ವಿಶೇಷ ಚೇತನರ ವಿಶೇಷ ಮದುವೆ- ದಾಂಪತ್ಯ ಜೀವನಕ್ಕೆ ಕಾಲಿಟ್ಟ 104 ಜೋಡಿಗಳು

ಟೀಮ್​ ವೈ.ಎಸ್​. ಕನ್ನಡ

ವಿಶೇಷ ಚೇತನರ ವಿಶೇಷ ಮದುವೆ- ದಾಂಪತ್ಯ ಜೀವನಕ್ಕೆ ಕಾಲಿಟ್ಟ 104 ಜೋಡಿಗಳು

Friday March 10, 2017,

2 min Read

ಮದುವೆ ಬಗ್ಗೆ ಹಲವು ಕನಸುಗಳಿರುತ್ತವೆ. ದುಡ್ಡಿದ್ದವರು ಅದ್ದೂರಿಯಾಗಿ ಮದುವೆ ಸಂಭ್ರಮ ಆಚರಿಸಿಕೊಳ್ತಾರೆ. ದುಡ್ಡಿಲ್ಲದವರು ದೇವಸ್ಥಾನದಲ್ಲೋ ಅಥವಾ ರಿಜಿಸ್ಟ್ರರ್ ಆಫೀಸ್​ನಲ್ಲೋ ಮನಗೆದ್ದವಳ ಕತ್ತಿಗೆ ತಾಳಿ ಕಟ್ಟುತ್ತಾರೆ. ಆದ್ರೆ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಒಂದು ವಿಶೇಷ ಮದುವೆ ನಡೆದಿದೆ. ಅದು ವಿಶೇಷ ಚೇತನರ ಮದುವೆ. ಅಂದಹಾಗೇ ಅದು ಸಾಮೂಹಿಕ ವಿಶೇಷ ಚೇತನರ ವಿವಾಹವಾಗಿತ್ತು. ಸುಮಾರು 104 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆ ಈಗ ದಾಖಲೆ ಪುಟ ಸೇರಿಕೊಂಡಿದೆ. ವಿಶೇಷ ಚೇತನರ ಈ ಮದುವೆ ಗೋಲ್ಡನ್ ಬುಕ್ ಆಫ್ ವರ್ಲ್ಡ್​ ರೆಕಾರ್ಡ್​ನಲ್ಲಿ ದಾಖಲೆಯಾಗಿ ಸೇರಿಕೊಂಡಿದೆ.

image


ವಿಶೇಷ ಚೇತನರ ಈ ಸಾಮೂಹಿಕ ವಿವಾಹದಲ್ಲಿ ಸುಮಾರು 77 ಹಿಂದೂ ಜೋಡಿಗಳು, 26 ಮುಸ್ಲಿಂ ಜೋಡಿಗಳು ಮತ್ತು 1 ಸಿಖ್ಖ್ ಜೋಡಿ ನವಜೀವನಕ್ಕೆ ಕಾಲಿಟ್ಟಿತ್ತು. ಹೀಗಾಗಿ ಇದು ವಿಶೇಷಗಳ ಮೇಲೆ ವಿಶೇಷ ಮದುವೆ ಆಗಿತ್ತು.

image


“ಜಗತ್ತಿನ ವಿಶೇಷ ಚೇತನರ ಸಾಮೂಹಿಕ ವಿವಾಹ ದಾಖಲೆಯಾಗಿದೆ. ಒಂದೇ ಸ್ಥಳದಲ್ಲಿ, ಒಂದೇ ಛತ್ರದ ಅಡಿಯಲ್ಲಿ ಸುಮಾರು 104 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಗೋಲ್ಡನ್ ಬುಕ್ ಆಫ್ ರೆಕಾರ್ಡ್​ನಲ್ಲಿ ಸೇರಿಕೊಂಡಿದೆ ”
- ಪಬ್ಲಿಕ್ ರಿಲೇಷನ್ ಆಫೀಸರ್, ಭೋಪಾಲ್

ಈ ಮದುವೆಯ ವೇಳೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನ ಆಫೀಶಿಯಲ್​ಗಳು ಕೂಡ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಥಾವರ್ ಚಾಂದ್ ಗೆಹ್ಲೊಟ್ ಮತ್ತು ಭೋಪಾಲ್ ಡಿಸ್ಟ್ರಿಕ್ಟ್ ಕಲೆಕ್ಟರ್ ಸಂಕೇತ್ ಬೊಂಡ್ವೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿಂದ ಸರ್ಟಿಫಿಕೇಟ್ ಕೂಡ ಪಡೆದುಕೊಂಡರು. ಹಲವು ಎನ್​ಜಿಒಗಳು ಮತ್ತು ಜಿಲ್ಲಾಡಳಿತ ಈ ಸಮಾರಂಭವನ್ನು ಏರ್ಪಡಿಸಿದ್ದವು.

image


“ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮತ್ತೊಂದು ದಾಖಲೆ ಕೂಡ ಬರೆಯಲ್ಪಟ್ಟಿದೆ. ನವವಧುಗಳಿಗಾಗಿ ವಿಶ್ವದ ಅತೀ ದೊಡ್ಡ ಗಿಫ್ಟ್ ಪ್ಯಾಕ್ ಅನ್ನು ಉಡುಗೊರೆಯಾಗಿ ನೀಡಲಾಗಿಲದೆ. ಇದು ಕೂಡ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ಸೇರಿಕೊಳ್ಳಲಿದೆ. ”
- ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿ

ಇತ್ತೀಚೆಗೆ ಕೇರಳದ ತಿರುವನಂತರಪುರದಲ್ಲಿ ವಿಶೇಷ ಚೇತನರ ವ್ಹೀಲ್​ಚೇರ್ ರ್ಯಾಂಪ್ ವಾಕ್ ಮಾಡಿಸಲಾಗಿತ್ತು. ಇದು ಕೂಡ ದಾಖಲೆಯ ಪುಟ ಸೇರಿಕೊಂಡಿತ್ತು. ವಿಶೇಷ ಚೇತನರು ಅದೆಷ್ಟೋ ದಾಖಲೆಗಳನ್ನು ಮತ್ತು ಸಾಧನೆಗಳನ್ನು ಮಾಡಿದ್ದರೂ, ಸಮಾಜದಲ್ಲಿ ಅವರಿಗೆ ಸರಿಯಾದ ಸ್ಥಾನ ಸಿಗುತ್ತಿಲ್ಲ. ಜಾತ್ಯಾತೀತ, ಅಭಿವೃದ್ಧಿಶೀಲ ರಾಷ್ಟ್ರ ಅಂತ ಎಲ್ಲರೂ ಹೇಳಿಕೊಳ್ಳುತ್ತಿದ್ದರೂ ವಿಶೇಷ ಚೇತನರನ್ನು ಮಾತ್ರ ಕಡೆಗಣಿಸಲಾಗಿದೆ. ಮನುಷ್ಯತ್ವ ಮರೆತು ಅವರನ್ನು ದೂರ ಇಡಲಾಗಿದೆ. ಆದ್ರೆ ಈಗ ಅವರ ಮದುವೆ ದಾಖಲೆ ಪುಟ ಸೇರಿಕೊಂಡಿದೆ.

ಇದನ್ನು ಓದಿ:

1. ಮಹಿಳಾ ಕ್ರಿಕೆಟ್​​ನಲ್ಲಿ ಹೊಸ ಸಂಚಲನ- ಅಂತರಾಷ್ಟ್ರೀಯ ಮಹಿಳಾ ದಿನದಂದು ಹೊಸ ಲೀಗ್ ಆರಂಭ  

2. 31 ವರ್ಷಗಳ ಬಳಿಕ ತಂದೆ ಸಾವಿಗೆ ಸಿಕ್ತು ನ್ಯಾಯ – ಎಲ್ಲರಿಗೂ ಮಾದರಿ ಐಎಎಸ್ ಅಧಿಕಾರಿಯ ಈ ಹೋರಾಟ 

3. ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಮಧ್ಯಾಹ್ನ ಊಟದ ಯೋಜನೆ ಲಾಭ ಸಿಗಲ್ಲ