ವೈಫಲ್ಯತೆಯನ್ನೇ ಮೆಟ್ಟಿಲಾಗಿಸಿಕೊಂಡು ಜನಮನ್ನಣೆಗೆ ಪಾತ್ರವಾಗಿರೋ ವಿಟ್ಟಿಫೀಡ್

ಟೀಮ್​ ವೈ.ಎಸ್​. ಕನ್ನಡ

0

ಬದುಕೇ ಹಾಗೆ ಕೆಲವೊಂದು ಬದುಕುಲು ದಾರಿ ಕಲಿಸಿಕೊಡುತ್ತದೆ. ಮತ್ತೆ ಕೆಲವು ಘಟನೆಗಳು ಬದುಕನ್ನೇ ನುಂಗಿ ಬಿಡುತ್ತದೆ. ಆದರೆ, ವೈಫಲ್ಯತೆಯಿಂದ ಪಾಠ ಕಲಿತರೆ ಏನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಈ ಖಾಸಗಿ ಕಂಪನಿ ವಿಟ್ಟಿಫೀಡ್.

ಯಾವುದೇ ಒಂದು ಬ್ರಾಂಡ್ ನಾಲ್ಕು ಬಾರಿ ವಿಫಲತೆ ಕಂಡಾಗ ಆ ಸಂಸ್ಥೆ ಗತಿ ಏನು ಎಂಬ ಪ್ರಶ್ನೆ ಸರ್ವೇಸಾಮಾನ್ಯ.

ಇಂಥ ಪ್ರಶ್ನೆಗಳಿಗೆ ಇಂದೋರ್‌ನ ಖಾಸಗಿ ಕಂಪನಿಯೊಂದರಲ್ಲಿ ವ್ಯಕ್ತವಾದ ಭಾವ ನಿಜಕ್ಕೂ ಸೋಜಿಗ. ಹಲವು ಬಾರಿ ವಿಫಲತೆ ಕಂಡಿದ್ದ ಈ ಕಂಪನಿಯ ವೆಬ್ ಸೈಟ್‌ಗೆ ಇದೀಗ 60 ಮಿಲಿಯನ್ ವಿಸಿಟರ್ಸ್ ಇದ್ದು ಪ್ರತಿ ತಿಂಗಳಿಗೆ 250 ಮಿಲಿಯನ್ ಮಂದಿ ವೆಬ್ ಸೈಟ್ ಪೇಜ್‌ಗೆ ವಿಸಿಟ್ ಮಾಡಿ ಲೈಕ್ ಮಾಡ್ತಾರಂತೆ. 

ಅರೆ, ಅದ್ಯಾವುದಪ್ಪಾ ಇಷ್ಟೆಲ್ಲಾ ಏಳು-ಬೀಳುಗಳನ್ನು ಕಂಡು ಇದೀಗ ಇಷ್ಟು ಪ್ರಖ್ಯಾತಿ ಪಡೆದುಕೊಂಡಿರುವ ಸಂಸ್ಥೆಯಾದ್ರೂ ಯಾವುದು ಅಂತೀರಾ.? ಆ ಖಾಸಗಿ ಸಂಸ್ಥೆ ಹೆಸ್ರು, ವಿಟ್ಟಿಫೀಡ್ ಅಂತ. ಕಳೆದ ವರ್ಷವಷ್ಟೇ ಅಂತರ್ಜಾಲಕ್ಕೆ ಎಂಟ್ರಿಕೊಟ್ಟಿರೋ ಈ ವೆಬ್ ಸೈಟ್ ಈಗಾಗಲೇ ಅತೀ ಹೆಚ್ಚು ವೀಕ್ಷಣೆ ಮಾಡಿದ 500 ವೆಬ್ ಸೈಟ್ ಗಳಲ್ಲಿ ಇದು ಒಂದು ಎಂಬುದು ಹಿರಿಮೆಯನ್ನು ಹೊಂದಿದೆ.

ವಿಟ್ಟಿಫೀಡ್. ಕಾಮ್ ಎಂಬುದು ಓದುಗರಿಗೆ, ಬರಹಗಾರರಿಗೆ ಮತ್ತು ನೂತನವಾಗಿ ಏನಾದರೂ ಶೋಧಿಸುವವರಿಗೆ ವರದಾನವಾಗಿ ಪರಿಣಮಿಸಿದೆ ಅಂತ ಅದು ಅತಿಶಯೋಕ್ತಿಯಲ್ಲ. ಆಧುನಿಕ ಜಗತ್ತಿನ ಈ ಕಾಲದಲ್ಲಿ ಯಾವುದೇ ಸ್ಟೋರಿಗೆ ಪುಷ್ಠಿ ನೀಡುವಂತೆ ಫೋಟೋ ಅಥವಾ ವಿಡಿಯೋ ಅಟೆಚ್ ಮಾಡಿದ್ರೆ, ಆ ಸ್ಟೋರಿಯ ಮಹತ್ವ ಹೆಚ್ಚಲಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದಕ್ಕಂತಲೇ ಬರೆದ ಸ್ಟೋರಿಗೆ ಇಲ್ಲಿ ಫೋಟೋ, ವಿಡಿಯೋ ಅಪ್ ಲೋಡ್ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ವಿನೂತನ ಶೈಲಿಯಿಂದಲೇ ಜನಮನ್ನಣೆಗೆ ಪಾತ್ರವಾಗಿರೋ ವಿಟ್ಟಿಫೀಡ್.ಕಾಮ್ ಪ್ರಪಂಚದಾದ್ಯಂತ ಮಿಲಿಯನ್ ಗಟ್ಟಲೇ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದೆ ಅಂದ್ರೆ ತಪ್ಪಾಗಲಾರದು.

ಹಾಗಾದ್ರೆ, ವಿಟ್ಟಿಫೀಡ್ ತನ್ನ ಹೊಸತನದರಲ್ಲಿ ಯಾವ ರೀತಿಯ ಸವಾಲುಗಳನ್ನು ಹೆದರಿಸಿತು ಅನ್ನೋದನ್ನ ತಿಳಿದುಕೊಳ್ಳೋಣ. 2014ರಲ್ಲಿ ವಾತ್ಸಾನ ತಂತ್ರಜ್ಞಾನದ ಅಂಗ ಸಂಸ್ಥೆಯಾಗಿರೋ ಎವ್ರಿಸ್ಟ್ರೈ.ಕಾಮ್ ಮತ್ತು ತೆಸ್ಟಜ್ಪಿಡ್‌ಸ್ಟೇಷನ್.ಕಾಮ್ ‌ಗಳಿಗಿಂತ ವಿಟ್ಟಿಫೀಡ್ ಹೆಚ್ಚು ಪ್ರಭಾವಶಾಲಿಯಾಗಿತ್ತು.

 ಮಾರುಕಟ್ಟೆಗೆ ಆಗಮಿಸಿದ ಹೊಸತರಲ್ಲಿಯೇ 5 ಮಿಲಿಯನ್ ಗ್ರಾಹಕರನ್ನ ಹೊಂದಿದ್ದ ವಿಟ್ಟಿಫೀಡ್ ಕೇವಲ ಒಂದು ವರ್ಷದಲ್ಲಿ ಗ್ರಾಹಕರ ಸಂಖ್ಯೆಯನ್ನು 250 ಮಿಲಿಯನ್ನಾಗಿ ವೃದ್ಧಿಸಿಕೊಂಡಿತು. ಇಷ್ಟೆಲ್ಲಾ ಸುಖಾ ಸುಮ್ಮನೆ ಆಗಿಲ್ಲ. ಈ ಹಂತಕ್ಕೆ ತಲುಪಲು ನಾವು ಹಗಲು-ರಾತ್ರಿ ಎನ್ನದೇ ದುಡಿದಿದ್ದೇವೆ. ಆ ಸಂದರ್ಭದಲ್ಲಿ ತಮ್ಮಿಂದ ಹಲವು ತಪ್ಪುಗಳಾದವು. ಆ ತಪ್ಪುಗಳಿಂದ ಸರಿಯಾದ ಪಾಠ ಕಲಿತು, ನಮ್ಮನ್ನು ಸರಿದಾರಿಯಲ್ಲಿ ತೊಡಗಿಸಿಕೊಂಡೆವು. ಈ ವೇಳೆ, ವೆಬ್ ಸೈಟ್‌ಗೆ ನಾಮಕಾರಣ ಮಾಡಲು ಹಲವು ಹೆಸರುಗಳನ್ನು ಸೂಚಿಸಿದೆವು. ಆದ್ರೆ, ಅವೆಲ್ಲವುಗಳನ್ನು ನಮ್ಮ ನಾಯಕರು ತಿರಸ್ಕರಿಸಿದ್ರು. ಕೊನೆಯ ಹಂತದಲ್ಲಿ ವಿಟ್ಟಿಫೀಡ್ ಅಂತ ನಾಮಕಾರಣ ಮಾಡಿದೆವು ಅಂತಾರೆ ಸಂಸ್ಥೆಯ ಸಹ ಸಂಸ್ಥಾಪಕ ವಿನಯ್ ಸಿಂಘಾಲ್.

ಇನ್ನು, ಏಕಕಾಲದಲ್ಲಿ 45 ಸಾವಿರ ಗ್ರಾಹಕರನ್ನು ಹೊಂದಿರೋ ವಿಟ್ಟಿಫೀಡ್‌ಗೆ ದಿನವೊಂದಕ್ಕೆ 6 ಮಿಲಿಯನ್ ಜನರು ಬಳಕೆ ಮಾಡುತ್ತಾರಂತೆ. ಅಲ್ಲದೇ, ಸಿಲಿಕಾನ್ ವ್ಯಾಲಿ ಶೈಲಿಯಲ್ಲೇ ತನ್ನ ವೈಶಿಷ್ಟ್ಯತೆಯನ್ನು ವಿಟ್ಟಿಫೀಡ್ ಮಾಡುತ್ತಿದೆ.

ಓದುಗ ಚಂದಾದಾರರಿಗೆ ಮಾಹಿತಿ ಒದಗಿಸೋ ವಿಟ್ಟಿಫೀಡ್ ಹಲವು ಜಾಹೀರಾತುಗಳನ್ನು ತನ್ನ ವೆಬ್ ಸೈಟ್‌ನಲ್ಲಿ ಪ್ರಕಟಿಸಿಕೊಳ್ಳುವ ಮೂಲಕ ಆದಾಯ ಮಾಡಿಕೊಳ್ಳುತ್ತದೆ. ಅಲ್ಲದೇ, ಇತರೆ ವೆಬ್ ಸೈಟ್ ಗೂಗಲ್ ಆ್ಯಡ್ಎಕ್ಸ್, ಓಪನ್ಎಕ್ಸ್, ಎಪೋಮ್‌ಗಳಿಗೆ ಸಂಪರ್ಕ ಕಲ್ಪಿಸಿ ಆದಾಯ ಗಿಟ್ಟಿಸಿಕೊಳ್ಳುತ್ತಂತೆ.

ಹಲವು ಸೂಕ್ಷ್ಮ ವಿಚಾರಗಳ ಬಗ್ಗೆ ನಿಗಾವಹಿಸಿ, ಆ ವಿಚಾರಗಳ ಬಗ್ಗೆ ಬರೆದು ವೆಬ್ ಸೈಟ್‌ನಲ್ಲಿ ಪ್ರಕಟಿಸುವ ಮುನ್ನ ಬರೆದ ಅಂಶಗಳ ಕುರಿತು ಮತ್ತೊಂದು ಬಾರಿ ಏನಾದ್ರೂ ತಪ್ಪಾಗಿದ್ಯಾ ಅನ್ನೋದನ್ನ ಪರೀಕ್ಷೆಗೊಡ್ಡಲಾಗುತ್ತಂತೆ. ಕೆಲವು ಸಲ ಯಾವುದು ಆಸಕ್ತಿದಾಯಕ ಅಂಶಗಳು, ಜನರ ಆಶೋತ್ತರಗಳನ್ನು ತಿಳಿದುಕೊಳ್ಳಲೆಂದೇ ವಿಟ್ಟಿಫೀಡ್ ಸಾಹಸ ಮಾಡಬೇಕಾಗುತ್ತೆ ಅಂತಾರೆ ವಿಟ್ಟಿಫೀಡ್‌ನ ಜಾಹೀರಾತು ವಿಭಾಗದ ಸಹ ಸಂಸ್ಥಾಪಕ ಶಶಾಂಕ್ ವೈಷ್ಣವ್. ಶಶಾಂಕ್ ವೈಷ್ಣವ್ ರವರು ಈ ಜಾಹೀರಾತು ವೆಬ್ ಸೈಟ್ ಅನ್ನು ಅವರು ಪದವಿ ಅಂತಿಮ ಹಂತದಲ್ಲಿ ಅಂದ್ರೆ, 2012ರಲ್ಲಿ ಸ್ಥಾಪನೆಯಾಗಿದ್ದಂತೆ.

ಇದೀಗ ವಿಟ್ಟಿಫೀಡ್‌ನ ಜಾಹೀರಾತು ಸಂದೇಶಗಳಿಗಾಗಿ ಬೇರೆ ಟ್ಯಾಬ್ ಓಪನ್ ಮಾಡುವಂತಿಲ್ಲ. ಬದಲಿಗೆ ಸ್ಟೋರಿ ಜೊತೆಗೆ ಜಾಹೀರಾತು ಸಂದೇಶ ಜಗಜ್ಜಾಹೀರಾಗಿ ಕಾಣುತ್ತೆ ಅಂತಾರೆ ವಿಟ್ಟಿಫೀಡ್ ಸಂಸ್ಥೆಯ ಮೂರನೇ ಸಹ ಸಂಸ್ಥಾಪಕ ಪರ್ವೀನ್ ಸಿಂಘಾಲ್.

ಈ ಸಂಸ್ಥೆಯಲ್ಲಿ ಯಾರು ಬೇಕಾದ್ರೂ ಕೆಲಸ ಪಡೆಯಬಹುದು. ಇಲ್ಲಿ ಕೆಲಸ ಮಾಡಲು ವಿಶೇಷ ಪರಿಣತಿ ಬೇಕು ಅಂತ ಏನೂ ಇಲ್ಲ. ಹಾಡಲು, ನಕ್ಕು ನಲಿಸುವಂತಹ ಕಾಮಿಡಿ ಜೋಕ್‌ಗಳು, ತಕ್ಕಮಟ್ಟಿನ ಡ್ಯಾನ್ಸ್ ಮಾಡಲು ಬಂದ್ರೆ ಸಾಕು. ಅಲ್ಲದೇ, ನಮ್ಮ ಸಂಸ್ಥೆ ಹೊಸದಾಗಿ ಕೆಲಸ ಹುಡುಕುವವರಿಗೆ ಹೆಚ್ಚಿನ ಆದ್ಯತೆ ನೀಡುತ್ತೆ ಅಂತಾರೆ ಪರ್ವೀನ್. ಕೆಲಸಕ್ಕೆ ಸೇರಿದವರಿಗೆ ಊಟದ ವ್ಯವಸ್ಥೆ, ವಸತಿ ವ್ಯವಸ್ಥೆಯ ಸೌಲಭ್ಯವನ್ನು ನೀಡುತ್ತಾರಂತೆ.

ಈ ವಿಟ್ಟಿಫೀಡ್ ಸ್ಥಾಪನೆ ಮಾಡಿದ್ದರ ಹಿಂದೆ ಒಂದು ರೋಚಕ ಕಥೆಯೇ ಇದೆ. ಹರಿಯಾಣದ ಮೂಲದ ವಿನಯ್ ಮತ್ತು ಪರ್ವೀನ್ ಕಾಲೇಜು ದಿನಗಳಲ್ಲಿ, ಇಂದೋರ್ ಮೂಲದ ಶಶಾಂಕ್ ಎಂಬುವರನ್ನು ಚೆನ್ನೈನಲ್ಲಿ ಭೇಟಿ ಮಾಡುತ್ತಾರೆ. ಈ ವೇಳೆ ಮೂವರು ಸೇರಿ ಚೆನ್ನೈನಲ್ಲೇ ವಿಟ್ಟಿಫೀಡ್ ನ್ನು ಸ್ಥಾಪನೆ ಮಾಡುತ್ತಾರೆ. ಕೆಲ ದಿನಗಳ ನಂತ್ರ ಶಶಾಂಕ್ ಹುಟ್ಟೂರು ಇಂದೋರ್‌ಗೆ ವಿನಯ್ ಭೇಟಿ ನೀಡುತ್ತಾನೆ. ಇಂದೋರ್ ತಮ್ಮ ಉದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶವೆಂದು ಅರಿಯುವ ವಿನಯ್ ತಮ್ಮ ಮುಖ್ಯ ಕಚೇರಿಯನ್ನು ಜೂನ್ 2014ರಲ್ಲಿ ಇಂದೋರ್‌ನಲ್ಲಿ ಸ್ಥಾಪನೆ ಮಾಡುತ್ತಾರೆ. ಇದೀಗ ವಿಟ್ಟಿಫೀಡ್ ವಾರ್ಷಿಕವಾಗಿ 6 ಮಿಲಿಯನ್ ಡಾಲರ್ ಟರ್ನ್ ಓವರ್ ಬ್ಯುಸಿನೆಸ್ ಮಾಡುತ್ತಿದೆ.


ಲೇಖಕರು: ಮುಕ್ತಿ ಮಸೀಹ್

ಅನುವಾದಕರು: ಶೃತಿ

Related Stories

Stories by YourStory Kannada