ಮೋದಿಗೂ ಮೋಡಿ ಮಾಡಿದ "ತಾಯಿ"

ಪೂರ್ವಿಕಾ

0

ಜಗತ್ತು, ಜನ ಎಷ್ಟೇ ಬದಲಾದ್ರು ಎಷ್ಟೇ ಮುಂದುವರೆದ್ರು ಕೂಡ ದೇವರು, ಸಂಪ್ರದಾಯ ಇವುಗಳು ಕೆಲವೊಮ್ಮೆ ಮಾಡೋ ಅಚ್ಚರಿಗಳನ್ನ ನಾವು ನಂಬಲೇಬೇಕು. ಆ ಸತ್ಯವನ್ನೂ ಸ್ವೀಕರಿಸಲೇಬೇಕು. ದೈವಗಳು ನಡೆಸೋ ಚಮತ್ಕಾರವನ್ನ ಪ್ರಧಾನಮಂತ್ರಿಗಳು ನಂಬುತ್ತಾರೆ, ಅದನ್ನ ಪಾಲಿಸುತ್ತಾರೆ. ಹೈಟೆಕ್​​​​ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಪಟೂರು ಬಳಿಯಲ್ಲಿರೋ ಧಸರಿಘಟ್ಟ ದೇವಾಲಯಕ್ಕೂಸಂಬಂಧವಿದೆ. ನರೇಂದ್ರ ಮೋದಿ ದೇಶದ ಪ್ರಧಾನಿ ಆಗೋದಿಕ್ಕೆ ಇಲ್ಲಿ ನೆಲೆಸಿರೋ ಚೌಡೇಶ್ವರಿಯೇ ಕಾರಣ..! ಇದನ್ನು ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಅದು ನಿಮ್ಮ ನಂಬಿಕೆಗೆ ಬಿಟ್ಟಿದ್ದು..!

ಇಂತಹ ವಿಚಾರಗಳನ್ನ ಕೇಳಿದಾಗ ಅಚ್ಚರಿಯಾಗುತ್ತೆ ನಿಜ. ಆದ್ರೆಇದು ಸತ್ಯ. ಧಸರಿಘಟ್ಟ ಈಗ ದೇಶದಲ್ಲೆಡೆ ಪ್ರಖ್ಯಾತಿ ಪಡೆಯುತ್ತಿರುವ ಸ್ಥಳವಾಗುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ದೇಶದ ಪ್ರಧಾನ ಮಂತ್ರಿಯವರು ಕೂಡ ಆರಾಧಿಸೊ ದೇವರು. 2006ರಲ್ಲಿ ಮೋದಿಯವರು ಬೆಂಗಳೂರಿಗೆ ಬೇಟಿ ನೀಡಿದಾಗ ಆರ್ಟ್‍ಆಫ್ ಲೀವಿಂಗ್‍ನ ಸಂಸ್ಥಾಪಕ ರವಿಶಂಕರ್‍ ಗುರೂಜಿ ಅವರಿಂದ ಧಸರಿಘಟ್ಟದ ಚೌಡೇಶ್ವರಿ ದೇವಿಯ ಬಗ್ಗೆ ವಿಚಾರ ತಿಳಿದಿದ್ದು. ಆಗ ಖುದ್ದು ರವಿಶಂಕರ್‍ ಗುರೂಜಿ ಅವರೇ ದೇವಿಯ ಮೂರ್ತಿಯನ್ನ ಅವ್ರ ಆಶ್ರಮಕ್ಕೆ ಕರೆಸಿದ್ರು. ಆವತ್ತು ನರೇಂದ್ರ ಮೋದಿ ಅವರು ಕೂಡ ತಮ್ಮಭವಿಷ್ಯದ ಬಗ್ಗೆ ಕೇಳಿದ್ರು. ಮೋದಿ ಅವ್ರ ಬಗ್ಗೆ ಭವಿಷ್ಯ ತಿಳಿಸಿದ್ದ ತಾಯಿ ನೀವು ಮತ್ತೆ ಗುಜರಾತಿನ ಮುಖ್ಯಮಂತ್ರಿ ಯಾಗುತ್ತೀರಾ ಹಾಗೂ ಪ್ರದಾನ ಮಂತ್ರಿಯಾಗುತ್ತೀರಾ ಅನ್ನೋ ಭವಿಷ್ಯವಾಡಿದ್ದರು. ತಾಯಿ ಹೇಳಿದ್ದು ನಿಜವಾದ್ರೆ ನನ್ನ ಕೈಲಾಗಿದನ್ನು ನಾನು ಮಾಡೇ ತೀರುತ್ತೇನೆ ಎಂದು ಮೋದಿ ಅವ್ರು ಕೂಡಲೇ ವಾಲಯದವ್ರಿಗೆ ತಿಳಿಸಿದ್ರು.

ಅದರಂತೆ ಈಗ ಮೋದಿ ಪ್ರಧಾನಿಯಾದ ನಂತ್ರ ಅವ್ರು ಮೊದಲು ಬೇಟಿ ನೀಡಿದ್ದು ತುಮಕೂರಿಗೆ. ಅಷ್ಟೇ ಅಲ್ಲದೆ ಅದೇ ಕಾರಣಕ್ಕೆ ಸ್ಮಾರ್ಟ್ ಸಿಟಿ ಲಿಸ್ಟ್​​​​​ನಲ್ಲಿ ತುಮಕೂರು ಸೇರಿದೆ ಅನ್ನೋದು ಜನರ ಹಾಗೂ ದೇವಾಲಯದವರ ಮಾತು. ಕೇವಲ ಪ್ರಧಾನ ಮಂತ್ರಿಗಳಿಗೆ ಮಾತ್ರವಲ್ಲದೆ ಮೈಸೂರು ಮಹಾರಾಜರಾಗಿದ್ದ ದಿವಂಗತ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್‍ ಅವರಿಗೂ ಕೂಡ ದೇವಿ ಭವಿಷ್ಯ ನುಡಿದಿದ್ರು. ಮೊದಲ ಬಾರಿಗೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಗೆ ನಿಂತಾಗ ನಿಮ್ಮ ಸ್ನೇಹಿತರೊಬ್ಬರು ಜೊತೆಯಲಿದ್ದರೆ ಮಾತ್ರ ಯಶಸ್ಸು ಸಾಧ್ಯ ಅನ್ನೋದನ್ನ ತಿಳಿಸಿ ಆ ಸ್ನೇಹಿತರ ಹೆಸರನ್ನುತಾಯಿ ಹೇಳಿದ್ರು ಅನ್ನೋ ನಂಬಿಕೆಯೂ ಇದೆ. ಅದರಂತೆಯೇ ಒಡೆಯರ್‍ಕೂಡ ಆ ಬಾರಿ ಚುನಾವಣೆಯಲ್ಲಿ ಗೆಲವು ಸಾಧಿಸಿದ್ರು.

ಇನ್ನು ದಸರಿಘಟ್ಟಕ್ಕೆ ಬಾಲಿವುಡ್ ನಟಿ ಹೇಮಮಾಲಿನಿ, ಎನ್ ಟಿ ಆರ್ , ರಾಜಕೀಯದ ಗುರು ಲಾಲ್​​ಕೃಷ್ಣ ಅಡ್ವಾಣಿ ,ಮೇರು ನಟ ಡಾ.ರಾಜ್​​ಕುಮಾರ್, ಸುದೀಪ್,ಯಶ್ , ಎಸ್.ಎಂ.ಕೃಷ್ಣ ,ಜೆ.ಹೆಚ್. ಪಟೇಲ್, ಕುಮಾರ ಸ್ವಾಮಿ ಹೀಗೆ ಇನ್ನೂ ಅನೇಕ ಗಣ್ಯಾತಿಗಣ್ಯರು ದೇವಾಲಕ್ಕೆ ಬೇಟಿ ನೀಡಿ ತಮ್ಮಇಚ್ಛೆಯನ್ನ ಪೂರೈಸಿಕೊಂಡಿದ್ದಾರೆ..!

ಭವಿಷ್ಯ ಹೇಳೋದೆ ವಿಶೇಷ..

ಸಾಮಾನ್ಯವಾಗಿ ದೇವಾಲಯಗಳಲ್ಲಿ ಭವಿಷ್ಯ ಹೇಳೋದು ಅಂದ್ರೆ ಯಾರದ್ದೋ ಮೈಮೇಲೆ ದೇವರು ಆವರಿಸಿ ಅವ್ರಿಂದ ಉತ್ತರಿಸೋದು ಮಾಮೂಲಿ. ಆದ್ರೆ ಇಲ್ಲಿಯ ಭವಿಷ್ಯ ಹೇಳೋದು ವಿಭಿನ್ನ. ಭಕ್ತರು ಕೇಳೋ ಪ್ರಶ್ನೆಗಳಿಗೆ ದೇವರ ಮೂರ್ತಿ ಬರೆದು ಉತ್ತರಿಸುತ್ತೆ. ಭವಿಷ್ಯ ಹೇಳಲೆಂದೆ ಒಂದು ಮೂರ್ತಿ ಇದ್ದು ಅದನ್ನಇಬ್ಬರು ಭವಿಷ್ಯ ಹೇಳೋ ಸಮಯದಲ್ಲಿ ಹಿಡಿದು ನಿಲ್ಲುತ್ತಾರೆ ಅದರ ಮೂಲಕ ದೇವಿ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ. ಇದು ಇಲ್ಲಿಯ ವಿಶೇಷ. ದೇವಾಲಯದ ಬಗ್ಗೆ ಹೇಳಬೇಕು ಅಂದ್ರೆ ಧಸರಿಘಟ್ಟ ತುಂಬಾ ಪುರಾತನ ದೇವಾಲಯಗಳ ಪಟ್ಟಿಯಲ್ಲಿದೆ. ಆದಿ ಚುಂಚನ ಗಿರಿ ಟ್ರಸ್ಟ್​​​ ಅಡಿಯಲ್ಲಿ ದೇವಾಲಯ ನಡೆದುಕೊಂಡು ಹೋಗುತ್ತಿದೆ. ಇಲ್ಲಿ ನೆಲೆಸಿರೋ ಚೌಡೇಶ್ವರಿ ವಿಶ್ವವಿಖ್ಯಾತಿ ಪಡೆದಿದ್ದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಹಾಗೂ ನವರಾತ್ರಿಗಳಲ್ಲಿನ ವಿಶೇಷ ಪೂಜೆಗಳಿಗಾಗಿ ವೈಜ್ಞಾನಿಕವಾಗಿ ಅದೆಷ್ಟೇ ಮುಂದೆವರೆದಿದ್ರೂ ಮೇಕ್​​ ಇನ್‍ ಇಂಡಿಯಾ ಅನ್ನೋ ಕಾಂನ್ಸೆಪ್ಟ್‍ ಹೊತ್ತು ಓಡಾಡುತ್ತಿರೋ ಮೋದಿ ಅವ್ರು ಇಂತದೊಂದು ಪವಾಡ ನಂಬಿ ನಮ್ಮ ನೆಲದ ದೇವರನ್ನ ಆರಾಧಿಸುತ್ತಿದ್ದಾರೆ ಅಂದ್ರೆ ಅದೊಂದು ವಿಶೇಷವೇ ಸರಿ.

ಧಸರಿಘಟ್ಟದ ದೇವಿ ತುಂಬಾ ಶಕ್ತಿವಂತೆ. ಮೋದಿ ಅವ್ರಿಂದ ಹಿಡಿದು ಈಗಿನ ಯುವ ನಟರು ಕೂಡ ಬೇಟಿ ಮಾಡಿರೋ ಸ್ಥಳ ಮತ್ತು ನಂಬಿಕೆ ಇರೋ ದೇವರು. ರಾಜಕೀಯ ವ್ಯಕ್ತಿಗಳು ಹಾಗೂ ಚಿತ್ರನಟರು ದೇವಾಲಯಕ್ಕೆ ಬೇಟಿ ಕೊಟ್ಟಾಗ ನಾನೇ ಖುದ್ದಾಗಿ ಅವರನ್ನಕರೆದು ತರುತ್ತೇನೆ. ತುಂಬಾ ಜನರು ಈಗಾಗಲೇ ಬಂದು ಹೋಗಿದ್ದಾರೆ. ಮೋದಿ ಅವ್ರಿಗೆ ಪ್ರಧಾನಿ ಆಗುತ್ತೀರಿ ಎಂದು ತಿಳಿಸಿದ್ದು ಇದೇ ಧಸರಿಘಟ್ಟದ ತಾಯಿ. ಜನರುಕೂಡ ಬಹು ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ. ಎಲ್ಲೋ ಕಾಣದ ಮೂಲೆಯಲ್ಲಿದ್ದ ದೇವಸ್ಥಾನ ಈಗ ಪ್ರವಾಸಿ ತಾಣವಾಗುತ್ತಿದೆ.