ಸುಖ ನಿದ್ದೆಗೆ ಸೂಪರ್ ಆ್ಯಪ್..!

ಟೀಮ್​ ವೈ.ಎಸ್​. ಕನ್ನಡ

2

ಈ ಆಧುನಿಕ ಸ್ಮಾರ್ಟ್ ಯುಗದಲ್ಲಿ ಮನನುಷ್ಯನ ಬಳಿ ಎಲ್ಲವೂ ಇದೆ. ಆದರೆ ಸುಖ ನಿದ್ದೆ ಎನ್ನುವುದು ಕೆಲವರಿಗೆ ನಿಲುಕದ ನಕ್ಷತ್ರವಾಗಿದೆ. ಎಷ್ಟೇ ಪ್ರಯತ್ನ ಮಾಡಿದ್ರೂ, ಏನೆಲ್ಲ ಹರಸಾಹಸ ಪಟ್ರೂ ನಿದ್ದೆ ಎಂಬುವುದು ಮಾತ್ರ ಸರಿಯಾಗಿ ಬರುವುದಿಲ್ಲ. ಆದ್ರೆ ಇನ್ನು ಮುಂದೆ ನಿದ್ದೆ ಇಲ್ಲ ಅಂತ ಕೊರಗುವ ಹಾಗಿಲ್ಲ. ಯಾಕಂದ್ರೆ ಸುಖ ನಿದ್ರೆಗಾಗಿಯೂ ಒಂದು ಆ್ಯಪ್ ಬಂದಿದೆ. ಆರೆ ಆ್ಯಪ್ ನಿದ್ದೆಗೂ ಏನ್ ಸಂಬಂಧ ಎಂಬುವರು ಉಂಟು. ಆದರೆ ಇಂತಹ ಪ್ರಶ್ನೆಗಳಿಗೆ ಉತ್ತರವಾಗಿ SleepCoacher-app ಈಗ ಜನರ ಗಮನಸೆಳೆಯುತ್ತಿದೆ.

ಒರ್ವ ಆರೋಗ್ಯವಂತ ಮನುಷ್ಯನಿಗೆ ಪೌಷ್ಟಿಕ ಆಹಾರ ಎಷ್ಟು ಮುಖ್ಯವೋ, ನಿದ್ದೆ ಕೂಡ ಅಷ್ಟೇ ಮುಖ್ಯ. ಮನುಷ್ಯ ಪ್ರತಿ ನಿತ್ಯ 6 ರಿಂದ 7 ಗಂಟೆಗಳ ಕಾಲ ನಿದ್ದೆ ಮಾಡಿದರೆ ಲವ-ಲವಿಕೆಯಿಂದ ಇರಲು ಸಾಧ್ಯವೆಂಬುವುದು ಗೊತ್ತಿರುವ ಸತ್ಯ. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ಒತ್ತಡದ ಜೀವನ ಮತ್ತು ಇತರೆ ಕಾರಣಗಳಿಂದ ಕಡಿಮೆ ಅವಧಿಯ ನಿದ್ದೆ ಮಾಡುವವರು ನಮ್ಮ ನಡುವೆ ಇದ್ದಾರೆ. ಕೆಲವರಿಗೆ ಒಮ್ಮೆ ಎದ್ದರೆ ನಿದ್ರೆ ಬರದಿರುವುದು, ತಡವಾಗಿ ಮಲಗಿದ್ದರೆ ನಿದ್ರೆ ಬರದಿರುವುದು ಹೀಗೆ ವಿವಿಧ ರೀತಿಯ ಸಮಸ್ಯೆಗಳಿವೆ. ಇಂತವರ ನೆರವಿಗಾಗಿ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 'ಸ್ಲೀಪ್ ಕೋಚರ್' ಎಂಬ ಆ್ಯಪ್ ವಿನ್ಯಾಸ ಮಾಡಿದ್ದಾರೆ. ಸುಖ ನಿದ್ದೆಗೆ ಏನು ಅವಶ್ಯತಕತೆಯಿದೆ ಎಂಬುದನ್ನು ತಿಳಿಸುವ ಕೆಲಸ ಈ ಆ್ಯಪ್ ಮಾಡಲಿದೆ.

ಇದನ್ನು ಓದಿ: ಪೇವರ್ಲ್ಡ್​ ಎಂಪೋಸ್: ಸಣ್ಣ ವ್ಯಾಪಾರಿಗಳಿಗೆ ಅನುಕೂಲಕರ ಸಾಧನ

ಈಗಾಗಲೇ ತನ್ನ ಈ ಹೊಸ ಪ್ರಯೋಗದಿಂದ ಈ ಆ್ಯಪ್ ಹೆಚ್ಚು ಸುದ್ದಿಯಲ್ಲಿದೆ. ಆದರೆ ಮುಂದಿನ ವರ್ಷ ಈ ಆ್ಯಪ್ ಮಾರುಕಟ್ಟೆಗೆ ಬರಲಿದ್ದು ಎಲ್ಲಾ ಸ್ಮಾರ್ಟ್ ಜನರು ಇದನ್ನು ಬಳಸುವ ಮೂಲಕ ತಮ್ಮ ನಿದ್ದೆಯ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ಈ ಆ್ಯಪ್ ವಿನ್ಯಾಸ ತಂಡದ ಮುಖ್ಯಸ್ಥ ನಿಡಿಯಾನ ದಾಸ್ಕೊಲೋವಾ. ನೌಕರರು ಕೆಲವೊಮ್ಮೆ ಕಚೇರಿಯಲ್ಲಿ ಕಂಪ್ಯೂಟರ್​ಗಳ ಮುಂದೆ ಕೆಲಸ ಮಾಡುವಾಗ ಅದರಲ್ಲೇ ತಲ್ಲೀನರಾಗಿ ತಮಗೆ ಅರಿವಿಲ್ಲದಂತೆ ಹೆಚ್ಚು ಸಮಯ ಕೆಲಸ ಮಾಡುತ್ತಾರೆ. ಇದರಿಂದ ಆಯಾಸಗೊಂಡು ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ. ಹೆಚ್ಚು ಮೊಬೈಲ್​ನಲ್ಲಿ ಕೆಲಸ ಮಾಡಿದ್ರು ಕಣ್ಣಿಗೆ ಆಯಾಸವಾಗುತ್ತದೆ. ನಿದ್ರೆ ಮಾತ್ರ ಬರುವುದಿಲ್ಲ. ಅಂತವರಿಗೂ ಇಲ್ಲಿ ನಿದ್ದೆ ಮಾಡಲು ಕೆಲ ಉಪಾಯಗಳನ್ನು ನೀಡಲಾಗಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರಿಗಾಗೇ ಈ ಆ್ಯಪ್​ನ್ನು ಸಿದ್ಧಪಡಿಸಲಾಗಿದೆ. ಈ ಆ್ಯಪ್​ನ್ನು  ಮೊಬೈಲ್ ಮತ್ತು ಕೆಲಸ ಮಾಡುವ ಕಂಪ್ಯೂಟರ್​ಗೆ ಅಳವಡಿಸಿ ಕೊಂಡರೆ ದೈಹಿಕ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುವುದು ಈ ಆ್ಯಪ್ ವಿನ್ಯಾಸಕರ ವಿಶ್ವಾಸ.

ಒಬ್ಬ ಉದ್ಯೋಗಿ ಮಧ್ಯಾಹ್ನ ಸೆಕೆಂಡ್ ಶಿಫ್ಟ್​ನ ಯಾವುದೋ ಒಂದು ಪಾಳಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಕೆಲಸದ ಒತ್ತಡದಲ್ಲಿ ಪಾಳಿ ಮುಗಿದರೂ ಆ ನೌಕರನಿಗೆ ಗೊತ್ತಾಗುವುದಿಲ್ಲ. ಈ ಆ್ಯಪ್​  ಆ ನೌಕರ ತಾನು ಕೆಲಸ ಮಾಡುವ ಕಂಪ್ಯೂಟರ್​ನಲ್ಲಿ ಅಳವಡಿಸಿಕೊಂಡಿದ್ದರೆ ಆ ಕಂಪ್ಯೂಟರ್ ಕಚೇರಿ ಮುಕ್ತಾಯದ ಸಮಯಕ್ಕೆ ಸರಿಯಾಗಿ ಆಫ್ ಆಗಿಬಿಡುತ್ತದೆ. ಮತ್ತೆ ಆನ್ ಮಾಡಿದರೂ ಅದು ರನ್ ಆಗುವುದಿಲ್ಲ. ಮತ್ತೆ ಅದು ಮರು ದಿನದ ಕಚೇರಿ ಸಮಯಕ್ಕೆ ಸರಿಯಾಗಿ ಸ್ವಯಂ ಚಾಲಿತವಾಗಿ ಆನ್ ಆಗುತ್ತದೆ. ಈ ಆ್ಯಪ್ ಅಳವಡಿಸಿಕೊಳ್ಳಲು ಕಂಪೆನಿ/ ಕಚೇರಿಯ ಒಪ್ಪಿಗೆ ಕಡ್ಡಾಯ ಎನ್ನುತ್ತಾರೆ ಈ ಆ್ಯಪ್ ವಿನ್ಯಾಸಕರು. ಸುಖ ನಿದ್ರೆ ಮಾಡಲು ಕೆಲ ಸರಳ ವಿಧಾನಗಳು, ಸಲಹೆಗಳನ್ನು ಕೂಡ ಈ ಆ್ಯಪ್​ನಲ್ಲಿ ತಿಳಿಸಲಾಗಿದ್ದು, ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದು ವರದಾನವಾಗಲಿದೆ.

ಇದನ್ನು ಓದಿ:

1. ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!

2. ಯೂಟ್ಯೂಬ್​ನಲ್ಲಿ ಇವರು ಸೂಪರ್ ಸ್ಟಾರ್ಸ್- ಡಿಫರೆಂಟ್ ವೀಡಿಯೋಗಳಿಂದಲೇ ಕೋಟಿ ಕೋಟಿ ಇನ್​ಕಂ

3. ಇಲ್ಲಿ ನಮಗೆ ನಾವೇ ಬಾಸ್​..!ಉದ್ಯಮಿ ಆಗುವುದರ ಹಿಂದಿದೆ ನೂರಾರು ಕನಸು..!

Related Stories