"ಕ್ಯುಟಿಯಪಾ"ದ ಕ್ರಿಯೆಟೀವ್ ಮ್ಯಾನ್ ಅರ್ನಬ್ ಕುಮಾರ್ : ಇದು ವಿಜುವಲ್ ಮೀಡಿಯಾದ ಮ್ಯಾಜಿಕ್

ಟೀಮ್​​ ವೈ.ಎಸ್​​. ಕನ್ನಡ

0

ಈಗಿರುವ ಸ್ಪರ್ಧೆಯಲ್ಲಿ ಯಾವುದೇ ಹೊಸ ಟಿವಿ ಕಾರ್ಯಕ್ರಮವನ್ನ ಲಾಂಚ್ ಮಾಡುವುದೇ ಕಷ್ಟ. ಅಂತಹದ್ರಲ್ಲಿ ಯೂಟ್ಯೂಬ್ ನಲ್ಲಿ ಪ್ರೋಗ್ರಾಂ ಮಾಡಿ ಸಕ್ಸಸ್ ಕಾಣುವುದು ಕನಸಿನ ಮಾತು. ಆದ್ರೆ ಇಲ್ಲಿ ಒಂದು ನೆಟ್ ವರ್ಕ್ ಗ್ರೂಪ್ ಗೆ ಎರಡು ಲಕ್ಷಕ್ಕೂ ಅಧಿಕ ಚಂದಾದಾರರಿದ್ದಾರೆ. ಇಲ್ಲಿ ಅಪ್ ಲೋಡ್ ಆಗಿರುವ 40 ವಿಡಿಯೋಗಳನ್ನ ನೋಡಿ ಮೆಚ್ಚಿಕೊಂಡಿರುವವರ ಸಂಖ್ಯೆ 18 ಮಿಲಿಯನ್ . ಯೂಟ್ಯೂಬ್ ನಲ್ಲೇ ಬೆಳೆದು ನಿಂತು ಜನರನ್ನು ಈಗಾಗಲೇ ತಲುಪಿರುವ ವಿಶ್ವದ ದೊಡ್ಡದೊಡ್ಡ ನೆಟ್ ವರ್ಕ್ ಗ್ರೂಪ್ ಗಳು ಎಷ್ಟೇ ದುಡ್ಡು ಸುರಿದು ಪ್ರಯತ್ನಿಸಿದ್ರೂ ಈ ರೀತಿಯ ಯಶಸ್ಸು ಅಸಾಧ್ಯ. ಆದ್ರೆ ದಿ ವೈರಲ್ ಫೀವರ್ ಮೀಡಿಯಾ ಲ್ಯಾಬ್ಸ್ ಅದ್ಭುತವಾದುದನ್ನ ಸಾಧಿಸಿದೆ. ಕೇವಲ 18 ತಿಂಗಳಲ್ಲಿ ಜನರನ್ನ ತಲುಪಿರೋ ಟಿವಿಎಫ್ ನೆಟ್ ವರ್ಕ್ ಇವತ್ತು ಯೂಟ್ಯೂಬ್ ನಲ್ಲಿ ನಂಬರ್ ವನ್. ದಿ ವೈರಲ್ ಫೀವರ್ ಮೀಡಿಯಾ ಲ್ಯಾಬ್ಸ್ ನ ನಿರ್ದೇಶಕ ಅರ್ನಬ್ ಕುಮಾರ್ ಈ ಯಶಸ್ಸಿನ ರೂವಾರಿ. ವಿಶೇಷ ಶೈಲಿಯ ಕ್ಯುಟಿಯಪ ಎಂಬ ಕಾರ್ಯಕ್ರಮವನ್ನ ಹುಟ್ಟುಹಾಕಿದ ಅರ್ನಬ್ ಕುಮಾರ್ ವೃತ್ತಿಪರರಿಗೆ ಒಂದು ಸ್ಫೂರ್ತಿಯ ಕಥೆ..

ಬಾಲ್ಯದಲ್ಲೇ ಅತೀ ತುಂಟ..

ಅಪ್ಪ ಅಮ್ಮನಿಗೆ ಮಗನ ಶಾಲೆ ಇಷ್ಟವಾಗದೆ ಇದ್ದರೆ ಶಾಲೆಯನ್ನ ಬದಲಾಯಿಸುವುದು ಸಹಜ. ಆದ್ರೆ ಅರ್ನಬ್ ಕುಮಾರ್​​ಗೆ ಶಾಲೆ ಇಷ್ಟವಾಗದೇ ಇದ್ದರೆ ಅಲ್ಲಿಂದ ಓಡಿ ಹೋಗುವುದೇ ಅಭ್ಯಾಸವಾಗಿತ್ತು. ಆದ್ರೆ ಶಿಸ್ತಿನ ಮತ್ತು ಕಠಿಣ ವ್ಯಕ್ತಿತ್ವ ಹೊಂದಿದ್ದ ಅವರ ತಂದೆ ಅರುನಬ್ ಬದುಕಿನಲ್ಲಿ ಮಹತ್ವದ ಪಾತ್ರವಹಿಸಿದ್ರು. ಅರುನಬ್ ಕುಮಾರ್ ಗೆ ಪ್ರತಿಷ್ಠಿತ ಜೆಇಇ ಶಾಲೆಯಲ್ಲಿ ಕಲಿಯುವ ಮನಸ್ಸಿದ್ರೂ ಅಲ್ಲಿನ ಎಂಟ್ರೆಸ್ ಪರೀಕ್ಷೆಯಲ್ಲಿ ಅದೃಷ್ಟ ಕೈಕೊಟ್ಟಿತ್ತು. ಹೀಗಾಗಿ ಅವರು ಕರಗ್​​​ಪುರದ ಐಐಟಿಗೆ ಸೇರಿಕೊಂಡ್ರು. ಅಲ್ಲಿನ ಶಾಂತ ಪರಿಸರ ಅವರಿಗೆ ಇಷ್ಟವಾಗಿದ್ರೂ, ತಲೆಯಲ್ಲಿದ್ದ ಕನ್ ಫ್ಯೂಷನ್​​ಗಳಿಗೆ ಕೊನೆ ಇರಲಿಲ್ಲ.

“ ಪ್ರತೀ ಸೆಮಿಸ್ಟರ್ ನಲ್ಲೂ ನಾನು ಮುಂದೆ ಏನಾಗ್ಬೇಕು ಅನ್ನೋದ್ರ ಬಗ್ಗೆ ಯೋಚಿಸುತ್ತಿದ್ದೆ. ಮೊದಲ ಸೆಮಿಸ್ಟರ್ ನಲ್ಲಿ ಆರ್ಥಿಕ ತಜ್ಞನಾಗಲು ಇಚ್ಛಿಸಿದ್ದೆ. ಎರಡನೇ ಸೆಮಿಸ್ಟರ್ ನಲ್ಲಿ ಎಂಬಿಎ ಕಡೆಗೆ ಮನಸ್ಸು ಹೋಯ್ತು. ನಾಲ್ಕನೆ ಸೆಮಿಸ್ಟರ್ ಹೊತ್ತಿಗೆ ಯುಪಿಎಸ್ ಸಿಗೆ ಸೇರಬೇಕು ” ಅಂತ ಯೋಚಿಸ್ತಿದ್ದೆ ಅಂತ ಅರುನಬ್ ಕುಮಾರ್ ಆ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.

ಬದುಕು ಬದಲಾಯಿಸಿದ ಐಐಟಿ ಮತ್ತು ಆಡಿಯೋ ವಿಜುವಲ್ ಜರ್ನಲಿಸಂ

ಮುಂಬೈನ ಐಐಟಿಯಿಂದ ಹೊರಬಂದ ಅರುನಬ್ ಕುಮಾರ್ ಯುಎಸ್ ನ ಏರ್ ಫೋರ್ಸ್ ಪ್ರಾಜೆಕ್ಟ್ ಗೆ ಸೇರಿಕೊಂಡ್ರು. ಆದ್ರೆ ಅಲ್ಲಿನ ಕೆಲಸದ ಒತ್ತಡ ನಿಭಾಯಿಸದ ಅವರು ಕೆಲಸಕ್ಕೆ ಗುಡ್ ಬೈ ಹೇಳಿದ್ರು. ಆದ್ರೆ ಐಟಿಟಿಯಲ್ಲಿ ಇರುವಾಗ ಕೆಲವು ಕ್ರಿಯಾಶೀಲ ವ್ಯಕ್ತಿಗಳನ್ನ ಭೇಟಿಮಾಡುತ್ತಿದ್ರು. ಅವರೊಂದಿಗೆ ಶಾರ್ಟ್ ಫಿಲ್ಮ್ ಗಳನ್ನ ಮಾಡಿದ್ರು. ಅವರ ಉತ್ಸಾಹ ಹಾಗೂ ಕ್ರಿಯಾಶೀಲತೆ ನೋಡಿದವರು ನೀನು ಅಸಿಸ್ಟೆಂಟ್ ಡೈರೆಕ್ಟರ್ ಆಗ್ಬೋದು ಅಂತ ಉತ್ಸಾಹ ತುಂಬಿದ್ರು. ಇದರೊಂದಿಗೆ ಫರಾನ್ ಖಾನ್ ಅವರೊಂದಿಗೆ ಓಂ ಶಾಂತಿ ಓಂ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿದ್ರು. ಅಲ್ಲಿಂದ ಅವರಿಗೆ ಅವಕಾಶದ ಬಾಗಿಲು ತೆರೆದಿದ್ದು ರೆಡ್ ಚಿಲ್ಲಿ ಎಂಟರ್ ಟೈನ್ ಮೆಂಟ್..

“ ರೆಡ್ ಚಿಲ್ಲಿ ಎಂಟರ್ ಟೈನ್ ಮೆಂಟ್ ನಲ್ಲಿ ನಾನೊಬ್ಬ ವಿದ್ಯಾರ್ಥಿಯಂತಿದ್ದೆ. ಇಲ್ಲಿ ಶಾರೂಖ್ ಖಾನ್ ಮತ್ತು ಫರಾಖಾನ್ ಅವರಿಂದ ಸಿನಿಮಾಗೆ ಬೇಕಾದ ತಾಂತ್ರಿಕತೆಯನ್ನ ಕಲಿತುಕೊಂಡೆ. ಅವರನ್ನ ನಾನೆಂದೂ ಮೆರೆಯೋದಿಕ್ಕೆ ಸಾಧ್ಯವಿಲ್ಲ ” ಅನ್ನೋದು ಅರುನಬ್ ಕುಮಾರ್ ಮನದ ಮಾತು. ಇಲ್ಲಿದ್ದುಕೊಂಡೇ ಅಮಿರ್ ಖಾನ್ ಅಭಿನಯದ ಡೆಲ್ಲಿ ಬೆಲ್ಲಿ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಂಡ್ರು. ಮತ್ತೊಂದೆಡೆ ನೆಟ್ ವರ್ಕ್ 18 ಆಯೋಜಿಸಿದ್ದ ಶಾರ್ಟ್ ಫಿಲ್ಮ್ ಸ್ಪರ್ಧೆಯಲ್ಲಿ ಅರುನಬ್ ಅವರ ‘ದಿ ವಿಷ್ ಡ್ರೈವರ್ಸ್’ ಗೆ ಪ್ರಶಸ್ತಿ ಒಲಿಯಿತು.

ಬದುಕು ಬದಲಾಯಿಸಿದ ಕ್ಯುಟಿಯಪಾ..

ಕ್ರಿಯಾಶೀಲವಾಗಿದ್ದ ಅರುನಬ್ ಕುಮಾರ್ 2009ರಲ್ಲಿ ಎಂಜಿನಿಯರ್ಸ್ ಡೈರಿ ಅನ್ನೋ ಕಾರ್ಯಕ್ರಮ ನಿರ್ಮಿಸಿ ಅದ್ರ ಪೈಲಟ್ ಎಪಿಸೋಡ್ ಗಳನ್ನ ಎಂಟಿವಿಯಂತಹ ಯೂತ್ ಚಾನೆಲ್ ಗಳಿಗೆ ನೀಡಿದ್ರು. ಪ್ರೋಗ್ರಾಂ ಐಡಿಯಾ ಎಲ್ಲರ ಮೆಚ್ಚುಗೆಗೆ ಪಾತ್ರವಾದ್ರೂ, ಅವರ ಕಾರ್ಯಕ್ರಮ ತಿರಸ್ಕೃತಗೊಂಡಿತು. ಆದ್ರೆ ಅವರ ಆ ಕಾರ್ಯಕ್ರಮ ತಿರಸ್ಕೃತವಾಗಿದ್ದೇ ಕ್ಯುಟಿಯಪಾ ಅನ್ನೋ ಕಾನ್ಸೆಪ್ಟ್ ಹುಟ್ಟಲು ಕಾರಣವಾಯ್ತು.

ಕ್ಯುಟಿಯಪಾ ಕಾನ್ಸೆಪ್ಟ್ ಭಾರತದ ಟಿವಿ ವೀಕ್ಷಕರಿಗಲ್ಲ.. ಇಂತಹ ಕಾರ್ಯಕ್ರಮವನ್ನ ಜನ ಒಪ್ಪಿಕೊಳ್ಳುವುದೇ ಇಲ್ಲ ಅನ್ನೋ ಜಡ್ಜ್ ಮೆಂಟ್ ಹಲವರಿಂದ ಬಂತು. ಆದ್ರೆ ಇವೆಲ್ಲವನ್ನೂ ಮೀರಿ ನಿಲ್ಲಬೇಕು ಅನ್ನೋ ಹಠ ಹೊಂದಿದ್ದ ಈ ಜೀನಿಯಸ್, ದಿ ವೈರಲ್ ಫೀವರ್ ಅನ್ನೋ ನೆಟ್ ವರ್ಕನ್ನೂ ಆರಂಭಿಸಿದ್ರು. ಈ ನೆಟ್ ವರ್ಕ್ ಮೂಲಕ ಕ್ಯುಟಿಯಪಾ ಕಾರ್ಯಕ್ರಮದ ವಿಡಿಯೋಗಳನ್ನ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಯ್ತು. ಇಲ್ಲಿ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿತ್ತು. ಕೆಲವೇ ದಿನಗಳಲ್ಲಿ 18 ಸಾವಿರಕ್ಕೂ ಹೆಚ್ಚು ಜನರ ಮೆಚ್ಚುಗೆಗಿಟ್ಟಿಸಿತು.. ಮನರಂಜನೆ ವಿಭಾಗದಲ್ಲಿ ಒಂದೇ ವಾರದಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಎರಡನೇ ವಿಡಿಯೋ ಅನ್ನೋ ಹೆಗ್ಗಳಿಕೆಗೂ ಕ್ಯುಟಿಯಪಾ ಪಾತ್ರವಾಯ್ತು.

“ ಅಂದು ಕೇವಲ ಒಬ್ಬನಿಂದ ಆರಂಭವಾದ ದಿ ವೈರಲ್ ಫೀವರ್ ಮೀಡಿಯಾ ಲ್ಯಾಬ್ಸ್ ಇಂದು ಕ್ರಿಯಾಶೀಲರ ತಂಡದೊಂದಿಗೆ ಕೂಡಿದೆ. ಅಂದು ತಿರಸ್ಕೃರ ಮಾಡಿದವರು ನಮ್ಮನ್ನ ಬೆರಗಿನಿಂದ ನೋಡುತ್ತಿದ್ದಾರೆ. ನಮ್ಮ ತಂಡಕ್ಕೆ 1.2 ಮಿಲಿಯನ್ ಜನರ ಮೆಚ್ಚುಗೆ ಸಿಕ್ಕಿದೆ ” ಅಂತ ಅರುನಬ್ ಕುಮಾರ್ ಅಭಿಮಾನದಿಂದ ಹೇಳುತ್ತಾರೆ.

ಸದ್ಯ ದಿ ವೈರಲ್ ಫೀವರ್ ಮೀಡಿಯಾ ಲ್ಯಾಬ್ಸ್ 15 ಜನರನ್ನ ಹೊಂದಿದ್ದು ಮುಂಬೈ ಹಾಗೂ ದೆಹಲಿಯಲ್ಲಿ ಕಚೇರಿಗಳನ್ನ ಹೊಂದಿದೆ. ಅಂಕಿಸಂಖ್ಯೆಗಳ ಪ್ರಕಾರ ಭಾರತದ ಯೂತ್ ಎಂಟರ್ ಟೈನ್ ಮೆಂಟ್ ವಿಭಾಗದಲ್ಲಿ ದಿ ವೈರಲ್ ಫೀವರ್ ಮೀಡಿಯಾ ಲ್ಯಾಬ್ಸ್ ಎರಡನೇ ಸ್ಥಾನಗಳಿಸಿದೆ.

ಲೇಖಕರು:

ಅನುವಾದಕರು: ಬಿಆರ್ ಪಿ

Related Stories