ಇಲ್ಲೊಬ್ಬ ಇಂಜಿನಿಯರ್ ಕೇವಲ ಕಾಗದದಿಂದಲೇ ಪ್ರಪಂಚದಲ್ಲಿನ ಎಲ್ಲಾ ಮಷೀನುಗಳನ್ನು ಮಾಡಬಲ್ಲರು....!

ಟೀಮ್ ವೈ ಎಸ್

ಇಲ್ಲೊಬ್ಬ ಇಂಜಿನಿಯರ್ ಕೇವಲ ಕಾಗದದಿಂದಲೇ ಪ್ರಪಂಚದಲ್ಲಿನ ಎಲ್ಲಾ ಮಷೀನುಗಳನ್ನು ಮಾಡಬಲ್ಲರು....!

Tuesday December 22, 2015,

3 min Read

ಇವರ ಎಲ್ಲಾ ಕೆಲಸಗಳೂ ಗೌರವಿಸಲ್ಪಡುವಂತಹ ಚಟುವಟಿಕೆಗಳಾಗಿವೆ. ಅವರ ಮನೆಯ ಶಯನ ಗೃಹವನ್ನು ಒಂದು ಗೋದಾಮು ಎಂದು ಕರೆಯಬಹುದು. ಅಲ್ಲಿ, ಎತ್ತ ನೋಡಿದರೂ ಕಾಣಿಸುವುದು ನಾವ್ಯಾರೂ ಊಹಿಸಲಸಾಧ್ಯವಾದ ಗೋಂದು ಮತ್ತು ಕಾಗದಗಳಿಂದ ತಯಾರಿಸಲ್ಪಟ್ಟ ಪ್ರತಿಕೃತಿಗಳು.

ಹೌದು ಇದು ನೀವು ನಂಬಲೇಬೇಕಾದ ಸತ್ಯ

ಬಹುಷಃ ಇದು ಯಂತ್ರವಿದ್ಯೆಯ ಮೇಲಿನ ನಿಜವಾದ ದಕ್ಷತೆ, ಅಭಿಲಾಷೆ, ಮತ್ತು ಪ್ರೀತಿಯ ಸಮ್ಮಿಲನವೇ ಅವರ ಈ ಕೃತಿಗಳಲ್ಲಿದೆ ಎಂದು ಹೇಳಬಹುದು. ನೀವು ಒಮ್ಮೆ ಆ ಸುಮಧುರ, ಸುಂದರ ಕೃತಿಗಳನ್ನು ನೋಡಿದ್ದೇ ಆದರೆ ಅದರಲ್ಲಿ ಪರವಶವಾಗದೇ ಇರಲಾರಿರಿ ಎಂದು ಹೇಳಬಹುದು.

ಆತ್ಮಜೀತ್‍ರವರು 2004ರಲ್ಲಿ ತಮ್ಮ ವಸ್ತ್ರ ರಸಾಯನಶಾಸ್ತ್ರ ವಿಭಾಗ ಬಿ.ಟೆಕ್. ಪದವಿ ಮಾಡುತ್ತಿದ್ದಾಗ, ಒಂದು ವಿಷಯವು ಅವರ ಮನಸ್ಸಿನ ಒಳ ಹೊಕ್ಕಿತ್ತು. ಅವರು ರೇಖಾಗಣಿತದ ಕಲೆ ಮತ್ತು ಯಂತ್ರವಿದ್ಯಾ ಚಿತ್ರದ ಕಲೆಯನ್ನು (ಈ ವಿದ್ಯೆಗಳನ್ನು ತಮ್ಮ ಸಹಚರರಿಗೆ ಹೇಳಿಕೊಡುತ್ತಿದ್ದುದೂ ಉಂಟು) ಉಪಯೋಗಿಸಿಕೊಂಡು ಕಾಗದ ಬಳಕೆಯಿಂದ ವಿಮಾನವನ್ನು ತಯಾರಿಸಲು ಅನುವಾದರು. ಒಂದು ತಿಂಗಳ ಪರಿಶ್ರಮದ ನಂತರ ಎಂಟು ಪದರುಗಳುಳ್ಳ ಅಲ್ಯೂಮಿನಿಯಂ ಪೈಂಟ್‍ನೊಂದಿಗೆ ಮೊದಲ ಕಾಗದ ಪ್ರತಿಕೃತಿಯನ್ನು ತಯಾರಿಸಿದರು. ಅಲ್ಲಿಂದ ಇಲ್ಲಿಯವರೆವಿಗೂ ತಿರುಗಿ ನೋಡಿದ್ದೇ ಇಲ್ಲ. ಇದುವರೆಗೂ ಸುಮಾರು 27 ವಿವಿಧ ಸಮಗ್ರ ಮಾಹಿತಿಗಳುಳ್ಳ ಮಶೀನುಗಳ ಮಾದರಿಗಳನ್ನು ತಯಾರಿಸಿದ್ದಾರೆ ಆತ್ಮಜಿತ್.

ಸ್ಕೇಲ್-ಪೇಪರ್ ಮಾಡೆಲಿಂಗ್

image


ಇದು ಕೇವಲ ಕಾಗದದಿಂದ ಮಾಡಿದ್ದಾಗಲೀ ಅಥವಾ ಕಾಗದದ ಯಂತ್ರವಾಗಲೀ ಅಲ್ಲ. ಇದನ್ನು ಹಲವಾರು ಕಾಗದಗಳನ್ನು ಕತ್ತರಿಸಿ ಒಂದಕ್ಕೊಂದನ್ನು ಅಂಟಿನಿಂದ ಜೋಡಿಸಿ ಮಾಡಿದಂತಹ ಮಷೀನುಗಳ ಪ್ರತಿಕೃತಿಗಳಾಗಿವೆ.

ಯಮಹಾ ಡ್ರ್ಯಾಗ್‍ಸ್ಟರ್ ಕ್ಲಾಸಿಕ್ 11 ರ ಕಾಗದದ ಮಾದರಿ

image


ಸಾಮಾನ್ಯವಾಗಿ ಇಂತಹ ಮಾದರಿಗಳನ್ನು ತಯಾರಿಸಲು 70-400 ಗಂಟೆಗಳು ಬೇಕಾಗುತ್ತದೆ. ಯಮಹಾ ಡ್ರ್ಯಾಗ್‍ಸ್ಟರ್ ಕ್ಲಾಸಿಕ್ 11 ಬೈಕನ್ನು ತಯಾರಿಸಲು ಸುಮಾರು 4-5 ತಿಂಗಳ ಶ್ರಮವಹಿಸಬೇಕಾಯಿತು. ಇದಕ್ಕೆ ಪ್ರತಿದಿನ 2-3 ಗಂಟೆಗಳ ಕಾಲ ವ್ಯಯಿಸುತ್ತಿದ್ದರು. ಅದೇ ಬೇರೊಂದು ಮಾದರಿಯನ್ನು ತಯಾರಿಸಲು 5 ಗಂಟೆಗಳ ಕಾಲ ಕೆಲಸ ಮಾಡಿ ಕೇವಲ ಎರಡು ವಾರಗಳಲ್ಲಿ ಮುಗಿಸಿದ್ದರು. ಅವರು ಯಾವುದೇ ಕೆಲಸವನ್ನು ಮಾಡಲು ತಮ್ಮ ಅವಧಿಯನ್ನು ಮೀಸಲಿಡುವುದರೊಂದಿಗೆ ಅವಲಂಭಿಸಿರುತ್ತದೆ.

ತನ್ನ ಹವ್ಯಾಸದ ಪ್ರಾರಂಭ

ಆತ್ಮಜಿತ್‍ರವರು ತನ್ನ ಮಾದರಿಗಳನ್ನು ಹಲವಾರು ಸ್ನೇಹಿತರಿಗೆ, ಕುಟುಂಬಸ್ಥರಿಗೆ, ಹಾಗೂ ಸಂಬಂಧಿಕರಿಗೆ ಕಳುಹಿಸಿದಾಗ ಹಲವಾರು ಹೊಗಳಿಕೆಗಳು ಬಂದವು. ಅಮೆರಿಕಾದ ಕೆಲವು ಸ್ನೇಹಿತರು ಇದೇ ರೀತಿ ಮುಂದುವರೆದು ಮತ್ತಷ್ಟನ್ನು ಸಾಧಿಸುವಂತಾಗಿ ಎಂದು ಹಾರೈಸಿದರು. ಆದರೆ ತಮ್ಮ ತಂದೆ ತಾಯಿಗೆ ಭಯ ಶುರುವಾಯಿತು. ಪ್ರಾರಂಭದಲ್ಲಿ ತನ್ನ ಪೋಷಕರಿಗೆ, ಆತ್ಮಜಿತ್ ರೂಮಿನಲ್ಲಿ ಸಾಕಷ್ಟು ಸಮಯವನ್ನು ಕಳೆದು, ಏನು ಮಾಡುತ್ತಿದ್ದಾನೆ ಎಂಬ ಅರಿವು ಇರಲಿಲ್ಲ. ಆದರೆ 2005ರಲ್ಲಿ 40,000 ಕಲಾವಿದರು ಭಾಗವಹಿಸಿದ್ದ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡು 9 ನೇ ಸ್ಥಾನವನ್ನು ಪಡೆದಿದ್ದುದು ಎಲ್ಲರೂ ನಿಬ್ಬೆರಗಾಗು ಮಾಡಿದರು. ಆಗ ಎಲ್ಲರ ಪ್ರಶಂಸೆಗೂ ಒಳಪಟ್ಟರು ಹಾಗೂ ತನ್ನ ಪರಿಶ್ರಮಕ್ಕೆ ಎಲ್ಲರ ಹಸ್ತ ತಮ್ಮತ್ತ ಚಾಚುವಂತಾಯಿತು. ಈಗ ತನ್ನ ಎಲ್ಲಾ ಸ್ನೇಹಿತರೂ ಹಾಗೂ ತನ್ನ ಬೆಂಬಲಿಗರು ಹೆಮ್ಮೆ ಪಡುವಂತಾಗಿದ್ದಾರೆ.

ತಮ್ಮ ಹವ್ಯಾಸವು ಉದ್ದಿಮೆಯಾಗಿ ಬೆಳೆದದ್ದು

image


ಪ್ರಾರಂಭದಲ್ಲಿ ಆತ್ಮಜಿತ್ ಎಲ್ಲೇ ಹೋದರೂ ತಮ್ಮ ಚಟುವಟಿಕೆಗಳ ಬಗ್ಗೆಯೇ ಮಾತು ಶುರುವಾಗುತ್ತಿತ್ತು. ಅವರು ತಮ್ಮ ಜೊತೆಯಲ್ಲಿ ಕೆಲವು ಮಾದರಿಗಳನ್ನು ಕೊಂಡೊಯ್ಯುತ್ತಿದ್ದರು. ಆ ನಂತರದಲ್ಲಿ ಅದನ್ನೇ ಪ್ರದರ್ಶನಕ್ಕೆ ಇಡಲಾಯಿತು. ಹೀಗೆ ಅವರು ತಮ್ಮ ಬಿಡುವಿನ ಸಮಯದಲ್ಲಿ ಮಾದರಿಗಳನ್ನು ತಯಾರಿಸಿಕೊಡುವಲ್ಲಿ ನಿರತರಾದರು ಹಾಗೂ ಅದನ್ನೇ ಉದ್ದಿಮೆಯನ್ನಾಗಿಸಿಕೊಂಡರು.

ತನಗಿರುವ ಸಮಯ ಹಾಗೂ ತನ್ನ ಪರಿಶ್ರಮದಿಂದ ತಾನು ಮಾಡುವ ಉತ್ಪನ್ನಗಳು ಗುಣಮಟ್ಟದ್ದಾಗಿದ್ದು, ಗ್ರಾಹಕರ ಬೇಡಿಕೆಗಳಿಗನುಗುಣವಾಗಿ ಮಾದರಿಗಳ ತಯಾರಿಕೆಗೆ ಮೊದಲ ಪ್ರಾಶಸ್ತ್ಯ ಕೊಡುತ್ತಾರೆ ಆತ್ಮಜಿತ್. ಉದಾಹರಣೆಗೆ ಹೇಳುವುದಾದರೆ ಯಾರಿಗಾದರೂ ಒಂದು ಬೈಕ್‍ನ ಪ್ರತಿಕೃತಿ ತಯಾರಿಸಿಕೊಡಬೇಕಾದಲ್ಲಿ ಅದೇ ಮಾದರಿಯಲ್ಲಿ ನೈಜ ಬೈಕಿನಂತೆ ಕಾಣುವ, ಹಾಗೂ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಕೇವಲ ಪೇಪರ್‍ನಿಂದಲೇ ತಯಾರಿಸುತ್ತಾರೆ. ಅವರು ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಟೊಯೋಟಾ ಕಂಪೆನಿಯು ತನ್ನ ಗ್ರಾಹಕರಿಗೆ ಕಾರ್ ತಯಾರಿಕೆಯ ಪ್ರಾರಂಭೋತ್ಸವಕ್ಕೆ ಬೇಕಾದ ಒಂದು ಕಾರ್‍ನ ಪ್ರತಿಕೃತಿಯನ್ನು ಕೇಳಿದ್ದರು. ಅತಿ ಹಗುರವಾದ ಹಾಗೂ ತುಂಬಾ ಅದ್ಭುತ ಕೌಶಲವುಳ್ಳಂತದ್ದ ಅತ್ಯುತ್ತಮವಾದ ಕಾರನ್ನು ತಯಾರಿಸಿಕೊಟ್ಟಿದ್ದರು ಆತ್ಮಜಿತ್.

ಇವರೊಬ್ಬ ಧ್ಯಾನಾಸಕ್ತ ಏಕೋದ್ಯಮಿ !

image


ತಮ್ಮ ಅಭಿಲಾಷೆಗಳನ್ನು ಬೆನ್ನಟ್ಟಿ ಹೋಗುವ ಕೆಲವೇ ಉದ್ಯಮಿಗಳಲ್ಲಿ ಒಬ್ಬರಾದ ಆತ್ಮಜಿತ್‍ಗೆ ಕೆಲವು ಅಡೆತಡೆಗಳಿದದ್ದು ಉಂಟು. ಅವರಿಗೆ ಪೂರ್ಣ ಸಮಯದ ಕೆಲಸವಿತ್ತು. ವಿರಾಮದ ಸಮಯ ಅತಿ ವಿರಳ ಎನ್ನಬಹುದು. ಗ್ರಾಹಕರ ಬೇಡಿಕೆಗಳಿಗನುಗುಣವಾಗಿ ಮಾದರಿಗಳನ್ನು ತಯಾರು ಮಾಡುವಷ್ಟು ಸಮಯ ಸಿಗುವುದಿಲ್ಲ. ತಮ್ಮ ಆಯ್ಕೆಗನುಸಾರ ಮಾದರಿಗಳನ್ನು ತಯಾರಿಸಿಕೊಡುತ್ತಾರೆ. ಮತ್ತೊಂದು ತಾಂತ್ರಿಕ ತೊಂದರೆಯೆಂದರೆ ತಾವು ತಯಾರು ಮಾಡಿದ ಪ್ರತಿಕೃತಿಗಳು ತುಂಬಾ ಸೂಕ್ಷ್ಮ ಹಾಗೂ ನಾಜೂಕಿನದ್ದಾಗಿರುತ್ತವೆ. ಅದನ್ನು ವರ್ಗಾವಣೆ ಮಾಡಲು ಗಾಜಿನ ಕೇಸನ್ನು ಉಪಯೋಗಿಸಬೇಕಾಗುತ್ತದೆ.

ಗ್ರಾಹಕರು ಇವರ ಎಲ್ಲಾ ಉತ್ಪನ್ನಗಳನ್ನು ನೋಡಲು ಸಾಲುಗಟ್ಟಿ ನಿಲ್ಲುತ್ತಾರೆ. ಅದರ ಸ್ಪರ್ಶವನ್ನು ಆನಂದಿಸುತ್ತಾರೆ. ಅದರ ಹಗುರವಾದ ಮೈಕಟ್ಟನ್ನು ನೋಡಿ ಮುರಿದು ಬೀಳುವುದೇನೋ ಎಂಬಂತೆ ಭಾಸವಾಗುತ್ತದೆ. ಜನ ತಮ್ಮ ವಸ್ತುಗಳಿಗಾಗಿ ಮುಗಿ ಬೀಳುವುದನ್ನು ಆನಂದಿಸುತ್ತಾರೆ ಆತ್ಮಜಿತ್.

ಇವರು ಪ್ರಾರಂಭದಿಂದಲೂ ಒಬ್ಬ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ ಹಾಗೂ ಆಟೋಟಗಳಲ್ಲಿ ಸದಾ ಮುಂದು. ಗಿಟಾರ್ ನುಡಿಸುವದನ್ನೂ ಸಹ ಕಲಿಯುತ್ತಿದ್ದಾರೆ. ಆದರೆ ಮೊದಲಿಗೆ ತಮ್ಮ ಗುರಿ ಪೈಲಟ್ ಆಗುವುದಿತ್ತು. ಈಗಲೂ ಸಹ ಆಕಾಶದಲ್ಲಿ ಯಾವುದೇ ವಿಮಾನ ಹಾರಾಡುವುದನ್ನು ಕಂಡಾಗಲೂ ಟಾಟಾ ಹೇಳುವುದನ್ನು ಮರೆಯುವುದಿಲ್ಲ.

ಈಗಲೂ ಆತ್ಮಜಿತ್ ಪೈಲಟ್ ಆಗುವ ಕನಸು ಕಾಣುವುದನ್ನು ಮರೆತಿಲ್ಲ ಹಾಗೂ ಜಾನ್ ಟ್ರ್ಯಾವೊಲ್ಟಾರಂತೆ ತಮ್ಮದೇ ವಿಮಾನಯಾನ ಕೇಂದ್ರ ಸ್ಥಾಪನೆಯ ಕನಸು ಕಾಣುತ್ತಾರೆ ಆತ್ಮಜಿತ್.

ಲೇಖಕರು - ಅಭಾಷ್ ಕುಮಾರ್

ಅನುವಾದಕರು - ಬಾಲು