15ನೇ ವಯಸ್ಸಿನಲ್ಲಿ ಪಿಎಚ್ಡಿ ಪ್ರವೇಶ ಪಡೆದ ಕೂಲಿಕಾರನ ಮಗಳು

ಟೀಮ್​ ವೈ.ಎಸ್​. ಕನ್ನಡ

1


7 ವರ್ಷದಲ್ಲಿ ಪ್ರೌಢಶಿಕ್ಷಣ, 10 ವರ್ಷ ವಯಸ್ಸಿನಲ್ಲಿ ಕಾಲೇಜು, 13 ವರ್ಷದಲ್ಲಿ ಜೀವ ವಿಜ್ಞಾನದಲ್ಲಿ ಪದವಿ. 15ನೇ ವರ್ಷದಲ್ಲೇ ಪರಿಸರ ಸೂಕ್ಷ್ಮ ಜೀವವಿಜ್ಞಾನದಲ್ಲಿ ಸ್ನಾತಕೋತರ ಪದವಿ. ಹೌದು ಇಂತಹ ಒಂದು ಸಾಹಸವನ್ನು ಲಖನೌನ ಸುಷ್ಮಾ ವರ್ಮಾ ಯಶಸ್ವಿಯಾಗಿ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪ್ರವೇಶ ಪರೀಕ್ಷೆಯಲ್ಲೂ ಪಾಸಾಗಿದ್ದಾರೆ. 7 ಫೆಬ್ರವರಿ 2000 ನೇ ಇಸವಿಯಲ್ಲಿ ಜನಿಸಿರುವ ಈಕೆ ಇಂತಹದೊಂದು ಸಾಧನೆಯ ಶಿಖರ ಏರುತ್ತಿದ್ದಾರೆ.

ಒಂದು ಸಣ್ಣ ಪರಿವಾರದಿಂದ ಬಂದವರು ಸುಷ್ಮಾ. ಇವರ ತಂದೆ-ತಾಯಿಗೆ ಮೂರು ಮಕ್ಕಳಲ್ಲಿ ಒಬ್ಬರು. ಇವರು ಸಣ್ಣವರಿದ್ದಾಗ ಇವರ ತಂದೆ ಕೂಲಿ ಕೆಲಸ ಮಾಡುತ್ತಿದ್ರು. ಕುಟುಂಬ ಪರಿಸ್ಥಿತಿ ತುಂಬಾ ಚೆನ್ನಾಗಿರಲಿಲ್ಲ. ಹಾಗಾಗಿ ಸುಷ್ಮಾ ಐದು ವಯಸ್ಸಿನವರಾಗಿದ್ರು ಶಾಲೆ ಭಾಗ್ಯ ಅವರಿಗೆ ಸಿಗಲಿಲ್ಲ. ಫೋನ್​ನಲ್ಲಿ ಸುಷ್ಮಾ ಯುವರ್​ಸ್ಟೋರಿ ತಂಡಕ್ಕೆ ತಮ್ಮ ಯಶೋಗಾಥೆಯನ್ನು ಹೇಳಿದ್ದಾರೆ. "ತಂದೆ ಕೂಲಿ ಮಾಡುತ್ತಿದ್ರು. ಕಾರಣ ಮೊದಲ ಐದು ವರ್ಷ ಶಾಲೆಗೆ ಹೋಗಲು ಆಗಲಿಲ್ಲ. ಹಾಗಾಗಿ ಯುಪಿ ಬೋರ್ಡ್​ನಿಂದ ಅನುಮತಿ ಪಡೆದು ಸೆಂಟ್ ಮೀರಾ ಇಂಟರ್ ಕಾಲೇಜ್​ನಲ್ಲಿ ನೇರವಾಗಿ 9ನೇ ತರಗತಿಗೆ ದಾಖಲಾತಿ ಸಿಕ್ತು" ಎನ್ನುತ್ತಾರೆ.

ಸುಷ್ಮಾ ಅವರ ಕುಟುಂಬದಲ್ಲಿ ಕೇವಲ ಈಕೆ ಮಾತ್ರ ಇಂತಹ ಸಾಧನೆ ಮಾಡಿಲ್ಲ. ಅವರ ಅಣ್ಣ ಕೂಡ ಶೈಕ್ಷಣಿಕವಾಗಿ ಒಂದು ದಾಖಲೆ ಮಾಡಿದ್ದಾರೆ. 9ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸಾದ ಅಣ್ಣ, ಕೇವಲ 14ನೇ ವಯಸ್ಸಿನಲ್ಲಿ ಬಿಸಿಎ ಪದವಿ ಪಡೆದ್ರು. "ನನ್ನ ದೊಡ್ಡಣ್ಣ ಶೈಲೇಂದ್ರ ನನಗೆ ಪ್ರೇರಣೆ. ನನ್ನ ಮಾರ್ಗದರ್ಶಕ, ಶಿಕ್ಷಕ ಎಲ್ಲವೂ ಅವರೇ. ನಾನು ನನ್ನ ಅಣ್ಣನ ಪುಸ್ತಕಗಳನ್ನೇ ಓದುತ್ತಿದ್ದೆ. ನನಗೆ ನಮ್ಮಣ್ಣ ಓದಿನಲ್ಲಿ ಎಲ್ಲ ರೀತಿಯಿಂದಲೂ ಸಹಾಯ ಮಾಡಿದ. ನನಗೆ ಆಗ ನಾನೇನು ಮಾಡುತ್ತಿದ್ದೇನೆ ಎಂಬುದು ತಿಳಿದಿರಲಿಲ್ಲ. ಆದರೇ ಓದುವುದು ನನಗೆ ಖುಷಿ ಕೊಡುತ್ತಿತ್ತು. ನಾನು ಆ ಕ್ಷಣವನ್ನು ಆನಂದಿಸುತ್ತಿದ್ದೆ". ಸದ್ಯ ಶೈಲೇಂದ್ರ ಬೆಂಗಳೂರಿನಲ್ಲಿ ತಾಂತ್ರಿಕ ಸಲಹೆಗಾರನ್ನಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ತಮ್ಮದೆಯಾದ ಹೊಸ ಉದ್ಯಮ ಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ.

2007ರಲ್ಲಿ ಸುಷ್ಮಾ ಒಂದು ಮಹಾನ್ ಸಾಧನೆ ಮಾಡಿದ್ರು. ಕೇವಲ 7 ವರ್ಷ 3 ತಿಂಗಳು, 28 ದಿವಸದವಳಾಗಿದ್ದಾಗಲೇ 10ನೇ ತರಗತಿಯಲ್ಲಿ ಪಾಸಾದ್ರು. ಇದರಿಂದಾಗಿ ಅವರ ಹೆಸರು `ಲಿಮ್ಕಾ ಬುಕ್ ಆಫ್​ ರೆಕಾರ್ಡ್'ನಲ್ಲಿ ಸೇರಿಕೊಂಡಿದೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ 10ನೇ ತರಗತಿ ಪಾಸಾದ ವಿದ್ಯಾರ್ಥಿ ಅವರು. ಈ ಸಾಧನೆ ಅವರ ಮನೆಯವರಿಗೂ ತುಂಬಾ ಖುಷಿ ನೀಡಿದೆ. "7ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸಾದ ಕಾರಣ ಒಂದು ಡಾಕ್ಯೂಮೆಂಟರಿಯಲ್ಲಿ ಮಾಡುವ ಅವಕಾಶ ಸಿಕ್ತು. ಜೊತೆಗೆ ಐಕ್ಯೂ ಟೆಸ್ಟ್​ಗಾಗಿ ಜಪಾನ್​ಗೆ ಹೋಗುವ ಅವಕಾಶ ಸಿಕ್ತು. ಹಾಗಾಗಿ ಮೂರು ವರ್ಷಗಳ ಕಾಲ ನಾನು ಶಿಕ್ಷಣದಿಂದ ದೂರವಿರಬೇಕಾಗಿ ಬಂತು. ಆನಂತರ 10ನೇ ವರ್ಷದಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲೂ ಸಫಲಳಾದೆ. -ಸುಷ್ಮಾ

ಬಾಲ್ಯದಿಂದಲೂ ಡಾಕ್ಟರ್ ಆಗುವುದು ಸುಷ್ಮಿತಾರ ಕನಸಾಗಿತ್ತು. ಹಾಗಾಗಿ ಅವರು ಮೆಡಿಕಲ್ ಸೇರಿಸಿಕೊಳ್ಳಲು ಪ್ರಯತ್ನಿಸಿದ್ರು. ಯುಪಿ ಸಪ್ಲಿಮೆಂಟರಿಯಲ್ಲಿ ಪರೀಕ್ಷೆ ಕೊಟ್ರು. ಆದರೆ ಅವರಿಗೆ ಕಡಿಮೆ ವಯಸ್ಸಾಗಿರುವ ಕಾರಣ ಅವರ ಫಲಿತಾಂಶವನ್ನು ತಡೆಹಿಡಿಯಲಾಯ್ತು. "ಪರಿಸ್ಥಿತಿಯಿಂದ ಕಂಗೆಡದೆ ಸುಷ್ಮಾ ಬಿಎಸ್ಸಿ ಮಾಡಿದ್ರು. 13 ವರ್ಷದಲ್ಲೇ ಪದವಿ ಪಡೆದುಕೊಂಡ್ರು. ಬಿಎಸ್ಸಿ ಆದ ಕೂಡಲೇ ಎನ್ವರ್​ಮೆಂಟಲ್​ ಬಯಾಲಾಜಿಯಲ್ಲಿ ಸ್ನಾತಕೋತರ ಪದವಿ ಮುಗಿಸಿದೆ. 15 ವಯಸ್ಸಿನಲ್ಲೇ ಎಂಎಸ್ಸಿ ಪದವಿ ಪಡೆಯುವಲ್ಲಿ ಸಫಲಳಾದೆ".

ಸ್ನಾತಕೋತರ ಫಧವಿ ವ್ಯಾಸಾಂಗದ ವೇಳೆ ಸುಷ್ಮಾ ಮನೆಯ ಪರಿಸ್ಥಿತಿ ಅಷ್ಟೇನು ಹೇಳಿಕೊಳ್ಳುವಂತಿರಲಿಲ್ಲ. ಅವರ ತಂದೆಗೆ ಸುಷ್ಮಾ ಓದಿನ ಖರ್ಚು ಭರಿಸವಷ್ಟು ಶಕ್ತಿಯಿರಲಿಲ್ಲ. ಅವರ ತಂದೆ ತೇಜ್ ಬಹದ್ದೂರ್ ಅವರ ಆರ್ಥಿಕ ಸ್ಥಿತಿ ಹೇಳಿಕೊಳ್ಳುವಂತಿರಲಿಲ್ಲ. ಆ ಸಮಯದಲ್ಲಿ `ಸುಲಭ ಇಂಟರ್​ನ್ಯಾಷ್​ನಲ್​' ಸಂಸ್ಥಾಪಕ ಬಿಂದೇಶ್ವರ್ ಪಾಠಕ್, ಅವರ ಪಾಲಿಗೆ ದೇವರಾಗಿ ಬಂದ್ರು. "ನಾನು ಇವತ್ತು ಏನ್ ಇದ್ದೀನೋ, ಏನ್ ಮಾಡುತ್ತಿದ್ದೇನೋ ಅದಕ್ಕೆ ಬಿಂದೇಶ್ವರ್ ಅವರೇ ಕಾರಣ. ಅವರೇ ನನ್ನ ತಂದೆಗೆ ಬಿಬಿಯೂನಲ್ಲಿ ಒಂದು ಸಣ್ಣ ಕೆಲಸ ಕೊಡಿಸಿದ್ರು. ಅದರ ಜೊತೆಗೆ ಸ್ವಲ್ಪ ಆರ್ಥಿಕ ಸಹಾಯ ಕೂಡ ಮಾಡಿದ್ರು. ಜೊತೆಗೆ ಮೊಬೈಲ್, ಕಂಪ್ಯೂಟರ್ ಮತ್ತು ಒಂದು ಕ್ಯಾಮರವನ್ನು ಕೊಡಿಸಿದ್ರು. ಇದರ ನಂತರವೇ ಸುಷ್ಮ ಎಂಎಸ್ಸಿಯಲ್ಲಿ ಪಾಸಾದ್ರು. ಪಿಎಚ್​ಡಿ ದಾಖಲಾತಿ ಪರೀಕ್ಷೆ ಕೂಡ ನೀಡಿದ್ರು".

ಇದೇ ವರ್ಷ ಲಕನೌನ ಬಿಬಿಯೂನಿಂದ ಪಿಎಚ್​ಡಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಿರುವ ಅವರು, ಈ ರೀತಿ ಪಾಸಾದ ಭಾರತದ ಅತ್ಯಂತ ಕಿರಿಯ ವಯಸ್ಸಿನವರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸದ್ಯ ಸುಷ್ಮ ತಮಗಿಂತ ಅದೆಷ್ಟೋ ಹೆಚ್ಚು ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ವ್ಯಾಸಾಂಗ ಮಾಡುತ್ತಿದ್ದಾರೆ. ಅವರಿಂದ ಒಂದು ಸಕರಾತ್ಮಕ ಮಾರ್ಗದರ್ಶನ ಸಿಗುತ್ತಿದೆ ಎಂತಾರೆ. "ನಾನು ಮೊದಲಿನಿಂದಲೂ ನನಗಿಂತ ಅತಿದೊಡ್ಡವರ ಜೊತೆಗೆ ಓದುತ್ತಾ ಬಂದಿದ್ದೇನೆ. ಅವರು ನನಗಿಂತ ದೊಡ್ಡವರಾದ್ರು ನಾನು ಅವರ ಜೊತೆ ಬೆರೆಯುತ್ತೇನೆ. ನನಗೆ ಇದೆಲ್ಲ ಸಾಮಾನ್ಯ ಸಂಗತಿಯಾಗಿದೆ. ನಾನು ಅವರಿಂದ ನನಗೆ ಬೇಕಾದ ಮಾರ್ಗದರ್ಶನ ಪಡೆಯುತ್ತೇನೆ. ನನ್ನ ಸಹಪಾಠಿಗಳು ಕೂಡ ನನಗೆ ಸಹಾಯ ಮಾಡುವಲ್ಲಿ ಸದಾ ಮುಂದೆ ಬರುತ್ತಾರೆ". ಪಿಎಚ್​​​ಡಿ ಪೂರ್ತಿ ಮಾಡಿದ ಬಳಿಕ, ಮತ್ತೊಂದು ಸಲ ಮೆಡಿಕಲ್ ಪ್ರವೇಶ ಪರೀಕ್ಷೆ ಬರೆದು, ತಮ್ಮ ಡಾಕ್ಟರ್ ಆಗುವ ಕನಸನ್ನು ಪೂರ್ಣಗೊಳಿಸಿಕೊಳ್ಳುವ ತವಕದಲ್ಲಿದ್ದಾರೆ. ಅಲ್ಲಿಯವರೆಗೆ ಅವರ ವಯಸ್ಸು 17 ವರ್ಷವಾಗಿರುತ್ತೆ.

ಸುಷ್ಮಾ ಅವರ ಸಂಪೂರ್ಣ ಪರಿವಾರ ಅವರ ಈ ಸಾಧನೆಯಿಂದ ತುಂಬಾ ಖುಷಿಯಾಗಿದೆ. ಅವರ ತಂದೆಗೆ ತಮ್ಮ ಮಗಳ ಮೇಲೆ ಪೂರ್ಣ ಭರವಸೆಯಿದೆ. ಒಂದು ದಿನ ತಮ್ಮ ಮಗಳು ಡಾಕ್ಟರ್ ಆಗುತ್ತಾಳೆ ಎಂಬ ವಿಶ್ವಾಸ ಅವರಿಗಿದೆ. ಇಷ್ಟೇ ಅಲ್ಲ ಅವರ ಸಾಧನೆಯನ್ನು ಮೆಚ್ಚಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಐದು ಲಕ್ಷ ಆರ್ಥಿಕ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.


ಸಂಪರ್ಕಿಸಿ: sushma936@gmail.com


ಲೇಖಕರು: ನಿಶಾಂತ್ ಗೋಯೆಲ್

ಅನುವಾದಕರು: ಎನ್.ಎಸ್.ರವಿ

Related Stories

Stories by YourStory Kannada