ಎಲ್ಲಾ ಮಾಹಿತಿ ಬೆರಳ ತುದಿಯಲ್ಲಿ...ಅದೇ ಎಥಿನಿ ಸಿಟಿ..!

ಟೀಮ್​​​ ವೈ.ಎಸ್​​.ಕನ್ನಡ

ಎಲ್ಲಾ ಮಾಹಿತಿ ಬೆರಳ ತುದಿಯಲ್ಲಿ...ಅದೇ ಎಥಿನಿ ಸಿಟಿ..!

Tuesday November 24, 2015,

3 min Read

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮೂಲ ಆಚಾರ ವಿಚಾರಗಳ ಬಗ್ಗೆ ಅತೀವ ಆಸಕ್ತಿ ಇರುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಆತನ ಮನಸ್ಸು ತನ್ನ ಸಾಂಪ್ರದಾಯಿಕ ಆಚಾರ , ವಿಚಾರ , ಸಂಪ್ರದಾಯ, ನಂಬಿಕೆ ಬಗ್ಗೆ ಹಾತೊರೆಯುತ್ತದೆ. ಇಲ್ಲಿ ಸಂಬಂಧ ಗಟ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂಡಿ ಬಂದ ಕಲ್ಪನೆಯೇ ತಿರುವನಂತಪುರಂ ಮತ್ತು ಜಮರ್ನಿ ಆಧಾರಿತ ಎಥಿನಿಕ್​​ ಸಿಟಿ ಪರಿಕಲ್ಪನೆ.

ವಿದೇಶದ ನೆಲದಲ್ಲೂ ಕೂಡ ಸಾಂಪ್ರದಾಯಿಕ ಅಂದರೆ ಎಥಿನಿಕ್ ವ್ಯವಹಾರವನ್ನು ಗುರುತಿಸಲು ಇದು ನೆರವಾಗುತ್ತದೆ. ನಮ್ಮಲ್ಲಿ ಯಾರಾದರೂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರೇ ಅಥವಾ ಶಿಕ್ಷಣ ಪಡೆಯುತ್ತಿದ್ದರೆ ಮನಸ್ಸು ಮೊದಲಿಗೆ ಹಾತೊರೆಯುತ್ತದೆ ಭಾರತದ ವಸ್ತುಗಳು ಎಲ್ಲಿ ದೊರೆಯುತ್ತವೆ ಎಂಬುದು. ಇದು ಸಹಜ . ಅದು ತಾಯ್ನಾಡಿನ ಮೇಲಿನ ಪ್ರೀತಿ. ಭಾರತದ ತಿಂಡಿ, ಸಿನೆಮಾ, ಮನೋರಂಜನೆ ಹೀಗೆ ವಿದೇಶದಲ್ಲಿನ ಮನಸ್ಸಿನ ಬೇಡಿಕೆ ಪಟ್ಟಿ ಬೆಳೆಯುತ್ತದೆ. ಅದು ಎಲ್ಲಿದೆ ಎಂದು ತಿಳಿಯಲು ಪ್ರಯತ್ನಿಸುತ್ತೇವೆ. ವಿದೇಶದಲ್ಲಿದ್ದರೂ ಭಾರತೀಯ ಸಂಪರ್ಕಕೊಂಡಿಯಾಗಿರಲು ಯತ್ನಿಸುತ್ತೇವೆ.

image


ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಎಥಿನಿ ಸಿಟಿ ETHNICITI ಪ್ರಯತ್ನಿಸುತ್ತದೆ. ನೀವು ಎಲ್ಲಿದ್ದರೂ ಕೂಡ ಸ್ಥಳೀಯ ಸಮುದಾಯದ ಜೊತೆ ನಿಮ್ಮನ್ನು ಗುರುತಿಸಿಕೊಳ್ಳಲು ಇದು ನೆರವಾಗುತ್ತದೆ. ಮೊಬೈಲ್ ಸೆಟ್ ನಲ್ಲಿ ಸಾಂಪ್ರದಾಯಿಕ ಮಾಹಿತಿ ಉಣಬಡಿಸುತ್ತದೆ.

ಎಥಿನಿ​ ಸಿಟಿಯ ಯೋಚನೆ ಹೇಗಾಯಿತು..?

ಎಥಿನಿ ಸಿಟಿ ಅಸ್ತಿತ್ವ ಕೂಡ ಅಷ್ಟೇ ಕುತೂಹಲಕಾರಿಯಾಗಿದೆ. ಇದು ಶಾಜಿ ಥೋಮಸ್ ಮತ್ತು ಸೋಮಕಾಂತನ್ ಸೋಮಲಿಂಗಂ ಅವರ ಕನಸಿನ ಕೂಸಾಗಿದೆ. ಯುರೋಪ್​​ ಮತ್ತು ಅಮೆರಿಕದಲ್ಲಿ ಅನಿವಾಸಿ ಭಾರತೀಯರಾಗಿ ಕೆಲಸ ನಿರ್ವಹಣೆ ಮತ್ತು ಉಂಟಾದ ಅನುಭವ ಈ ಎಥಿನಿ ಸಿಟಿಯ ಅಸ್ತಿತ್ವಕ್ಕೆ ಕಾರಣವಾಯಿತು.

ಶಾಜಿ 15 ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ಕೆಲಸ ನಿರ್ವಹಿಸಿದ್ದರು. ಅದು ಅಮೆರಿಕ ಮತ್ತು ಜರ್ಮನಿಯಲ್ಲಿ. ನೋಕಿಯಾ ಸಂಸ್ಥೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿ ಇದ್ದವರು. ಫೇಸ್ ಬುಕ್, ಗೂಗಲ್, ಬಿಬಿಸಿ, ಅಡಿಡಾಸ್ ಹೀಗೆ ಹೆಸರಾಂತ ಸಂಸ್ಥೆಗಳೊಂದಿಗೆ ವಾಣಿಜ್ಯ ಸಂಬಂಧ ಹೊಂದಿದ್ದರು. ಪ್ರಸಕ್ತ ಜರ್ಮನಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯೊಂದಿದ್ದಾರೆ. ಭಾರತ ಕೂಡ ಇದರ ಸಹ ಭಾಗಿತ್ವ ರಾಷ್ಟ್ರವಾಗಿದೆ.

ಸೋಮಕಾಂತನ್ ಸೋಮಲಿಂಗಂ ಕೂಡ ಅಪ್ರತಿಮ ಪ್ರತಿಭಾ ಖಣಿ. ಜರ್ಮನಿಯಯ ಡಾರ್ಮ್ ಸ್ಟಾಡ್ ವಿಶ್ವ ವಿದ್ಯಾನಿಲಯದಲ್ಲಿ ಸಂಶೋಧನಾ ಸಹವರ್ತಿಯಾಗಿ ಸೇವೆ ಸಲ್ಲಿಸಿದ್ದರು. ನೋಕಿಯಾದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಡಿಸ್ ಪ್ಲೇ ಮತ್ತು ಟಚ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಹಲವು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಿತ್ತು.

ಜಗತ್ತಿನ ವಿವಿಧ ರಾಷ್ಟ್ರಗಳ ಜನರೊಂದಿಗೆ ನಿಕಟವಾಗಿ ಕೆಲಸ ಮಾಡಿದಾಗ ಅವರಿಗೆ ಹಲವು ವಿಷಯ ತಿಳಿದು ಬಂತು. ಸಮಸ್ಯೆಗಳ ಅರಿವಾಯಿತು. ತಮ್ಮ ಮೂಲದ ಬಗ್ಗೆ ಸಾಂಪ್ರದಾಯಿಕ ಮಾಹಿತಿ ಬಗ್ಗೆ ಸಮಗ್ರ ಚಿತ್ರಣ ದೊರೆಯುತ್ತಿಲ್ಲ ಎಂಬುದು ಅನುಭವಕ್ಕೆ ಬಂತು.. ಹೀಗೆ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಯಿತು.

ಪ್ರಸಕ್ತ ಅಂತರ್ ಜಾಲದಲ್ಲಿ ಲಭ್ಯವಿರುವ ಮಾಹಿತಿ ಪರ್ಯಾಪ್ತವಾಗಿಲ್ಲ. ಅಲ್ಲದೇ ಅದು ಅತ್ಯಂತ ಕ್ಲಿಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಮಾಹಿತಿ ಬೆರಳ ತುದಿಯಲ್ಲಿ ಲಭಿಸುವ ಕಲ್ಪನೆ ಮೊಳಕೆಯೊಡೆಯಿತು. ಅದುವೇ ಎಥಿನಿ ಸಿಟಿ ಯ ಉಗಮಕ್ಕೆ ಕಾರಣವಾಯಿತು.

ತಂತ್ರಜ್ಞಾನದ ಬಳಕೆ..!

ಈ ಇಬ್ಬರು ಪ್ರತಿಭಾವಂತರು ಸಿದ್ಧಪಡಿಸಿದ ತಂತ್ರಜ್ಞಾನ ಅತ್ಯಂತ ಬಳಕೆದಾರರ ಸ್ನೇಹಿಯಾಗಿದೆ. ಯಾವ ಸಂಪ್ರದಾಯದ ಅಂದರೆ ಎಥಿನಿಕ್ ಬಗ್ಗೆ ಆಸಕ್ತಿ ಇದೆ ಎಂಬುದನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಜಿಪಿಎಸ್ ಅಥವಾ ಮ್ಯಾನ್ ವೆಲ್ ಆಗಿ ಅದಕ್ಕೆ ಸ್ಥಳವನ್ನು ಸಿದ್ಧಪಡಿಸಬೇಕು.. ಮ್ಯಾಪ್ ಬಳಸಿ ನಮ್ಮಗೆ ಬೇಕಾದ ಆಯ್ಕೆಯನ್ನು ಕಂಡು ಹಿಡಿಯುವ ತಂತ್ರಜ್ಞಾನ ಕೂಡ ಅಭಿವೃದ್ದಿ ಹಂತದಲ್ಲಿದೆ.

ಅತ್ಯಂತ ಕ್ಷಿಪ್ರವಾಗಿ ವೇಗವಾಗಿ ಎಥಿನಿಕ್ಸ್ ಬಗ್ಗೆ ಮಾಹಿತಿ ದೊರೆಯುತ್ತದೆ. ಯಾವುದೇ ಮಾಹಿತಿ ಮಿಸ್ ಆಗುವ ಭಯವಿಲ್ಲ. ಸ್ಥಳ, ವರ್ಗೀಕರಣ ಹೀಗೆ ಕಣ್ಮುಂದೆ ಎಲ್ಲವೂ ಅನಾವರಣಗೊಳುತ್ತದೆ.

ಈ ಹೊಸ ವ್ಯವಸ್ಥೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳ ಬಗ್ಗೆ ಶಾಜಿ ಬೆಳಕು ಚೆಲ್ಲುತ್ತಾರೆ. ಸಾಂಪ್ರದಾಯಿಕ ಉತ್ಪನ್ನಗಳು ಎಲ್ಲಿ ದೊರೆಯುತ್ತವೆ ಎಂಬ ಬಗ್ಗೆ ಮಾಹಿತಿ ಕೊರತೆ ಇತ್ತು. ಹೆಚ್ಚಿನ ಮಾಹಿತಿ ಅಂತರ್ ಜಾಲದ ವ್ಯಾಪ್ತಿಯಿಂದ ಹೊರಗಿತ್ತು. ಎಲ್ಲ ಮಾಹಿತಿ ಕಲೆ ಹಾಕುವುದು ಸವಾಲಿನ ಕೆಲಸ ಆಗಿತ್ತು.. ಎನ್ನುತ್ತಾರೆ ಶಾಜಿ. ಈ ಸಮಸ್ಯೆ ಪರಿಹರಿಸಲು ಹೊಸತಾಗಿ ಒಂದು ತಂತ್ರಜ್ಞಾನದ ಮೊರೆ ಹೋದೆವು. ನಿಮ್ಮ ವಾಣಿಜ್ಯ ಮತ್ತು ಕಾರ್ಯಕ್ರಮಗಳ ಪಟ್ಟಿ ಸೇರ್ಪಡಿಸಿ ಎಂಬ ಆಯ್ಕೆ ಸೇರಿಸಲಾಯಿತು.. ಇದು ನಿರೀಕ್ಷಿತ ಫಲ ನೀಡಿತು ಎನ್ನುತ್ತಾರೆ ಶಾಜಿ..

ಜಾಗತಿಕ ವ್ಯಾಪ್ತಿಯಲ್ಲಿ ಎಲ್ಲ ದತ್ತಾಂಶಗಳನ್ನು ಕ್ರೋಡಿಕರಿಸುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿದ್ದರೂ ಪ್ರಸಕ್ತ ಸೀಮಿತ ಮಾರುಕಟ್ಟೆ ವ್ಯಾಪಿಯಲ್ಲಿ ಚಟುವಟಿಕೆ ನಡೆಸಲಾಗುತ್ತದೆ. ಮುಖ್ಯವಾಗಿ ಉತ್ತರ ಅಮೆರಿಕ, ಯುರೋಪ್​, ಆಗ್ನೇಯ ಏಷ್ಯಾ ರಾಷ್ಟ್ರ ಮತ್ತು ಆಸ್ಚ್ರೇಲಿಯಾದಲ್ಲಿನ ಸಾಂಪ್ರದಾಯಿಕ ವಾಣಿಜ್ಯ ಚಟುವಟಿಕೆ ಮತ್ತು ಕಲಾ ಚಟುವಟಿಕೆಗಳ ಮಾಹಿತಿ ಕ್ರೋಢೀಕರಿಸಲಾಗುತ್ತಿದೆ. ಮುಖ್ಯವಾಗಿ ಭಾರತೀಯರನ್ನು ಗಮನದಲ್ಲಿರಿಸಿ ಕಾರ್ಯೋನ್ಮುಖವಾಗಿದೆ ಎನ್ನುತ್ತಾರೆ ಶಾಜಿ. ಭಾರತದಲ್ಲಿ ಫ್ರೆಂಚ್, ಇಂಗ್ಲೀಷ್, ಜರ್ಮನ್ ಮತ್ತು ಇಟಲಿ ಜನರ ಸಾಂಪ್ರದಾಯಿಕ ನೆಲೆಗಟ್ಟನ್ನು ಅರಿಯಲು ಮತ್ತು ಅವರ ಚಟುವಟಿಕೆ ಬಗ್ಗೆ ಮಾಹಿತಿ ನೀಡಲು ಯತ್ನಿಸಲಾಗುತ್ತಿದೆ . ಇದು ಶಾಜಿ ತಮ್ಮ ಸಾಹಸದ ಬಗ್ಗೆ ತೆರೆದಿಡುವ ಮಾತು..

ಎಥಿನಿ ಸಿಟಿಯ ವೈಶಿಷ್ಟ್ಯವೇನು..?

ಆರಂಭದಲ್ಲಿ ಐಒಎಸ್ ಮತ್ತು ಆಂಡ್ರಾಯಿಡ್ ವೇದಿಕೆಯಡಿಯಲ್ಲಿ ಮಾತ್ರ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಆದರೇ 2015 ಸೆಪ್ಟೆಂಬರ್ ತಿಂಗಳಲ್ಲಿ ಇದನ್ನು ಎಥಿನ್ ಸಿಟಿ ಎಂದು ನಾಮಕರಣಮಾಡಲಾಯಿತು. ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಯಿತು. ಬಳಕೆದಾರ ಸ್ನೇಹಿಯಾಗಿಸಲು ಕ್ರಮ ಕೈಗೊಳ್ಳಲಾಯಿತು. ಪುನರ್ ಚಾಲನೆ ನೀಡಿ ಹೊಸ ಸ್ವರೂಪ ನೀಡಿದ ಬಳಿಕ ಎಥಿನಿಸಿಟಿ ಜನ ಮೆಚ್ಚುಗೆ ಗಳಿಸಿದೆ. 1500ಕ್ಕೂ ಹೆಚ್ಚು ಡೌನ್ ಲೋಡ್ ಗಳಾಗಿವೆ. ಇದೀಗ ಮುಖ್ಯವಾಗಿ ಉತ್ತರ ಅಮೆರಿಕ, ಯುರೋಪ್​ , ಆಸ್ಚ್ರೇಲಿಯಾ ಗಳಲ್ಲಿ ವ್ಯಾಪಿಸಿರುವ 12, 000ಕ್ಕೂ ಹೆಚ್ಚು ವಾಣಿಜ್ಯ ಉದ್ದಿಮೆಗಳತ್ತ ಕೇಂದ್ರೀಕರಿಸಿ ವ್ಯವಹಾರ ನಡೆಸುತ್ತಿದೆ. ಜನ ಮೆಚ್ಚುಗೆ ಗಳಿಸಿದೆ. ಸ್ಥಳೀಯ ಸಮುದಾಯದ ನೆಟ್ ವರ್ಕ್ ಬಳಸಿಕೊಂಡು ತಳಮಟ್ಟದಲ್ಲಿ ವಿಸ್ತಾರಗೊಳ್ಳುತ್ತಿರುವುದು ನಮ್ಮ ಸಂಸ್ಥೆಯ ವೈಶಿಷ್ಟ್ಯ ಎನ್ನುತ್ತಾರೆ ಶಾಜಿ..

ಇದೀಗ ಬೆಳವಣಿಗೆಯತ್ತ ಗಮನ ಹರಿಸಿರುವ ಎಥಿನಿಸಿಟಿ, ಸಂಪನ್ಮೂಲ ಸಂಗ್ರಹದತ್ತ ಗಮನ ಹರಿಸಿದೆ. ವೆಂಚರ್ ಕ್ಯಾಪಿಟಲ್ ನತ್ತ ದೃಷ್ಟಿ ನೆಟ್ಟಿದೆ. ಯುರೋಪ್ ಮತ್ತು ಏಷ್ಯಾ ಮಾರುಕಟ್ಟೆ ಮೇಲೆ ಗಮನ ನೆಟ್ಟಿದೆ. ವಿಶ್ವದ ಯಾವುದೇ ಮೂಲೆಯಲ್ಲಿರಲ್ಲಿ, ಅಲ್ಲಿ ತಮ್ಮವರ ಜೊತೆ ಸಂಪರ್ಕ ಸಾಧಿಸಲು, ವಿದೇಶದಲ್ಲೂ ಸ್ವದೇಶದ ಪರಿಕಲ್ಪನೆ ಎಂಬ ವಾಸ್ತವ ಬೆಳೆಸುವಲ್ಲಿ ಎಥಿನಿಸಿಟಿ ಯಶಸ್ವಿಯಾಗಿದೆ.

ಲೇಖಕರು: ಸಿಂಧೂ ಕಶ್ಯಪ್​​

ಅನುವಾದಕರು: ಎಸ್​​.ಡಿ