. ಕೆಲಸದ ಆಳ ಮತ್ತು ಅಗಲಗಳ ಆಧಾರದ ಮೇಲೆ ಪಾವತಿ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಾರಂಭವಾಗಿ ಇಲ್ಲಿಯ ತನಕ ಈಸಿ ಫಿಕ್ಸ್ ಸುಮಾರು 5,50,000 ಮನೆಗಳಿಗೆ ತನ್ನ ಸೇವೆ ಒದಗಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅನುವಾದಕರು: ವಿಶ್ವಾಸ್​​​​​​

Related Stories

Stories by YourStory Kannada