ಎಲ್ಲರಿಗೂ ಒಂದೇ ನಿಯಮ- ಬೀದಿ ಮಕ್ಕಳಿಗೂ “ಆಧಾರ್” ಸಂಭ್ರಮ

ಟೀಮ್​ ವೈ.ಎಸ್​. ಕನ್ನಡ

ಎಲ್ಲರಿಗೂ ಒಂದೇ ನಿಯಮ- ಬೀದಿ ಮಕ್ಕಳಿಗೂ “ಆಧಾರ್” ಸಂಭ್ರಮ

Wednesday August 17, 2016,

2 min Read

ಭಾರತ ಸಾಕಷ್ಟು ಸಮಸ್ಯೆಗಳಿಗೆ ಮುಕ್ತಿ ನೀಡುವ ತಯಾರಿ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯದ ಸರ್ಕಾರಗಳು ಈ ಬಗ್ಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದ್ರೆ ಬೀದಿ ಮಕ್ಕಳಿಗೆ ಗುರುತಿನ ಚೀಟಿ ನೀಡುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ರೂ ಯೋಜನೆಗಳು ಸಫಲವಾಗಿರಲಿಲ್ಲ. ಆದ್ರೆ ಈಗ ಇಂತಹ ಮಕ್ಕಳಿಗೆ ಆಧಾರ್ ಕಾರ್ಡ್ ಮೂಲಕ ಗುರುತಿನ ಚೀಟಿ ನೀಡುವ ಪ್ಲಾನ್ ರೂಪಿಸಲಾಗಿದೆ.

ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 4 ಲಕ್ಷ ಬೀದಿಮಕ್ಕಳಿರುವ ಸಾಧ್ಯತೆ ಇದೆ. ಮುಂಬೈ, ಕೊಲ್ಕತ್ತಾ, ಚೆನ್ನೈ, ಕಾನ್ಪುರ, ಬೆಂಗಳೂರು ಮತ್ತು ಹೈದ್ರಾಬಾದ್​ನಂತಹ ಮಹಾನಗರಗಳಲ್ಲೇ ಸುಮಾರು 3 ಲಕ್ಷದ 14 ಸಾವಿರದ 700 ಬೀದಿಮಕ್ಕಳಿದ್ದಾರೆ ಅನ್ನೋದನ ಅಂಕಿಅಂಶಗಳು ಬಹಿರಂಗ ಪಡಿಸಿದೆ. ಈ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ ಸುಮಾರು 1ಲಕ್ಷಕ್ಕಿಂತಲೂ ಅಧಿಕ ಮಕ್ಕಳು ಬೀದಿಪಾಲಾಗಿದ್ದಾರೆ.

image


ಚೈಲ್ಡ್​ಲೈನ್​​ ಇಂಡಿಯಾ ಪ್ರಕಾರ ಭಾರತದಲ್ಲಿ ಸುಮಾರು ಶೇಕಡಾ 40ರಷ್ಟು ಬೀದಿಮಕ್ಕಳು ಸರಿಸುಮಾರು 11ರಿಂದ 15 ವರ್ಷ ಒಳಗಿನವರಾಗಿದ್ದಾರೆ. ಈ ಮಕ್ಕಳ ಪೈಕಿ ಹೆಚ್ಚಿನವರು ಪೋಷಕಾಂಶಗಳ ಕೊರತೆಗಳಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲ ಮಾನಸಿಕವಾಗಿ ಸಾಕಷ್ಟು ನಿಂದನೆಗೂ ಒಳಪಟ್ಟಿರುತ್ತಾರೆ.

ಇದನ್ನು ಓದಿ: ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

ಈ ಬಗ್ಗೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೂಡ ಗಮನಹರಿಸಿದೆ. ಇಂತಹ ಮಕ್ಕಳಿಗಾಗಿ ವಿಶೇಷ ಯೋಜನೆ ರೂಪಿಸಲು ಸಜ್ಜಾಗಿದ. ಅಷ್ಟೇ ಅಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೆಕಾ ಗಾಂಧಿ, ಇಂತಹ ಮಕ್ಕಳಿಗೆ ಬರ್ತ್ ಸರ್ಟಿಫಿಕೇಟ್ ಮತ್ತು ಆಧಾರ್ ಕಾರ್ಡ್ ನೀಡುವ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ.

ವಿಶ್ವದ ಎಲ್ಲಾ ಕಡೆಯೂ ಬೀದಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಸಾಮಾನ್ಯ. ಆದ್ರೆ ಭಾರತದಲ್ಲಿ ಸಹಜವಾಗಿಯೇ ಇದರ ಪ್ರಮಾಣ ಉಳಿದೆಲ್ಲಾ ಕಡೆಗಿಂತಲೂ ಹೆಚ್ಚಿದೆ. ಹೀಗಾಗಿ ಇಂತಹ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡಲಾಗಿದೆ. ಬೀದಿ ಮಕ್ಕಳು ನಿಂದನೆಗೆ ಒಳಗಾದ್ರೆ, ಅಂತಹವರು ಸ್ವಯಂ ಪ್ರೇರಿತರಾಗಿ ದೂರು ಕೊಡುವ ವ್ಯವಸ್ಥೆಗಳನ್ನು ಕೂಡ ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚೇಂಜ್ ಇಂಡಿಯಾ ಕಾನ್ಸೆಪ್ಟ್​ನಲ್ಲಿ ಇಂತಹ ಬೆಳವಣಿಗೆಗಳು ಕೂಡ ಸೇರಿಕೊಂಡಿರುವುದು ವಿಶೇಷವೇ.

ಇದನ್ನು ಓದಿ:

1. ತಾಯ್ತನದ ಹೊಸ್ತಿಲಲ್ಲಿದ್ದೀರಾ? ನಿಮಗಿದೆ ವರ್ಕ್ ಫ್ರಮ್ ಹೋಂ ಅವಕಾಶ..

2. ಉದ್ಯೋಗಕ್ಕೆ ರಾಜೀನಾಮೆ : ಗ್ರಾಮೀಣ ಶಾಲೆಗಳ ಅಭ್ಯುದಯಕ್ಕೆ ಬದುಕು ಮೀಸಲು - ''ನನ್ನ ಕಥೆ''

3. ಮಾರುಕಟ್ಟೆಯಲ್ಲಿ ನಿಮ್ಮ ಚಿತ್ರಣ ಸೃಷ್ಟಿಸಿ ಉದ್ಯಮದ ಕಹಳೆ ಮೊಳಗಿಸಿ

    Share on
    close