ಯೋಧರ ರಕ್ಷಣೆಗೆ ಸ್ಪೇಸ್ ಸ್ಯೂಟ್ ..!

ಎನ್​ಎಸ್​ಆರ್​

0

ದೇಶದ್ರೋಹಿಗಳ ಗುಂಡಿಗೆ ಹೆದರದ ಸೈನಿಕರು, ಸಿಯಾಚಿನ್ ಗ್ಲೇಸಿಯರ್​ನ ಹಿಮಪಾತಕ್ಕೆ ಹೆದರುವಂತಾಗಿದೆ. ಅದೆಷ್ಟೊ ಸೈನಿಕರು ಚಳ ತಡೆಯಲಾಗದೆ ಸಾವನಪ್ಪುತ್ತಿದ್ದಾರೆ. ಕೆಲವರು ಅಲ್ಲಿ ಬದುಕುವ ಗುಂಡಿಗೆ ಇದ್ರು ಹಿಮಪಾತದ ರಭಸಕ್ಕೆ ಸಾವನಪ್ಪುತ್ತಿದ್ದಾರೆ. ಸಿಯಾಚಿನ್ ಎಂದರೆ ಸೈನಿಕರಿಗೆ ಸಾವಿನ ಕೂಪ ಎನ್ನುವಂತಾಗಿದೆ. ಆದರೆ ನಮ್ಮ ಸೈನಿಕರ ಸಮಸ್ಯೆಗೆ ಇಸ್ರೋ ಪರಿಹಾರ ಹುಡುಕಿದೆ. ಸೈನಿಕರ ಮೊಗದಲ್ಲಿನ ಮಂದಹಾಸಕ್ಕೆ ಕಾರಣವಾಗಿದೆ ಇಸ್ರೋ.

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್​ನಲ್ಲಿ ಹಿಮಪಾತ ಹಾಗೂ ವ್ಯತಿರಿಕ್ತ ಹವಾಮಾನಕ್ಕೆ ಸಿಲುಕಿ ಮೃತರಾಗುತ್ತಿರುವ ಸೈನಿಕರ ರಕ್ಷಣೆಗೆ ಇಸ್ರೋ ತಂತ್ರಜ್ಞಾನ ತುಂಬಾ ಸಹಾಯವಾಗಲಿದೆ. ಹೀಗಂತ ನಾವ್ ಹೇಳ್ತಿಲ್ಲ ಇಸ್ರೋ ವಿಜ್ಞಾನಿಗಳು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. ಗಗನ ಯಾತ್ರಿಗಳ ಬಳಕೆಗೆಂದು ಇಸ್ರೋ ತಯಾರಿಸಿರುವ ಪರಿಕರಗಳನ್ನೇ ಸ್ವಲ್ಪ ಮಾರ್ಪಡಿಸಿ, ಯೋಧರು ಬಳಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಸ್ರೋ ಕೂಡ ಸಹಾಯ ಮಾಡಲು ಮುಂದಾಗಿದೆ.

ಇದನ್ನು ಓದಿ: ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​​ನಲ್ಲೂ ಅಡಕವಾದ ಚಿಂತನೆ

ಗಡಿ ಕಾಯುವವರು ಜೀವ ಕಾಯುವ ಕೆಲಸವನ್ನು ಇಸ್ರೋ ಮಾಡಲು ಮುಂದಾಗಿರುವುದು ಸಂತಸದ ವಿಷಯ. ಯೋಧರ ಜೀವದ ಮಹತ್ವವನ್ನು ಅರಿತಿರುವ ಇಸ್ರೋ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಮೈನಸ್ 60 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲೂ ಬೆಚ್ಚಗಿರಲು ಯೋಧರು ದಪ್ಪನೆಯ ಬಟ್ಟೆ ಧರಿಸುತ್ತಾರೆ. ಇದರ ತೂಕವೇ 4-5 ಕೆ.ಜಿ ಆಗುತ್ತದೆ. ಇಸ್ರೋ ಗಗನಯಾತ್ರಿಗಳಿಗೆ ತಯಾರಿಸಿದ 'ಸ್ಪೇಸ್ ಸೂಟ್' ವಿಶ್ವದಲ್ಲೇ ಅತಿ ಹಗುರ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಇದೆ ತಂತ್ರಜ್ಞಾನವನ್ನು ಬಳಸಿಕೊಂಡು ಯೋಧರಿಗೂ ಉಡುಪು ತಯಾರಿಸಬಹುದಾಗಿದೆ. ಇದು ಕಡಿಮೆ ತೂಕದಲ್ಲಿ ಹೆಚ್ಚು ರಕ್ಷಣೆ ನೀಡುತ್ತದೆ. ಹಾಗಾಗಿ ಸಿಯಾಚಿನ್ ಗ್ಲೇಸಿಯರ್​​ನಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಈ ಉಡುಪು ನೀಡುವ ಚಿಂತನೆಯಿದೆ.

ಗಗನಯಾತ್ರಿಗಳ ಸಂವಹನಕ್ಕೆ ಬಳಸುವ ಕೈಗಡಿಯಾರ ಮಾದರಿಯ ಉದ್ಯುನ್ಮಾನ ಉಪಕರಣ ಸಿಯಾಚಿನ್ ಯೋಧರಿಗೆ ಉಪಯೋಗವಾಗುತ್ತದೆ. ಹಿಮಪಾತಕ್ಕೆ ಸಿಲುಕಿ ಹತ್ತಾರು ಅಡಿ ಆಳದಲ್ಲಿ ಸಿಲುಕಿದ್ದರೂ ಈ ಉಪಕರಣದಿಂದ ಯೋಧರನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಈ ಉಪಕರಣ ರವಾನಿಸುವ ಸಂಕೇತಗಳಿಂದ ಯೋಧರನ್ನು ನಿಖರವಾಗಿ ಪತ್ತೆ ಮಾಡಬಹುದು. ಆದರೆ ಇವುಗಳ ಬಳಕೆ ಕುರಿತು ಇನ್ನಷ್ಟೇ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಸಿಯಾಚಿನ್​ನಲ್ಲಿ ಕಳೆದ ಮೂರು ವರ್ಷದಲ್ಲಿ ಕನಿಷ್ಠ 40 ಸೈನಿಕರು ಹಿಮಪಾತ ಮತ್ತಿತರ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ. ಹಾಗಾಗಿ ಇಸ್ರೋ ನೀಡಿರುವ ಸಲಹೆ ಹೆಚ್ಚು ಪರಿಣಾಮಕಾರಿಯಾಗಿದೆ.

ಇತ್ತೀಚೆಗೆ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಸಿಯಾಚಿನ್ ಹಿಮಪಾತದಲ್ಲಿ 25 ಅಡಿ ಆಳದಲ್ಲಿ ಸಿಲುಕಿ, 8 ದಿನಗಳ ಬಳಿಕ ಪತ್ತೆಯಾಗಿದ್ದರು. ಆನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ರು. ಆದರೆ ಈಗ ಅಂತಹ ತೊಂದರೆಯೇನಿಲ್ಲ. ಯೋಧರು ಎಲ್ಲೇ ಸಿಕ್ಕಿಕೊಂಡ್ರೂ ಥಟ್ ಅಂತ ಅವರನ್ನು ಪತ್ತೆಹಚ್ಚುವ ಸಾಧ್ಯತೆಯಿದೆ. ಆದಷ್ಟೂ ಬೇಗ ಕೇಂದ್ರ ಸರ್ಕಾರ, ಸಿಯಾಚಿನ್ ಗ್ಲೇಸಿಯರ್​ನ ಯೋಧರಿಗೆ ತುಸು ಮಾರ್ಪಾಡಾದ ‘ಸ್ಪೇಸ್ ಸ್ಯೂಟ್’ ಪೂರೈಕೆ ಮಾಡಿದ್ದಲ್ಲಿ , ಯೋಧರ ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಲಿದ್ದಾರೆ.

ಇದನ್ನು ಓದಿ:

1. ನನಗೆ ಗೊತ್ತಿಲ್ಲ ಎನ್ನಲು ಏಕೆ ಮುಜುಗರ..?

2. ಗಾಳಿಪಟದಿಂದ ವಿದ್ಯುತ್ ಉತ್ಪಾದನೆ: ಮಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸಂಶೋಧನೆ

3. 60 ವರ್ಷದ ಟೂ-ಪೀಸ್ ಮಾಡೆಲ್..! ಬಿಕಿನಿ ಧರಿಸೋ ಬಿಂದಾಸ್ ಅಜ್ಜಿ...


Related Stories