ಡಾಮಿನೋಸ್ ಸ್ಟೈಲ್ ನಲ್ಲಿ ದೇಸೀ ಫುಡ್ : ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಬ್ಯುಸಿನೆಸ್ ನಲ್ಲಿ ನಲ್ಲಿ ಡಮ್ಮಾ ಡಮ್ ಹೊಸ ಹೆಜ್ಜೆ.. 

ಟೀಮ್​ ವೈ.ಎಸ್​. ಕನ್ನಡ

0

ಇತ್ತೀಚಿನ ದಿನಗಳಲ್ಲಿ ಅಡುಗೆ ಮಾಡಲು ಪುರುಸೊತ್ತು ಇಲ್ಲ ಎಂದು ಕೆಲವರು ಫಾಸ್ಟ್ ಫುಡ್ ಕಲ್ಚರ್ ಗೆ ತಕ್ಕಂತೆ ಬದಲಾಗುತ್ತಿದ್ದಾರೆ.. ಇನ್ನು ಕೆಲವರು ಇಡೀ ದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸುಸ್ತಾಗಿ ಮನೆಗೆ ಬರ್ತಾರೆ. ದೇಹ ತಣಿಯುವ ಜೊತೆಗೆ ಅವರೂ ಹಸಿವಿನಿಂದಲೂ ಮನೆಗೆ ಬರ್ತಾರೆ. ಆದ್ರೆ ಅದೆಷ್ಟೇ ಹಸಿವಾಗಿದ್ರೂ ಅವರಿಗೆ ಅಡುಗೆ ಮಾಡೋದಿಕ್ಕೆ ಮನಸ್ಸೇ ಇರೋದಿಲ್ಲ. ಹಾಗಂತ ಫಾಸ್ಟ್ ಫುಡ್ ತಿನ್ನೋದಿಕ್ಕೂ ಅವರು ಇಚ್ಛಿಸುವುದಿಲ್ಲ. ಅವರಿಗೇನಿದ್ರೂ ಪಕ್ಕಾ ಮನೆ ಶೈಲಿಯಲ್ಲಿ ಆರೋಗ್ಯಪೂರ್ಣ ಆಹಾರಗಳನ್ನ ಬಯಸುತ್ತಾರೆ. ಇಂತಹ ಊಟ ತಿಂಡಿಗಳನ್ನ ಬಯಸುವವರಿಗೆ ಶುರುವಾಗಿರೋದು ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಗಳು.. ಆದ್ರೆ ಈ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಗಳಲ್ಲೂ ಇನ್ನಿಲ್ಲದ ಎಕ್ಸಪರಿಮೆಂಟ್ ಗಳು ನಡೆಯುತ್ತಿದೆ. ಅವುಗಳ ಪೈಕಿ ದೇಸೀ ಸ್ಟೈಲ್ ಕೂಡ ಒಂದು..

ಇಂತಹ ದೇಸೀ ಅಡುಗೆ ಕಾನ್ಸೆಪ್ಟ್ ಗಳನ್ನ ಅಳವಡಿಸಿಕೊಂಡು ಶುರುವಾಗಿರೋ ಕ್ವಿಕ್ ರೆಸ್ಟೋರೆಂಟ್ ಗಳಲ್ಲಿ ಒಂದು ಪುಣೆಯ ಡಮ್ಮಾ ಡಮ್ ಇಂಡಿಯನ್ ಕಿಚನ್ ಮತ್ತು ಗ್ರಿಲ್.. ಈ ವಿನೂತನ ಬ್ಯೂಸಿನೆಸ್ ಗೆ ಚಾಲನೆ ನೀಡಿರೋದು ರಾಕೇಶ್ ರಾಜೇಂದ್ರನ್.. ಸಾಂಪ್ರದಾಯಿಕ ರೆಸಿಪಿಗಳನ್ನ ಬಳಸಿಕೊಂಡು ಫ್ರೆಶ್ ಆಗಿರೋ ಆಹಾರಗಳನ್ನ ಸರಬರಾಜು ಮಾಡುವ ಮೂಲಕ ಡಮ್ಮಾ ಡಮ್ ಇಡೀ ಪುಣೆಯಲ್ಲೇ ಮನೆ ಮಾತಾಗಿದೆ. ಇರುವ ತಂತ್ರಜ್ಞಾನದೊಂದಿಗೆ ಸ್ವಲ್ಪ ವಿಜ್ಞಾನವನ್ನ ಬಳಸಿಕೊಂಡು ಬ್ಯುಸಿನೆಸ್ ಗಿಳಿದಿರುವ ರಾಕೇಶ್ ರಾಜೇಂದ್ರನ್ ತಮ್ಮ ಉದ್ದಿಮೆಯಲ್ಲಿ ಉತ್ತಮವಾದ ನಡೆ ಕಂಡುಕೊಂಡಿದ್ದಾರೆ. 

“ ಈ ಹೊಸ ಪ್ರಯತ್ನದಿಂದ ಜನರನ್ನ ಸುಲಭವಾಗಿ ತಲುಪಲು ಸಾಧ್ಯವಾಗುತ್ತಿದೆ. ಇಲ್ಲಿ ಸಾಂಪ್ರದಾಯಿಕ ಗ್ರಿಲ್ ಗಳನ್ನೂ ತಯಾರಿಸಲಾಗುತ್ತಿದೆ. ಇಂಡಿಯನ್ ಫುಡ್ ಸ್ಟೈಲ್ ಗಳನ್ನ ಕ್ವಿಕ್ ರೆಸ್ಟೋರೆಂಟ್ ಗಳ ಮೂಲಕ ಡೆಲಿವರಿ ಮಾಡಲಾಗುತ್ತಿದೆ. ಹೀಗಾಗಿ ಬಹುತೇಕರ ಡಮ್ಮಾ ಡಮ್ ಫುಡ್ ಗಳನ್ನ ಮೆಚ್ಚಿಕೊಂಡಿದ್ದಾರೆ. ” 
               - ರಾಕೇಶ್ ರಾಜೇಂದರನ್, ಡಮ್ಮಾ ಡಮ್ ಸಂಸ್ಥಾಪಕ.

ಗ್ರೇಟ್ ರೆಸ್ಟೋರೆಂಟ್ ಫುಡ್ ನ ಡೆಲಿವರಿ ಸಿಸ್ಟಮ್..

ಪ್ರತೀ ಹೊಸ ಆರಂಭದ ಹಿಂದೆಯೂ ಒಂದೊಂದು ಅನುಭವವಿರುತ್ತದೆ ಅಂತೆ. ಸ್ವಂತ ಅನುಭವಗಳೇ ಹೊಸ ಹುಟ್ಟಿಗೆ ಕಾರಣವಾಗುತ್ತದಂತೆ. ಹಾಗೇ ಡಮ್ಮಾ ಡಮ್ ರೆಸ್ಟೋರೆಂಟ್ ನ ಹಿಂದೆಯೂ ಅನುಭವದ ಕಥೆ ಇದೆ. ರಾಕೇಶ್ ರಾಜೇಂದರನ್ ಅವರು ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಗಳಿಗಾಗಿ ಇನ್ನಿಲ್ಲದ ಹುಡುಕಾಟ ನಡೆಸಿದ್ರು. ಜೊತೆಗೆ ಭಾರತೀಯ ಸಾಂಪ್ರದಾಯಿಕ ಶೈಲಿಯ ಆಹಾರಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ರು. ಆದ್ರೆ ಪ್ರತೀ ಬಾರಿಯೂ ಅವರು ಬಯಸಿದ ಆಹಾರ ಸಿಗದೆ ಪರದಾಡುತ್ತಿದ್ದರು. ಹೀಗಾಗಿ ಅವರ ಒದ್ದಾಟ ಪರದಾಟವೇ ಹೊಸ ರೆಸ್ಟೋರೆಂಟ್ ನ ಉದಯಕ್ಕೆ ಕಾರಣವಾಯ್ತು ಅನ್ನೋದು ವಿಶೇಷ. ಒಂದು ಉತ್ತಮ ಸರ್ವೀಸ್ ಹಾಗೂ ಗುಣಮಟ್ಟವನ್ನ ಕಾಯ್ದುಕೊಂಡರೆ ಮಾರುಕಟ್ಟೆಯನ್ನ ಬೆಳೆಸಿಕೊಳ್ಳಬಹುದು ಅನ್ನೋದನ್ನ ಅರ್ಥಮಾಡಿಕೊಂಡೆ ಅಂತ ರಾಕೇಶ್ ತಮ್ಮ ಆರಂಭದ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.

ಇದನ್ನು ಓದಿ: ಹಳೆ ವಾಹನಗಳಿಗೆ ಹೊಸ ಲುಕ್ ನೀಡುತ್ತೆ ಈ ಸಂಸ್ಥೆ..!

ಪಾದರಸದ ವೇಗ ಹೊಂದಿರೋ ತಂಡ

ರಾಕೇಶ್ ಅವರಿಗೆ ರೆಸ್ಟೋರೆಂಟ್ ನ ಪ್ಲಾನ್ ಬಂದಿದ್ದೇ ತಡ ಇದ್ರ ಬಗ್ಗೆ ತನ್ನ ಗೆಳೆಯರೊಂದಿಗೆ ಚರ್ಚಿಸಿದ್ರು. ವಿಶೇಷ ಅಂದ್ರೆ ಅವರೆಲ್ಲಾ ರಾಕೇಶ್ ಅವರಿಗೆ ಯುಎಸ್ ಹಾಗೂ ಜಪಾನ್ ನಲ್ಲಿ ಮಾಜಿ ಸಹೋದ್ಯೋಗಿಗಳೂ ಆಗಿದ್ರು. ಅವರ ಮನವೊಲಿಸಿದ ರಾಜೇಂದರನ್ ತುಷಾರ್ ಬೋಲೆ ನೆರವಿನಿಂದ ತಮ್ಮ ಕನಸಿನ ಹಾದಿಯನ್ನ ಶುರುಮಾಡಿದ್ರು. ಹೀಗೆ ಪುಣೆಯಲ್ಲಿ ಹುಟ್ಟಿಕೊಂಡ ಡಮ್ಮಾ ಡಮ್ 13 ಲೈವ್ ಕಿಚನ್ ಗಳನ್ನ ಪುಣೆಯಲ್ಲಿ ಹೊಂದಿದೆ. ಒಟ್ಟು ಖರ್ಚು ವೆಚ್ಚದಲ್ಲಿ ಶೇಕಡಾ 60ರಷ್ಟು ಮಾರ್ಜಿನ್ ಹೊಂದಿರುವುದು ವಿಶೇಷ. ನಂತ್ರ ನಿಧಾನವಾಗಿ ಬ್ಯುಸಿನೆಸ್ ಗೆ ಹೊಂದಿಕೊಂಡ ಇವರ ತಂಡ ಕ್ರಮೇಣ ನೌಕರರನ್ನ ಸೆಳೆದುಕೊಂಡಿತು. ಎನ್ ಜಿಒಗಳಾದ ಪ್ರಥಮ್, ಪೇಸ್ ಹಾಗೂ ಡೋನ್ ಬೋಸ್ಕೋ ದಂತಹ ಕಂಪನಿಗಳೊಂದಿಗೂ ಟೈ ಅಪ್ ಮಾಡಿಕೊಂಡಿತು.

ಅಮೆರಿಕಾದ ಕನಸು..

ಪುಣೆಯಲ್ಲಿ ಸಕ್ಸಸ್ ಸ್ಟೋರಿ ಕಂಡ ಈ ತಂಡ ಭಾರತೀಯ ಶೈಲಿಯ ಫಾಸ್ಟ್ ಫುಡ್ ಗಳನ್ನ ದಕ್ಷಿಣ ಅಮೆರಿಕಾದಲ್ಲಿ ಪರಿಚಯಿಸಲು ಯೋಜನೆ ಹಾಕಿಕೊಂಡಿದೆ. ಇನ್ನು ಅಮೆರಿಕಾದಲ್ಲಿರುವ ಭಾರತೀಯರನ್ನ ಸೆಳೆದುಕೊಳ್ಳಲು ಈಗಾಗಲೇ ಪಕ್ಕಾ ಯೋಜನೆಗಳನ್ನ ರೂಪಿಸಿಕೊಂಡಿದೆ. ವಿಶೇಷ ಅಂದ್ರೆ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಗಳಂತಹ ಸ್ಟಾರ್ಟ್ ಅಪ್ ಗಳಿಗೆಲ್ಲಾ ಮೂಲ ಭಾರತದ ಶೈಲಿ. ಇನ್ನು ಡಮ್ಮಾ ಡಮ್ ಮೊದಲು ಮಾಡಿರೋ ಎಕ್ಸಪರಿಮೆಂಟ್ ಮುಂಬೈನ ಪ್ರಸಿದ್ಧ ಚಾರ್ಕೋಲ್ ಬಿರಿಯಾನಿ. ಉಕೃಷ್ಟ ಸ್ವಾದ ಹಾಗೂ ಗುಣಮಟ್ಟ ಹೊಂದಿರೋ ಈ ಬಿರಿಯಾನಿ ಡೊಮಿನೋಸ್ ಹಾಗೂ ಸಬ್ ವೇ ನಂತಹ ಹೊಟೇಲ್ ಗಳ ಮಾದರಿಯಲ್ಲೇ ಕ್ವಾಲಿಟಿಯನ್ನ ನೀಡುವಲ್ಲಿ ಯಶಸ್ಸು ಕಂಡಿದೆ.

ಹೀಗೆ ಸ್ವಂತ ಅನುಭವದ ಬಲದಿಂದ ಹುಟ್ಟಿಕೊಂಡಿರುವ ಡಮ್ಮಾ ಡಮ್ ರೆಸ್ಟೋರೆಂಟ್ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಗಳ ಪೈಕಿಯಲ್ಲೇ ಅತ್ಯಂತ ಶ್ರೇಷ್ಠ ಗುಣಮಟ್ಟ ಹೊಂದಿದೆ. ಜೊತೆಗೆ ಫಾಸ್ಟ್ ಫುಡ್ ಶೈಲಿಯಲ್ಲೇ ಭಾರತೀಯ ಸಾಂಪ್ರದಾಯಿಕ ಶೈಲಿಯನ್ನ ಹೊಂದಿರೋದ್ರಿಂದ ಈಗಾಗಲೇ ಪುಣೆ ಹಾಗೂ ಮುಂಬೈನಲ್ಲಿ ಹೆಸರು ಮಾಡಿದೆ. ರಾಕೇಶ್ ರಾಜೇಂದರ್ ಅವರ ಈ ಪರಿಶ್ರಮ ಹೀಗೆ ಮುಂದುವರಿದ್ರೆ, ಅವರ ಅಮೆರಿಕಾದ ಕನಸು ನನಸಾಗೋದ್ರಲ್ಲಿ ಅನಮಾನವಿಲ್ಲ.

ಲೇಖಕರು - ಸಿಂಧು ಕಶ್ಯಪ್

ಅನುವಾದ – ಸ್ವಾತಿ, ಉಜಿರೆ

ಇದನ್ನು ಓದಿ

1. "ಪೂನಂ ಫ್ಲೂಟ್ಸ್" - ಅದ್ಭುತ ಕಲಾವಿದ ಕುಶಲಕರ್ಮಿಯಾದ ಕಥೆ...

2. ನಗರದ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ..!

3. ಸಿಲಿಕಾನ್ ಸಿಟಿಯಲ್ಲಿ ರೈಫಲ್, ಪಿಸ್ತೂಲ್ ಕಲಿಯೋ ಅವಕಾಶ..!

Related Stories