ಜನಪದ ಕಲಾವಿದರಿಗೆ ವೇದಿಕೆ: ಪರಂಪರೆ ಉಳಿಸಲು ಎಎಫ್ಎಲ್ ಸಂಸ್ಥೆ ಪರಿಶ್ರಮ

ಟೀಮ್ ವೈ.ಎಸ್.

0

ಉತ್ತಮ ಭಾರತ ನಿರ್ಮಿಸುವ ಕನಸಿನೊಂದಿಗೆ 1999ರಲ್ಲಿ ಯುಎಸ್‌ಎನಲ್ಲಿದ್ದ ಕೆಲಸ ಬಿಟ್ಟು ಭಾರತಕ್ಕೆ ವಾಪಾಸಾದವರು ಅಮಿತವ್ ಭಟ್ಟಾಚಾರ್ಯ. ಅಮಿತವ್ ಭಟ್ಟಾಚಾರ್ಯ ಖರಗ್‌ಪುರ ಐಐಟಿಯಲ್ಲಿ ಓದಿದವರು. 2000ನೇ ಇಸವಿಯಲ್ಲಿ ಅವರು ಬಂಗ್ಲಾನಾಟಕ್ ಡಾಟ್ ಕಾಮ್ ಎಂಬ ಸಂಸ್ಕೃತಿ ಅಭಿವೃದ್ಧಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡ ಸಾಮಾಜಿಕ ಅಭಿವೃದ್ಧಿ ಸಾಧಿಸುವ ಸಂಘಟನೆಯನ್ನು ಸ್ಥಾಪಿಸಿದರು. ಹಾಡುಗಳು ಮತ್ತು ಪ್ರದರ್ಶನ ಜನಪದ ಕಲೆ ಸಂಸ್ಕೃತಿಗಳು ಗ್ರಾಮೀಣ ಅಭಿವೃದ್ಧಿ ಉದ್ಯಮಗಳಾಗುವ ಅವಕಾಶ ಇದೆ ಎಂದು ನಂಬುತ್ತಾರೆ ಅಮಿತವ್.

2004ರಲ್ಲಿ ಅಮಿತವ್ ಆರ್ಟ್ ಫಾರ್ ಲೈವ್‌ಲಿಹೂಡ್(ಎಎಫ್‌ಎಲ್) ಎಂಬ ಬಂಗ್ಲಾನಾಟಕ್ ಡಾಟ್ ಕಾಮ್‌ನ ಶಾಖಾ ಯೋಜನೆಯನ್ನು ಆರಂಭಿಸಿದರು. ಇದರಿಂದ ಪಶ್ಚಿಮ ಬಂಗಾಳದ 6 ಜಿಲ್ಲೆಗಳ, ಗ್ರಾಮೀಣ ಸಮುದಾಯಗಳ 3200 ಕಲಾವಿದರು 6 ವಿಧದ ಸಾಂಸ್ಕೃತಿಕ ಕಲೆಯನ್ನು ಅನಾವರಣಗೊಳಿಸುವ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.

ಸಂಸ್ಕೃತಿ ಒಂದು ದೊಡ್ಡ ಅವಕಾಶ. ಧ್ವನಿ ಮತ್ತು ಪ್ರದರ್ಶನ ರೂಪದಲ್ಲಿರುವ ಸಂಸ್ಕೃತಿಗಳು ಗ್ರಾಮೀಣ ಅಭಿವೃದ್ಧಿ ಉದ್ಯಮಗಳಿಗೆ ಒಂದು ದೊಡ್ಡ ಬಂಡವಾಳ. ಆರ್ಟ್ ಫಾರ್ ಲೈವ್ ಲೀ ಹೂಡ್ ತನ್ನ ಕಾರ್ಯಕ್ರಮಗಳ ಮೂಲಕ ನಶಿಸುತ್ತಿರುವ ಸಾಂಸ್ಕೃತಿಕ ಪರಂಪರೆಯ ಕುರಿತು ತರಬೇತಿ ನೀಡುವ ಮೂಲಕ ಪರಂಪರೆಗೆ ಮರುಜೀವ ನೀಡುತ್ತಿದೆ. ಅಲ್ಲದೇ ಮಾನ್ಯತೆ ಮತ್ತು ಪ್ರಚಾರವನ್ನೂ ಮಾಡುತ್ತಿದೆ. ಸಾಂಪ್ರದಾಯಿಕ ಪ್ರದರ್ಶನ ಮತ್ತು ದೃಶ್ಯಕಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸ ಮಾರುಕಟ್ಟೆಗಳ ಸೃಷ್ಟಿಯಾಗುತ್ತಿದೆ ಮತ್ತು ಹೊಸ ಬ್ರಾಂಡ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಜೀವನೋಪಾಯ ಮತ್ತು ಸಬಲೀಕರಣಕ್ಕೆ ಪರಂಪರೆ ಕಾರಣವಾಗುತ್ತದೆ. ಕಲೆಯನ್ನು ರಕ್ಷಿಸಲು, ಉಳಿಸಲು ಕಲಾವಿದರು ಉಳಿಯಬೇಕು ಎಂಬುದೇ ಎಎಫ್‌ಎಲ್ ಘೋಷವಾಕ್ಯ. ನಶಿಸುತ್ತಿರುವ ಪರಂಪರೆಗೆ ಮರುಜೀವ ನೀಡುವುದು ಮತ್ತು ರಕ್ಷಿಸುವುದರ ಮೂಲಕ ಸಾಮಾಜಿಕ ಬಹಿಷ್ಕಾರ, ಬಡತನದಂತಹ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವುದು ಎಎಫ್‌ಎಲ್‌ನ ಗುರಿ ಎನ್ನುತ್ತಾರೆ ಅಮಿತವ್.

ಆರಂಭದಿಂದಲೂ ಪಶ್ಚಿಮಬಂಗಾಳ, ಬಿಹಾರ, ಪಂಜಾಬ್, ರಾಜಸ್ಥಾನ ಮತ್ತು ಒಡಿಶಾದ 14,000ಕ್ಕೂ ಜನಪದ ಕಲಾವಿದರ ಜೀವನಶೈಲಿಯಲ್ಲಿ ಬದಲಾವಣೆ ತರುವಲ್ಲಿ ಎಎಫ್ಎಲ್ ಕಾರ್ಯನಿರತವಾಗಿದೆ. ಇಂದು ಮಿಲಿಯನ್‌ಗಟ್ಟಲೆ ಜನರನ್ನು ಎಎಫ್‌ಎಲ್ ತಲುಪಿದೆ. ಹೊಸ ವೀಕ್ಷಕರನ್ನು ಗಳಿಸಿದೆ. ಕಲಾವಿದರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸುವಂತೆ ಮಾಧ್ಯಮಗಳ ಆಸಕ್ತಿಯನ್ನೂ ಸೆಳೆದಿದೆ. ಗ್ರಾಮೀಣ ಭಾಗಗಳಲ್ಲಿ ಮಾರುಕಟ್ಟೆಯ ನೇರ ಸಂಪರ್ಕ ಮತ್ತು ಸಾಮಾಜಿಕ ಆರ್ಥಿಕತೆಯ ಬೆಳವಣಿಗೆ ಸಾಧಿಸುತ್ತಿದೆ. ಈ ಮಾದರಿಯನ್ನು ಈಗ ರಾಷ್ಟ್ರಾದ್ಯಂತ ಒಪ್ಪಿಕೊಳ್ಳಲಾಗಿದೆ. ಕಲೆಯ ಉಳಿಯುವಿಕೆಗಾಗಿ ಕೈಗೊಂಡಿರುವ ಈ ರೀತಿಯ ಕ್ರಮಗಳನ್ನು ಮೆಚ್ಚಿಕೊಂಡಿರುವ ಯುನೆಸ್ಕೋ ಮುಖ್ಯ ಕಚೇರಿ, 2010ರಲ್ಲಿ ಬಂಗ್ಲಾನಾಟಕ್ ಡಾಟ್ ಕಾಮ್‌ಗೆ ಮಾನ್ಯತೆ ನೀಡಿದ್ದು, ಅಮೂರ್ತ ಪರಂಪರೆಯ ಸಲಹಾ ಸಮಿತಿಗೆ ಸಲಹೆಯ ಸೇವೆಯನ್ನೂ ಪಡೆಯುತ್ತಿದೆ.

ಸಂಸ್ಕೃತಿಯ ಮೇಲೆ ಬಂಡವಾಳ ಹೂಡಿದರೆ, ಅದು ಸೂಕ್ಷ್ಮ ಆರ್ಥಿಕತೆಯ ಅಭಿವೃದ್ಧಿ ಸಾಧಿಸುವ, ಅಕುಶಲಿ ನಿತ್ಯ ಕಾರ್ಮಿಕರಿಗೆ ಕಲಾವಿದರೆಂದು ಗುರುತಿಸಿಕೊಳ್ಳಲು ಅವಕಾಶ ನೀಡುತ್ತದೆ ಮತ್ತು ಯೋಜನೆಯಲ್ಲಿ ಭಾಗಿಯಾದವರಿಗೆ ಅಭಿವೃದ್ಧಿಯ ಜೊತೆಗೆ ಪ್ರೋತ್ಸಾಹವನ್ನೂ ನೀಡುತ್ತದೆ. ಆದರೆ ದುರದೃಷ್ಟವಶಾತ್ ಸಂಸ್ಕೃತಿಗಳ ಮೇಲೆ ತುಂಬಾ ಕಡಿಮೆ ಮಟ್ಟದಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಅಲ್ಲದೇ ಸಾಕ್ಷ್ಯಚಿತ್ರಗಳ ರಚನೆ, ಸಾಂಸ್ಕೃತಿಕ ನಕ್ಷೆ ಮತ್ತು ಹಬ್ಬದ ಸಂದರ್ಭಗಳಲ್ಲಿ ಮಾತ್ರ ಕೆಲವೇ ಪ್ರದರ್ಶನಗಳಿಗೆ ಸೀಮಿತವಾಗಿದೆ. ಏಕೆಂದರೆ ಸಂಸ್ಕೃತಿ ಪರಿಣಿತರು ಮತ್ತು ಯೋಜನೆ ಅಭಿವೃದ್ಧಿ ಮಾಡುವವರು ಕಲೆ ಪರಂಪರೆಗಳನ್ನು ಅಭಿವೃದ್ಧಿ ಮಾರ್ಗವಾಗಿ ಕಂಡುಕೊಂಡಿಲ್ಲ. ಜಾಗತಿಕ ಏರಿಳಿತಗಳಿಂದ ಇವುಗಳು ಕಡಿಮೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ವಿಸ್ತಾರವಾದ ಅಭಿವೃದ್ಧಿ ಹೊಂದಲು ಅಗತ್ಯವಿರುವ ಎಲ್ಲಾ ಅಂಶಗಳೂ ಸಹ ಸಂಸ್ಕೃತಿ ಒಳಗೊಂಡಿದೆ. ಅಲ್ಲದೇ ಜನಪದ ಕಲೆಯ ಸಮುದಾಯಗಳು ಕಾರ್ಯಕ್ರಮಗಳನ್ನು ಕೊಡುವುದು, ಆ ಮೂಲಕ ಆರ್ಥಿಕ ಬೆಳವಣಿಗೆ ಸಾಧಿಸುವುದು, ತಮ್ಮನ್ನು ಜನ ಗುರುತಿಸುತ್ತಿದ್ದಾರೆ ಎಂಬುದನ್ನು ಗಮನಿಸುವುದು ಮತ್ತು ಹೆಮ್ಮೆಯನ್ನು ಅನುಭವಿಸುವುದರಿಂದ ಸಂಸ್ಕೃತಿಗಳೂ ಸಹ ರಕ್ಷಿಸಲ್ಪಡುತ್ತವೆ. ಸಂಸ್ಕೃತಿಯ ಮೌಲ್ಯದೊಂದಿಗೆ ಕಲಾವಿದರು ತಾವೂ ಬೆಳವಣಿಗೆಯತ್ತ ಸಾಗುತ್ತಾರೆ.

ಆದರೆ ಸಂಸ್ಕೃತಿ, ಅತ್ಯುತ್ತಮ ಪ್ರಾಮುಖ್ಯತೆ ಮತ್ತು ಬಂಡವಾಳವನ್ನು ಬಯಸುತ್ತದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ರೂಪಿಸುವವರು ಮತ್ತು ಪಾಲಿಸಿ ಮಾಡುವವರಿಗೆ ಸಂಸ್ಕೃತಿಯಿಂದಾಗುವ ಸಂಭಾವ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ಅಮಿತವ್.

ಎಎಫ್ಎಲ್ ಕಾರ್ಯಚಟುವಟಿಕೆಯ ಒಂದು ಭಾಗವಾಗಿ, ಪಶ್ಚಿಮಬಂಗಾಳ ಮತ್ತು ಬಿಹಾರದಲ್ಲಿ ಸಾಂಸ್ಕೃತಿಕ ಪ್ರವಾಸೋದ್ಯಮವೂ ಸಹ ಬೆಳೆಯುತ್ತಿದೆ. ಕಲಾಗ್ರಾಮಗಳಲ್ಲಿ ಜನಪದ ಕಲೆಯ ಕೇಂದ್ರಗಳನ್ನು ವಿಸ್ತರಿಸಲಾಗುತ್ತಿದೆ. ಈ ಮೂಲಕ ಸ್ಥಳೀಯ ಸಮುದಾಯಗಳು ಮತ್ತು ಪ್ರವಾಸಿಗಳಿಗೆ ಕಲೆಯ ಶೈಕ್ಷಣಿಕ ಸ್ವರೂಪವನ್ನೂ ಸಹ ತಿಳಿಸಿಕೊಡಲಾಗುತ್ತಿದೆ. ಇಲ್ಲಿನ ಸ್ಥಳೀಯರು ಅವರ ಪರಂಪರೆಯನ್ನು ಪ್ರವಾಸಿಗರೊಂದಿಗೆ ಹಂಚಿಕೊಳ್ಳುತ್ತಾರೆ. ಪ್ರವಾಸಿಗರು ತಮ್ಮೊಂದಿಗೆ ಮಾನವ ಇತಿಹಾಸದ ತುಣುಕುಗಳನ್ನು ಕೊಂಡೊಯ್ಯುತ್ತಾರೆ. ಇದರಿಂದ ಸ್ಥಳೀಯ ಸಮುದಾಯಗಳಲ್ಲಿ ಸ್ವಂತವಾಗಿ ಪ್ರವಾಸಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಜಾಗೃತಗೊಳಿಸಿ, ಜನರ ಆರ್ಥಿಕ ಸಬಲೀಕರಣಕ್ಕೆ ದಾರಿ ಮಾಡಿಕೊಡಲಾಗುತ್ತಿದೆ. ನೂತನ ಪ್ರವಾಸೋದ್ಯಮ ಉತ್ಪನ್ನಗಳನ್ನು ಮಾಡಲು ಜನಪದ ಕಲಾವಿದರಿಂದ ಕಾರ್ಯಾಗಾರಗಳನ್ನೂ ನಡೆಸಲಾಗುತ್ತದೆ. ವಿವಿಧ ರಾಜ್ಯಗಳ ಸಂಗೀತಗಾರರು ಜನಪದ ಹಾಡುಗಾರರ ಜೊತೆ ಸೇರಿ ಮ್ಯೂಸಿಕಲ್ ಜಾಮ್‌ಗಳನ್ನು ನಡೆಸುತ್ತಿದ್ದಾರೆ. ಹಣ್ಣು, ಹೂವುಗಳಿಂದ ಬಣ್ಣಗಳನ್ನು ಸೃಷ್ಟಿಸುವ ಕಲೆಯನ್ನು ಅಭ್ಯಸಿಸಲು ವಿದೇಶಗಳಿಂದಲೂ ಜನರು ಭೇಟಿ ನೀಡುತ್ತಿದ್ದಾರೆ.

ಪರಂಪರೆಗೆ ಮರುಜೀವ ನೀಡಲು ಹಳ್ಳಿಗಳಲ್ಲಿ ಜನಪದ ಹಬ್ಬಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಳ್ಳಿಗಳನ್ನು ಪ್ರವಾಸಿ ತಾಣಗಳಾಗಿ ಬದಲಾಯಿಸಲಾಗುತ್ತಿದೆ. ಈ ಹಬ್ಬಗಳಲ್ಲಿ ಕಲಾವಿದರ ಸಮುದಾಯಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸಲಾಗುತ್ತಿದೆ. ಮಧುಬನಿ ಕಲಾವಿದರು ಮತ್ತು ಬಂಗಾಳದ ಸುರುಳಿಚಿತ್ರಗಳನ್ನು ರಚಿಸುವ ಕಲಾವಿದರು, ಸೂಫಿ ಸಂಗೀತವನ್ನು ಹಾಡುವ ಫಕೀರರು ಮತ್ತು ವಿವಿಧ ಬುಡಕಟ್ಟು ಜನಾಂಗಗಳಲ್ಲಿ ಈ ಜನಪದ ಹಬ್ಬಗಳನ್ನು ಆಯೋಜಿಸಲಾಗುತ್ತದೆ.

ಇದಲ್ಲದೇ ಯುವಜನತೆಯಲ್ಲಿ ಪರಂಪರೆ, ಸಂಸ್ಕೃತಿಯ ವಿವಿಧ ಆಯಾಮಗಳು, ಅಳಿವಿನಂಚಿನಲ್ಲಿರುವ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಲು ನಗರ ಜನಪದ ಹಬ್ಬಗಳನ್ನೂ ಸಹ ಆಯೋಜಿಸಲಾಗುತ್ತಿದೆ. ಈ ಮೂಲಕ ನಗರ ಮತ್ತು ಗ್ರಾಮೀಣ ಭಾಗದ ಕಲಾವಿದರ ಮಧ್ಯೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಕೋಲ್ಕತ್ತಾ, ಗೋವಾ, ದೆಹಲಿ ಮತ್ತು ಬಿಹಾರದಲ್ಲಿ 2011ರಿಂದ ಸೂಫಿ ಸೂತ್ರ ಎಂಬ ಎಎಫ್‌ಎಲ್‌ನ ವಾರ್ಷಿಕ ಹಬ್ಬವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಈ ಮೂಲಕ ಸೂಫಿ ಸಂಗೀತ ಮತ್ತು ಸಾಂಪ್ರದಾಯಿಕ ಸಂಗೀತವನ್ನು ಪ್ರಪಂಚಕ್ಕೆ ಹರಡುವ ಯತ್ನ ಮಾಡಲಾಗುತ್ತಿದೆ. ಈ ಹಬ್ಬದಲ್ಲಿ ಬಂಗಾಳದ ಜನಪದ ಕಲಾವಿದರು ಅಂತರಾಷ್ಟ್ರೀಯ ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಈಗಾಗಲೇ ಈ ಹಬ್ಬದಲ್ಲಿ 27 ದೇಶಗಳು ಭಾಗಿಯಾಗಿ ನಿಜವಾದ ಪ್ರಪಂಚ ಸಂಗೀತ ಕಚೇರಿ ನಡೆಸಿದ ಅನುಭವ ನೀಡಿದೆ.

ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿರುವ ಎಎಫ್‌ಎಲ್ ಜನಪದ ಕಲಾವಿದರ ಬದುಕಿನಲ್ಲಿ ಅದ್ಭುತವಾದ ಪರಿಣಾಮವನ್ನುಂಟುಮಾಡಿದೆ. ಈ ಕಲಾವಿದರು ಈಗ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಲಾವಿದರ ತಿಂಗಳ ಸರಾಸರಿ ಆದಾಯ 8 ಯುಎಸ್ ಡಾಲರ್‌ನಿಂದ ಈಗ 60 ಡಾಲರ್‌ಗಳಿಗೆ ಏರಿಕೆಯಾಗಿದೆ. ಶೇ.40ರಷ್ಟು ಜನರು ಪ್ರಾಥಮಿಕ ಜೀವನೋಪಾಯ, ಶೇ.40ರಷ್ಟು ಜನ ಇದೀಗ ಪ್ರಮುಖ ಎರಡನೇ ಜೀವನೋಪಾಯವಾಗಿದೆ. ಶೇ.10ರಷ್ಟು ಜನ 250 ಯುಎಸ್ ಡಾಲರ್ ಸಂಪಾದನೆ ಮಾಡುತ್ತಿದ್ದಾರೆ. ಕಲಾವಿದರ ಹಳ್ಳಿಗಳಲ್ಲಿ ಕನಿಷ್ಟ ಶೇ.10ರಷ್ಟು ನೈರ್ಮಲ್ಯವಿದೆ. ಬಹಳಷ್ಟು ಕಲಾವಿದರ ಹಳ್ಳಿಗಳಲ್ಲಿ ಶೇ.80ರಷ್ಟು ಸ್ವಚ್ಛತೆ ಇದೆ. ಅನೇಕ ಅನಕ್ಷರಸ್ಥ ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ವಲಸೆ ಹೋಗುವವರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ಜನಪದ ಕಲಾವಿದರ ವಯಸ್ಸು ಸರಾಸರಿ 41ರಿಂದ 28 ವರ್ಷಕ್ಕಿಳಿದಿದೆ. ಯುವಜನತೆ ಮತ್ತು ಮಹಿಳೆಯರು ಎಎಫ್‌ಎಲ್‌ನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಅಮಿತವ್ ಸದ್ಯಕ್ಕೆ ಬಂಗಾಳದ 10 ಹಳ್ಳಿಗಳ ಕುಶಲಕರ್ಮಿಗಳು ಮತ್ತು ಕ್ರಾಫ್ಟ್ ಮಾಡುವವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಲಾವಿದರಿಗೆ ತಮ್ಮದೇ ಆದ ವಿಭಿನ್ನ ಕ್ರಾಫ್ಟಿಂಗ್‌ ಗಳ ಬಗ್ಗೆ ಅರಿವಿದೆ. ಟೆರ್ರಾಕೋಟ, ಡೋಕ್ರಾ, ಕಾಂತಾ ಎಂಬ್ರಾಯ್ಡರಿ, ಮರದ ಗೊಂಬೆ ಮತ್ತು ಮುಖವಾಡ, ಮಧುರ್ ಕಥಿ, ಸಿತಾಳ್ ಪಾತಿ, ಪಟಚಿತ್ರ, ಚಾವ್ ಮುಖವಾಡ ಮತ್ತು ಮಣ್ಣಿನ ಗೊಂಬೆಗಳನ್ನು ಈ ಕಲಾವಿದರು ಮಾಡುತ್ತಾರೆ. ಪಶ್ಚಿಮಬಂಗಾಳ ಶ್ರೀಮಂತ ಪರಂಪರೆ ಮತ್ತು ಕಲೆಯನ್ನು ಹೊಂದಿದೆ. ಎಎಫ್‌ಎಲ್‌ ಮೂಲಕ 5,50,000 ಜನರು ಕಲೆಯ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿನ ಕಲಾವಿದರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಲೆಯ ಸೃಷ್ಟಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ಉದ್ಯೋಗಾವಕಾಶ, ಉದ್ಯಮ, ಪರಿಣಿತಿ ಮತ್ತು ಬೆಳವಣಿಗೆಗಳು ವ್ಯಾಪಕವಾಗಿ ಬೆಳೆದಿದೆ. ಕುಶಲಕರ್ಮಿಗಳು ಮೌಲ್ಯದ ಸರಣಿಯಲ್ಲಿ ಕೆಳಗಿನ ಹಂತದಲ್ಲಿದ್ದಾರೆ ಮತ್ತು ಇವರಿಗೆ ಬರುವ ಆದಾಯವೂ ತೀರಾ ಕಡಿಮೆ ಇದೆ. ಕುಶಲಕಲೆಗಳು ಸಮುದಾಯಗಳ ಸಾಂಪ್ರದಾಯಿಕ ಕುಶಲಕಲೆಗಳಾಗಿವೆ.

ಉದ್ಯಮಗಳು ಈಗಿನ ಪೀಳಿಗೆಗೆ ಸಂಪನ್ಮೂಲಗಳು ಮತ್ತು ಹಣದ ಲಾಭವನ್ನು ತಂದುಕೊಡುತ್ತಿದೆ. ಜನರು ಕಲಾವಿದರನ್ನು ಗುರುತಿಸುತ್ತಿರುವುದರಿಂದ ಅವರಿಗೆ ಹೆಮ್ಮೆ ಉಂಟಾಗುತ್ತಿದೆ. ಅಭಿವೃದ್ಧಿಯಲ್ಲಿ ಭಾಗಿಯಾಗುವ ಅವಕಾಶ ಮತ್ತು ಆಕಾಂಕ್ಷೆಯನ್ನುಂಟು ಮಾಡುತ್ತಿದೆ. ಇದನ್ನೆಲ್ಲಾ ಗಮನಿಸಿ ಆರ್ಟ್‌ ಫಾರ್ ಲೈಫ್ ಎಂಬ ಹೊಸ, ವಿಭಿನ್ನ ಮಾದರಿಯನ್ನು ಪರಿಚಯಿಸುತ್ತಿದೆ ಎಎಫ್‌ಎಲ್. ಈ ಮೂಲಕ 10 ಗ್ರಾಮೀಣ ಕ್ರಾಫ್ಟ್ ಹಬ್ ಅನ್ನು ಎಂಎಸ್ಎಸ್ಇಟಿ( ಡಿಪಾರ್ಟ್‌ಮೆಂಟ್ ಆಫ್ ಮೈಕ್ರೋ ಎಂಡ್ ಸ್ಮಾಲ್ ಸ್ಕೇಲ್ ಎಂಟರ್ಪ್ರೈಸ್ ಮತ್ತು ಟೆಕ್ಸ್ ಟೈಲ್ಸ್), ಪಶ್ಚಿಮ ಬಂಗಾಳ ಸರ್ಕಾರ ಮತ್ತು ಯುನೆಸ್ಕೋ ಸಹಭಾಗಿತ್ವದೊಂದಿಗೆ ನಿರ್ಮಿಸುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ ಅಮಿತವ್.

ಇನ್ನೊಂದು ಹೊಸ ಯೋಜನೆಯನ್ನೂ ಆರಂಭಿಸಿರುವ ಎಎಫ್ಎಲ್‌, ಯೋಜನೆಗೆ ಕ್ಯಾಮ್ ಎರಾ:ನಮ್ಮ ನಗರ, ನಮ್ಮ ದೃಷ್ಟಿ ಎಂಬ ಹೆಸರಿಟ್ಟಿದೆ. ಕೋಲ್ಕತ್ತಾ, ಗೋವಾ ಮತ್ತು ಭುವನೇಶ್ವರದ ಯುವ ಜನತೆಗೆ ಪರಂಪರೆಯ ಕುರಿತು ಫೋಟೋಗ್ರಫಿ ಮೂಲಕ ತಿಳಿಸುವ ಕಾರ್ಯ ಮಾಡುತ್ತಿದೆ. ಈ ಯುವಜನತೆಯ ಫೋಟೋಗಳು ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿತಗೊಳ್ಳುತ್ತವೆ. ಈ ಮೂಲಕ ಫೋಟೋಗಳನ್ನು ಸಾವಿರಾರು ಜನ ನೋಡಲು, ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಅನುಭವಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಅಮಿತವ್ ಅವರ ಪತ್ನಿ ಹಾಗೂ ಬಂಗ್ಲಾನಾಟಕ್ ಡಾಟ್ ಕಾಮ್‌ನ ಸಹ ನಿರ್ದೇಶಕಿ ಅನನ್ಯಾ ಭಟ್ಟಾಚಾರ್ಯ.

ಅಮಿತವ್ ಅವರು ಸ್ವತಃ ಜನಪದ ಸಂಗೀತದ ಅಭಿಮಾನಿಯಾಗಿದ್ದಾರೆ. ಜನಪದ ಕಲಾವಿದರೊಂದಿಗೆ ಸೇರಿ ಅವರೂ ಸಹ ಹಾಡುತ್ತಾರೆ. ಅಮಿತವ್ ಯುರೋಪ್ ಮತ್ತು ಏಷಿಯಾದಲ್ಲಿ ಅನೇಕ ಸೆಮಿನಾರ್‌ಗಳಲ್ಲಿ ಭಾಗಿಯಾಗಿದ್ದಾರೆ. ಸೆಮಿನಾರ್‌ಗಳಲ್ಲಿ ಎಎಫ್‌ಎಲ್‌ನ ಮಾದರಿಯನ್ನು ಸಮರ್ಥಿಸಿಕೊಳ್ಳುತ್ತಾ ಮಾತನಾಡಿದ್ದಾರೆ ಮತ್ತು ಜನರ ಮೆಚ್ಚುಗೆ ಗಳಿಸಲು, ಯೋಜನೆಯನ್ನು ಜನರು ಸಮರ್ಥಿಸುವಂತೆ ಮಾಡಲು ಯಶಸ್ವಿಯಾಗಿದ್ದಾರೆ. ಭಾರತಾದ್ಯಂತ ಹರಡಿರುವ ಅನೇಕ ಜನಪದ ಕಲೆಗಳಿಗೆ ಮರು ಜೀವ ನೀಡಲು ಅಮಿತವ್ ಉತ್ಸುಕರಾಗಿದ್ದಾರೆ.

Related Stories

Stories by YourStory Kannada