ಬಾಳೆಎಲೆಯಲ್ಲಿ ಅರಳಿತು ವಿಭಿನ್ನ ಕಲಾಕೃತಿಗಳು

ಆರಾಧ್ಯ

0

ಬಾಳೆಎಲೆ ಅಂದಾಕ್ಷಣ ನಮಗೆ ನಿಮಗೆ ನೆನಪಾಗೋದು ಹಬ್ಬದ ಊಟ... ಈ ಎಲೆಯಲ್ಲಿ ಊಟ ಮಾಡಿದ್ರೆ, ಕಡಿಮೆ ಊಟ ಮಾಡೋರು ಸಹ ಒಂದೆರಡು ತುತ್ತು ಜಾಸ್ತಿ ಊಟ ಮಾಡ್ತಾರೆ.. ಜೊತೆಗೆ ಹಬ್ಬಗಳಲ್ಲಿ ಪೂಜೆಗೆ ಉಪಯೋಗಿಸ್ತಾರೆ.. ಇಷ್ಟೇ ಬಾಳೆಎಲೆಯ ಉಪಯೋಗ ಅಂತ ಅನೇಕ ಜನ್ರು ತಿಳಿದಿದ್ದಾರೆ.. ಆದ್ರೆ ಇದ್ರ ಉಪಯೋಗ ಬಹಳಷ್ಟೀದೆ.. ಈ ಎಲೆಗಳನ್ನ ಬಳಸಿ ಹಬ್ಬಗಳಲ್ಲಿ ಬಾಗಿಲಿಗೆ ತೋರಣ, ಕಳಸದ ಮಂಟಪ, ತಾಂಬುಲುದ ತಟ್ಟೆ ಹೀಗೆ ಬಹಳಷ್ಟು ವಸ್ತುಗಳನ್ನ ಬಹಳ ಸುಂದರವಾಗಿ ಅಲಂಕಾರಿಸಬಹುದು..

ಬಾಳೆಎಲೆಗಳನ್ನ ಬಳಸಿ ಹೀಗೆ ಭಿನ್ನ ವಿಭಿನ್ನವಾಗಿ ಕಲಾಕೃತಿಗಳನ್ನ ತಯಾರಿಸೋಕ್ಕೆ ಮುಂದಾಗಿದ್ದು ಬೆಂಗಳೂರಿನ ರಜನಿ ಮತ್ತು ಅವರ ಸ್ನೇಹಿತರು .. ಬೆಂಗಳೂರಿನಲ್ಲಿ ವಾಸವಿರುವ ಈಕೆ ಕಲೆಯಲೆ ಬಹಳಷ್ಟು ಆಸಕ್ತಿಯನ್ನ ಹೊಂದಿದ್ದಾರೆ.. ಈ ಆಸಕ್ತಿಯ ಬೇರೆಗೆ ತಮ್ಮ ಸ್ನೇಹಿತರ ಜೊತೆ ಸೇರಿ ಥೈಲ್ಯಾಂಡ್ ನ ಕಲೆಯಾದ ಬಾಳೆಎಲೆ ಕಲಾಕೃತಿಯನ್ನ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಿದ್ರು.. ಈ ನಿಟ್ಟಿನಲ್ಲಿ ಗೃಹಿಣಿಯರು ಬಹಳ ಸುಲಭವಾಗಿ ಮನೆಯಲ್ಲಿ ಹೇಗೆ ಬಾಳೆಎಲೆ ಅಲಂಕೃತ ವಸ್ತುಗಳನ್ನ ತಯಾರಿಸವುದು ಎಂಬುದರ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲು ಪ್ರಾರಂಭ ಮಾಡಿದ್ರು.. ಜೊತೆಗೆ ಅವರಿಗೆ ಉಪಯೋಗವಾಗುವಂತೆ ಆರ್ಟ್ ಕ್ರಂಪ್ಸ್ ಎಂಬಾ ಪುಸ್ತಕವನ್ನ ಬಿಡುಗಡೆ ಮಾಡಿದ್ರು..

ಆ ಪುಸ್ತಕದಲ್ಲಿ ಹೇಗೆ ಬಾಳೆಎಲೆ ಯಿಂದ ಕಲೆಯನ್ನ ಮಾಡೋದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದಾರೆ.. ಬಾಳೆಎಲೆಗಳನ್ನ 2 ಇಂಚಿನಂತೆ ಕಟ್ಟ್ ಮಾಡಿ ತ್ರಿಕೋನ ಆಕಾರದಲ್ಲಿ ಮಡಚಬೇಕು.. ಹೀಗೆ ನಮಗೆ ಬೇಕಾದಷ್ಟು ಎಲೆಗಳನ್ನ ತ್ರಿಕೋನಾಕರದಲ್ಲಿ ಮಡಚಿ ಒಂದಕ್ಕೆ ಒಂದು ಜೋಡಣೆ ಮಾಡಿ ತಾಂಬುಲದ ತಟ್ಟೆ, ಆರತಿ ತಟ್ಟೆ ಹೀಗೆ ನಮಗೆ ಬೇಕಾದ ಆಕೃತಿಗಳಿಗೆ ಜೋಡಣೆ ಮಾಡಿಕೊಳ್ಳಬಹುದು.. ಜೊತೆಗೆ ಇದೇ ರೀತಿಯಲ್ಲಿ ತ್ರಿಕೋನ ಆಕಾರದಲ್ಲಿ ಎಲೆಗಳನ್ನ ಎರಡು ಭಾಗಗಳಲ್ಲಿ ಜೋಡಣೆ ಮಾಡಿ ಬಾಗಿಲಿಗೆ ತೋರಣವನ್ನ ತಯಾರಿಸಬಹುದು.. ಅಷ್ಟೇ ಅಲ್ಲದೇ ಅರಿಸಿಣ ಕುಂಕುಮ ತಟ್ಟೆ, ಆರತಿ ತಟ್ಟೆ, ಕಳಸ, ದೀಪದಕಂಬಾ ಹೀಗೆ ಸಾಕಷ್ಟು ವಸ್ತುಗಳನ್ನ ಅಲಂಕಾರ ಮಾಡಬಹುದು .. ಇವುಗಳನ್ನ ಸಿದ್ಧ ಮಾಡುವಾಗ ನಮಗೆ ಬೇಕಾದ ರೀತಿಯಲ್ಲಿ ಸ್ಟೋನ್, ರೀಬನ್ ಗಳನ್ನ ಬಹಳಸಿ ಅಲಂಕಾರಿಸಿ ಕೊಳ್ಳಬಹುದು..

ಗಣೇಶ ಹಬ್ಬ, ಗೌರಿ ಹಬ್ಬ, ಲಕ್ಷ್ಮೀ ಹಬ್ಬ, ಮದುವೆ, ಹೀಗೆ ಅನೇಕ ಸಮಾರಂಭಗಳು ಮನೆಯಲ್ಲಿ ಇದೆ ಅಂದ್ರೆ ಸಾಕು, ನಮ್ಮ ಸಿಲಿಕಾನ್ ಸಿಟಿ ಮಹಿಳೆಯರು ಅಲಂಕೃತ ವಸ್ತುಗಳ ಶಾಂಪಿಗ್ ನಲ್ಲಿ ಫುಲ್ ಬ್ಯುಸಿ ಯಾಗಿರ್ತಿದ್ರು. ಆದ್ರೆ ಇತ್ತೀಚೆಗೆ ಬಾಳೆಎಲೆ ಕಲೆಯ ಬಗ್ಗೆ ಮಾಹಿತಿ ತಿಳಿದ ಸಾಕಷ್ಟು ಮಹಿಳೆಯರು ಈ ತರಬೇತಿ ಕೇಂದ್ರಕ್ಕೆ ಸೇರಿಕೊಂಡು ಈ ತರಬೇತಿಯನ್ನ ಪಡೆದು, ಸ್ವತಃ ತಾವೇ ತಮ್ಮ ಕೈಯಾರೆ ಬಾಳೆಎಲೆ ಉಪಯೋಗಿಸಿ ವಿಭಿನ್ನವಾಗಿ ಪೂಜಾ ತಟ್ಟೆ, ಮಂಟಪ ಹೀಗೆ ಅನೇಕ ವಸ್ತುಗಳ ತಯಾರು ಮಾಡಿ ಹರ್ಷ ವ್ಯಕ್ತ ಪಡಿಸ್ತಾ ಇದ್ದಾರೆ.. ನೀವು ಕೂಡ ಈ ತರಬೇತಿಯನ್ನು ಪಡೆದು ಹಬ್ಬಗಳಲ್ಲಿ, ಮದುವೆಯಲ್ಲಿ ನಿಮಗೆ ಬೇಕಾದ ಮಾದರಿಯಲ್ಲಿ ಬಾಳೆಎಲೆ ಅಲಕೃಂತ ವಸ್ತುಗಳನ್ನ ಮಾಡಿ ಖುಷಿ ಪಡೆಯಬಹುದು…

ಸಾಮಾನ್ಯವಾಗಿ ಹಬ್ಬಗಳಲ್ಲಿ ಮಾವಿನ ಎಲೆಗಳಲ್ಲಿ ತೋರಣ ಕಟ್ಟುತ್ತಾರೆ .. ಆದ್ರೆ ಬಾಳೆಎಲೆಯಲ್ಲಿ ತೋರಣ ಕಟ್ಟುವುದರಿಂದ ಬಾಗಿಲಿನ ಅಂದ ಹೆಚ್ಚುವುದರ ಜೊತೆಗೆ ನಾವೇ ನಮ್ಮ ಕೈಯಾರಿ ತೋರಣ ತಯಾರಿಸಿದ ತೃಪ್ತಿಯು ಸಿಗುತ್ತದೆ.. ಈ ರೀತಿ ಬಹಳಸುವ ಬಾಳೆಎಲೆಗಳನ್ನ ವಿನಿಗರ್ ಹಾಗೂ ನೀರಿನ ಮಿಶ್ರಣದಲ್ಲಿ ಎದ್ದಿ ತೆಗೆಯಬೇಕು. ಇದರಿಂದ ಈ ಎಲೆಗಳ ಹೆಚ್ಚು ದಿನಗಳಕಾಲ ಬಾಳಿಕೆ ಬರುತ್ತದೆ .. ಅಂತಾರೆ ರಜನಿ

Related Stories