ಕನ್ನಡ ಚಿತ್ರರಂಗದ ಸಾಹಿತ್ಯರತ್ನ ಚಿ.ಉದಯಶಂಕರ್

ಟೀಮ್​​ ವೈ.ಎಸ್​​.

ಕನ್ನಡ ಚಿತ್ರರಂಗದ ಸಾಹಿತ್ಯರತ್ನ ಚಿ.ಉದಯಶಂಕರ್

Thursday July 23, 2015,

2 min Read

ಈ ಮನುಷ್ಯನಿಗೆ ಹಾಡುಗಳೆಂದರೆ ಬಹು ಇಷ್ಟ. ಇಂಪಾದ ಸಂಗೀತ ಅಂದರೆ ಪಂಚಪ್ರಾಣ. ಹಾಡನ್ನು ಕೇಳುಗರು ಮತ್ತೆ ಮತ್ತೆ ಮೆಲುಕು ಹಾಕಬೇಕೆಂದು ಬಯಸಿದ ಮಹಾನ್​ ವ್ಯಕ್ತಿ.. ಹುಟ್ಟಿದ್ದು, ಬದುಕಿದ್ದು ಎರಡೂ ಕೂಡ ಕನ್ನಡದ ಹಾಡಿಗಾಗಿ. ಚಿ. ಉದಯಶಂಕರ್​​ ಅಂದ್ರೆ ಸಾಕು ಇವತ್ತಿಗೂ ಅವ ಅದೆಷ್ಟೋ ಹಾಡುಗಳು ನೆನಪಿಗೆ ಬರುತ್ತವೆ. ಅಷ್ಟರ ಮಟ್ಟಿಗೆ ಉದಯಶಂಕರ್​​​ ಸಂಗೀತ ಪಾಂಡಿತ್ಯವನ್ನು ಹೊಂದಿದ್ದರು.

ಚಿ. ಉದಯಶಂಕರ್ ಹುಟ್ಟಿದ್ದು ಫೆಬ್ರವರಿ 18 1934ರಲ್ಲಿ. ಬೆಂಗಳೂರು ಉದಯಶಂಕರ್​ ಜನ್ಮಸ್ಥಳ. ಉದಯಶಂಕರ್​​​​ ತಂದೆ ಸದಾಶಿವಯ್ಯ ಕೂಡ ಖ್ಯಾತ ಸಾಹಿತಿ. ಹೀಗಾಗಿ ರಕ್ತದಲ್ಲೇ ಉದಯಶಂಕರ್​​ಗೆ ಸಂಗೀತ ಬಂದು ಹೋಗಿತ್ತು.. ಅಪ್ಪನಂತೆಯೇ ಮಗ ಚಿಕ್ಕ ವಯಸ್ಸಿನಲ್ಲೇ ಸಂಗೀತದ ಪಾಂಡಿತ್ಯ ಪಡೆದ್ರು. ಕನ್ನಡ ಚಿತ್ರರಂಗಕ್ಕೆ ತನ್ನದೇ ಕೊಡುಗೆ ನೀಡಿದ್ರು.

image


ಉದಯಶಂಕರ್ ಕನ್ನಡದ 3000ಕ್ಕೂ ಅಧಿಕ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಆರಂಭದಲ್ಲಿ ಉದಯಶಂಕರ್​​ ಎಲ್ಲರಂತೆ ಅಸ್ಥಿತ್ವಕ್ಕಾಗಿ ಪರದಾಡಿದ್ದರು. ಆದ್ರೆ ವರನಟ ಡಾ. ರಾಜ್​​ಕುಮಾರ್​​ ಚಿತ್ರವೊಂದು ಉದಯಶಂಕರ್​​ಗೆ ದೊಡ್ಡ ಬ್ರೇಕ್​ ಕೊಟ್ಟಿತ್ತು. ಉದಯಶಂಕರ್​ ಪಾಲಿಗೆ ಸಂಜೀವಿನಿಯಾದ ಚಿತ್ರದ ಹೆಸರು ಸಂತ ತುಕಾರಾಮ.

ಸಂತ ತುಕಾರಾಮ ಚಿತ್ರ 1963 ರಲ್ಲಿ ತೆರೆಕಂಡಿತ್ತು. ನಟ ಸಾರ್ವಭೌಮ ರಾಜ್‌ಕುಮಾರ್ ಅಭಿನಯದ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕೂಡ ಉದಯ್​​ಶಂಕರ್​​​. ಇಲ್ಲಿಂದ ಮುಂದೆ ಉದಯ್​ಶಂಕರ್​ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ರಾಜ್​​ಕುಮಾರ್​ ಅಭಿನಯದ ಹಲವು ಚಿತ್ರಗಳಿಗೆ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದರು. 

ಒಂದು ಕಾಲದಲ್ಲಿ ರಾಜ್‌ಕುಮಾರ್ ಮತ್ತು ಉದಯ್​​ ಶಂಕರ್​ ಕಾಂಬಿನೇಷನ್​​ ಕನ್ನಡ ಚಿತ್ರರಂಗದಲ್ಲಿ ಸೂಪರ್​ ಹಿಟ್​ ಆಗಿತ್ತು. ರಾಜ್​​​​​ ಅವರ ಸುಮಾರು 88 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಕೂಡ ಚಿ. ಉದಯ್​ಶಂಕರ್​ ಅನ್ನೋದು ಮತ್ತೊಂದು ಅಚ್ಚರಿ. ಆರಂಭದಲ್ಲಿ ಉದಯಶಂಕರ್​​​ ತಂದೆ ಸದಾಶಿವಯ್ಯ ಜೊತೆಗೂಡಿ ಕನ್ನಡ ಚಿತ್ರಗಳಿಗೆ ಸಾಹಿತ್ಯ ಬರೆಯುತ್ತಿದ್ದರು. ಮುಂದೆ ಒಂದೊಂದೇ ಹೆಜ್ಜೆ ಮುಂದಿಟ್ಟ ಉದಯಶಂಕರ್​​​ ಸಂಭಾಷಣೆ ಮತ್ತು ಸಂಗೀತ ಸಂಯೋಜನೆ ಮಾಡಲು ಆರಂಭಿಸಿದ್ರು.

ಉದಯಶಂಕರ್ ಕೇವಲ ಸಾಹಿತ್ಯ ಮತ್ತು ಸಂಭಾಷಣೆ ಬರೆಯೋದಿಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದರು. ಉದಯ್​​ಶಂಕರ್​​​​ ವಿಶೇಷತೆ ಅಂದ್ರೆ, ಅವರು ಬರೆದಿದ್ದ ಸಾಹಿತ್ಯ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿತ್ತು. ಸುಲಭವಾದ ಪದಗಳನ್ನು ಬಳಸಿ ಸಾಹಿತ್ಯ ಬರೆಯುತ್ತಿದ್ದರು. ಉದಯ್​ಶಂಕರ್​​ಗೆ ಸಾಹಿತ್ಯ ರತ್ನ ಎಂಬ ಬಿರುದು ಕೂಡ ಇದೆ. ಮಹಾಸತಿ ಅನಸೂಯಾ, ಸತಿ ಸಾವಿತ್ರಿ, ಭಾಗ್ಯದ ಬಾಗಿಲು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ , ದೇವರ ಮಕ್ಕಳು ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆಯನ್ನು ಉದಯ್​​ಶಂಕರ್​​ ಬರೆದಿದ್ದರು.

ಉದಯಶಂಕರ್ ಶಾರದಮ್ಮ ಅವರನ್ನು ಮದುವೆ ಆಗಿದ್ದರು. ಶಾರದಮ್ಮ ಮತ್ತು ಉದಯ್​​ಶಂಕರ್​​ ದಂಪತಿಗೆ ಮೂರುಜನ ಮಕ್ಕಳಿದ್ದಾರೆ. ಉದಯ್​ಶಂಕರ್​​​ ಮಗ ಗುರುದತ್ ಕೂಡ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ . ಕನ್ನಡ ಚಿತ್ರರಂಗಕ್ಕೆ ಉದಯ್​ಶಂಕರ್ ನೀಡಿದ ಕೊಡುಗೆಗೆ​​ ಹಲವು ಪ್ರಶಸ್ತಿಗಳು ಕೂಡ ದೊರಕಿವೆ.

image


ಉದಯ್​ಶಂಕರ್​​ ಸಂಭಾಷಣೆ ಬರೆದಿದ್ದ ಕುಲಗೌರವ, ನಾಗರಹಾವು , ಜೀವನ ಚೈತ್ರ ಮತ್ತು ಪ್ರೇಮದ ಕಾಣಿಕೆ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆನಂದ್ ಚಿತ್ರಗಳಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗೌರವವೂ ಲಭಿಸಿತ್ತು . ಕನ್ನಡ ಚಿತ್ರರಂಗಕ್ಕೆ ಮೇರು ಕೊಡುಗೆ ಸಲ್ಲಿಸಿದ್ದ ಉದಯಶಂಕರ್ 3 ಜುಲೈ 1993 ರಲ್ಲಿ ನಿಧನ ಹೊಂದಿದರು.

    Share on
    close