ಬಿಸಿಲಾದರೇನು..? ಮಳೆಯಾದರೇನು..? ಉಡುಪು ಸೂಪರ್​ ಆಗಿರಬೇಕು..!

ಟೀಮ್​​ ವೈ.ಎಸ್​. ಕನ್ನಡ

ಬಿಸಿಲಾದರೇನು..? ಮಳೆಯಾದರೇನು..? ಉಡುಪು ಸೂಪರ್​ ಆಗಿರಬೇಕು..!

Friday June 23, 2017,

2 min Read

ಇತ್ತೀಚಿನ ದಿನಗಳಲ್ಲಿ ಬಟ್ಟೆಗಳನ್ನು ತೊಡುವುದು ಕೊಂಚ ಕಷ್ಟದ ಮಾತು. ವಾತಾವರಣದಲ್ಲಿ ಏರುಪೇರಿನಿಂದಾಗಿ ದೇಹದ ಉಷ್ಣಾಂಶ ಕೂಡ ಹೆಚ್ಚಿದೆ. ಹೀಗಾಗಿ ಬಿಸಿಲಿನ ವೇಳೆ ಬಟ್ಟೆ ತೊಡುವುದು ಕಿರಿಕಿರಿ ಆಗುವುದು ಉಂಟು. ಆದ್ರೆ ಈ ಕಿರಿಕಿರಿಗೆ ಪರಿಹಾರವನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಸ್ಟ್ಯಾನ್​ಫೋರ್ಡ್ ಯೂನಿವರ್ಸಿಟಿಯ ವಿಜ್ಞಾನಿಗಳು ಕಡಿಮೆ ದರದ ತಂಪು ಬಟ್ಟೆಗಳ ಅನ್ವೇಷಣೆ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಕಡಿಮೆ ಖರ್ಚಿನ ಪ್ಲಾಸ್ಟಿಕ್ ಆಧರಿತ ಬಟ್ಟೆಗಳು, ದೇಹವನ್ನು ಏರ್ ಕಂಡೀಷನ್ ರೀತಿಯಲ್ಲಿ ಕಾಪಾಡಿಕೊಳ್ಳಲು ಸಹಾಯ ಮಾಡುವಂತಹ ಬಟ್ಟೆಗಳನ್ನು ವಿಜ್ಞಾನಿಗಳು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.

image


ಸೈನ್ಸ್ ಮ್ಯಾಗಝೀನ್ ಒಂದರ ಪ್ರಕಾರ ಈ ಹೊಸ ರೀತಿಯ ಬಟ್ಟೆಗಳು ದೇಹದ ಉಷ್ಣತೆಯನ್ನು ಇನ್ಫ್ರಾ ರೆಡ್ ರೇಡಿಯೇಷನ್ ಮೂಲಕ ತಡೆಯುತ್ತವೆ. ಈ ಅನ್ವೇಷಣೆಯ ಪ್ರಕಾರ, ಹೊಸ ರೀತಿಯ ಬಟ್ಟೆ ಹತ್ತಿರ ವಸ್ತ್ರಗಳಿಗಿಂತ 2.7 ಸೆಲ್ಷಿಯಸ್ ಡಿಗ್ರಿಯಷ್ಟು ಕಡಿಮೆ ಹೀಟ್ ಹೊಂದಿವೆ. ಸಾಮಾನ್ಯವಾಗಿ ತೊಡುವ ಸಿಂಥೆಟಿಕ್ ಬಟ್ಟೆಗಳಿಗಿಂತ, ವಿಜ್ಞಾನಿಗಳು ಕಂಡುಹಿಡಿದಿರುವ ಬಟ್ಟೆಗಳು 2.1 ಡಿಗ್ರಿ ಸೆಲ್ಷಿಯಸ್ ಕಡಿಮೆ ಉಷ್ಣತೆಯನ್ನು ಹೊಂದಿವೆ.

ಯಿಕ್ಯುಯಿ ಎನ್ನುವ ವಿಜ್ಞಾನಿಗಳ ತಂಡ ಈ ಅನ್ವೇಷಣೆಯನ್ನು ಮಾಡುತ್ತಿದೆ. ವ್ಯಾಯಾಮ ಮಾಡುವ ಸಂದರ್ಭಗಳನ್ನು ಹೊರತು ಪಡಿಸಿ, ದೇಹದ ಉಷ್ಣಾಂಶದ ಶೇಕಡಾ 50ರಷ್ಟು ಇನ್ಫ್ರಾ ರೆಡ್ ಕ್ರಿಯೆಯ ಮೂಲಕವೇ ಹೊರ ಹೋಗುತ್ತದೆ. ಸಾಮಾನ್ಯ ಬಟ್ಟೆಗಳು ಈ ಕ್ರಿಯೆಯನ್ನು ತಡೆಯುತ್ತದೆ. ಹೀಗಾಗಿ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ.

ಇದನ್ನು ಓದಿ: "ಮನಿ" ಮಾಸ್ಟರ್ ಅಶ್ವಿನಿ 

ವಿಜ್ಞಾನಿಗಳು ಅನ್ವೇಷಿಸಲು ಹೊರಟಿರುವ ಬಟ್ಟೆ ದೇಹದ ಉಷ್ಣಾಂಶ ಹೊರ ಹೋಗುವ ರೀತಿಯಲ್ಲಿ ತಯಾರಾಗಲಿದೆ. ಆದ್ರೆ ಸದ್ಯಕ್ಕೆ ಈ ತರಹದ ಬಟ್ಟೆಗಳನ್ನು ತೊಡಲು ಸಾಮಾನ್ಯ ಜನರಿಗೆ ಕಷ್ಟವಿದೆ. ಇದು ಇನ್ನೂ ಪ್ರಯೋಗದ ಹಂತದಲ್ಲಿದ್ದು, ಇದ್ರಿಂದಾಗುವ ಲಾಭ ಮತ್ತು ನಷ್ಟಗಳನ್ನು ಕೂಡ ಲೆಕ್ಕಹಾಕಬೇಕಿದೆ. ಹವಾಮಾನದಲ್ಲಿನ ವೈಪರೀತ್ಯದ ಸಂದರ್ಭಗಳಲ್ಲಿ ಈ ಬಟ್ಟೆ ಹೇಗೆ ವರ್ತಿಸುತ್ತದೆ ಅನ್ನುವ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ.

ಒಟ್ಟಿನಲ್ಲಿ ಈಗಾಗಲೇ ಜೀನ್ಸ್, ಫಾರ್ಮಲ್ಸ್ ಹೀಗೆ ಅನೇಕ ಸ್ಟೈಲಿಷ್ ಡ್ರೆಸ್​​ಗಳನ್ನು ಹಾಕಿಕೊಂಡ್ರು, ಬಿಸಿಲಿನ ತಾಪಕ್ಕೆ ಎಲ್ಲರೂ ಕಂಗಾಲಾಗಿದ್ದಾರೆ. ಆದ್ರೆ ವಿಜ್ಞಾನಿಗಳು ಸಂಶೋಧಿಸಲು ಹೊರಟಿರುವ ಈ ಹೊಸ ತರಹದ ಬಟ್ಟೆಗಳು ಹಲವರ ಸಮಸ್ಯೆಗಳನ್ನು ನಿವಾರಿಸಬಲ್ಲದು.

ಇದನ್ನು ಓದಿ:

1. ಇಸ್ರೇಲ್​ನ Start TLV ಸ್ಪರ್ಧೆ : ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲು 10 ಪ್ರಮುಖ ಕಾರಣಗಳು…

2. ರಾಷ್ಟ್ರಪತಿಗಳ ವಾಹನ ತಡೆದು ಆಂಬ್ಯುಲೆನ್ಸ್​ಗೆ ಕೊಟ್ರು ದಾರಿ : ಬೆಂಗಳೂರು ಟ್ರಾಫಿಕ್ ಪೊಲೀಸ್​ಗೆ ನೀವೂ ಒಂದು ಸಲಾಂ ಹೇಳಿ

3. ಪ್ರಾಚೀನ ಅಡುಗೆ ಪದ್ಧತಿಗೆ ಮರುಜೀವ ಕೊಟ್ಟಿದ್ದಾಳೆ ಈ ಮಣ್ಣಿನ ಮಗಳು