ವ್ಹಾವ್ ! ಇದು WOW ಡಿಸೈನ್..!

ಟೀಮ್​​ ವೈ.ಎಸ್​​.

ವ್ಹಾವ್ ! ಇದು WOW ಡಿಸೈನ್..!

Friday October 16, 2015,

3 min Read

ಬ್ರಾಂಡ್​​ಗಳ ಜಗತ್ತಿನಲ್ಲಿ, ದೃಶ್ಯಗಳ ಮೂಲಕ ಬ್ರಾಂಡ್ ಅನ್ನು ವೈವಿಧ್ಯಮಯಗೊಳಿಸುವುದು, ಪ್ರತ್ಯೇಕ ಗುರುತು ಸೃಷ್ಟಿಸುವುದು ಅತ್ಯಂತ ಅವಶ್ಯಕವಾಗಿದೆ. ಡಿಸೈನರ್​​ಗಳು ಜಾಹೀರಾತು ಮಾಧ್ಯಮದ ಮೂಲಕ ಪ್ರತಿ ಬ್ರಾಂಡ್​ಗಳಿಗೆ ಐಡೆಂಟಿಟಿ ಸೃಷ್ಟಿಸುತ್ತಾರೆ. ಟಿವಿ ಚಾನೆಲ್​​ಗಳ​ ಜಾಹೀರಾತು, ಮುದ್ರಣ ಮಾಧ್ಯಮಗಳ ಜಾಹೀರಾತು ತಯಾರಿಸುವ ಕಂಪನಿಗಳು, ಬ್ರಾಂಡ್​​ಗಳಿಗೆ ಲೋಗೋ ಮತ್ತು ಕಲರ್ ಕಾಂಬಿನೇಷನ್ ಕೂಡಾ ಮಾಡಿ ಕೊಡುತ್ತಿದ್ದರು. ಆದರೆ, ಬದಲಾವಣೆ ಜಗದ ನಿಯಮ. ಜಗತ್ತಿನ ಆಯ್ಕೆಗಳು ಬದಲಾಗುತ್ತಿದ್ದಂತೆಯೇ, ವಿಷಯ ತಜ್ಱರು, ಡಿಸೈನಿಂಗ್ ಕ್ಷೇತ್ರಕ್ಕೆ ಇಳಿದುಬಿಟ್ಟಿದ್ದಾರೆ. ಇಂತಹ ಬದಲಾವಣೆಯ ಉಪಯೋಗ ಪಡೆದುಕೊಂಡವರಲ್ಲಿ ವವ್(WOW) ಡಿಸೈನ್​​ನ ಸಾಸ್ವತ ದಾಸ್ ಕೂಡಾ ಒಬ್ಬರು.

ಸಾಸ್ವತ ದಾಸ್

ಸಾಸ್ವತ ದಾಸ್, ವೃತ್ತಿಯಲ್ಲಿ ಇಂಜಿನಿಯರ್, ಗಣಿತ ಮತ್ತು ಭೌತಶಾಸ್ತ್ರದಲ್ಲಿ ತುಂಬಾ ಆಸಕ್ತಿ. ಇಂಜಿನಿಯರಿಂಗ್ ಪದವಿ ಪಡೆದ ಸಾಸ್ವತ ದಾಸ್, ಬಳಿಕ ಕೆಲಕಾಲ ವಿಪ್ರೋದಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದರು. ಸೆಮಿಕಂಡಕ್ಟರ್​​ಗಳು ಮತ್ತು ದಿನಬಳಕೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಜೊತೆಗಿನ ವಿಪ್ರೋ ಜೀವನ ಅವರಿಗೆ ಅಷ್ಟೊಂದು ಆಸಕ್ತಿ ಹುಟ್ಟಿಸಲಿಲ್ಲ. ಇಲ್ಲೇ ಇದ್ದರೆ ಆಗದು ಎಂದು ಕೊಂಡ ಸಾಸ್ವತ ದಾಸ್, ಎಂಐಸಿಎಗೆ ಸೇರಿಕೊಂಡು ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್​ನಲ್ಲಿ ಕೋರ್ಸ್ ಮಾಡಿದರು. ಎಂಐಸಿಎ ಕೋರ್ಸ್ ಬಳಿಕ, ಸಾಸ್ವತ ಮಾರ್ಕೆಂಟಿಂಗ್ ವ್ಯವಸ್ಥಾಪಕರಾಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಅಲ್ಲೂ ತೃಪ್ತಿ ಕಾಣದೆ, ಕೊನೆಗೆ ತಮ್ಮದೇ ಆದ ನವ್ಯೋದ್ಯಮ ಸ್ಥಾಪಿಸಿದರು.

image


“ಉದ್ಯಮವನ್ನು ಸ್ಥಾಪಿಸುವ ಬಯಕೆ ನನ್ನಲ್ಲಿ ಮುಂಚೆಯಿಂದಲೇ ಇತ್ತು. ಯಾವಾಗ ಅದನ್ನು ಈಡೇರಿಸಿಕೊಳ್ಳುವ ಸಮಯ ಬಂತೋ, ನಾನದನ್ನು ಬಾಚಿ ತಬ್ಬಿಕೊಂಡೆ. ಉಳಿದದ್ದೆಲ್ಲವೂ ಸಹಜವಾಗಿಯೇ ನಡೆಯಿತು. ನನ್ನಂತೆಯೇ ಮನಸ್ಸುಳ್ಳ ವ್ಯಕ್ತಿಗಳನ್ನು ಭೇಟಿ ಮಾಡಿದ್ದು ಕೂಡಾ ಅದೃಷ್ಟವೇ ಎನ್ನಬೇಕು. ಅವರೇ ಈಗ ನನ್ನ ಉದ್ಯಮದ ಪಾಲುದಾರರು ಕೂಡಾ. ಅವರ ಭರವಸೆಯಿಂದಲೇ ನಾನು ಉದ್ಯಮಕ್ಕೆ ಧುಮುಕಿದೆ,” ಎನ್ನುತ್ತಾರೆ ಸಾಸ್ವತ.

ಡಿಸೈನ್ ಉದ್ಯಮವನ್ನು ಆರಂಭಿಸಲು ಪ್ರೇರಣೆಯಾಗಿದ್ದೇನು ಎಂದು ಕೇಳಿದರೆ, ಸ್ಟೀವ್ ಜಾಬ್ಸ್ ಪ್ರೇರಣೆಯಿಂದಲೇ ನಾನು ಉದ್ಯಮಕ್ಕೆ ಧುಮುಕಿದೆ ಎನ್ನುತ್ತಾರೆ ಸಾಸ್ವತ. ಡಿಸೈನ್ ಎನ್ನುವುದು ವಸ್ತುಗಳು ಹೇಗೆ ಕಾಣುತ್ತವೆ ಎಂಬುದಲ್ಲ, ವಸ್ತುಗಳು ಹೇಗೆ ಕೆಲಸ ಮಾಡುತ್ತವೆ ಎಂಬದು ಡಿಸೈನ್ ಎಂದು ಸ್ಟೀವ್ ಜಾಬ್ಸ್ ಹೇಳಿದ್ದರು. ಅದನ್ನು ಸರಿಯಾದ ದೃಷ್ಟಿಯಲ್ಲಿ ನೋಡಿದರೆ, ನಾನು ಎಂಜಿನಿಯರಿಂಗ್ನಿಂದ ಆರಂಭಿಸಿ ಮಾರ್ಕೆಟಿಂಗ್ ವರೆಗೆ ಮಾಡಿದ್ದೆಲ್ಲವೂ ಡಿಸೈನ್​​ಗಳೇ ಆಗಿದ್ದವು. ಆರಂಭದಲ್ಲಿ ಎಲೆಕ್ಟ್ರಾನಿಕ್ ಸರ್ಕ್ಯುಟ್​​ಗಳನ್ನು ಡಿಸೈನ್ ಮಾಡಿದ್ದರೆ, ಆಮೇಲೆ ಬ್ರಾಂಡಿಂಗ್ ತಂತ್ರವನ್ನು ಡಿಸೈನ್ ಮಾಡಿದ್ದೆ,” ಎನ್ನುತ್ತಾರೆ ಸಾಸ್ವತ.

2009ರಲ್ಲಿ ಆರಂಭವಾದ ವವ್ ಡಿಸೈನ್ ಈಗಾಗಲೇ ದೊಡ್ಡ ದೊಡ್ಡ ಬ್ರಾಂಡ್​​ಗಳನ್ನು ಗ್ರಾಹಕರನ್ನಾಗಿ ಪಡೆದಿದೆ. ಐಟಿಸಿ,ಅಮೂಲ್, ಕೇವಿನ್​​ಕೇರ್ ಮತ್ತು ಕೆಲ್ಲಾಗ್​​ಗಳು ಈ ಪಟ್ಟಿಯಲ್ಲಿವೆ. ಬ್ರಾಂಡ್ ಆರ್ಕಿಟೆಕ್ಚರ್, ಬ್ರಾಂಡ್ ಐಡಿಯಾ, ಬ್ರಾಂಡ್ ಪೊಸಿಷನಿಂಗ್, ಇನ್ನೋವೇಷನ್, ಕಾನ್ಸೆಪ್ಟ್ ಡೆವಲಪ್​​ಮೆಂಟ್ ಸೇರಿದಂತೆ ಉತ್ಪನ್ನದ ಪ್ರಚಾರಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನೂ ವವ್ ಡಿಸೈನ್ ನಿಭಾಯಿಸುತ್ತಿದೆ. ಮೂರು ಜನರ ತಂಡದೊಂದಿಗೆ ಆರಂಭವಾದ ವವ್ ಡಿಸೈನ್ ಈಗ 20 ಸದಸ್ಯರನ್ನು ಹೊಂದಿದೆ. ವಾಣಿಜ್ಯ ಕಲೆ, ಚಿತ್ರಕಲೆ ಹೀಗೆ ಬೇರೆ ಬೇರೆ ಕ್ಷೇತ್ರಗಳಿಂದ ತಂಡದ ಸದಸ್ಯರನ್ನು ಆರಿಸಿಕೊಳ್ಳಲಾಗಿದೆ. ಮಾರ್ಕೆಟಿಂಗ್ ವ್ಯವಸ್ಥಾಪಕರಾಗಿ ಪಡೆದ ಅನುಭವ ಮತ್ತು ಸಂಪರ್ಕದಿಂದಾಗಿ, ಆರಂಭದಲ್ಲೇ ಗ್ರಾಹಕರನ್ನು ಪಡೆಯಲು ಅನುಕೂಲವಾಯಿತು ಎನ್ನುತ್ತಾರೆ ಸಾಸ್ವತ. ಆದರೆ, ಒಂದು ತಂಡವಾಗಿ ನಾವು ಸಾಧಿಸಿ ತೋರಿಸಲು ಬಹುದೂರ ಸಾಗಬೇಕಾಗಿತ್ತು ಎನ್ನುವುದು ಅವರ ವಿವರಣೆ.

“ನಮ್ಮ ಬಗ್ಗೆ ಗೊತ್ತಿದ್ದವರೂ ಕೂಡಾ ನಮ್ಮ ಡಿಸೈನ್​​ಗಳನ್ನು ಪರೀಕ್ಷಿಸಿದ ಬಳಿಕವಷ್ಟೇ ಆರ್ಡರ್ ನೀಡಿದ್ದರು. ನಮ್ಮ ಸಾಮರ್ಥ್ಯದ ಬಗ್ಗೆ ಅವರಿಗೆ ಗೊತ್ತಿದ್ದರೂ, ನಮ್ಮ ಜಾಗವನ್ನು ಗಟ್ಟಿ ಮಾಡಿಕೊಳ್ಳಲು, ನಂಬಿಕೆಯನ್ನು ಉಳಿಸಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕಾಯಿತು. ಗೆಳೆತನವನ್ನು ವ್ಯವಹಾರವಾಗಿ ಬದಲಾಯಿಸುವುದು ತುಂಬಾ ಕಷ್ಟ.” ಎನ್ನುವುದು ಸಾಸ್ವತ ಅವರ ಅಭಿಪ್ರಾಯ.

ನಾವು ದೊಡ್ಡ ಕ್ಷೇತ್ರದಲ್ಲಿ ಸ್ಪರ್ಧೆಗೆ ಬಿದ್ದಿದ್ದೇವೆ. ಎಲ್ಲರೂ ಕಣ್ಣಿಗೆ ಚೆನ್ನಾಗಿ ಕಾಣುವ ಡಿಸೈನ್​​ಗಳನ್ನು ಮಾಡಿಕೊಡುತ್ತಾರೆ. ನಾವು ಕಣ್ಣಿಗೆ ಆಕರ್ಷಕವಾಗಿ ಕಾಣುವ ಜೊತೆಗೆ, ಮಾರುಕಟ್ಟೆಯಲ್ಲೂ ಪ್ರಭಾವ ಬೀರುವ ಡಿಸೈನ್​​ಗಳನ್ನು ಮಾಡುತ್ತೇವೆ. ಅದೇ ನಮಗೂ ಉಳಿದವರಿಗೂ ಇರುವ ವ್ಯತ್ಯಾಸ ಎನ್ನುತ್ತಾರೆ ಸಾಸ್ವತ. ನಮ್ಮ ಸೇವೆ ಪಡೆದ ಬಳಿಕ ಬ್ರಾಂಡ್​​ಗಳ ಬ್ಯಾಲೆನ್ಸ್ ಷೀಟ್​​ನಲ್ಲೂ ಜಾದೂ ನಡೆದಿದೆ. ಎಂದು ಹೆಮ್ಮೆ ಪಡುತ್ತಾರೆ ಸಾಸ್ವತ.

ಬಾಯಿ ಪ್ರಚಾರದಿಂದಲೇ ವವ್ ಡಿಸೈನ್​​ಗೆ ಸಾಕಷ್ಟು ಕೆಲಸಗಳು ಹುಡುಕಿಕೊಂಡು ಬರುತ್ತಿವೆ. ಅಲ್ಲದೆ, ತಮ್ಮದೇ ಆದ ರೀತಿಯಲ್ಲಿ ಇವರು ಪ್ರಚಾರವನ್ನೂ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಮಾಡಿದ ಕೆಲಸಗಳ ಪೈಕಿ ಘರಿ ಡಿಟರ್ಜೆಂಡ್ ಪೌಡರ್​​ನ ಪುನಶ್ಚೇತನಕ್ಕಾಗಿ ಮಾಡಿದ ಬ್ರಾಂಡಿಂಗ್ ಕೆಲಸವೇ ಹೆಚ್ಚು ತೃಪ್ತಿಕೊಟ್ಟಿದೆ ಎನ್ನುವುದು ಸಾಸ್ವತ ಅಭಿಪ್ರಾಯ.

ಘರಿ ಆಫರ್ ಪಡೆಯುವುದೂ ಸುಲಭವಾಗಿರಲಿಲ್ಲ, ದೊಡ್ಡ ದೊಡ್ಡ ಕಂಪನಿಗಳ ಜೊತೆಗೆ ನಾವು ಸ್ಪರ್ಧಿಸಿ, ಕೇವಲ ಅದ್ಭುತ ಡಿಸೈನ್​​ನಿಂದಲೇ ನಾವು ಘರಿ ಆರ್ಡರ್ ಪಡೆದುಕೊಂಡೆವು. ಡಿಟರ್ಜೆಂಟ್ ಬ್ರಾಂಡ್ ಕ್ಷೇತ್ರವು ಭಾರೀ ಪ್ರಮಾಣದಲ್ಲಿ ಆರ್ಥಿಕ ವಹಿವಾಟು ಮಾಡುತ್ತಿದೆ. ನಾವು ಗ್ರಾಹಕರ ಬಯಕೆಗಳನ್ನು ಆಳವಾಗಿ ಅಧ್ಯಯನ ಮಾಡಿದೆವು. ನಮ್ಮ ಕಲ್ಪನೆ ಮತ್ತು ಸಲಹೆಯಿಂದಾಗಿ, ಘರಿ ವ್ಹೀಲ್​​ನಂತಹ ಮಾರುಕಟ್ಟೆ ನಾಯಕನ ಜೊತೆ ಸ್ಪರ್ಧೆಗೆ ಇಳಿಯುವ ಆತ್ಮವಿಶ್ವಾಸ ಪಡೆದುಕೊಂಡಿತು ಎಂದು ಸಾಸ್ವತ ವಿವರಿಸುತ್ತಾರೆ.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವವ್ ಡಿಸೈನ್ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೂ ಕಣ್ಣು ಹಾಯಿಸತೊಡಗಿದೆ. ಮುಖ್ಯವಾಗಿ ಬೆಳೆಯುತ್ತಿರುವ ದೇಶಗಳ ಮೇಲೆ ಕಣ್ಣು ನೆಟ್ಟಿದೆ.