ಆಟದಲ್ಲೇ ಉದ್ಯಮಿಗಳಿಗೆ ಪಾಠ- ಡೋಂಟ್ ವರಿ.. ನಿಮ್ಮೊಂದಿಗಿದೆ `ನೌ ಲೆಟ್ಸ್ ಪ್ಲೇ'...

ಟೀಮ್​ ವೈ.ಎಸ್​.

0

ಆಗೋದೆಲ್ಲಾ ಒಳ್ಳೇದಕ್ಕೆ ಅನ್ನೋ ಮಾತಿದೆ. ಲೈಫಲ್ಲಿ ರಿಸ್ಕ್ ಇರಲೇಬೇಕು. ರಿಸ್ಕ್ ತಗೊಂಡ್ರೆ ಮಾತ್ರ ಅಂದುಕೊಂಡ ಕೆಲಸ ಸಾಧ್ಯ. ಹೀಗಂತ ನಾವು ಹೇಳ್ತಿಲ್ಲ. ಈ ಸಕ್ಸಸ್ ಮಂತ್ರ ಹೇಳಿದವರು ಅನ್ನೆಲೈಸ್ ಪಿಯರ್ಸ್. ಇವರ ಯಶೋಗಾಥೆ ಹಿಂದೆಯೂ ರಿಸ್ಕಿ ಶ್ರಮ ಇದೆ. ತಮ್ಮಿಂದ ಹತ್ತಾರು ತಪ್ಪುಗಳಾಗಿರಬಹುದು. ಆದ್ರೆ ಅದಕ್ಕೆಲ್ಲಾ ಒಂದು ಕಾರಣವಿದೆ. ಆ ತಪ್ಪುಗಳೇ ತಮಗೆ ಅವಕಾಶ ಹುಡುಕಿಕೊಟ್ಟಿವೆ ಅನ್ನೋದು ಅನ್ನೆಲೈಸ್ ಅವರ ಅಭಿಪ್ರಾಯ. ಅನ್ನೆಲೈಸ್ ಒಬ್ಬ ನಿಪುಣ ತರಬೇತುದಾರರು. ಜೊತೆಗೆ ಯಶಸ್ವಿ ಉದ್ಯಮಿಯೂ ಹೌದು. ನರಭಾಷೆಯ ಬಗೆಗೂ ತರಬೇತಿ ನೀಡ್ತಿದ್ದಾರೆ.

2011ರಲ್ಲಿ ಅನ್ನೆಲೈಸ್ ಹಾಗೂ ರಾಹುಲ್ ಜಾರ್ಜ್ ಜೊತೆಯಾಗಿ ನೌ ಲೆಟ್ಸ್ ಪ್ಲೇ ಎಂಬ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ತಂಡ ಕಟ್ಟುವುದರ ಜೊತೆಗೆ ನಾಯಕತ್ವ ವಹಿಸಿಕೊಳ್ಳೋದು ಹೇಗೆ ಅನ್ನೋದನ್ನೆಲ್ಲ ಥಿಯೇಟರ್ ಹಾಗೂ ತಾಂತ್ರಿಕವಾಗಿ ಅಭಿವೃದ್ಧಿಪಡಿಸಿದ ಗೇಮ್‍ಗಳ ಮೂಲಕ ಇವರು ತಿಳಿಹೇಳುತ್ತಾರೆ. ಆದ್ರೆ ಈ ಕೆಲಸ ಅವರಿಗೆ ಅಷ್ಟು ತೃಪ್ತಿ ತರಲಿಲ್ಲ. ಹಾಗಾಗಿ ನ್ಯೋರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ ಆರಂಭಿಸಿದ್ದಾರೆ.

`ನೌ ಲೆಟ್ಸ್ ಪ್ಲೇ' ಆರಂಭ...

ಕಾರ್ಪೊರೇಟ್ ಮಧ್ಯಸ್ಥಿಕೆಯಲ್ಲಿ ಥಿಯೇಟರ್ ಅನ್ನು ಬಳಸಿಕೊಳ್ತಾ ಇರೋ ರಾಹುಲ್ ಅವ್ರನ್ನು ಭೇಟಿಯಾಗುವಂತೆ ಅನ್ನೆಲೈಸ್ ಅವರಿಗೆ ಹಲವರು ಸಲಹೆ ನೀಡಿದ್ರು. 7 ವರ್ಷಗಳಲ್ಲಿ ಹತ್ತಾರು ಬಾರಿ ರಾಹುಲ್ ಹೆಸರು ಕೇಳಿಬಂದಿತ್ತು. ಅನ್ನೆಲೈಸ್ ಬಳಿ ರಾಹುಲ್ ಫೋನ್ ನಂಬರ್ ಇದ್ರೂ ಅದೆಲ್ಲೋ ಮಿಸ್ಸಾಗಿತ್ತು. ಆದ್ರೆ ಒಂದು ಪ್ರಾಜೆಕ್ಟ್ ವಿಷಯದಲ್ಲಿ ಅಚಾನಕ್ಕಾಗಿ ರಾಹುಲ್ ಜಾರ್ಜ್ ಜೊತೆ ಅನ್ನೆಲೈಸ್‍ಗೆ ಮಾತನಾಡುವ ಅವಕಾಶ ಕೂಡಿ ಬಂದಿತ್ತು. ಅನ್ನೆಲೈಸ್ ಹಾಗೂ ರಾಹುಲ್ ಅವರ ಆಲೋಚನೆಯಲ್ಲಿ ಸಾಮ್ಯತೆಯಿತ್ತು. ಇಬ್ಬರಿಗೂ ವಾಸ್ತವಿಕ ಬದಲಾವಣೆ ತರುವ ಹಂಬಲವಿತ್ತು. ಪರಿಣಾಮ ರಾಹುಲ್ ಹಾಗೂ ಅನ್ನೆಲೈಸ್ ಜೊತೆಯಾಗಿ ನೌ ಲೆಟ್ಸ್ ಪ್ಲೇ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಸಂಸ್ಥೆ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕಾರ್ಪೊರೇಟ್ ಜಗತ್ತಿನಲ್ಲಿರುವವರು ಹಾಗೂ ಉದ್ಯಮಿಗಳಿಗೆ ಗುರಿ ತಲುಪಲು ಅಂದುಕೊಂಡಿದ್ದನ್ನು ಸಾಧಿಸುವ ಬಗ್ಗೆ ಹೇಗೆಂಬ ಬಗ್ಗೆ ಈ ಸಂಸ್ಥೆ ತರಬೇತಿ ನೀಡುತ್ತಿದೆ.

ಪ್ರೇಕ್ಷಕರ ಇಚ್ಛಾನುಸಾರ ನೌ ಲೆಟ್ಸ್ ಪ್ಲೇ ಸಂಸ್ಥೆ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪ್ರತಿ ವರ್ಷ ಕಾರ್ಪೊರೇಟ್ ತರಬೇತಿ ಹಮ್ಮಿಕೊಳ್ಳಲಾಗುತ್ತದೆ. ಉದ್ಯಮಿಗಳು 3-6 ತಿಂಗಳು ವೈಯಕ್ತಿಕ ತರಬೇತಿಯನ್ನೂ ಪಡೆಯಬಹುದು. ಒಂದೆರಡು ದಿನಗಳ ಕಾರ್ಯಾಗಾರ ಹಾಗೂ ಸೆಮಿನಾರ್‍ಗಳನ್ನು ಸಹ ಆಯೋಜಿಸಲಾಗುತ್ತದೆ. ಆಟಗಳನ್ನು ಆಡಿಸುವ ಮೂಲಕ ತಾಂತ್ರಿಕ ವಿಚಾರಗಳನ್ನು ಅನ್ನೆಲೈಸ್ ತಿಳಿಹೇಳ್ತಾರೆ. ವೈಯಕ್ತಿಕವಾಗಿ ಹಾಗೂ ಉದ್ಯಮಿಯಾಗಿ ಯಶಸ್ಸಿಯಾಗುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸುತ್ತಾರೆ. ಆಟದ ಮೂಲಕ ಹೇಳುವ ಈ ಪಾಠ ನಿಜಕ್ಕೂ ಅದ್ಭುತ ಎನ್ನುತ್ತಾರೆ ಅವರು.

ಇನ್ನು ತಮ್ಮ ವೈಯಕ್ತಿಕ ಬದುಕಿನಲ್ಲೂ ಎನ್‍ಎಲ್‍ಪಿ ಮೂಲಕ ಅನ್ನೆಲೈಸ್ ಸುಧಾರಣೆಗಳನ್ನು ತಂದಿದ್ದಾರೆ. ಫಿಟ್ ಆಗಿರೋದು ಹೇಗೆ ಅನ್ನೋದನ್ನೆಲ್ಲ ಕಲಿತಿದ್ದಾರೆ. 2010ರಲ್ಲಿ 94 ಕೆಜಿ ಇದ್ದ ಅವರು ಈಗ ಕೇವಲ 73 ಕೆಜಿ ತೂಕವಿದ್ದಾರಂತೆ. ಈ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಸಹ ಎನ್‍ಎಲ್‍ಪಿ ಅವರಿಗೆ ನೆರವಾಗಿದೆ. ಈ ಬಗ್ಗೆ ಎಲ್ಲ ಮಹಿಳೆಯರಲ್ಲೂ ಅರಿವು ಮೂಡಿಸಲು ಅನ್ನೆಲೈಸ್ ವುಮೆನ್ ಅವೇರ್‍ನೆಸ್ ಪ್ರೋಗ್ರಾಮ್‍ಗಳನ್ನು ಮಾಡ್ತಿದ್ದಾರೆ. ಇದಕ್ಕಾಗಿಯೇ ಫೇಸ್‍ಬುಕ್‍ನಲ್ಲಿ ಕಮ್ಯೂನಿಟಿಯೊಂದನ್ನು ಕ್ರಿಯೇಟ್ ಮಾಡಿದ್ದಾರೆ.

`ಮನ'ಮುಟ್ಟುವ ತರಬೇತಿ..

ನೌ ಲೆಟ್ಸ್ ಪ್ಲೇ ಮೂಲಕ ಅನ್ನೆಲೈಸ್ ಹಾಗೂ ರಾಹುಲ್ ಆತ್ಮಕ್ಕೇ ತರಬೇತಿ ಕೊಡ್ತಾರೆ ಅಂದ್ರೆ ತಪ್ಪಲ್ಲ. ರಿಸ್ಕ್ ತೆಗೆದುಕೊಳ್ಳಲು ಸಜ್ಜಾಗಿರುವ ಉದ್ಯಮಿಗಳಿಗೆ ಅದನ್ನ ಎದುರಿಸಲು ಪ್ರೋತ್ಸಾಹ ಹಾಗೂ ಧೈರ್ಯ ತುಂಬುವ ಕೆಲಸ ಇವರದ್ದು.

ಎನ್‍ಎಲ್‍ಪಿಯ ಕಾರ್ಯ...

ಎನ್‍ಎಲ್‍ಪಿ ನಿಜವಾಗಿ ಏನು ಮಾಡುತ್ತಿದೆ ಅನ್ನೋ ಬಗ್ಗೆ ಜನರಿಗೆ ಇನ್ನೂ ಗೊಂದಲವಿದೆ. ಇದೊಂದು ಸಲಹೆ ನೀಡುವ ಸಂಸ್ಥೆ ಎಂದೇ ನಂಬಿದ್ದಾರೆ. ಇದು ಬರೀ ಕೌನ್ಸೆಲಿಂಗ್ ಜಾಗವಲ್ಲ. ಕಠಿಣ ಸಮಸ್ಯೆಗಳನ್ನು ಎದುರಿಸಲು ಉದ್ಯಮಿಗಳಿಗೆ ಧೈರ್ಯ ತುಂಬುವಂತಹ ಸಂಸ್ಥೆ. ಬಂದಿದ್ದನ್ನ ಬಂದ ಹಾಗೆ ಧೈರ್ಯವಾಗಿ ಎದುರಿಸಿ ಸಕಲ ಸಮಸ್ಯೆಗಳಿಂದಲೂ ಹೊರಬರಲು ನೌ ಲೆಟ್ಸ್ ಪ್ಲೇ ಸಹಾಯ ಮಾಡುತ್ತಿದೆ. ಉದ್ಯಮಿಗಳಿಗೆ ವರದಾನವಾಗಿರುವ ಎನ್‍ಎಲ್‍ಪಿ ಕಾರ್ಯಕ್ಕೆ ಇಡೀ ವಿಶ್ವವೇ ಶಹಬ್ಬಾಸ್ ಎನ್ನುತ್ತಿದೆ.

Related Stories