ನಿಮ್ಮ ಇ-ಕಾಮರ್ಸ್ ಉದ್ಯಮದ ಪ್ರಗತಿಗೆ ಇಲ್ಲಿದೆ ಪರಿಣಾಮಕಾರಿ ವಿಧಾನಗಳು:

ಟೀಮ್​​ ವೈ.ಎಸ್​. ಕನ್ನಡ

0

ನಿಮ್ಮ ಆನ್ಲೈನ್ ಸ್ಟೋರ್ ಕಡೆಗೆ ಗ್ರಾಹಕರನ್ನು ಎಳೆದು ತರುವುದು ನಿಜಕ್ಕೂ ಕಷ್ಟದ ಸಂಗತಿ. ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬಹುತೇಕ ಸಂಸ್ಥೆಗಳು ತಮ್ಮ ಬಜೆಟ್​ನ ದೊಡ್ಡ ಮೊತ್ತವನ್ನು ತೆಗೆದಿರಿಸುತ್ತವೆ. ಇಲ್ಲಿನ ಸಮಸ್ಯೆ ಎಂದರೆ ಬಹುಪಾಲು ಗ್ರಾಹಕರು ಯಾವುದೇ ವಹಿವಾಟು ಮಾಡದೇ ಹಿಂತಿರುಗುತ್ತಾರೆ. ಅಂಕಿ ಅಂಶಗಳ ಪ್ರಕಾರ 100 ರಲ್ಲಿ 67 ಜನ ಗ್ರಾಹಕರು ಯಾವುದೇ ಖರೀದಿಯನ್ನೇ ಮಾಡದೇ ಮಾರುಕಟ್ಟೆಯಿಂದ ಹಿಂತಿರುಗುತ್ತಾರೆ. ಇನ್ನು ಆನ್ಲೈನ್ ಉದ್ಯಮದ ಸರಾಸರಿ ಪ್ರಮಾಣವೂ ಕೇವಲ 2ರಿಂದ 3 ಶೇಖಡಾ ಮಾತ್ರ.

ನೀವೇನಾದರೂ ಆನ್ಲೈನ್ ಸ್ಟೋರ್ ಮಾಡಬೇಕೆಂಬ ಯೋಜನೆ ಹೊಂದಿದ್ದರೇ ಮೊದಲು ಅದಕ್ಕೆ ಸಂಬಂಧಿಸಿದ ಆನ್ಲೈನ್ ವೇದಿಕೆ ನಿರ್ಮಿಸಿಕೊಳ್ಳುವುದು ಅತಿ ಮುಖ್ಯ. ನಿಮ್ಮ ವೆಬ್​ತಾಣಗಳಿಗೆ ಸಾಕಷ್ಟು ಪ್ರಚಾರ ನೀಡುವ ಯೋಜನೆ ಇದ್ದರೇ ಮಾತ್ರ ನೀವು ಈ ನಿಟ್ಟಿನಲ್ಲಿ ಧೈರ್ಯದಿಂದ ಮುಂದುವರೆಯಬಹುದು.

ಬ್ರಯಾನ್ ಐಸನ್ಬರ್ಗ್ ಹೇಳುವಂತೆ, ಆನ್ಲೈನ್ ಮಾರ್ಕೇಟ್​ನ ಅತಿ ಮುಖ್ಯ ಉದ್ಯೋಗವೆಂದರೇ, ಗ್ರಾಹಕರು ಹೇಗೆ ಖರೀದಿಸುತ್ತಾರೆ ಅನ್ನುವ ವಿಚಾರವನ್ನು ಕೂಲಂಕೂಷವಾಗಿ ಅವಲೋಕಿಸಿ, ಈ ನಿಟ್ಟಿನಲ್ಲಿ ಅವರಿಗೆ ನೆರವು ನೀಡುವುದು.

ಇಲ್ಲಿ ಗ್ರಾಹಕರನ್ನು ಆನ್ಲೈನ್ ಶಾಪಿಂಗ್​ನತ್ತ ಸೆಳೆಯುವ ಮುಖ್ಯವಾದ ಮೂರು ದಾರಿಗಳಿವೆ. ಇವುಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಬಳಸಿದರೇ, ನಿಮ್ಮ ಇ-ಕಾಮರ್ಸ್ ಉದ್ಯಮ ಬೂಸ್ಟ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಎಕ್ಸಿಟ್ ಇಂಟೆಂಟ್ ಪಾಪ್ಓವರ್ ಮೂಲಕ ಶಾಪಿಂಗ್ ಉತ್ತೇಜಿಸುವುದು:

ಇ-ಕಾಮರ್ಸ್ ಉದ್ಯಮದಲ್ಲಿ ಶಾಪಿಂಗ್ ಕಾರ್ಟ್​ಗಳ ಸದುಪಯೋಗದ ಪ್ರಚಾರ ಅತ್ಯಂತ ಕಷ್ಟಕರ ಸವಾಲು. ಬಿಐ ಇಂಟೆಲಿಜೆಂಟ್ಸ್ ಸಂಶೋಧನೆಗಳ ಪ್ರಕಾರ, ಶಾಪಿಂಗ್ ಕಾರ್ಟ್​ಗಳ ಪ್ರಚಾರ ಕಾರ್ಯ ಅಧಿಕವಾಗುತ್ತಿವೆ. ಆನ್ಲೈನ್ ಹಾಗೂ ಮೊಬೈಲ್ ಶಾಪಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಆಸಕ್ತಿಯನ್ನು ವೃದ್ಧಿಗೊಳಿಸುವ ಪ್ರಯತ್ನಗಳಾಗುತ್ತಿವೆ. ನಿಮ್ಮ ಮಾರುಕಟ್ಟೆಯನ್ನು ನಿರ್ಲಕ್ಷಿಸುವ ಗ್ರಾಹಕರನ್ನು ಮನವೊಲಿಸುತ್ತಾ ಕಾಯುವ ಬದಲಿಗೆ, ನೀವೇ ಸ್ವಯಂ ಪ್ರೇರಿತರಾಗಿ ಅವರ ಇಷ್ಟಕಷ್ಟಗಳನ್ನು ಪ್ರೋತ್ಸಾಹಿಸಬಾರದೇಕೆ?

ಹೆಸರೇ ಹೇಳುವಂತೆ ಈ ಪಾಪ್ಅಪ್​ಗಳು ಗ್ರಾಹಕರು ಶಾಪಿಂಗ್ ವೆಬ್ಸೈಟ್ ಬಿಡುವ ಕ್ಷಣದಲ್ಲಿ ಕಾಣಿಸಿಕೊಳ್ಳುತ್ತವೆ. ಶಾಪರ್ಸ್ ನಿಮ್ಮ ಸೈಟ್ ಬಿಟ್ಟು ಹೊರನಡೆದರೆ, ಮತ್ತೆ ಈ ಸೈಟ್​​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಪಾಪ್ಅಪ್​​ಗಳು ಗ್ರಾಹಕ ಶಾಪರ್ಸ್​ಗಳನ್ನು ಉತ್ತೇಜಿಸುವ ಎರಡನೇ ಅವಕಾಶ ಒದಗಿಸಿಕೊಡುತ್ತವೆ. ಇ-ಕಾಮರ್ಸ್ ಸಂಸ್ಥೆಗಳು ಈ ಪಾಪ್ಅಪ್​​ಗಳನ್ನು ಇನ್ಸ್ಟಂಟ್ ಕಾರ್ಟ್ ರಿಕವರಿ ಟೂಲ್​ನಂತೆ ಬಳಸಿಕೊಳ್ಳುತ್ತಿವೆ. ಗ್ರಾಹಕ ಶಾಪರ್ಸ್ ಕಾರ್ಟ್ ಬಿಟ್ಟು ಹೊರನಡೆದರೇ, ಈ ಪಾಪ್​ಗಳು ಕೆಲವು ಸೌಲಭ್ಯಗಳಾದ ಫ್ರೀ ಶಾಪಿಂಗ್ ವೋಚರ್, ಡಿಸ್ಕೌಂಟ್ ವೋಚರ್, ಫ್ರೀ ಗಿಫ್ಟ್ ಅಥವಾ ಶಿಪ್ಪಿಂಗ್ ಫ್ರೀಗಳನ್ನು ನೀಡುತ್ತವೆ. ಇದರಿಂದ ನಿಮ್ಮ ಕಾರ್ಟ್​ನಲ್ಲಿ ಗ್ರಾಹಕರ ಅಪೂರ್ಣ ಶಾಪಿಂಗ್ ಪೂರ್ಣವಾಗುತ್ತದೆ.

ಸಲಹೆ: ಕೆಲವು ಆಫರ್​ಗಳು ಬಹಳಷ್ಟು ಸಂದರ್ಭಗಳಲ್ಲಿ ಅಪೂರ್ಣ ಶಾಪಿಂಗ್ ಸೌಕರ್ಯವನ್ನು ಪೂರ್ಣಗೊಳಿಸಲು ನೆರವಾಗುತ್ತದೆ. ಉದಾಹರಣೆ, ದೊಡ್ಡ ಮೊತ್ತದ ಡೈಮಂಡ್ ಆಭರಣಗಳಂತಹ ಮೌಲ್ಯಯುತ ವಸ್ತುಗಳನ್ನು ನೀವು ಆಫರ್ ಮಾಡಿದ್ರೆ, ಅದರ ಆಸೆಗಾಗಿಯಾದರೂ ಗ್ರಾಹಕರು ಮತ್ತೆ ಯೋಚಿಸದೆಯೇ ಖರೀದಿಗೆ ಮುಂದಾಗುತ್ತಾರೆ. ನೀವು ಎಷ್ಟು ಬಗೆಯ ಆಫರ್​ಗಳನ್ನು ನೀಡುತ್ತೀರೋ ಅಷ್ಟು ನಿಮ್ಮ ಸಂಸ್ಥೆಯ ವಹಿವಾಟು ಹೆಚ್ಚಾಗುತ್ತದೆ ಅನ್ನುವುದು ನಿರ್ವಿವಾಧಿತ ಸತ್ಯ

ಹೆಚ್ಚಿನ ವಹಿವಾಟು ನಡೆಸಲು ಇ-ಮೇಲ್ ಮಾರ್ಕೆಟಿಂಗ್ ಅಳವಡಿಸಿಕೊಳ್ಳಿ:

ನಿಮ್ಮ ಇ-ಕಾಮರ್ಸ್ ಮಾರುಕಟ್ಟೆ ಉತ್ತಮಪಡಿಸಿಕೊಳ್ಳಲು ಇ-ಮೇಲ್ ಮಾರ್ಕೆಟಿಂಗ್ ಸಹ ಸರಳ ಹಾಗೂ ಪರಿಣಾಮಕಾರಿ ವಿಧಾನ. ಇದರಿಂದ ಅತ್ಯಂತ ದೊಡ್ಡ ಬದಲಾವಣೆಗಳಾಗದಿದ್ದರೂ, ನಿಮ್ಮ ಸಂಸ್ಥೆಯ ಪರಿಚಯವಾಗುವ ಜೊತೆ ಕಾರ್ಯಾಚರಣೆಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡುತ್ತದೆ. ಬಹುತೇಕ ದೊಡ್ಡ ದೊಡ್ಡ ಸಂಸ್ಥೆಗಳು ಇ-ಮೇಲ್ ಕ್ಯಾಂಪನಿಂಗ್ ಅಳವಡಿಸಿಕೊಂಡಿರುತ್ತವೆ. ಅವುಗಳಲ್ಲಿ ಕೆಲವು ಸಂಸ್ಥೆಗಳು ಮಾತ್ರ ಗ್ರಾಹಕರ ಅಂಕಿ ಅಂಶಗಳ ಸಹಿತ ಇ-ಮೇಲ್ ಬಳಕೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುತ್ತವೆ. ಇ-ಮೇಲ್ ಕ್ಯಾಂಪೇನ್​​ಗಳಲ್ಲಿ ವಿಶ್​​ ಲೀಸ್ಟ್​​ಗಳ ಪಟ್ಟಿ ಇಟ್ಟುಕೊಳ್ಳುವುದೂ ಸಹ ಅತ್ಯಗತ್ಯ ಅಂಶ.

ನೀವು ಇ-ಮೇಲ್ ಕ್ಯಾಂಪೇನ್​​ಗಳಲ್ಲಿ ವಿಶ್ ಲಿಸ್ಟ್ ಕ್ಯಾಂಪೇನ್​ನತ್ತ ಗಮನ ಹರಿಸುತ್ತಿಲ್ಲ ಎಂದಾದರೇ, ನಿಮ್ಮ ವ್ಯವಹಾರದಲ್ಲಿ ನೀವು ಸಾಕಷ್ಟು ಹಣವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದರ್ಥ.

ನಿಮ್ಮ ವಹಿವಾಟು ಪೂರ್ಣಗೊಳಿಸಲು ಇ-ಮೇಲ್ ಅಭಿಯಾನದಲ್ಲಿ ಸಾಕಷ್ಟು ದಾರಿಗಳಿವೆ.

ನಿಮ್ಮ ವಿಶ್ ಲಿಸ್ಟ್ ನ ಬಳಿಸಿ ನಿಮ್ಮ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಮುಖ್ಯವಾದ ಐದು ವಿಧದ ಕ್ಯಾಂಪೇನ್​ಗಳು ಇಲ್ಲಿವೆ

1. ಔಟ್ ಆಫ್ ಸ್ಟಾಕ್ ಇ-ಮೇಲ್ಸ್:

ಸಮರ್ಪಕವಾಗಿ ಬಳಸಿಕೊಂಡರೇ ಅವಸರವೂ ಅತ್ಯುತ್ತಮ ಪ್ರೇರಣೆಯಾಗುತ್ತದೆ. ನಿಮ್ಮ ಇ-ಕಾಮರ್ಸ್ ಉದ್ಯಮವನ್ನು ಬೂಸ್ಟ್ ಮಾಡಲು ಇದೊಂದು ಸಮರ್ಥವಾದ ವಿಧಾನ. ಈ ವಿಧಾನವನ್ನು ಉಪಯೋಗಿಸಿಕೊಂಡು ಮೋಡ್​ಕ್ಲೋಥ್​ ಸಂಸ್ಥೆಗಳು ಯಶ ಪಡೆದಿವೆ.

2. ಬ್ಯಾಕ್-ಇನ್-ಸ್ಟಾಕ್ ಇ-ಮೇಲ್ಸ್:

ನಿಮ್ಮ ಯಶಸ್ಸು ನಿಮ್ಮ ಗ್ರಾಹಕರ ಕೈನಲ್ಲಿರುತ್ತವೆ ಅನ್ನುವುದನ್ನು ಮರೆಯದಿರಿ. ನೀವು ಪ್ರತಿಯೊಬ್ಬ ಗ್ರಾಹಕರ ಸ್ವಭಾವವನ್ನು ಅರಿತು ವ್ಯವಹರಿಸಬೇಕಿರುತ್ತದೆ. ಗ್ರಾಹಕರಿಗೆ ಇನ್ಸ್ಟಾಕ್ ಮೇಲ್ಗಳನ್ನು ಕಳಿಸುವುದು, ನೀವು ಅವರ ಮೇಲಿಟ್ಟಿರುವ ಕಾಳಜಿ ಹಾಗೂ ಅವರ ಆಸಕ್ತಿಗೆ ನೀವು ನೀಡುವ ಪ್ರಧಾನ್ಯತೆಯನ್ನು ತೋರಿಸುತ್ತದೆ.

3. ಮಾರಾಟದಲ್ಲಿ ವಿಶ್ಲಿಸ್ಟ್ ಇ-ಮೇಲ್ಸ್:

ಅವಸರದ ಕ್ಯಾಂಪೇನ್ ಜೊತೆ ಡಿಸ್ಕೌಂಟ್ ಆಫರ್​ಗಳೂ ಸಹ ಅತ್ಯುತ್ತಮ ಪ್ರೇರಣಾ ವಿಧಾನ. ಇದರಿಂದಲೂ ಗ್ರಾಹಕರು ಶಾಪಿಂಗ್ ನಡೆಸುವಾಗ ಇನ್ಸ್ಟಂಟ್ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಅವರು ಆಸಕ್ತಿ ಹೊಂದಿದ್ದರೂ ಖರೀದಿಸಲು ಯೋಚಿಸುವ ಉತ್ಪನ್ನಗಳ ಖರೀದಿಗೆ ಇದು ಪ್ರೇರೇಪಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಸಾಮಾಜಿಕ ಕಾಮರ್ಸ್ ಉದ್ಯಮ ಪಾಲಿವೋರ್ ವೆಬ್ಸೈಟ್.

4. ವಿಶ್ಲಿಸ್ಟ್ ಆಧಾರದಲ್ಲಿ ಪ್ರತಿಕ್ರಿಯೆ ಹಾಗೂ ರೆಕಮಂಡೇಶನ್ ಕಳಿಸುವುದು:

ವಿಶ್ ಲಿಸ್ಟ್ ಇ-ಕಾಮರ್ಸ್ ಉದ್ಯಮದಲ್ಲಿ ಎರಡು ವಿಭಿನ್ನ ಬಗೆಯ ಕಾರ್ಯ ಸಾಧಿಸುತ್ತವೆ. 1) ಇದು ಗ್ರಾಹಕರು ಇಷ್ಟ ಪಟ್ಟ ಉತ್ಪನ್ನಗಳನ್ನು ಪಟ್ಟಿಗೆ ಸೇರಿಸುತ್ತವೆ ಆದರೆ ಆಗಲೇ ಖರೀದಿಸಲು ಅನುವು ಮಾಡಿಕೊಡುವುದಿಲ್ಲ. 2) ಗ್ರಾಹಕರ ಇಚ್ಛೆಯ ಉತ್ಪನ್ನಗಳನ್ನು ಸೇರಿಸಿಕೊಳ್ಳುತ್ತವೆ, ಆದರೆ ಅಲಭ್ಯತೆಯ ಕಾರಣ ವೇಯ್ಟ್ ಲಿಸ್ಟ್(ಕಾಯುವ ಪಟ್ಟಿಗೆ)ಗೆ ಸೇರಿಸುತ್ತವೆ.

ನೀವು ನಿಮ್ಮ ಉತ್ಪನ್ನವನ್ನು ತ್ಯಜಿಸುವ ಗ್ರಾಹಕರನ್ನು ನೆನಪಿಸಲೂ ಇ-ಮೇಲ್ ಮಾರ್ಕೆಟಿಂಗ್ ಅನ್ನು ಬಳಸಿಕೊಳ್ಳಬಹುದು. ಶಾಪರ್ಸ್ ಅರೆ ಬರೆ ಶಾಪಿಂಗ್ ನಡೆಸಿ ಖರೀದಿ ನಡೆಸದೇ ಸುಮ್ಮನಾದಾಗ, ಅವರಿಗೆ ಇ-ಮೇಲ್ ಮೂಲಕ ರಿಮೈಂಡರ್ ನೀಡಿ, ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುವ ಸೌಕರ್ಯ ಉತ್ತಮ ವಿಧಾನ. ಇದೇ ಮಾದರಿಯ ಬೇರೆ ಉತ್ಪನ್ನಗಳನ್ನು ಗ್ರಾಹರಿಗೆ ಪರಿಚಯಿಸಬಹುದು.

5. ಗ್ರಾಹಕರ ವಿಶ್ಲಿಸ್ಟ್ ಬಗೆಗೆ ಗ್ರಾಹಕರಿಗೊಂದು ನೆನಪಿಸುವ ರಿಮೈಂಡರ್ ಇ-ಮೇಲ್:

ಬಹಳಷ್ಟು ವೇಳೆ ಗ್ರಾಹಕರು ನಿಮ್ಮ ಶಾಪಿಂಗ್ ಕಾರ್ಟ್​ನಲ್ಲಿ ಉತ್ಪನ್ನಗಳನ್ನು ಖರೀದಿಸಿ ತಮ್ಮ ವಿಶ್​ಲಿಸ್ಟ್​​ನಲ್ಲಿಟ್ಟು ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿರುವುದೇ ಇಲ್ಲ ಅಥವಾ ಇನ್ಯಾವಾಗಲಾದರೂ ವಾಪಾಸು ಬಂದು ಆ ಉತ್ಪನ್ನವನ್ನು ಮರುಖರೀದಿಸಬಹುದು. ಇ-ಕಾಮರ್ಸ್ ಉದ್ಯಮದಲ್ಲಿ ಆಗಬಹುದಾದಂತೆ, ಕೆಲವೊಮ್ಮೆ ಗ್ರಾಹಕರು ಆರ್ಡರ್ ಮಾಡಿ ಮರೆತು ಬಿಡುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಇ-ಮೇಲ್ ಮುಖೇನ ನೆನಪಿಸಿ ಖರೀದಿ ಪೂರ್ಣಗೊಳಿಸಬಹುದು.

ವೈಯಕ್ತಿಕ ಶಾಪಿಂಗ್ ಅನುಭವಗಳನ್ನು ಒದಗಿಸಿಕೊಡುವುದು:

ನೀವು ಎಷ್ಟು ಪ್ರಮಾಣದಲ್ಲಿ ಖಾಸಗಿಯಾಗಿ ಶಾಪಿಂಗ್ ಅನುಭವಗಳನ್ನು ನಿಮ್ಮ ಗ್ರಾಹಕರಿಗೆ ನೀಡುತ್ತೀರೋ, ಅಷ್ಟು ಪ್ರಮಾಣದ ಗ್ರಾಹಕರು ನಿಮ್ಮ ಶಾಪಿಂಗ್ ಕಾರ್ಟ್​ನ್ನು ಬಯಸುತ್ತಾರೆ. ಶಾಪಿಂಗ್​ನಲ್ಲಿ ಹೆಚ್ಚು ಹೆಚ್ಚು ವೈಯಕ್ತಿಕ ಶಾಪಿಂಗ್ ಅನುಭವಗಳನ್ನು ನಿಮ್ಮ ಗ್ರಾಹಕರು ಪಡೆದುಕೊಂಡಷ್ಟೂ ನಿಮ್ಮ ಸೈಟ್​ಗೆ ಭೇಟಿ ಕೊಡುವ ವೀಕ್ಷಕರು ಗ್ರಾಹಕರಾಗಿ ಪರಿವರ್ತಿತರಾಗುತ್ತಾರೆ.

ಆನ್ಲೈನ್ ಉದ್ಯಮದಲ್ಲಿ ಗ್ರಾಹಕರ ವೈಯಕ್ತಿಕ ಖರೀದಿ ಅನುಭವಗಳು ನಿಮಗೆ ಮತ್ತಷ್ಟು ಅತ್ಯುತ್ತಮ ಕಾರ್ಯ ವಿಧಾನ ರೂಪಿಸಲು ಸಹಾಯಕವಾಗುತ್ತದೆ. ಗ್ರಾಹಕರು ತಮ್ಮ ಖರೀದಿಯ ನಂತರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನೀಡುವ ಫೀಡ್ಬ್ಯಾಕ್, ಬ್ರೌಸಿಂಗ್ ಹಿಸ್ಟರಿ ಹಾಗೂ ಅವರ ಉತ್ಪನ್ನಗಳ ಕೊಳ್ಳುವ ಆಸಕ್ತಿಯಲ್ಲೇ ಇ-ಕಾಮರ್ಸ್ ಅಭಿವೃದ್ಧಿಯ ಕಲಿಕೆಗಳೂ ಇರುತ್ತವೆ. ಎಕೋನ್ಸಲ್ಟೆನ್ಸಿಯ ಸರ್ವೆಯ ಪ್ರಕಾರ ವೈಯಕ್ತಿಕ ಉತ್ತಮ ಅನುಭವಗಳ ಕಾರಣವೇ ಆನ್ಲೈನ್ ಶಾಪಿಂಗ್ ಮಾಡುವ ಶೇ.20ರಷ್ಟು ಗ್ರಾಹಕರಿದ್ದಾರೆ. ಹಾಗಾಗಿ ಗ್ರಾಹಕರಿಗೆ ವೈಯಕ್ತಿಕ ಅತ್ಯುತ್ತಮ ಅನುಭವ ದೊರಕಿಸಿಕೊಡುವುದು ಯಾವುದೇ ಆನ್ಲೈನ್ ಶಾಪಿಂಗ್ ಕಾರ್ಟ್​ನ ಆದ್ಯತೆಯಾಗಿರಬೇಕು.


ಅನುವಾದಕರು: ವಿಶ್ವಾಸ್​​​​

Related Stories

Stories by YourStory Kannada